8 ಕೋಟಿ ರೂ ಕಾಮಗಾರಿಗೆ 18 ಕೋಟಿ ರೂ. ವೆಚ್ಚದ ಬಿಲ್​: ಉತ್ತರ ವಿವಿಯಲ್ಲಿ ಅಕ್ರಮ ಆರೋಪ!

ಉತ್ತರ ವಿವಿ ಹಲವು ಹೋರಾಟಗಳ ಸಲುವಾಗಿ ಹಿಂದುಳಿದ ಜಿಲ್ಲೆಗಳ ವಿದ್ಯಾರ್ಥಿಗಳಿಗಾಗಿ ನಿರ್ಮಾಣ ಮಾಡಲಾದ ವಿವಿ, ಆದರೆ ವಿದ್ಯಾರ್ಥಿಗಳ ಶಿಕ್ಷಣ ಪ್ರಗತಿಯಿಂದ ಸದ್ದು ಮಾಡಬೇಕಿದ್ದ ವಿವಿ ಇಂದು ಅಕ್ರಮಗಳಿಂದ ಸದ್ದು ಮಾಡುತ್ತಿರುವು ನಿಜಕ್ಕೂ ದುರಂತ, ಕುಡಲೇ ಸರ್ಕಾರ ಮತ್ತು ರಾಜ್ಯಪಾಲರು ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

8 ಕೋಟಿ ರೂ ಕಾಮಗಾರಿಗೆ 18 ಕೋಟಿ ರೂ. ವೆಚ್ಚದ ಬಿಲ್​: ಉತ್ತರ ವಿವಿಯಲ್ಲಿ ಅಕ್ರಮ ಆರೋಪ!
8 ಕೋಟಿ ರೂ ಕಾಮಗಾರಿಗೆ 18 ಕೋಟಿ ರೂ. ವೆಚ್ಚದ ಬಿಲ್​: ಉತ್ತರ ವಿವಿಯಲ್ಲಿ ಅಕ್ರಮ ಆರೋಪ!
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಗಂಗಾಧರ​ ಬ. ಸಾಬೋಜಿ

Updated on: Jun 21, 2024 | 10:57 PM

ಕೋಲಾರ, ಜೂನ್​ 21: ಅದು ಹಿಂದುಳಿದ ಜಿಲ್ಲೆಗಳ ವಿದ್ಯಾರ್ಥಿಗಳ (students) ಬಾಳು ಬೆಳಕಾಗಿಸುವ ಸಲುವಾಗಿ ಮಾಡಲಾದ ವಿಶ್ವವಿದ್ಯಾಲಯ (university). ಈಗಷ್ಟೇ ಒಂದೊಂದಾಗಿ ಅಭಿವೃದ್ದಿ ಮಾಡಲಾಗುತ್ತಿರುವ ವಿಶ್ವವಿದ್ಯಾಲಯದಲ್ಲಿ ಆರಂಭದಲ್ಲೇ ಅವ್ಯವಹಾರ, ಕಳಪೆ ಕಾಮಗಾರಿಯ ವಾಸನೆ ಬರುತ್ತಿದೆ. ಕಳೆದ ಐದು ವರ್ಷಗಳಲ್ಲಿ ಕೋಟ್ಯಾಂತರ ರೂ. ಅವ್ಯವಾಹಾರದ ಆರೋಪ ಕೇಳಿಬಂದಿದೆ. ಸುಮಾರು 8 ಕೋಟಿ ರೂ.  ಕಾಮಗಾರಿಗಳಿಗೆ ಸರಿಸುಮಾರು 18 ಕೋಟಿ ರೂ. ವೆಚ್ಚದ ಬಿಲ್​ಗಳನ್ನು ಮಾಡಿಕೊಂಡಿದ್ದಾರೆ ಎಂದು ಆರೋಪಿಸಿಲಾಗಿದೆ.

ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದದಲ್ಲಿ ಅಧಿಕೃತವಾಗಿ ಟೆಂಡರ್ ಇಲ್ಲದೇ ನಡೆದಿರುವ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಿ ತನಿಖೆ ನಡೆಸಬೇಕು ಎಂದು ಸಮಾಜಿಕ ಹೋರಾಟಗಾರ ಚಂಜಿಮಲೆ ಡಿ.ಮುನೇಶ್ ಒತ್ತಾಯ ಮಾಡಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯ ಪ್ರಕಾರ ಪಡೆದ ದಾಖಲೆಗಳಲ್ಲಿ ಬಾರಿ ಪ್ರಮಾಣದಲ್ಲಿ ಹಗರಣಗಳು ನಡೆದು ಕೋಟ್ಯಾಂತರ ರೂಪಾಯಿಗಳನ್ನು ಸರಕಾರಕ್ಕೆ ಮತ್ತು ವಿಶ್ವ ವಿದ್ಯಾಲಯಕ್ಕೆ ನಷ್ಟವನ್ನು ಮಾಡಿದ್ದಾರೆ ಎಂದು ದಾಖಲೆಗಳ ಸಮೇತ ಮಾಹಿತಿ ನೀಡಿದರು.

ಇದನ್ನೂ ಓದಿ: ಕೋಲಾರಮ್ಮ ಕೆರೆಗೆ ಈಗ ಮರುಜೀವ; ಅವನತಿ ಹಿಡಿದಿದ್ದ ಕೆರೆಗೆ ಜಿಲ್ಲಾಡಳಿತ, ಇನ್ಫೋಸಿಸ್​ ಫೌಂಡೇಶನ್​ನಿಂದ ಕಾಯಕಲ್ಪ!

ಈ ಹಗರಣದಲ್ಲಿ ವಿವಿಯ ಕೆಲವು ಪ್ರಮುಖ ಹುದ್ದೆಯ ಅಧಿಕಾರಿಗಳೇ ಭಾಗಿಯಾಗಿದ್ದಾರೆ. ಈ ಭ್ರಷ್ಟಾಚಾರವು ಹೊರ ಬರಬೇಕಾದರೆ ಕೂಡಲೇ ಸರ್ಕಾರ ತನಿಖೆಗೆ ವಹಿಸಬೇಕು ಇದಕ್ಕೆ ಸಂಬಂಧಿಸಿದ ಇಲಾಖೆಯು ಮುಂದಾಗಬೇಕು ಎಂದು ಒತ್ತಾಯಿಸಿದರು. ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಸ್ಥಾಪನೆಗಾಗಿ ವಿಧ್ಯಾರ್ಥಿಗಳೊಂದಿಗೆ ಪೋಷಕರು ಸಹ ಹೋರಾಟವನ್ನು ಮಾಡಿದ್ದ ಭಾಗವಾಗಿ ಈ ವಿಶ್ವವಿದ್ಯಾಲಯವು ಸ್ಥಾಪನೆಯಾಗಿದೆ. ಆದರೆ ಇವತ್ತು ಹೋರಾಟದ ಫಲವಾಗಿರುವ ವಿವಿಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಾ ಇದೆ, ಅದರ ವಿರುದ್ದ ಮತ್ತೊಂದು ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ.

