AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಳೇ ರಾಜಕೀಯ ದಿನಗಳನ್ನ ಮೆಲುಕು ಹಾಕಿದ ಮಾಜಿ ಸಿಎಂ: ಸಿದ್ದರಾಮಯ್ಯ ಯಾರ ಫಾಲೋವರ್ ಗೊತ್ತಾ?

ಬೆಂಗಳೂರಿನ ಕೊಂಡಜ್ಜ ಸಭಾಂಗಣದಲ್ಲಿ ನಡೆದ ಸಾಹಿತಿ, ಪ್ರೋ ನಟರಾಜ್ ಹುಳಿಯಾರ್ ಬರೆದ ‘ಡಾಕ್ಟರ್ ಸಾಹೇಬ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಸೋಷಿಯಲಿಸ್ಟ್ ಮತ್ತು ಜನತಾ ಪಾರ್ಟಿಯಿಂದ ಕಾಂಗ್ರೆಸ್‌ಗೆ ಬಂದು ಮುಖ್ಯಮಂತ್ರಿಯಾದ ತಮ್ಮ ರಾಜಕೀಯ ಪಯಣದ ಬಗ್ಗೆ ಎಳೆಎಳೆಯಾಗಿ ಬಿಚಿಟ್ಟಿದ್ದಾರೆ.

ಹಳೇ ರಾಜಕೀಯ ದಿನಗಳನ್ನ ಮೆಲುಕು ಹಾಕಿದ ಮಾಜಿ ಸಿಎಂ: ಸಿದ್ದರಾಮಯ್ಯ ಯಾರ ಫಾಲೋವರ್ ಗೊತ್ತಾ?
‘ಡಾಕ್ಟರ್ ಸಾಹೇಬ್’ ಪುಸ್ತಕ ಬಿಡುಗಡೆ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ Image Credit source: x.com/siddaramaiah
ಈರಣ್ಣಾ ಬಸವಾ
| Edited By: |

Updated on: Oct 12, 2026 | 9:23 PM

Share

ಮುಖ್ಯಾಂಶಗಳು

  • ‘ಡಾಕ್ಟರ್ ಸಾಹೇಬ್’ ಪುಸ್ತಕ ಬಿಡುಗಡೆ ಮಾಡಿದ ಸಿದ್ದರಾಮಯ್ಯ
  • ಲೋಹಿಯಾ ಚಿಂತನೆ ಜಾರಿಗೆ ತರುವ ಪ್ರಯತ್ನ ಮಾಡಿದ್ದ ಎಂದ ಮಾಜಿ ಸಿಎಂ 
  • ಹಳೆ ರಾಜಕೀಯ ನೆನಪು ಮೆಲಕು ಹಾಕಿದ ಸಿದ್ದರಾಮಯ್ಯ

ಬೆಂಗಳೂರು, ಅಕ್ಟೋಬರ್​​ 12: ರಾಮ ಮನೋಹರ ಲೋಹಿಯಾ ಅವರ ಜೀವನಯಾನ ಕುರಿತು ಸಾಹಿತಿ, ವಿಮರ್ಶಕ ಡಾ. ನಟರಾಜ್ ಹುಳಿಯಾರ್ ಅವರು ಬರೆದಿರುವ “ಡಾಕ್ಟರ್ ಸಾಹೇಬ್” ಪುಸ್ತಕವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದರು. ನಗರದ ಕೊಂಡಜ್ಜ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಸಿದ್ದರಾಮಯ್ಯ, ಈ ವೇಳೆ ತಮ್ಮ ಹಳೆಯ ರಾಜಕೀಯ ಜೀವನವನ್ನು ಮೆಲುಕು ಹಾಕಿದರು.

