ದೇವರಾಜ ಅರಸು ಉನ್ನತ ಶಿಕ್ಷಣ ಸಂಸ್ಥೆಯಿಂದ ಡಾಕ್ಟರೇಟ್: ಒತ್ತಾಯದ ಮೇರೆಗೆ ಸ್ವೀಕರಿಸಿದ ಸಿದ್ದರಾಮಯ್ಯ

ಸ್ಟಿಂಗ್ ಆಪರೇಷನ್​​​​ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ಹೆಸರು ಎಳೆದು ತರಲಾಗಿದ್ದು, ಈ ಸಂಬಂಧ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಆಡಳಿತೂ ಹಾಗೂ ವಿಪಕ್ಷಗಳ ಆರೋಪ ಪ್ರತ್ಯಾರೋಪ ತಾರಕಕ್ಕೇರಿದೆ. ಆದ್ರೆ, ಸಿದ್ದರಾಮಯ್ಯನವರು ಯಾವುದೇ ಪ್ರತಿಕ್ರಿಯೆ ನೀಡದೇ ಮೌನಕ್ಕೆ ಶರಣಾಗಿದ್ದಾರೆ. ಇದರ ಮಧ್ಯೆ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.

ದೇವರಾಜ ಅರಸು ಉನ್ನತ ಶಿಕ್ಷಣ ಸಂಸ್ಥೆಯಿಂದ ಡಾಕ್ಟರೇಟ್: ಒತ್ತಾಯದ ಮೇರೆಗೆ ಸ್ವೀಕರಿಸಿದ ಸಿದ್ದರಾಮಯ್ಯ
Siddaramaiah
Edited By:

Updated on: Oct 19, 2026 | 3:13 PM

ಕೋಲಾರ, (ಅಕ್ಟೋಬರ್ 19):  ಬೆಂಗಳೂರು, ಮೈಸೂರು ವಿಶ್ವವಿದ್ಯಾಲಯ ಹಾಗೂ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಘೋಷಣೆ ಮಾಡಿದ್ದ ಡಾಕ್ಟರೇಟ್ ಅನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಿಸಿದ್ದರು. ಆದ್ರೆ, ಇದೀಗ ಅನಿವಾರ್ಯವಾಗಿ ಎಲ್ಲರ ಒತ್ತಾಯದ ಮೇರೆಗೆ ಇಂದು (ಅಕ್ಟೋಬರ್ 19) ನಡೆದ R.L.ಜಾಲಪ್ಪ ಆಸ್ಪತ್ರೆ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರು ದೇವರಾಜ ಅರಸು ಮೆಡಿಕಲ್ ಕಾಲೇಜಿನಿಂದ ನೀಡಿದ ಗೌರವ ಡಾಕ್ಟರೇಟ್ ಅನ್ನು ಸ್ವೀಕರಿಸಿದ್ದಾರೆ.

ಒಂದು ವರ್ಷದ ಹಿಂದೆಯೇ ಕಾಲೇಜು ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಘೋಷಿಸಲಾಗಿತ್ತಾದರೂ ಸಿದ್ದರಾಮಯ್ಯ ನಿರಾಕರಿಸಿದ್ದರು. ಆದ್ರೆ, ಇಂದು ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿದ್ದರಾಮಯ್ಯನವರ ಹೆಸರು ಘೋಷಣೆ ಮಾಡಲಾಯ್ತು. ಈ ವೇಳೆ ಸಿದ್ದರಾಂಯ್ಯ ಆಶ್ಚರ್ಯಗೊಂಡರು. ಕೊನೆಗೆ ಗಣ್ಯರ ಒತ್ತಾಯದ ಮೇರೆಗೆ ಸಿದ್ದರಾಮಯ್ಯನವರು ಡಾಕ್ಟರೇಟ್ ಸ್ವೀಕರಿಸದರು.

Loading...

ಇದನ್ನೂ ಓದಿ: ಹಳೇ ರಾಜಕೀಯ ದಿನಗಳನ್ನ ಮೆಲುಕು ಹಾಕಿದ ಮಾಜಿ ಸಿಎಂ: ಸಿದ್ದರಾಮಯ್ಯ ಯಾರ ಫಾಲೋವರ್ ಗೊತ್ತಾ? 

ಡಾ.ಸಿದ್ದರಾಮಯ್ಯ ಅಂತಾ ಕರೆಯಬೇಡಿ

ನಾನು ಡಾಕ್ಟರೇಟ್ ಬೇಡ ಅಂತ ಹೇಳಿದ್ದೆ.ಸ್ವೀಕಾರ ಮಾಡೋದಾ ಬೇಡ್ವಾ ಅಂತ ಇದ್ದೆ. ಆದ್ರೂ ನನಗೆ RL ಜಾಲಪ್ಪ ಕಾಲೇಜಿನವರು ಗೌರವ ಡಾಕ್ಟರೇಟ್ ನೀಡಿದ್ದಾರೆ. RL ಜಾಲಪ್ಪ ಕಾಲೇಜಿನವರಿಗೆ ಧನ್ಯವಾದಗಳು. ಆದ್ರೆ ನನಗೆ ಸಿದ್ದರಾಮಯ್ಯ ಅಂತಾನೆ ಕರೆಯಿರಿ. ಡಾ.ಸಿದ್ದರಾಮಯ್ಯ ಅಂತಾ ಕರಿಬೇಡಿ ಎಂದು ನಗೆ ಚಟಾಕಿ ಹಾರಿಸಿದರು.

