AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ನೇಹದಲ್ಲಿ ಬಿರುಕು: ಸಿದ್ದರಾಮಯ್ಯ ಜೊತೆಗಿನ ಮನಃಸ್ತಾಪ ಬಗ್ಗೆ ಮಹದೇವಪ್ಪ ಹೇಳಿದ್ದಿಷ್ಟು

ಮೈಸೂರು--ಚಾಮರಾಜನಗರ ಭಾಗದ ಕಾಂಗ್ರೆಸ್‌ ರಾಜಕಾರಣದಲ್ಲಿ ನಾಲ್ಕು ದಶಕಗಳಿಂದ ಪ್ರಭಾವ ಬೀರಿದ್ದ ಸಿದ್ದರಾಮಯ್ಯ-ಹೆಚ್‌.ಸಿ.ಮಹದೇವಪ್ಪ ಜೋಡಿಯ ನೇರ ಕಾರ್ಯಾಂಗದ ಅಧಿಕಾರಕ್ಕೆ ಈಗ ವಿರಾಮ ಬಿದ್ದಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದಾರೆ. ಮಹದೇವಪ್ಪ ಸಚಿವ ಸಂಪುಟದಿಂದ ಹೊರಗುಳಿದಿದ್ದಾರೆ. ಇದರ ನಡುವೆ ಇದೀಗ ಇಬ್ಬರ ನಡುವೆ ಮೈಮನಸ್ಸು ಹುಟ್ಟಿಕೊಂಡಿದ್ದು, ಸಿದ್ದರಾಮ್ಯಯ ಜೊತೆಗಿನ ಮುನಿಸನ ಬಗ್ಗೆ ಮಹದೇವಪ್ಪ ಮೌನ ಮುರಿದಿದ್ದಾರೆ.

ಸ್ನೇಹದಲ್ಲಿ ಬಿರುಕು: ಸಿದ್ದರಾಮಯ್ಯ ಜೊತೆಗಿನ ಮನಃಸ್ತಾಪ ಬಗ್ಗೆ ಮಹದೇವಪ್ಪ ಹೇಳಿದ್ದಿಷ್ಟು
Hc Mahadevappa And Siddaramaiah
ರಮೇಶ್ ಬಿ. ಜವಳಗೇರಾ
|

Updated on: Oct 12, 2026 | 6:52 PM

Share

ಮೈಸೂರು, (ಅಕ್ಟೋಬರ್ 12): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಹೆಚ್‌ಸಿ ಮಹದೇವಪ್ಪ ಅವರ ಸ್ನೇಹದಲ್ಲಿ ಬಿರುಕು ಮೂಡಿದೆ ಎಂಬ ವಿಚಾರ ಪದೇ ಪದೇ ಮುನ್ನಲೆಗೆ ಬರುತ್ತಿದೆ. ಇಬ್ಬರು ನಾಯಕರು ಈ ವಿಚಾರವನ್ನು ಅಲ್ಲಗಳೆಯುತ್ತಿದ್ದರೂ ಸ್ನೇಹದಲ್ಲಿನ ಬಿರುಕು ಮಾತ್ರ ಸದ್ದು ಮಾಡುತ್ತಿದೆ. ಇದಕ್ಕೆ ಪೂರಕವೆಂಬಂತೆ ಸಿದ್ದರಾಮಯ್ಯ ಅವರಿಗೆ ಆಹ್ವಾನ ಇಲ್ಲದೇ ಮಹದೇವಪ್ಪ ಅವರು ಮೈಸೂರಿನಲ್ಲಿ ‌ʻರಾಷ್ಟ್ರೀಯ ಸಂವಿಧಾನ ದಿನʼ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಈ ಮೂಲಕ ಆಪ್ತ ಮಿತ್ರರಾಗಿದ್ದ ಸಿದ್ದರಾಮಯ್ಯ ಹಾಗೂ ಮಹದೇವಪ್ಪ (HC ಅವರ ನಡುವಿನ ಮುನಿಸು ಮತ್ತೊಂದು ಹಂತಕ್ಕೆ ಹೋಗಿದೆ.