ನನ್ನ ಬಿಟ್ಟು ಎಲ್ಲರೂ ಕಾಂಗ್ರೆಸ್​ಗೆ ಹೋಗಿದ್ದರು: ಸಿದ್ದರಾಮಯ್ಯ 

ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಿದ್ದರಾಮಯ್ಯ, ‘ನಾನು 77ರವರೆಗೂ ಸೋಷಿಯಲಿಸ್ಟ್ ಪಾರ್ಟಿಯಲ್ಲಿ ಇದ್ದೆ. ಬಳಿಕ ಜನತಾ ಪಾರ್ಟಿ ಸೆಕ್ರೆಟರಿ ಕೂಡ ಆಗಿದ್ದೆ. ನಂತರ 1980ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದೆ. ಅಷ್ಟೊತ್ತಿಗೆ ಜನತಾ ಪಾರ್ಟಿ ಹೋಳಾಯ್ತು. ಡಬಲ್​ ಮೆಂಬರ್​ ಬಗ್ಗೆ ಪ್ರಶ್ನೆ ಮಾಡಿದ್ದರು. ಜನ ಸಂಘ ಹೋಗಿ ಬಿಜೆಪಿ ಆಯಿತು. ನಾನು ಜನತಾ ಪಾರ್ಟಿಯಲ್ಲೇ ತಾಲೂಕು ಬೋರ್ಡ್ ಮೆಂಬರ್ ಆಗಿದ್ದೆ. ಗೆದ್ದ ಎಂಟು ಜನರಲ್ಲಿ ನನ್ನ ಬಿಟ್ಟು ಎಲ್ಲರೂ ಕಾಂಗ್ರೆಸ್​ಗೆ ಹೋಗಿದ್ದರು’ ಎಂದು ಹೇಳಿದರು.

ಸಿದ್ದರಾಮಯ್ಯ ಟ್ವೀಟ್​​

‘ನಾನು ಜಾರ್ಜ್ ಫರ್ನಾಂಡಿಸ್ ಫಾಲೋವರ್ಸ್. ನಂಜುಂಡಸ್ವಾಮಿ ಕೂಡ ಫರ್ನಾಂಡಿಸ್ ಫಾಲೋವರ್​​. ನಾನು ಚುನಾವಣೆಯಲ್ಲಿ ಸೋತೆ. ಒಂದು ವೇಳೆ ಜನತಾ ಹೋಳಾಗದೆ ಹೋಗಿದ್ದರೆ ಕರ್ನಾಟಕದಲ್ಲಿ ಜನತಾ ಪಾರ್ಟಿನೇ ಇರುತ್ತಿತ್ತು. ಲೋಹಿಯಾ ಅವರು ಕಾಂಗ್ರೆಸ್ಸೇತರ ಸರ್ಕಾರ ಬರಬೇಕು ಎಂದು ನಂಬಿಕೆ ಇಟ್ಟುಕೊಂಡವರು. ಇವತ್ತು ಅನೇಕ ಚಿಂತನೆಗಳಿಂದ ಪ್ರಭಾವಿತರಾಗಿರುವ ಸಮಾಜವಾದಿಗಳು ಬಹಳ ಜನರಿದ್ದಾರೆ. ರಾಜಕಾರಣಿಗಳು ಆದವರು, ಆಗದೆ ಇರುವವರಿದ್ದಾರೆ’ ಎಂದು ಹೇಳಿದರು.

