ಕೇಂದ್ರದ ಅಧೀನದಲ್ಲಿರುವ ಈ ಶಾಲೆಯಲ್ಲಿ ಮೂಲ ಸೌಕರ್ಯಗಳ ಮರೀಚಿಕೆ

ಕೇಂದ್ರದ ಅಧೀನದಲ್ಲಿರುವ ಈ ಶಾಲೆಯಲ್ಲಿ ಮೂಲ ಸೌಕರ್ಯಗಳ ಮರೀಚಿಕೆ

ಕೊಡಗು: ನೂರಾರು ವಿದ್ಯಾರ್ಥಿಗಳ ಜ್ಞಾನಾಜರ್ನೆಯ ಕೇಂದ್ರ. ಕೇಂದ್ರ ಸರ್ಕಾರದ ಅಧೀನದಲ್ಲಿರೋ ಈ ಶಿಕ್ಷಣ ಸಂಸ್ಥೆಗೆ ಪೋಷಕರು ತಮ್ಮ ಮಕ್ಕಳನ್ನ ಸೇರಿಸಲು ದುಂಬಾಲು ಬೀಳ್ತಾರೆ. ಆದ್ರೆ, ಎಜುಕೇಷನ್ ಒಂದು ಬಿಟ್ಟು. ಮತ್ತೆಲ್ಲ ಸೌಕರ್ಯ ಇಲ್ಲಿ ಇಲ್ಲವೇ ಇಲ್ಲ. ಉಸಿರುಗಟ್ಟುವ ವಾತಾವರಣದಲ್ಲಿ ಮಕ್ಕಳು ಓದಬೇಕಾದ ಅನಿವಾರ್ಯತೆ ಎದುರಾಗಿದೆ. ನವೋದಯ ಶಾಲೆಯಲ್ಲಿ ನೀರಿಗಾಗಿ ಪರದಾಟ! ಮಡಿಕೇರಿ ತಾಲೂಕಿನ ಜವಾಹರ್ ನವೋದಯ ವಿದ್ಯಾಲಯ ಇದೀಗ ಮೂಲ ಸೌಕರ್ಯದ ಕೊರತೆ ಎದುರಿಸುತ್ತಿದೆ. ಅದ್ರಲ್ಲೂ ಮಕ್ಕಳಿಗೆ ಕುಡಿಯೋಕೆ ಮತ್ತು ಬಳಸೋಕೆ ನೀರೇ ಇಲ್ಲದಂತಾಗಿದೆ. ಹಾಸ್ಟೆಲ್​ನಲ್ಲಿ ಮಕ್ಕಳಿಗೆ […]

sadhu srinath

|

Jan 12, 2020 | 4:47 PM

ಕೊಡಗು: ನೂರಾರು ವಿದ್ಯಾರ್ಥಿಗಳ ಜ್ಞಾನಾಜರ್ನೆಯ ಕೇಂದ್ರ. ಕೇಂದ್ರ ಸರ್ಕಾರದ ಅಧೀನದಲ್ಲಿರೋ ಈ ಶಿಕ್ಷಣ ಸಂಸ್ಥೆಗೆ ಪೋಷಕರು ತಮ್ಮ ಮಕ್ಕಳನ್ನ ಸೇರಿಸಲು ದುಂಬಾಲು ಬೀಳ್ತಾರೆ. ಆದ್ರೆ, ಎಜುಕೇಷನ್ ಒಂದು ಬಿಟ್ಟು. ಮತ್ತೆಲ್ಲ ಸೌಕರ್ಯ ಇಲ್ಲಿ ಇಲ್ಲವೇ ಇಲ್ಲ. ಉಸಿರುಗಟ್ಟುವ ವಾತಾವರಣದಲ್ಲಿ ಮಕ್ಕಳು ಓದಬೇಕಾದ ಅನಿವಾರ್ಯತೆ ಎದುರಾಗಿದೆ.

