ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ; ಚೀಟಿ ಮಾಡಿಸಲಿಕ್ಕೆ ಗಂಟೆಗಟ್ಟಲೆ ಕಾಯಬೇಕಾದ ದುಸ್ಥಿತಿ

ಹೆಚ್ಚಿನ ಬಡಜನರು ಅವಲಂಭಿಸಿರುವುದು ಸರ್ಕಾರಿ ಆಸ್ಪತ್ರೆಯನ್ನೇ, ಅದರಂತೆ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಪ್ರತಿನಿತ್ಯ ಮೂರು ಜಿಲ್ಲೆಯ ವಿವಿಧ ಭಾಗಗಳಿಂದ ಪ್ರತಿನಿತ್ಯ ಸಾವಿರಾರು ರೋಗಿಗಳು ಬರ್ತಾರೆ. ಹಳ್ಳಿಯಿಂದ ಗಂಟೆಗಟ್ಟಲೆ ಪ್ರಯಾಣ ಮಾಡಿ ಬರವ ರೋಗಿಗಳಿಗೆ ಆಸ್ಪತ್ರೆಗೆ ಬಂದ್ರು ಕೂಡ ಮತ್ತೆ ಗಂಟೆಗಟ್ಟಲೆ ಕಾಯಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.

ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ; ಚೀಟಿ ಮಾಡಿಸಲಿಕ್ಕೆ ಗಂಟೆಗಟ್ಟಲೆ ಕಾಯಬೇಕಾದ ದುಸ್ಥಿತಿ
ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 21, 2024 | 6:00 PM

ಕೊಪ್ಪಳ, ಫೆ.21: ಕೊಪ್ಪಳ ಜಿಲ್ಲಾ ಆಸ್ಪತ್ರೆ(Koppal District Hospital) ಜಿಲ್ಲೆಯಲ್ಲಿರುವ ಏಕೈಕ ಸರ್ಕಾರಿ ದೊಡ್ಡ ಆಸ್ಪತ್ರೆ. ಕೊಪ್ಪಳ ವೈದ್ಯಕೀಯ ಕಾಲೇಜಿನ ಅಧೀನದಲ್ಲಿರುವ ಈ ಆಸ್ಪತ್ರೆಗೆ ಕೊಪ್ಪಳ ಜಿಲ್ಲೆ ಮಾತ್ರವಲ್ಲ, ಸುತ್ತಮುತ್ತಲಿನ ವಿಜಯನಗರ, ರಾಯಚೂರು ಜಿಲ್ಲೆಯ ಅನೇಕ ತಾಲೂಕಿನಿಂದಲೂ ಪ್ರತಿನಿತ್ಯ ನೂರಾರು ರೋಗಿಗಳು ಬರುತ್ತಾರೆ. ಬೇರೆ ಆಸ್ಪತ್ರೆಗೆ ಹೋಲಿಸಿದರೆ ಇಲ್ಲಿ ತಕ್ಕಮಟ್ಟಿನ ಉತ್ತಮ ಚಿಕಿತ್ಸೆ ಸಿಗುತ್ತದೆ. ಹೀಗಾಗಿ ಹೆಚ್ಚಿನ ರೋಗಿಗಳು ತಮ್ಮ ಅನೇಕ ಖಾಯಿಲೆಗಳ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಬರುತ್ತಾರೆ. ಸಾರಿಗೆ ಸಂಪರ್ಕ ಸರಿಯಿಲ್ಲದೇ ಇದ್ದರೂ ಕೂಡ ಕಷ್ಟಪಟ್ಟು ಚಿಕಿತ್ಸೆಗಾಗಿ ಬರುತ್ತಾರೆ. ಆದ್ರೆ, ಇಲ್ಲಿ ಬಂದ ಮೇಲೆ ಮತ್ತೆ ಚಿಕಿತ್ಸೆ ಪಡೆಯಲು ಕಷ್ಟಪಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.

ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಚೀಟಿ ಮಾಡಿಸಲಿಕ್ಕೆ ಗಂಟೆಗಟ್ಟಲೆ ಕಾಯಬೇಕಾದ ದುಸ್ಥಿತಿ

ಚಿಕಿತ್ಸೆ ಪಡೆಯಬೇಕಾದ್ರೆ ಹೋರ ರೋಗಿಗಳ ಚೀಟಿಯನ್ನು ಮಾಡಿಸಬೇಕು. ಇದು ನಿಯಮ ಕೂಡ ಹೌದು. ಇಲ್ಲಿ ಹೆಸರು ನೊಂದಾಯಿಸಿ, ಚೀಟಿ ನೀಡಿದ ಮೇಲೆ ಯಾವ,ಸಮಸ್ಯೆಯಿದೆ, ಯಾವ ವೈದ್ಯರ ಬಳಿ ಹೋಗಬೇಕು ಎನ್ನುವುದನ್ನು ಚೀಟಿ ನೀಡಿದ ಸಿಬ್ಬಂದಿ ಹೇಳುತ್ತಾರೆ. ಆದ್ರೆ, ಈ ಚೀಟಿಯನ್ನು ಮಾಡಿಸಲಿಕ್ಕೇನೆ ರೋಗಿಗಳು ಪರದಾಡಬೇಕಾಗಿದೆ. ಒಬ್ಬಬ್ಬರೂ ಚೀಟಿ ಮಾಡಿಸಲು ಒಂದರಿಂದ ಒಂದುವರೆ ಗಂಟೆ ಕಾಯಬೇಕಾಗಿದೆ. ಮುಂಜಾನೆ ಹತ್ತರಿಂದ ಮಧ್ಯಾಹ್ನ ಒಂದು ಗಂಟೆವರೆಗೆ ವೈದ್ಯರು ಇರುತ್ತಾರೆ. ಆದ್ರೆ, ಬಹುತೇಕರಿಗೆ ಚೀಟಿ ಸಿಗುವ ಹೊತ್ತಿಗೆ, ವೈದ್ಯರು ಊಟಕ್ಕೆ ಹೋಗಿರ್ತಾರೆ. ಮತ್ತೆ ಅವರು ಸಂಜೆ ಬರೋವರೆಗೂ ಕಾಯಬೇಕು. ಸಂಜೆ ಚಿಕಿತ್ಸೆ ಪಡೆದು ಊರಿಗೆ ಹೋಗಲು ಮತ್ತೆ ಬಸ್​ಗಳಿಗಾಗಿ ಜನರು ಪರದಾಡಬೇಕಾಗುತ್ತದೆ. ಹೀಗಾಗಿ ಬೇಗನೆ ಚೀಟಿ ಸಿಕ್ಕರೆ, ಬೇಗನೆ ಚಿಕಿತ್ಸೆ ಸಿಗುತ್ತದೆ ಎನ್ನುತ್ತಾರೆ ರೋಗಿಗಳು.

