ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ: ಮೊದಲ ಬಾರಿಗೆ ಪೊಲೀಸರಿಂದ ಆರೋಪಿಗಳ ಮೇಲೆ ಪವರ್ ಫುಲ್ ಕಾನೂನು ಪ್ರಯೋಗ

ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣದ ಆರೋಪಿಗಳೆಲ್ಲರೂ ಬಹತೇಕ ಎಲ್ಲರೂ ರೌಡಿಶೀಟರ್ಗಳಾಗಿದ್ದು ಹಲವಾರು ಬಾರಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರು. ಕಳೆದ ಹತ್ತು ವರ್ಷಗಳಿಂದ ಕಾನೂನು ಬಾಹಿರ ಕೃತ್ಯಗಳನ್ನು ಎಸಗಿ ಹಲವಾರು ಬಾರಿ ಜೈಲಿಗೆ ಹೋಗಿ ಬಂದಿದ್ದಾರೆ.

ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ: ಮೊದಲ ಬಾರಿಗೆ ಪೊಲೀಸರಿಂದ ಆರೋಪಿಗಳ ಮೇಲೆ ಪವರ್ ಫುಲ್ ಕಾನೂನು ಪ್ರಯೋಗ
ಮುಳಬಾಗಿಲು ಪೊಲೀಸ್ ಠಾಣೆ
Follow us
TV9 Web
| Updated By: ಆಯೇಷಾ ಬಾನು

Updated on:Jul 24, 2022 | 9:27 PM

ಕೋಲಾರ: ಕಳೆದ ತಿಂಗಳು ಕೋಲಾರ ಜಿಲ್ಲೆಯಲ್ಲಿ ನಡೆದ ಮುಳಬಾಗಿಲು ನಗರಸಭೆ ಸದಸ್ಯನ ಕೊಲೆ ಪ್ರಕರಣ(Kolar Jagan Mohan Reddy Murder) ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ. ಅಷ್ಟೇ ಅಲ್ಲದೆ ಕೊಲೆ ಪ್ರಕರಣದಲ್ಲಿ ಬಂಧಿಯಾಗಿರುವ ಆರೋಪಿಗಳ ಹಿನ್ನೆಲೆಯೂ ಕೂಡಾ ಅಷ್ಟೇ ಭಯಾನಕವಾಗಿದ್ದು ಆರೋಪಿಗಳನ್ನು ಸಮಾಜದಲ್ಲಿ ಹೊರಗೆ ಬಿಟ್ಟರೆ ಹೇಗೋ ಏನೋ ಎನ್ನುವ ಸ್ಥಿತಿ ಇದ್ದ ಕಾರಣ ಪೊಲೀಸರು(Kolar Police) ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಆರೋಪಿಗಳ ಮೇಲೆ ಕಾನೂನಿನ ಬ್ರಹ್ಮಾಸ್ತ್ರವನ್ನು ಪ್ರಯೋಗಿಸುತ್ತಿದ್ದಾರೆ.

ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣದಲ್ಲಿ ದೊಡ್ಡ ಕ್ರಿಮಿನಲ್ಸ್​ಗಳ ತಂಡ

2022 ಜೂನ್ 7ರಂದು ನಡೆದ ಕೊಲೆ ಪ್ರಕರಣ ಕೋಲಾರ ಜಿಲ್ಲೆಯನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು. ಮುಳಬಾಗಿಲು ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಆಲಿಯಾಸ್ ಪಳ್ಳಿ ಮೋಹನ್ ರನ್ನು ಬೆಳ್ಳಂಬೆಳಿಗ್ಗೆ ಅವರ ಮನೆಯ ಎದುರಿನ ಗಂಗಮ್ಮನ ದೇವಾಲಯದ ಬಾಗಿಲಲ್ಲೇ ಹಂತಕರು ಬರ್ಬರವಾಗಿ ಕೊಲೆ ಮಾಡಿದ್ದರು. ಇದು ಇಡೀ ಜಿಲ್ಲೆಯ ಜನರನ್ನು ಭಯದಲ್ಲಿ ಬದುಕುವಂತೆ ಮಾಡಿತ್ತು. ಅದಕ್ಕೆ ಕಾರಣ ಕೊಲೆ ಮಾಡಿದ್ದ ಹಂತಕರು ಹಾಕಿದ್ದ ಸ್ಕೆಚ್ ಆ ರೀತಿ ಇತ್ತು. ಕಾರಣ ಮುಳಬಾಗಿಲು ಪಟ್ಟಣದಲ್ಲಿ ತನ್ನದೇ ಆದ ಗ್ಯಾಂಗ್ ಕಟ್ಟಿಕೊಂಡು ಸಖತ್ ಆಗಿ ಖದರ್ ಮೇಂಟೇನ್ ಮಾಡಿದ್ದ ಜಗನ್ ಮೋಹನ್ ರೆಡ್ಡಿಯನ್ನೇ ಮುಗಿಸಿದ್ದಾರೆ ಅಂದರೆ ಇದು ಸಾಮಾನ್ಯ ಗ್ಯಾಂಗ್ ಅಲ್ಲಾ ಅನ್ನೋದು ಪೊಲೀಸರಿಗೆ ಜಗನ್ ಮೋಹನ್ ರೆಡ್ಡಿ ಕೊಲೆ ಆರೋಪಿಗಳನ್ನು ಬಂಧಿಸುವ ಮೊದಲೇ ತಿಳಿದಿತ್ತು.