ವಿವಿಯಲ್ಲಿ ಹೊರಗುತ್ತಿಗೆ ನೇಮಕಾತಿಯಿಂದ ಹಿಡಿದು ದಿನಕೂಲಿ ನೌಕರರು ನೇಮಕದಲ್ಲಿ ಕೂಡ ಹಣ ವಸೂಲಿ ಮಾಡಿದ್ದಾರೆ. ವಿಶ್ವವಿದ್ಯಾಲಯದಲ್ಲಿ ಶಿವರಾಜ್ ಎಂಬುವವ ಹೊರಗುತ್ತಿಗೆ ನೌಕರನಿಗೆ ಪರೀಕ್ಷಾ ಮೌಲ್ಯ ಮಾಪನ ಕೇಂದ್ರದ ಜವಾಬ್ದಾರಿಯನ್ನು ನೀಡಿದ್ದಾರೆ. ಅವರೇ ಎಲ್ಲವನ್ನೂ ನಿಭಾಯಿಸುತ್ತಾನೆ. ಒಂದು ರೀತಿಯಲ್ಲಿ ವಿವಿಯ ಸುಪ್ರೀಂ ಇದ್ದಂತೆ ಇದರಿಂದಾಗಿ ಗೊತ್ತಾಗುತ್ತದೆ ವಿವಿಯ ಕಾರ್ಯಯೋಜನೆಗಳು ಹೇಗೆ ಎಂಬುದನ್ನು ಸೂಚಿಸುತ್ತದೆ ವಿವಿಗೆ ಅನುದಾನ ಇದ್ದರೂ ಸರಿಯಾದ ರೀತಿಯಲ್ಲಿ ಬಳಕೆಯಾಗುತ್ತಿಲ್ಲ. ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಮಾರುಕಟ್ಟೆಯಲ್ಲಿ ಇಳಿಕೆ ಕಂಡ ತರಕಾರಿ ಬೆಲೆ; ರೈತನಿಗೆ ತಪ್ಪದ ಗೋಳು

ಉತ್ತರ ವಿವಿ ಸ್ಥಾಪನೆಯಾಗಿ ಏಳೆಂಟು ವರ್ಷಗಳೇ ಕಳೆದಿದೆ. ಇದರಲ್ಲಿ ಸುಮಾರು ಕಾಮಗಾರಿಗಳು ನಡೆದಿವೆ, ಯಾವುದೇ ಕಾಮಗಾರಿ ಮಾಡಿದ್ದರೂ ಕೂಡಾ ಎಲ್ಲವೂ ಕೂಡ ಕಾನೂನಿನ ಅಡಿಯಲ್ಲೇ ಮಾಡಲಾಗಿದೆ. ಅವ್ಯವಹಾರ ಯಾವುದೂ ನಡೆದಿಲ್ಲ ಎಲ್ಲವೂ ಕೂಡ ಕಾನೂನಾತ್ಮಕವಾಗಿ ಮಾಡಲಾಗಿದೆ. ಅವರು ಮಾಡಿರುವ ಆರೋಪಗಳು ನಿರಾಧಾರ ಕೆಲವರು ಪ್ರಚಾರಕ್ಕಾಗಿ ಇದನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿ ನಿಜವಾಗಲೂ ಅಕ್ರಮ ನಡೆದಿದ್ದರೆ ಯಾವುದೇ ತನಿಖೆಗೂ ನಾವು ಸಿದ್ದ ಎಂದು ಉತ್ತರ ವಿವಿ ಕುಲಪತಿ ಹೇಳಿದ್ದಾರೆ.

ಉತ್ತರ ವಿವಿ ಹಲವು ಹೋರಾಟಗಳ ಸಲುವಾಗಿ ಹಿಂದುಳಿದ ಜಿಲ್ಲೆಗಳ ವಿದ್ಯಾರ್ಥಿಗಳಿಗಾಗಿ ನಿರ್ಮಾಣ ಮಾಡಲಾದ ವಿವಿ, ಆದರೆ ವಿದ್ಯಾರ್ಥಿಗಳ ಶಿಕ್ಷಣ ಪ್ರಗತಿಯಿಂದ ಸದ್ದು ಮಾಡಬೇಕಿದ್ದ ವಿವಿ ಇಂದು ಅಕ್ರಮಗಳಿಂದ ಸದ್ದು ಮಾಡುತ್ತಿರುವು ನಿಜಕ್ಕೂ ದುರಂತ, ಕುಡಲೇ ಸರ್ಕಾರ ಮತ್ತು ರಾಜ್ಯಪಾಲರು ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