AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡವಾಮೆ ಬಾಳೋ ಪಾದಯಾತ್ರೆ: ನಾಳೆ ಮದ್ಯ ಮಾರಾಟ‌ ನಿಷೇಧ, ಪಾರ್ಕಿಂಗ್‌ ನಿರ್ಬಂಧ

ಮಡಿಕೇರಿಯಲ್ಲಿ ನಾಳೆ ನಡೆಯುವ ಕೊಡವಾಮೆ ಬಾಳೋ ಪಾದಯಾತ್ರೆಯ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಬೃಹತ್ ಸಮಾವೇಶಕ್ಕಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸುಗಮ ಸಂಚಾರಕ್ಕಾಗಿ ವಾಹನ ಪಾರ್ಕಿಂಗ್‌ಗೆ ನಿರ್ಬಂಧ ಹೇರಲಾಗಿದೆ. ಕೊಡವ ಸಂಸ್ಕೃತಿ ಮತ್ತು ಭಾಷಿಕರ ಹಕ್ಕುಗಳ ರಕ್ಷಣೆಗಾಗಿ ಈ ಪಾದಯಾತ್ರೆ ನಡೆಯುತ್ತಿದೆ.

ಕೊಡವಾಮೆ ಬಾಳೋ ಪಾದಯಾತ್ರೆ: ನಾಳೆ ಮದ್ಯ ಮಾರಾಟ‌ ನಿಷೇಧ, ಪಾರ್ಕಿಂಗ್‌ ನಿರ್ಬಂಧ
ಕೊಡವಾಮೆ ಬಾಳೋ ಪಾದಯಾತ್ರೆ: ನಾಳೆ ಮದ್ಯ ಮಾರಾಟ‌ ನಿಷೇಧ, ಪಾರ್ಕಿಂಗ್‌ ನಿರ್ಬಂಧ
Gopal AS
| Edited By: |

Updated on: Feb 06, 2025 | 7:43 PM

Share

ಕೊಡಗು, ಫೆಬ್ರವರಿ 06: ಸಂಸ್ಕೃತಿ ರಕ್ಷಣೆ ಹೆಸರಲ್ಲಿ ನಡೆಯುತ್ತಿರೋ ಕೊಡವ ಹಾಗೂ ಕೊಡವ ಭಾಷಿಕರ ಬೃಹತ್ ಪಾದಯಾತ್ರೆ (Padayatra) ಶುರುವಾಗಿ ಇಂದಿಗೆ ನಾಲ್ಕನೇ ದಿನ. ಈ ದಿನವೂ ಪಾದಯಾತ್ರೆಯಲ್ಲಿ‌ ಜನಸಾಗರ ಕಂಡುಬಂತು. ಇನ್ನು ಮಡಿಕೇರಿ ಜಿಲ್ಲಾ‌ ಕ್ರೀಡಾಂಗಣದಲ್ಲಿ ನಾಳೆ ಬೃಹತ್‌ ಸಮಾವೇಶ ಕೂಡ ನಡೆಯಲಿದ್ದು, ಹೀಗಾಗಿ ಜಿಲ್ಲೆಯ ಮಡಿಕೇರಿ ನಗರದಲ್ಲಿ ನಾಳೆ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೆ ನಿಷೇಧಿಸಲಾಗಿದೆ. ಜೊತೆಗೆ ನಗರದಲ್ಲಿ ವಾಹನಗಳ ಪಾರ್ಕಿಂಗ್‌ಗೆ ನಿರ್ಬಂಧಿಸಲಾಗಿದೆ.

ಸಂಸ್ಕೃತಿ ರಕ್ಷಣೆಗಾಗಿ ಕೊಡವಾಮೆ ಬಾಳೋ ಪಾದಯಾತ್ರೆ ನಡೆಯುತ್ತಿದೆ. ನಾಲ್ಕನೇ ದಿನವೂ ಪಾದಯಾತ್ರೆಯಲ್ಲಿ‌ ಸಾಕಷ್ಟು ಜನರು ಭಾಗವಹಿಸಿದ್ದರು. ಕುಟ್ಟದಿಂದ‌ ಮಡಿಕೇರಿವರೆಗೆ ಮೆರವಣಿಗೆ ಸಾಗುತ್ತಿದೆ. ಕೊಡವ ಸಂಸ್ಕೃತಿ ಉಳಿಸಲು ಪಾದಯಾತ್ರೆ ನಡೆಯುತ್ತಿದೆ. ನಾಳೆಯ ಬೃಹತ್ ಸಮಾವೇಶದಲ್ಲಿ 30 ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ.

