AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಡ್ನ್ಯಾಪ್​ ಕೇಸ್​: ರೇವಣ್ಣ, ಭವಾನಿ ಸೇರಿ 9 ಆರೋಪಿಗಳಿಗೆ ಸಮನ್ಸ್, ಖುದ್ದು ಹಾಜರಿಗೆ ಸೂಚನೆ

ಮೈಸೂರು ಕೆ.ಆರ್​.ನಗರ ಮಹಿಳೆ ಕಿಡ್ನ್ಯಾಪ್​ ಪ್ರಕರಣದಲ್ಲಿ ಸಿಲುಕಿರುವ ಹೆಚ್​ಡಿ ರೇವಣ್ಣ ಪತ್ನಿ ಭವಾನಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್​ಡಿ ರೇವಣ್ಣ ಮತ್ತು ಭವಾನಿ ಸೇರಿದಂತೆ 9 ಆರೋಪಿಗಳಿಗೆ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್​ನಿಂದ ಸಮನ್ಸ್ ಜಾರಿ ಮಾಡಲಾಗಿದೆ. ಆಗಸ್ಟ್‌ 28ರಂದು ಖುದ್ದು ಹಾಜರಾಗುವಂತೆ ಸೂಚಿಸಲಾಗಿದೆ.

ಕಿಡ್ನ್ಯಾಪ್​ ಕೇಸ್​: ರೇವಣ್ಣ, ಭವಾನಿ ಸೇರಿ 9 ಆರೋಪಿಗಳಿಗೆ ಸಮನ್ಸ್, ಖುದ್ದು ಹಾಜರಿಗೆ ಸೂಚನೆ
ಕಿಡ್ನ್ಯಾಪ್​ ಕೇಸ್​: ರೇವಣ್ಣ, ಭವಾನಿ ಸೇರಿ 9 ಆರೋಪಿಗಳಿಗೆ ಸಮನ್ಸ್, ಖುದ್ದು ಹಾಜರಿಗೆ ಸೂಚನೆ
ರಮೇಶ್​ ಎಮ್​.
| Edited By: |

Updated on: Aug 22, 2024 | 2:49 PM

Share

ಬೆಂಗಳೂರು, ಆಗಸ್ಟ್​ 22: ಮೈಸೂರು ಜಿಲ್ಲೆಯ ಕೆಆರ್​ ನಗರ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್​ಡಿ ರೇವಣ್ಣ ಮತ್ತು ಭವಾನಿ ರೇವಣ್ಣ (bhavani revanna) ಸೇರಿ 9 ಆರೋಪಿಗಳಿಗೆ ಸಮನ್ಸ್​ ಜಾರಿ ಮಾಡಲಾಗಿದೆ. ಆಗಸ್ಟ್‌ 28 ರಂದು ಖುದ್ದು ಹಾಜರಾಗುವಂತೆ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್​ನಿಂದ ಸಮನ್ಸ್​ ಜಾರಿ ಮಾಡಲಾಗಿದೆ.

ಸತೀಶ್ ಬಾಬು, ಮನುಗೌಡ, ಕೆ.ಎ.ರಾಜಗೋಪಾಲ್, ಹೆಚ್.ಕೆ.ಸುಜಯ್, ಹೆಚ್.ಎನ್.ಮಧು, ಎಸ್.ಟಿ.ಕೀರ್ತಿ ಮತ್ತು ಅಜಿತ್ ಕುಮಾರ್​​ಗೆ ಐಪಿಸಿ ಸೆಕ್ಷನ್​ 364 A ಕೈಬಿಟ್ಟು ಉಳಿದ ಆರೋಪಗಳಿಗೆ ಸಂಬಂಧಿಸಿದಂತೆ ಸಮನ್ಸ್ ನೀಡಲಾಗಿದೆ.

ಇದನ್ನೂ ಓದಿ: ಅಪಹರಣ ಪ್ರಕರಣ: ಭವಾನಿ ರೇವಣ್ಣಗೆ ಸುಪ್ರೀಂಕೋರ್ಟ್​ ನೋಟಿಸ್​

ಆರೋಪಿ ಭವಾನಿ ರೇವಣ್ಣಗೆ ಹೈಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಪ್ರಶ್ನಿಸಿ ಎಸ್‌ಐಟಿ ಅಧಿಕಾರಿಗಳು, ಸುಪ್ರೀಂಕೋರ್ಟ್‌ಗೆ ಇತ್ತೀಚೆಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠ ಭವಾನಿ ರೇವಣ್ಣಾಗೆ ನೊಟೀಸ್ ಜಾರಿ ಮಾಡಿದ್ದರು. ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ.

ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ಪ್ರಶ್ನಿಸಿ ಎಸ್‌ಐಟಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ವಿಚಾರಣೆ ಎದುರಿಸಬೇಕು ಎಂದು ಹೇಳಿತ್ತು. ಮಗನ ಮೇಲೆ ಗಂಭೀರವಾದ ಆರೋಪಗಳಿವೆ, ಮಗ ಮಾಡಿದ ತಪ್ಪಿಗೆ ತಾಯಿಯ ಪಾತ್ರವೇನು ಅಂತಾ ಎಸ್ಐಟಿ ಪರ ವಕೀಲ ಕಪಿಲ್‌ ಸಿಬಲ್‌ಗೆ ನ್ಯಾಯಪೀಠ ಪ್ರಶ್ನೆ ಮಾಡಿದ್ದರು.

ನ್ಯಾಯಮೂರ್ತಿಗಳ ಪ್ರಶ್ನೆಗೆ ಉತ್ತರಿಸಿದ ಕಪಿಲ್‌ ಸಿಬಲ್‌ ಸಂತ್ರಸ್ತೆಯನ್ನ ಕಿಡ್ನ್ಯಾಪ್‌ ಮಾಡಿದ ಆರೋಪ ಭವಾನಿ ಮೇಲಿದೆ ಎಂದು ವಾದಿಸಿದ್ದರು. ವಾದ ಆಲಿಸಿದ ನ್ಯಾಯಮೂರ್ತಿಗಳು ಆಕೆ ಆರೋಪದಿಂದ ಮುಕ್ತ ಎನ್ನುವಂತಿಲ್ಲ. ವಿಚಾರಣೆ ಎದುರಿಸಬೇಕು ಎಂದ ಕೋರ್ಟ್, ಭವಾನಿಗೆ ನೋಟಿಸ್ ಜಾರಿ ಮಾಡಿತ್ತು.

ಇದನ್ನೂ ಓದಿ: ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ, ವಿಡಿಯೋ ನೋಡಿ

ಇನ್ನು ಕಿಡ್ನ್ಯಾಪ್ ಕೇಸ್​​ನಲ್ಲಿ ಭವಾನಿ ರೇವಣ್ಣರ ಕಾರು ಚಾಲಕ ಅಜಿತ್​ನನ್ನು ಎಸ್​ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಆತನ ವಿರುದ್ಧ ಸಂತ್ರಸ್ತೆ ವಿಡಿಯೋ ರೆಕಾರ್ಡ್ ಮಾಡಿ ವೈರಲ್ ಮಾಡಿರುವ ಆರೋಪವಿದೆ. ಭವಾನಿ ಸೂಚನೆ ಮೇರೆಗೆ ಮನೆಯಿಂದ ಕಾರಿನಲ್ಲಿ ಸಂತ್ರಸ್ತೆಯನ್ನು ಕರೆದೊಯ್ದ ಆರೋಪ ಕೂಡ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ರಮೇಶ್​ ಎಮ್​.
ರಮೇಶ್​ ಎಮ್​.

ರಮೇಶ್​ ಎಂ ವಿಶೇಷ ವರದಿಗಾರರಾಗಿದ್ದಾರೆ, ಮೂಲತಃ ಕಾನೂನು ಪದವೀಧರನಾಗಿದ್ದು ಕಳೆದ 18 ವರ್ಷಗಳಿಂದ ಟಿವಿ9 ಸುದ್ದಿ ವಾಹಿನಿಯಲ್ಲಿ ಕಾನೂನು ಸಂಬಂಧಿತ ವರದಿ ನೀಡುತ್ತಿದ್ದಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳ ಪ್ರಮುಖ ಪ್ರಕರಣಗಳ ವರದಿಗಾರಿಕೆ ಮಾಡುತ್ತಿದ್ದು, ಬೆಂಗಳೂರಿನ ನಿವಾಸಿಯಾಗಿದ್ದಾರೆ.

