ಕೆಲಸದಿಂದ ಗ್ರಾಮಕ್ಕೆ ಮರಳುವಾಗ ನೀರಿನ ರಭಸ ಗ್ರಹಿಸದೆ ಹಳ್ಳದಲ್ಲಿ ಕೊಚ್ಚಿಹೋದ ನಾಲ್ವರು ಮಹಿಳೆಯರು!
ಆದರೆ ಕೆಲಹೊತ್ತು ಗಿರಿಜಾ ಮತ್ತು ಭುವನೇಶ್ವರಿ ಹಳ್ಳದಲ್ಲಿನ ಗಿಡ ಹಿಡಿದುಕೊಂಡಿದ್ದರು. ಗ್ರಾಮಸ್ಥರು ರಕ್ಷಿಸಲು ಮುಂದಾಗುವ ವೇಳೆಗೆ ಕೊಚ್ಚಿಹೋಗಿದ್ದಾರೆ.
ಕೊಪ್ಪಳ: ಕೆಲಸದಿಂದ ಗ್ರಾಮಕ್ಕೆ ಮರಳುವಾಗ ನೀರಿನ ರಭಸ ಗ್ರಹಿಸದೆ ನಾಲ್ವರು ಮಹಿಳೆಯರು (women) ಹಳ್ಳದಲ್ಲಿ ಕೊಚ್ಚಿಹೋದ ದುರ್ಘಟನೆ ಕೊಪ್ಪಳದ ಸಂಕನೂರು ಗ್ರಾಮದ (sankanur village) ಹೊರವಲಯದ ಹಳ್ಳದಲ್ಲಿ ನಡೆದಿದೆ.
ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮದ ಗಿರಿಜಾ ಮಾಲಿಪಾಟೀಲ್(32), ಭುವನೇಶ್ವರಿ ಪೊಲೀಸ್ ಪಾಟೀಲ್(40), ಪವಿತ್ರಾ ಪೊಲೀಸ್ ಪಾಟೀಲ್(45) ಮತ್ತು ವೀಣಾ ಮಾಲಿಪಾಟೀಲ್(19) ಹಳ್ಳದಲ್ಲಿ ಕೊಚ್ಚಿಕೊಂಡು ಹೋದ ದುರ್ದೈವಿಗಳು. ಕೆಲಸ ಮುಗಿಸಿಕೊಂಡು ಗ್ರಾಮಕ್ಕೆ ವಾಪಸಾಗುವಾಗ ಈ ಘಟನೆ ನಡೆದಿದೆ. ನತದೃಷ್ಟ ಮಹಿಳೆಯರು ನೀರಿನ ರಭಸ ಲೆಕ್ಕಿಸದೆ ಹಳ್ಳಕ್ಕೆ ಇಳಿದಿದ್ದಾರೆ. ಅದುವೇ ಅವರಿಗೆ ಮುಳುವಾಗಿದೆ. ಹಳ್ಳದಲ್ಲಿ ಇಳಿಯುತ್ತಲೇ ಪವಿತ್ರಾ ಮತ್ತು ವೀಣಾ ಎಂಬಿಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಬಳಿಕ ಗಿರಿಜಾ ಮತ್ತು ಭುವನೇಶ್ವರಿ ಅವರೂ ಕೂಡ ಕೊಚ್ಚಿಕೊಂಡು ಹೋಗಿದ್ದಾರೆ.
ಆದರೆ ಕೆಲಹೊತ್ತು ಗಿರಿಜಾ ಮತ್ತು ಭುವನೇಶ್ವರಿ ಹಳ್ಳದಲ್ಲಿನ ಗಿಡ ಹಿಡಿದುಕೊಂಡಿದ್ದರು. ಗ್ರಾಮಸ್ಥರು ರಕ್ಷಿಸಲು ಮುಂದಾಗುವ ವೇಳೆಗೆ ಕೊಚ್ಚಿಹೋಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದಾರೆ. ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದಾರೆ.
ಭೀಕರ ರಸ್ತೆ ಅಪಘಾತ – 22 ಭಕ್ತರು ದುರ್ಮರಣ:
ಉತ್ತರ ಪ್ರದೇಶದ ಕಾನ್ಪುರ ಬಳಿ ಸಂಭವಿಸಿರುವ ಭೀಕರ ರಸ್ತೆ ಅಪಘಾತದಲ್ಲಿ 22 ಭಕ್ತರು ದುರ್ಮರಣಕ್ಕೀಡಾಗಿದ್ದಾರೆ. ಕಾನ್ಪುರ ಜಿಲ್ಲೆಯ ಘಟಂಪುರ ಪ್ರದೇಶದಲ್ಲಿ ಭಕ್ತಾದಿಗಳು ತೆರಳ್ತಿದ್ದ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿ ದುರಂತ ಸಂಭವಿಸಿದೆ.
ಭಾರೀ ಮಳೆಯಿಂದ ಮನೆ ಗೋಡೆ ಕುಸಿದು ತಾಯಿ, ಮಗ ಸಾವು
ಬೆಳಗಾವಿ: ಭಾರೀ ಮಳೆಯಿಂದ ಮನೆ ಗೋಡೆ ಕುಸಿದು ತಾಯಿ, ಮಗ ಸಾವನ್ನಪಿರುವ ಘಟನೆ ಯರಗಟ್ಟಿ ತಾಲೂಕಿನ ಮಾಡಗೇರಿ ಗ್ರಾಮದಲ್ಲಿ ನಡೆದಿದೆ. ಯಲ್ಲವ್ವ(40), ಪುತ್ರ ಪ್ರಜ್ವಲ್(5) ಮೃತ ದುರ್ದೈವಿಗಳು. 2 ದಿನದಿಂದ ನಿರಂತರ ಮಳೆಯಿಂದ ಮನೆಯ ಗೋಡೆ ಕುಸಿತಗೊಂಡಿದೆ. ಘಟನೆಯಲ್ಲಿ ಮತ್ತಿಬ್ಬರಿಗೆ ಗಾಯವಾಗಿದ್ದು, ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇಬು ತುಂಬಿದ್ದ ಟ್ರಕ್ ಕಾರಿನ ಮೇಲೆ ಪಲ್ಟಿ, 3 ಜನ ಸಾವು
ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ ಛರಾಬ್ರಾ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ಸೇಬು ತುಂಬಿದ್ದ ಟ್ರಕ್ ಕಾರಿನ ಮೇಲೆ ಪಲ್ಟಿಯಾದ ಪರಿಣಾಮ ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
ಟ್ರಕ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಬಂಧಿಸಲಾಗಿದೆ. ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರು ಶಿಮ್ಲಾ ಅಪಘಾತದಲ್ಲಿ ಸಾವಿಗೆ ಸಂತಾಪ ಸೂಚಿಸಿದ್ದು, “ಥಿಯೋಗ್-ಶಿಮ್ಲಾ ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರ ಸಾವಿನ ಸುದ್ದಿ ತುಂಬಾ ದುಃಖಕರವಾಗಿದೆ, ದೇವರು ಅಗಲಿದ ಆತ್ಮಗಳಿಗೆ ಶಾಂತಿ ಮತ್ತು ದುಃಖಿತ ಕುಟುಂಬಗಳಿಗೆ ಧೈರ್ಯ ನೀಡಲಿ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ, ಎಂದು ದೇವರಲ್ಲಿ ನಮ್ಮ ಪ್ರಾರ್ಥನೆ ಎಂದು ಟ್ವೀಟ್ ಮಾಡಿದ್ದಾರೆ.
Published On - 10:00 pm, Sat, 1 October 22