ಮತ್ತೊಂದು ಹಂತಕ್ಕೆ ಅತ್ಯಾಪ್ತರ ಮುನಿಸು

ನವೆಂಬರ್‌ 26, 27 ರಂದು ಮೈಸೂರಿನಲ್ಲಿ ಸಂವಿಧಾನದ ಹೆಸರಿನಲ್ಲಿ ರಾಷ್ಟ್ರೀಯ ಸಂವಿಧಾನ ದಿನ ಸಮ್ಮೇಳನವನ್ನ ಹಮ್ಮಿಕೊಳ್ಳಲಾಗಿದೆ. ಈ ಸಮ್ಮೇಳನ ಮಾಜಿ ಸಚಿವ ಡಾ. ಹೆಚ್‌.ಸಿ ಮಹದೇವಪ್ಪ ಅವರ ನೇತೃತ್ವದಲ್ಲಿ ಆಯೋಜನೆಗೊಳ್ಳುತ್ತಿದೆ. ಅಲ್ಲದೇ ಸಿದ್ದರಾಮಯ್ಯ ಅವರನ್ನ ಆಹ್ವಾನಿಸಲ್ವಾ? ಅನ್ನೋ ಪ್ರಶ್ನೆಗೂ ಮಹದೇವಪ್ಪ ಅವರು ಸ್ಪಷ್ಟ ಉತ್ತರ ನೀಡದಿರುವುದು ಇಬ್ಬರ ನಡುವಿನ ಮುನಿಸು ಮುಂದಿನ ಹಂತ ತಲುಪಿದೆಯಾ ಎನ್ನುವ ಪ್ರಶ್ನೆ ಮೂಡಿದೆ. ಯಾಕಂದ್ರೆ ಸಿದ್ದರಾಮಯ್ಯ ಮೈಸೂರಿಗೆ ಬಂದ್ರೆ ಮಹದೇವಪ್ಪ ಜೊತೆಯಲ್ಲೇ ಇರುತ್ತಿದ್ದರು. ಇನ್ನು ಮೈಸೂರಿನಲ್ಲಿ ಯಾವುದೇ ಕಾರ್ಯಕ್ರಮಗಳ ಇರಲಿ ಒಟ್ಟಿಗೆ ಭಾಗವಹಿಸುತ್ತಿದ್ದರು. ಆದ್ರೆ, ಇದೀಗ ಇಬ್ಬರೂ ಅಂತರ ಕಾಯ್ದುಕೊಂಡಿದ್ದಾರೆ.

ಸಿದ್ದರಾಮಯ್ಯನವರ ಬಗ್ಗೆ ಮಹದೇವಪ್ಪ ಹೇಳಿದ್ದೇನು?

ಸಿದ್ದರಾಮಯ್ಯ ಅವರನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಲ್ವಾ ಅನ್ನೋ ಪ್ರಶ್ನೆಗೆ ಹೆಸರು ಹೇಳದೇ ಖಡಕ್‌ ಉತ್ತರ ಕೊಟ್ಟ ಮಹದೇವಪ್ಪ, ಇಲ್ಲಿ ಯಾವ ವ್ಯಕ್ತಿಯ ಪ್ರಶ್ನೆಯೂ ಇರಲ್ಲ. ಸಂವಿಧಾನದ ರಕ್ಷಕರು ಎಲ್ಲಾ ಸೇರಿ ಇದರಲ್ಲಿ ಭಾಗವಹಿಸುತ್ತಾರೆ ಎಂದಷ್ಟೇ ಹೇಳಿದ್ದಾರೆ. ಇನ್ನೂ ತಮ್ಮ ಹಾಗೂ ಸಿದ್ದರಾಮಯ್ಯ ನಡುವಿನ ಫ್ರೆಂಡ್‌ಶಿಪ್‌ ಕುರಿತ ಪ್ರಶ್ನೆಗೂ ಉತ್ತರ ಕೊಡದೇ ನುಣುಚಿಕೊಂಡ ಮಾಜಿ ಸಚಿವರು, ONCE A FRIEND IS ALWAYS A FRIEND, ಸ್ನೇಹದ ಪ್ರೀತಿ ಜಾಸ್ತಿಯೂ ಆಗಲ್ಲ, ಕಡಿಮೆಯೂ ಆಗಲ್ಲ. ನಾನು ಈಗ ಬೇರೆ ಯಾವ ಪ್ರಶ್ನೆಗಳಿಗೂ ಈಗ ಉತ್ತರ ಕೊಡಲ್ಲ. ಬೇರೆ ಯಾವುದೇ ವಿಷಯವನ್ನ ಇಲ್ಲಿ ತರೋದು ಬೇಡ, ಮುಕ್ತ ಮನಸ್ಸಿನಿಂದ ರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಲ್ಲರೂ ಪಾಲ್ಗೊಳ್ಳಿ ಎಂದು ಹೇಳಿ, ಜಾರಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರಮೇಶ್ ಬಿ. ಜವಳಗೇರಾ
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More