ಜಗನ್ ಮೋಹನ್ ರೆಡ್ಡಿ ಕೊಲೆ ಆರೋಪಿಗಳೆಲ್ಲ ಬಹುತೇಕ ರೌಡಿಶೀಟರ್ಗಳು

ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣದ ಆರೋಪಿಗಳೆಲ್ಲರೂ ಬಹತೇಕ ಎಲ್ಲರೂ ರೌಡಿಶೀಟರ್ಗಳಾಗಿದ್ದು ಹಲವಾರು ಬಾರಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರು. ಕಳೆದ ಹತ್ತು ವರ್ಷಗಳಿಂದ ಕಾನೂನು ಬಾಹಿರ ಕೃತ್ಯಗಳನ್ನು ಎಸಗಿ ಹಲವಾರು ಬಾರಿ ಜೈಲಿಗೆ ಹೋಗಿ ಬಂದಿದ್ದರೂ ಕೂಡಾ ತಮ್ಮ ಕಾನೂನು ಬಾಹಿರ ಕೃತ್ಯಗಳನ್ನು ನಿರಂತವಾಗಿ ಮುಂದುವರೆಸಿಕೊಂಡು ಬರುತ್ತಲೇ ಇದ್ದಾರೆ. ಹಾಗಾಗಿ ಈ ಆರೋಪಿಗಳಿಗೆ ಸಾಮಾನ್ಯ ಕಾನೂನು ಕೆಲಸಕ್ಕೆ ಬರೋದಿಲ್ಲ ಅನ್ನೋ ಕಾರಣಕ್ಕೆ ಕೋಲಾರ ಎಸ್ಪಿ ದೇವರಾಜ್ ಕೊಲೆ ಆರೋಪಿಗಳ ಮೇಲೆ ಕೋಲಾರ ಜಿಲ್ಲೆಯಲ್ಲಿ ಮೊದಲ ಬಾರಿಗೆ ವಿಶೇಷ ಕಾನೂನಿನಡಿಯಲ್ಲಿ ಪ್ರಕರಣ ದಾಖಲು ಮಾಡಲು ಮುಂದಾಗಿದ್ದಾರೆ.