ಸಾಮಾಜಿಕ ಸೇವೆಗಾಗಿ ಒಲಿದು ಬಂದ ಡಾಕ್ಟರೇಟ್

ಸಿಎಂ ಸಿದ್ದರಾಮಯ್ಯ ಅವರು 2 ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಅಲ್ಲದೇ ಕರ್ನಾಟಕದಲ್ಲೇ ಅತಿ ಹೆಚ್ಚು ಬಜೆಟ್ ಮಂಡಿಸಿದ ನಾಯಕ ಹಾಗೂ ಸಿದ್ದರಾಮಯ್ಯ ಅವರು ಕರ್ನಾಟಕದ ಅತಿ ಹೆಚ್ಚು ಅವಧಿಯ ಸಿಎಂ ಆಗಿದ್ದಾರೆ. ಇಷ್ಟು ಮಾತ್ರವಲ್ಲದೆ ಅವರ ಅಧಿಕಾರದ ಅವಧಿಯಲ್ಲಿ ಜನಪರ ಐದು ಗ್ಯಾರಂಟಿ ಯೋಜನೆ ಜಾರಿ ಮಾಡುವ ಮೂಲಕ ಜನಪ್ರಿಯ ಯೋಜನೆಗಳ ಜಾರಿಯಿಂದಾಗಿ ಬಡ ಮತ್ತು ಮಧ್ಯಮ ವರ್ಗಕ್ಕೆ ಆಧಾರವಾಗುವಂತ ಯೋಜನೆ ಜಾರಿಗೆ ತಂದಿದ್ದಾರೆ ಎಂಬ ಕಾರಣಕ್ಕೆ ಅವರಿಗೆ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಗೌರವ ಡಾಕ್ಟರೇಟ್ ಘೋಷಣೆ ಮಾಡಿತ್ತು.

ಎರಡು ವಿವಿಯ ಡಾಕ್ಟರೇಟ್ ನಿರಾಕರಿಸಿದ್ದ ಸಿದ್ದರಾಮಯ್ಯ

ಈ ಹಿಂದೆ ಮೈಸೂರು ವಿಶ್ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಬೇಕೆಂಬ ಶಿಫಾರಸ್ಸನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಿಸಿದ್ದರು. ಅಲ್ಲದೇ ಕಳೆದ ಬಾರಿಯೇ ಬೆಂಗಳೂರು ವಿಶ್ವವಿದ್ಯಾಲಯವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿತ್ತು. ಹಾಗೇ ಕಳೆದ ವರ್ಷವೇ  ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯು ಸಹ ಡಾಕ್ಟರೇಟ್ ಘೋಷಣೆ ಮಾಡಿತ್ತು. ಆದರೆ ಇದನ್ನು ಸಿದ್ದರಾಮಯ್ಯ ತಿರಸ್ಕರಿಸಿದ್ದರು. ಇದೀಗ ಅಂತಿಮವಾಗಿ ಸಿದ್ದರಾಮಯ್ಯ ಅನಿವಾರ್ಯವಾಗಿ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಘೋಷಣೆ ಮಾಡಿದ್ದ ಡಾಕ್ಟರೇಟ್​​ ಅನ್ನು ಸ್ವೀಕರಿಸಬೇಕಾಯ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:02 pm, Mon, 19 October 26

ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ

18 ವರ್ಷಗಳ ಹಿಂದೆ ಉತ್ತಮ ಸಮಾಜಕ್ಕಾಗಿ ಟಿವಿ9 ಚಾನೆಲ್​​ ಆರಂಭವಾದಾಗಿನಿಂದ ನನ್ನ ಮಾಧ್ಯಮ ಕಾಯಕವೂ ಆರಂಭ ಪಡೆಯಿತು. ಸ್ನಾತಕೋತ್ತರ ಪದವಿ ಮುಗಿಸಿದ್ದ ನಾನು ಚಿನ್ನದ ನಾಡು, ಕೃಷಿಕರ ಬೀಡು ಕೋಲಾರ ಜಿಲ್ಲೆಯ ಹಿರಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಟಿವಿ9 ಸಂಸ್ಥೆಯ ಆಶೋತ್ತರಗಳಿಗೆ ತಕ್ಕಂತೆ ಕೋಲಾರ ಜನತೆಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ನನ್ನದು ಸಾಮಾಜಿಕ ಕಳಕಳಿ ಇರುವ ಟಿವಿ9 ಸಂಸ್ಥೆಯಲ್ಲಿ ಕೆಲಸ ಅನ್ನೋದಕ್ಕಿಂತ ಉತ್ತಮ ಸಮಾಜಕ್ಕಾಗಿ ನನ್ನ ಸೇವೆ ಅನ್ನುವ ಭಾವನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ.

Read More
Loading...
Unable to load recommendations.
Follow Us