ಲೋಹಿಯಾ ಚಿಂತನೆ ಜಾರಿಗೆ ತರುವ ಪ್ರಯತ್ನ ಮಾಡಿದ್ದೆ ಎಂದ ಮಾಜಿ ಸಿಎಂ 

‘ಎಂಟು ವರ್ಷಗಳ ಕಾಲ ಸಿಎಂ ಆಗಿದ್ದೆ. 2013-18 ಮತ್ತು 2023ರಲ್ಲಿ ನಾನು ಸಿಎಂ ಆಗಿ ಲೋಹಿಯಾ ಚಿಂತನೆ ಸ್ವಲ್ಪ ಮಟ್ಟಿಗೆ ಜಾರಿ ತರುವ ಪ್ರಯತ್ನ ಮಾಡಿದೆ‌. ಕಾಂಗ್ರೆಸ್​ನಲ್ಲಿ ಇದ್ದರೂ ಲೋಹಿಯಾ ಚಿಂತನೆ ಜಾರಿ ಮಾಡುವ ಪ್ರಯತ್ನ ಮಾಡಿದೆ. ಲೋಹಿಯಾ ಅವರು ಸ್ಪಷ್ಟವಾಗಿ 60% ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಪಕ್ಷದಲ್ಲಿ ಇರಬೇಕು ಎಂದು ಹೇಳಿದ್ದರು. ನಾನು ಅದನ್ನು ಮಾಡಿದೆ’ ಎಂದರು.

LIVE TV

‘ಸಾಮಾಜಿಕವಾಗಿ, ಆರ್ಥಿಕ ಶಕ್ತಿ ಬರಬೇಕು ಎಂದು ಬಾಬಾ ಅಂಬೇಡ್ಕರ್ ಹೇಳಿದ್ದರು. ಜಾತಿಯತೆ ಹೋಗಬೇಕಾದರೆ ಆರ್ಥಿಕ, ಸಾಮಾಜಿಕ ಶಕ್ತಿ ಬರಬೇಕು. ಇದನ್ನ ಜಾರಿ ಮಾಡುವ ಪ್ರಯತ್ನ ವಿನಮ್ರವಾಗಿ ಮಾಡಿದೆ. ವರ್ಗಕ್ಕೆ ಚಲನೆಯಿದೆ ಆದರೆ ಅದು ಜಾತಿ ಆಗುತ್ತದೆ. ಚಲನೆ ಇಲ್ಲದೆ ವ್ಯವಸ್ಥೆ ಅಂದರೆ ಜಾತಿ ವ್ಯವಸ್ಥೆ. ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ಬಂದರೆ ಚಲನೆ ಸಿಗುತ್ತೆ. ಯುರೋಪ್ ಕಂಟ್ರಿಗಳಲ್ಲಿ ಯುನಿವರ್ಸಲ್ ಬೇಸಿಕ್ ಇನ್ಕಮ್ ಎಂದಿದೆ‌. ಅದನ್ನ ಜಾರಿ ಮಾಡುವ ಪ್ರಯತ್ನ ಮಾಡಿದ್ದೇನೆ. ಹಾಗಾಗಿ ನಾನು ಗ್ಯಾರಂಟಿಗಳನ್ನ ಜಾರಿ‌ ಮಾಡಿದೆ’ ಎಂದು ತಿಳಿಸಿದರು.

ಇದನ್ನೂ ಓದಿ: ಸ್ನೇಹದಲ್ಲಿ ಬಿರುಕು: ಸಿದ್ದರಾಮಯ್ಯ ಜೊತೆಗಿನ ಮನಃಸ್ತಾಪ ಬಗ್ಗೆ ಮಹದೇವಪ್ಪ ಹೇಳಿದ್ದಿಷ್ಟು

‘ಇನ್ನು ನಟರಾಜ್ ಹುಳಿಯಾರ್​​ ಅವರ ಕುರಿತಾಗಿ ಮಾತನಾಡಿದ ಮಾಜಿ ಸಿಎಂ, ‘ನಟರಾಜ್ ಹುಳಿಯಾರ್ ಸಾಹಿತಿ ಮಾತ್ರವಲ್ಲ, ಅವರು ಸಮಾಜ ಅರ್ಥ ಮಾಡಿಕೊಳ್ಳುವ ಚಿಂತಕರು. ಆದ್ದರಿಂದ ಈ ಪುಸ್ತಕ ಬರೆಯಲು ಸಾಧ್ಯವಾಯಿತು. ಸಮಾಜದ ಒಳನೋಟ, ಅಂಬೇಡ್ಕರ್ ಮತ್ತು ಜೆಪಿ ಚಿಂತನೆ ಅರ್ಥ ಮಾಡಿಕೊಳ್ಳದೆ ಹೋದರೆ ಸಮಾಜ ಹಿಂಗೆ ಇರುತ್ತದೆ’ ಎಂದು ಸಿದ್ದರಾಮಯ್ಯ ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಈರಣ್ಣಾ ಬಸವಾ
ಈರಣ್ಣಾ ಬಸವಾ