kolar police

ಕೋಲಾರ ಎಸ್ಪಿ ದೇವರಾಜ್

ಆರೋಪಿಗಳ ವಿಚಾರಣೆ ವೇಳೆ ಮುಚ್ಚಿಹಾಕಲಾಗಿದ್ದ ಹಲವು ಪ್ರಕರಣಗಳು ಬಯಲು

ಇನ್ನು ಬಂಧಿತ ಆರೋಪಿಗಳೆಲ್ಲಾ ಎಷ್ಟು ನಟೋರಿಯಸ್ ಎಂದರೆ ಇವರ ಮೇಲೆ ಈಗಾಗಲೇ ಹಲವು ಕೊಲೆ ಪ್ರಕರಣ, ಕೊಲೆ ಯತ್ನ ಪ್ರಕರಣಗಳಿವೆ. ಜೊತೆಗೆ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣದ ತನಿಖೆ ವೇಳೆಯೂ ಮುಚ್ಚಿಹೋಗಿದ್ದ ಪೇಂಟರ್ ರಮೇಶ್ ಎಂಬುವನ ಕೊಲೆ ಪ್ರಕರಣ ಕೂಡಾ ಬಯಲಾಗಿದೆ. ಅಷ್ಟೇ ಅಲ್ಲದೆ ಆರೋಪಿಗಳು ಇನ್ನು ಕೆಲವೊಂದು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಕುರಿತು ಬಾಯಿ ಬಿಟ್ಟಿದ್ದು ಕೆಲವು ಪ್ರಕರಣಗಳನ್ನು ಬೆಳಕಿಗೆ ಬಾರದೆ ಹಾಗೆಯೇ ಮುಚ್ಚಿಹಾಕಿರುವ ಬಗ್ಗೆ ಆರೋಪಿಗಳೇ ಒಪ್ಪಿಕೊಂಡಿದ್ದಾರೆ ಅನ್ನೋ ಮಾಹಿತಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಆರೋಪಿಗಳ ಮೇಲೆ ಕೋಕಾ ಕಾನೂನಿನಡಿ ಪ್ರಕರಣ ದಾಖಲಿಗೆ ಸೂಚನೆ

ಈ ಎಲ್ಲಾ ಆರೋಪಿಗಳ ಮೇಲೆ ಸಾಮಾನ್ಯವಾಗಿ ಪ್ರಕರಣ ದಾಖಲು ಮಾಡಿದರೆ, ಮತ್ತೆ ಇವರು ಜೈಲಿನಿಂದ ಹೊರಬಂದು ಮತ್ತೆ ಇಂಥದ್ದೇ ಕೃತ್ಯಗಳನ್ನು ಎಸಗುತ್ತಾರೆ ಅನ್ನೋದನ್ನ ಅರಿತಿರುವ ಎಸ್ಪಿ ಡಿ.ದೇವರಾಜ್, ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ಜಗನ್ ಮೋಹನ್ ರೆಡ್ಡಿ ಹಾಗೂ ಪೇಂಟರ್ ರಮೇಶ್ ಕೊಲೆ ಪ್ರಕರಣ ಎಲ್ಲಾ ಆರೋಪಿಗಳ ಮೇಲೆ ವಿಶೇಷ ಹಾಗೂ ಕಠಿಣ ಪ್ರಕರಣದಡಿ ಅಂದರೆ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗುತ್ತಿದೆ. ಕೋ-ಕಾ ಅಂದರೆ ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಸಡ್ ಕ್ರೈಂ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗುತ್ತಿದೆ. ಜಗನ್ ಮೋಹನ್ ರೆಡ್ಡಿ ಹಾಗೂ ಪೇಂಟರ್ ರಮೇಶ್ ಕೊಲೆ ಪ್ರಕರಣ ಪ್ರಮುಖ ಆರೋಪಿಗಳಾದ ಬಾಲಾಜಿ ಸಿಂಗ್, ಧನುಷ್, ಜಗನ್, ಶಿವಪ್ರಸಾಧ್, ಮಹೇಶ್, ಅಭಿನಂಧನ್, ಮನೋಜ್, ನವೀನ್ ಸೇರಿದಂತೆ ಒಟ್ಟು 17 ಜನರ ಮೇಲೆ, ಕೋಕಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ ಡಿವೈಎಸ್ಪಿ ಮಟ್ಟದ ಅಧಿಕಾರಿಗಳಿಂದ ಪ್ರಕರಣದ ತನಿಖೆ ಮಾಡಲಾಗುತ್ತಿದೆ.

ಒಟ್ಟಾರೆ ಕಾನೂನು ಬಾಹಿರ ಕೃತ್ಯ ಎಸಗುವವರಿಗೆ ಪಾಠ ಕಲಿಸುವ ನಿಟ್ಟಿನಲ್ಲಿ ಆರೋಪಿಗಳಿಗೆ ಮೂಗುದಾರ ಹಾಕಲು ಪೊಲೀಸರು ತೆಗೆದುಕೊಂಡ ನಿರ್ಧಾರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದು ಇನ್ನಾದ್ರು ಕೂಡಾ ಜಿಲ್ಲೆಯಲ್ಲಿ ನಡೆಯುವ ಇಂಥ ಭಯಾನಕ ಕೊಲೆ ಪ್ರಕರಣಗಳಿಗೆ ಕಡಿವಾಣ ಬೀಳುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

ವರದಿ: ರಾಜೇಂದ್ರ ಸಿಂಹ, ಟಿವಿ9 ಕೋಲಾರ

Published On - 9:27 pm, Sun, 24 July 22

ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