ಇದನ್ನೂ ಓದಿ:ಕೊಪ್ಪಳ ಜಿಲ್ಲೆಯ ಜನರಿಗೆ ಸಿಹಿ-ಕಹಿ ಬಜೆಟ್: ಅಂಜನಾದ್ರಿಗೆ 100 ಕೋಟಿ, ಆರ್ಥಿಕ ಸಲಹೆಗಾರನ ಕ್ಷೇತ್ರಕ್ಕೆ ಭರ್ಜರಿ ಅನುದಾನ

ಹೆಚ್ಚಿನ ಕೌಂಟರ್ ಆರಂಭಕ್ಕೆ ಹೆಚ್ಚಾದ ಆಗ್ರಹ

ಇನ್ನು ಪ್ರತಿನಿತ್ಯ ಸಾವಿರಕ್ಕೂ ಹೆಚ್ಚು ಓಪಿಡಿಗಳು ಆಗುತ್ತದೆ. ಹೀಗಾಗಿ ಐದರಿಂದ ಆರು ಕೌಂಟರ್ ಆರಂಭಿಸಬೇಕು. ಕೌಂಟರ್ ಹೆಚ್ಚಾದ್ರೆ ಸುಲಭವಾಗಿ ಮತ್ತು ಬೇಗನೆ ರೋಗಿಗಳು ಓಪಿಡಿ ಚೀಟಿ ಮಾಡಿಸಿಕೊಂಡು ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಆಸ್ಪತ್ರೆಗೆ ಬಂದಿದ್ದ ರೋಗಿಯ ಸಂಬಂಧಿ ಯಮನೂರಪ್ಪ ಎಂಬುವವರು ಮನವಿ ಮಾಡಿದ್ದಾರೆ. ಆದ್ರೆ, ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಬರುವ ಎಲ್ಲರಿಗೂ ಚೀಟಿ ನೀಡಲು ಇರುವುದು ಕೇವಲ ಮೂರೇ ಕೌಂಟರ್​ಗಳು ಮಾತ್ರ. ಇನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಚೀಟಿ ಮತ್ತು ಬಿಲ್ಲಿಂಗ್​ಗಾಗಿ ಒಟ್ಟು ಹನ್ನೊಂದು ಸಿಬ್ಬಂದಿ ಇದ್ದಾರಂತೆ. ಅವರು ಮೂರು ಶಿಪ್ಟ್​ನಲ್ಲಿ ಕೆಲಸ ಮಾಡುತ್ತಾರೆ.

ಅದರಲ್ಲಿ ಒಂದಿಬ್ಬರು ರಜೆ ಎಂದು ಹೋದ್ರೆ ಉಳಿದವರು ಕೆಲಸ ಮಾಡಬೇಕು. ಹೆಚ್ಚಿನ ಸಿಬ್ಬಂಧಿ ಇದ್ದರೆ ಹೆಚ್ಚು ಕೌಂಟರ್ ಆರಂಭಿಸಬಹುದು. ಆದ್ರೆ, ಸಿಬ್ಬಂಧಿ ಕೊರತೆಯಿಂದ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳು ಪರದಾಡುವಂತಾಗಿದೆ. ಹೀಗಾಗಿ ಸಮಸ್ಯೆಯಾಗುತ್ತಿದೆ ಎಂದು ಜಿಲ್ಲಾ ಆಸ್ಪತ್ರೆಯ ಮೇಲಾಧಿಕಾರಿಗಳು ಹೇಳುತ್ತಿದ್ದಾರೆ. ಸಮಸ್ಯೆಯನ್ನು ಮೇಲಾಧಿಕಾರಿಗಳಿಗೆ ತಿಳಿಸಿದ್ದೇವೆ, ಇನ್ನು ಸ್ಪಂಧನೆ ಸಿಕ್ಕಿಲ್ಲ ಎಂದು ಹೇಳ್ತಿದ್ದಾರೆ. ಆದ್ರೆ, ಇನ್ನಾದರೂ ಕೂಡ ಮೇಲಾಧಿಕಾರಿಗಳು ಜಿಲ್ಲಾ ಆಸ್ಪತ್ರೆಯಲ್ಲಿ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸುವ ಕೆಲಸ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