Read More
ರಿಷಬ್ ಶೆಟ್ಟಿ ಮನೆಯಲ್ಲಿ ದಸರಾ ಹಬ್ಬದ ಸಂಭ್ರಮ; ಪೂಜೆಯ ವಿಡಿಯೋ ನೋಡಿ
ರಿಷಬ್ ಶೆಟ್ಟಿ ಮನೆಯಲ್ಲಿ ದಸರಾ ಹಬ್ಬದ ಸಂಭ್ರಮ; ಪೂಜೆಯ ವಿಡಿಯೋ ನೋಡಿ
ಹಜರತ್ ಇಮಾಮ್ ಶಾ ವಲಿ ದರ್ಗಾದಲ್ಲಿ ಮೈಸೂರು ದಸರಾ ಆನೆಗಳಿಗೆ ವಿಶೇಷ ಪೂಜೆ
ಹಜರತ್ ಇಮಾಮ್ ಶಾ ವಲಿ ದರ್ಗಾದಲ್ಲಿ ಮೈಸೂರು ದಸರಾ ಆನೆಗಳಿಗೆ ವಿಶೇಷ ಪೂಜೆ
ರಾಮ್‌ಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿಯಿಂದ ರಾವಣನ ಪ್ರತಿಕೃತಿ ದಹನ
ರಾಮ್‌ಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿಯಿಂದ ರಾವಣನ ಪ್ರತಿಕೃತಿ ದಹನ
ಮದ್ವೆಯಾದ ಹತ್ತೇ ದಿನಕ್ಕೆ ಮನೆಬಿಟ್ಟು ಓಡಿ ಹೋದ ಗಂಡ: ಟವರ್ ಏರಿ ಪತ್ನಿ!
ಮದ್ವೆಯಾದ ಹತ್ತೇ ದಿನಕ್ಕೆ ಮನೆಬಿಟ್ಟು ಓಡಿ ಹೋದ ಗಂಡ: ಟವರ್ ಏರಿ ಪತ್ನಿ!
ದ್ವಾರಕಾದಲ್ಲಿ ಬಾಣ ಬಿಟ್ಟು ರಾವಣ ದಹನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ದ್ವಾರಕಾದಲ್ಲಿ ಬಾಣ ಬಿಟ್ಟು ರಾವಣ ದಹನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಕುಂಭಕರ್ಣನ ಜೊತೆ 30 ಅಡಿ ಎತ್ತರದ ಬೃಹತ್ 'ಕಾಕ್ರೋಚ್' ದಹನ
ಕುಂಭಕರ್ಣನ ಜೊತೆ 30 ಅಡಿ ಎತ್ತರದ ಬೃಹತ್ 'ಕಾಕ್ರೋಚ್' ದಹನ
ವಿಡಿಯೋ ಮಾಡಿ, 1,700 ಅಡಿ ಆಳದ ಕಣಿವೆಗೆ ಹಾರಿದ ವ್ಯಕ್ತಿ!
ವಿಡಿಯೋ ಮಾಡಿ, 1,700 ಅಡಿ ಆಳದ ಕಣಿವೆಗೆ ಹಾರಿದ ವ್ಯಕ್ತಿ!
ಶೋ ರೂಮ್‌ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು!
ಶೋ ರೂಮ್‌ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು!
ಅಪ್ಪನ ಅಂಬಾಸಿಡರ್ ಕಾರಿನಲ್ಲಿ ಹೆಂಡ್ತಿ ಜೊತೆ ಡಿಸಿಎಂ ಜಾಲಿರೈಡು: ವಿಡಿಯೋ
ಅಪ್ಪನ ಅಂಬಾಸಿಡರ್ ಕಾರಿನಲ್ಲಿ ಹೆಂಡ್ತಿ ಜೊತೆ ಡಿಸಿಎಂ ಜಾಲಿರೈಡು: ವಿಡಿಯೋ
ಮೈಸೂರು ರಾಜರ ಕಾರುಗಳಿಗೆ ವಿಶೇಷ ಪೂಜೆ: ಎಲ್ಲಾ ಕಾರುಗಳ ಸಂಖ್ಯೆ 1953
ಮೈಸೂರು ರಾಜರ ಕಾರುಗಳಿಗೆ ವಿಶೇಷ ಪೂಜೆ: ಎಲ್ಲಾ ಕಾರುಗಳ ಸಂಖ್ಯೆ 1953