ಈರಣ್ಣಾ ಬಸವಾ.. ಮೂಲತಃ ವಾಣಿಜ್ಯ ನಗರಿ ಹುಬ್ಬಳ್ಳಿಯವರು. ಈರಣ್ಣಾ ಬಿ.ಕಾಮ್ ಪದವೀಧರರಾಗಿದ್ದಾರೆ. ಕಂಟೆಂಟ್ ರೈಟರ್ ಆಗಿ ವೃತ್ತಿಜೀವನ ಆರಂಭಿಸಿದ ನಂತರ ಕನ್ನಡದ ಬೇರೆ ಬೇರೆ ಸುದ್ದಿ ಮಾದ್ಯಮದಲ್ಲಿ ಸುಮಾರು ೬ ವರ್ಷ ಕಾಲ ಡೆಸ್ಕ್ ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸದ್ಯ ಸತತ ಪರಿಶ್ರಮದಿಂದ ಟಿವಿ9 ಕನ್ನಡದಲ್ಲಿ ರಾಜಕೀಯ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಹಲವು ಎಕ್ಸ್ ಕ್ಲೂಸಿವ್ ಸುದ್ದಿಗಳನ್ನು ಹೆಕ್ಕಿ ತೆಗೆದಿದ್ದಾರೆ. ಸಿಎಂ, ಡಿಸಿಎಂ ಬೀಟ್ ಜವಾಬ್ದಾರಿ ಇವರ ಮೇಲಿದ್ದು ಜನರಿಗೆ ಸಿಗಬೇಕಾದ ಅಮೂಲ್ಯ ಸುದ್ದಿಗಳನ್ನು ತಲುಪಿಸುವ ಕಾಯಕವನ್ನು ಜವಾಬ್ದಾರಿಯಿಂದ ಮಾಡುತ್ತಿದ್ದಾರೆ. ಬರವಣಿಗೆ, ಕತೆ, ಕವನ ಇವರ ಆಸಕ್ತಿಯ ಕ್ಷೇತ್ರ.

Read More
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ
ಮಂಜನಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ: ಸಂಗೀತಾ ಭಟ್ ಅಚ್ಚರಿಯ ಹೇಳಿಕೆ
ಮಂಜನಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ: ಸಂಗೀತಾ ಭಟ್ ಅಚ್ಚರಿಯ ಹೇಳಿಕೆ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ
ವಿ. ಸೋಮಣ್ಣ ಕಾರು ಮುತ್ತಿಗೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಯತ್ನ
ವಿ. ಸೋಮಣ್ಣ ಕಾರು ಮುತ್ತಿಗೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಯತ್ನ
ಯುವತಿ ದೂರಿನ ಮೇರೆಗೆ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ
ಯುವತಿ ದೂರಿನ ಮೇರೆಗೆ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ
ಎಟಿಎಂನಲ್ಲಿ ಹೆಡೆ ಎತ್ತಿ ನಿಂತ ನಾಗರಹಾವು
ಎಟಿಎಂನಲ್ಲಿ ಹೆಡೆ ಎತ್ತಿ ನಿಂತ ನಾಗರಹಾವು
‘ಅತ್ತಿಗೆ ಪಟ್ಟ ಸಿಕ್ಕಿದ್ದಕ್ಕೆ ಖುಷಿ ಇದೆ’; ಸಂಗೀತಾ ಭಟ್ ಫಸ್ಟ್ ರಿಯಾಕ್ಷನ್
‘ಅತ್ತಿಗೆ ಪಟ್ಟ ಸಿಕ್ಕಿದ್ದಕ್ಕೆ ಖುಷಿ ಇದೆ’; ಸಂಗೀತಾ ಭಟ್ ಫಸ್ಟ್ ರಿಯಾಕ್ಷನ್