ಇದನ್ನೂ ಓದಿ: ಕೊಡಗಿನಲ್ಲಿ ಮತ್ತೆ ತಾರಕಕ್ಕೇರಿದ ಕೊಡವ, ಗೌಡ ಸಮುದಾಯಗಳ ಸಂಘರ್ಷ: ಅರ್ಚಕನ ಮೇಲೆ ದಾಳಿ

ಕೊಡಗು ಜಿಲ್ಲೆಯಲ್ಲಿ ಕೊಡವ ಹಾಗೂ ಕೊಡವ ಸಂಸ್ಕೃತಿ ಆಚರಿಸುವ 18 ಮೂಲ ನಿವಾಸಿಗಳಿವೆ. ಕಳೆದ ಕೆಲವು ವರ್ಷಗಳಿಂದ ಈ ಜನಾಂಗಗಳ ಮೇಲೆ ದಬ್ಬಾಳಿಕೆ ಜಾಸ್ತಿಯಾಗಿದ್ದೂ ಮಾತ್ರವಲ್ಲದೆ ಜಿಲ್ಲೆಯ ಅತಿವಿಶಿಷ್ಟ ಸಂಸ್ಕೃತಿ ನಾಶದ ಅಂಚಿಗೆ ತೆರಳುತ್ತಿದೆ ಅನ್ನೋದು ಜನವಲಯದಲ್ಲಿ ಕೇಳಿ ಬರ್ತಾ ಇರೋ ಮಾತು.

ಇದನ್ನೂ ಓದಿ: ಧಾರ್ಮಿಕ ಉಡುಪು ವಿಚಾರಕ್ಕೆ ಕೊಡಗಿನಲ್ಲಿ ತಾರಕಕ್ಕೇರಿದ ಜನಾಂಗೀಯ ಸಂಘರ್ಷ: ನಿಷೇಧಾಜ್ಞೆ ಜಾರಿ

ಹಾಗಾಗಿ ಜಿಲ್ಲೆಯ ಅತಿವಿಶಿಷ್ಟ ಸಂಸ್ಕೃತಿ ರಕ್ಷಣೆಗಾಗಿ ಜಿಲ್ಲೆಯ ಕೊಡವ ಜನಾಂಗ ಹಾಗೂ ಕೊಡವ ಭಾಷಿಕ ಜನಾಂಗದ 10 ಸಾವಿರಕ್ಕೂ ಅಧಿಕ ಮಂದಿ ಕಳೆದ ಮೂರು ದಿನಗಳಿಂದ ಸಾಂಸ್ಕೃತಿಕ ಉಡುಪಿನಲ್ಲಿ ಪಾದಯಾತ್ರೆ ನಡೆಸುತ್ತಿದ್ದಾರೆ. ಸದ್ಯ ಪಾದಯಾತ್ರೆ ನಡೆದಿದ್ದು, ಮಹಿಳೆಯರು, ಮಕ್ಕಳು, ಪುರುಷರು, ವೃದ್ಧರು ಮತ್ತು ಕ್ರಿಡಾಪಟುಗಳು ಸೇರಿದಂತೆ ಹತ್ತು ಹಲವು ವರ್ಗದ ಜನರು ಪಾಲ್ಗೊಂಡು ಶಕ್ತಿ ತುಂಬುತ್ತಿದ್ದಾರೆ.

ಕೊಡವಾಮೆ ಬಾಳೋ ಪಾದಯಾತ್ರೆ ಉದ್ದೇಶ ಮತ್ತು ಬೇಡಿಕೆಗಳು

  • ಕೊಡವ ಹಾಗೂ ಕೊಡವ ಭಾಷಿಕ ಸಮುದಾಯಗಳನ್ನು ಒಗ್ಗೂಡಿಸುವುದು.
  • ಕೊಡವ ಸಂಸ್ಕೃತಿ ಕುರಿತು ಸರ್ಕಾರದ ಗಮನ ಸೆಳೆಯುವುದು.
  • ಕೊಡವ ಸಂಸ್ಕೃತಿ ರಕ್ಷಣೆಗಾಗಿ ಪಾದಯಾತ್ರೆ.
  • ಕೊಡವ ಜನಾಂಗದ ಮೇಲಿನ ದಬ್ಬಾಳಿಕೆಯನ್ನು ಖಂಡಿಸುವುದು.
  • ಕೊಡವ, ಕೊಡವ ಭಾಷಿಕ ಸಮುದಾಯಗಳ ಏಳಿಗೆಗೆ ಸರ್ಕಾರದಿಂದ‌ ವಿಶೇಷ ಪ್ಯಾಕೇಜ್​ಗೆ ಆಗ್ರಹಿಸಲಾಗಿದೆ.

ಕರ್ನಾಟಕ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್