ಆರೋಪಿಯನ್ನ ವಿಚಾರಿಸದೆ ಬಿಟ್ಟು ಕಳಿಸಿದ್ದಕ್ಕೆ ಪೊಲೀಸರ ವಿರುದ್ಧ ಕರವೇ ಗರಂ

  • TV9 Web Team
  • Published On - 13:03 PM, 20 Jun 2020
ಆರೋಪಿಯನ್ನ ವಿಚಾರಿಸದೆ ಬಿಟ್ಟು ಕಳಿಸಿದ್ದಕ್ಕೆ ಪೊಲೀಸರ ವಿರುದ್ಧ ಕರವೇ ಗರಂ

ಕೋಲಾರ: ಅಕ್ರಮವಾಗಿ ಪಡಿತರ ಸಾಗಿಸುತ್ತಿದ್ದ ಆರೋಪಿಯನ್ನು ಬಂಧಿಸದೆ ಬಿಟ್ಟು ಕಳಿಸಿದ್ದಾರೆ ಎಂದು ಆರೋಪಿಸಿ ಪೊಲೀಸರ ವಿರುದ್ಧ ಕರವೇ ಕಾರ್ಯಕರ್ತರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಕೋಲಾರ ಜಿಲ್ಲೆ ಮಾಲೂರು ಪಟ್ಟಣದ ದೊಡ್ಡಮಸೀದಿ ಬಳಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ನಸ್ರುಲ್ಲಾಖಾನ್​ನನ್ನು ಕರವೇ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.

ಆದ್ರೆ ಪೊಲೀಸರು ವಿಚಾರಣೆ ಮಾಡದೆ ಆರೋಪಿಯನ್ನು ಬಿಟ್ಟು ಕಳುಹಿಸಿದ್ದಾರೆ. ಹೀಗಾಗಿ ಕಾರ್ಯಕರ್ತರು ಮಾಲೂರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಮತ್ತು ಕಾರ್ಯಕರ್ತರ ವಿರುದ್ಧ ಮಾತಿನ ಚಕಮಕಿ ನಡೆದಿದೆ. ಆರೋಪಿ ನಸ್ರುಲ್ಲಾಖಾನ್ ಸುಮಾರು ಒಂದು ಟನ್​ನಷ್ಟು ಪಡಿತರ ಅಕ್ಕಿಯನ್ನು ಸಾಗಿಸಲು ಮುಂದಾಗಿದ್ದ. ಈಗ ಆತ ಪರಾರಿಯಾಗಿದ್ದಾನೆ. ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‌ಪ್ರಕರಣ ನಡೆದಿದೆ.