ನವೋದಯ ಶಾಲೆಯಲ್ಲಿ ನೀರಿಗಾಗಿ ಪರದಾಟ! ಮಡಿಕೇರಿ ತಾಲೂಕಿನ ಜವಾಹರ್ ನವೋದಯ ವಿದ್ಯಾಲಯ ಇದೀಗ ಮೂಲ ಸೌಕರ್ಯದ ಕೊರತೆ ಎದುರಿಸುತ್ತಿದೆ. ಅದ್ರಲ್ಲೂ ಮಕ್ಕಳಿಗೆ ಕುಡಿಯೋಕೆ ಮತ್ತು ಬಳಸೋಕೆ ನೀರೇ ಇಲ್ಲದಂತಾಗಿದೆ. ಹಾಸ್ಟೆಲ್​ನಲ್ಲಿ ಮಕ್ಕಳಿಗೆ ನೀರಿನ ಸೌಕರ್ಯ ಇಲ್ದಿರೋದು ಇದೀಗ ಮಕ್ಕಳಿಗೆ ತೊಂದರೆಯಾದಂತಾಗಿದೆ. ತಮ್ಮ ಮಕ್ಕಳು ಒಳ್ಳೆಯ ವಿದ್ಯಾಲಯದಲ್ಲಿ ಕಲಿತ್ರೆ ಮಕ್ಕಳ ಭವಿಷ್ಯ ಚೆನ್ನಾಗಿರತ್ತೆ ಅಂತಾ ಪೋಷಕರು ಅಂದಾಜಿಸಿದ್ರು. ಆದ್ರೀಗ ಇಲ್ಲಿ ಮಕ್ಕಳಿಗೆ ಎದುರಾದ ಸಂಕಷ್ಟ ನೋಡಿ ಕಂಗೆಟ್ಟಿದ್ದಾರೆ.

ನೀರು, ಸ್ವಚ್ಛತೆ ಮರೀಚಿಕೆ: ಗಾಳಿಬೀಡಿನಲ್ಲಿರೋ ನವೋದಯ ವಿದ್ಯಾ ಸಂಸ್ಥೆಗೆ ಸುಮಾರು 40 ವರ್ಷಗಳ ಇತಿಹಾಸ ಇದೆ. 850 ಮಕ್ಕಳು ವಿದ್ಯಾಭ್ಯಾಸ ಮಾಡೋ ಇಲ್ಲಿ ನೀರು, ಸ್ವಚ್ಛತೆ ಮಾತ್ರ ಮರೀಚಿಕೆ. ಹೀಗಾಗಿಯೇ ಸಂಸದ ಪ್ರತಾಪ್ ಸಿಂಹ ಇತ್ತೀಚೆಗಷ್ಟೇ ಭೇಟಿ ನೀಡಿದ್ರು. ವಿದ್ಯಾಲಯದ ಕೊಠಡಿ ಪರಿಶೀಲನೆ ಮಾಡಿದ ಪ್ರತಾಪ್ ಸಿಂಹ, ಮಕ್ಕಳ ಬಳಿ ಸಮಸ್ಯೆ ಆಲಿಸಿದ್ರು. ನಾಲ್ಕು ತಿಂಗಳಲ್ಲಿ ಇಲ್ಲಿನ ಸಮಸ್ಯೆಗೆ ಇತಿಶ್ರೀ ಹೇಳ್ತೇನೆ. ಮಕ್ಕಳ ಸಮಸ್ಯೆ, ವಿದ್ಯಾಲಯದ ಸಮಸ್ಯೆ ಬಗೆಹರಿಸ್ತೀನಿ ಅಂತಾ ಭರವಸೆ ನೀಡಿದ್ದಾರೆ.

ಒಟ್ನಲ್ಲಿ, ಒಂದು ಉತ್ತಮ ವಿದ್ಯಾ ಸಂಸ್ಥೆ ಅನ್ನೋ ಉದ್ದೇಶದಿಂದ ನವೋದಯ ವಿದ್ಯಾಲಯಕ್ಕೆ ಪೋಷಕರು ತಮ್ಮ ಮಕ್ಕಳನ್ನ ಸೇರಿಸಿದ್ರು. ಆದ್ರೆ ಇಲ್ಲಿನ ಪರಿಸ್ಥಿತಿಯೇ ಬೇರೆ. ಮಕ್ಕಳನ್ನ ಇಲ್ಲಿ ಸೇರಿಸಿ ಪೋಷಕರು ಮನೆಯಲ್ಲಿ ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇನ್ನಾದ್ರೂ ಸಂಬಂಧಿಸಿದ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ.

Follow us on

Related Stories

Most Read Stories

Click on your DTH Provider to Add TV9 Kannada