AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳ: ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೇ ಜೋಳದ ರೇಟ್​; ಬೆಲೆ ಕೇಳಿ ಶಾಕ್ ಆಗ್ತಿದ್ದಾರೆ ರೊಟ್ಟಿ ಮಂದಿ

ಉತ್ತರ ಕರ್ನಾಟಕದ ಪ್ರಮುಖ ಆಹಾರ ಬೆಳೆ ಜೋಳ. ಮೃಷ್ಟಾನ್ನ ಭೋಜನವಿದ್ದರೂ ಕೂಡ ಉತ್ತರ ಕರ್ನಾಟಕದ ಮಂದಿಗೆ ಜೋಳದ ರೊಟ್ಟಿ ಊಟ ಖುಷಿ ಕೊಟ್ಟಷ್ಟು ಯಾವುದೇ ಆಹಾರ ನೀಡೋದಿಲ್ಲ. ಆದ್ರೆ, ಇದೀಗ ಉತ್ತರ ಕರ್ನಾಟಕ ಜಿಲ್ಲೆಯ ಜನರು ಶಾಕ್ ಆಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಜೋಳದ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಕೊಪ್ಪಳ: ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೇ ಜೋಳದ ರೇಟ್​; ಬೆಲೆ ಕೇಳಿ ಶಾಕ್ ಆಗ್ತಿದ್ದಾರೆ ರೊಟ್ಟಿ ಮಂದಿ
ಜೋಳದ ರೊಟ್ಟಿ ಪ್ರಿಯರಿಗೆ ಬೆಲೆ ಏರಿಕೆ ಬಿಸಿ
ಸಂಜಯ್ಯಾ ಚಿಕ್ಕಮಠ
| Edited By: |

Updated on: Nov 26, 2023 | 5:15 PM

Share

ಕೊಪ್ಪಳ, ನ.26: ಜಿಲ್ಲೆಯೂ ಸೇರಿದಂತೆ ಉತ್ತರ ಕರ್ನಾಟಕ(Uttara Karnataka) ಭಾಗದ ಯಾವುದೇ ಮನೆಗಳಿಗೆ ಹೋದರೂ ಒಲೆ ಮೇಲೆ ಹಂಚು ಕಾಯುತ್ತಿರುತ್ತದೆ. ಪುರುಷರು ಮೂರ್ನಾಲ್ಕು ಜೋಳದ ರೊಟ್ಟಿ ತಿಂದೇ ಹೊರಗಡೆ ಹೋಗುತ್ತಾರೆ. ಈ ಭಾಗದಲ್ಲಿ ಮುಂಜಾನೆಯ ಉಪಹಾರವು ರೊಟ್ಟಿಯೇ, ಮಧ್ಯಾಹ್ನದ ಊಟವು ರೊಟ್ಟಿಯೇ, ರಾತ್ರಿ ಊಟಕ್ಕೂ ಕೂಡ ರೊಟ್ಟಿಯೇ ಬೇಕು. ಜೋಳ(maize)ವೇ ಉತ್ತರ ಕರ್ನಾಟಕದ ಪ್ರಮುಖ ಆಹಾರ ಬೆಳೆ. ಮೃಷ್ಟಾನ್ನ ಭೋಜನವಿದ್ದರೂ ಕೂಡ ಉತ್ತರ ಕರ್ನಾಟಕದ ಮಂದಿಗೆ ಜೋಳದ ರೊಟ್ಟಿ ಊಟ ಖುಷಿ ಕೊಟ್ಟಷ್ಟು ಯಾವುದೇ ಆಹಾರ ಕೊಡುವುದಿಲ್ಲ. ಆದ್ರೆ, ಇದೀಗ ಉತ್ತರ ಕರ್ನಾಟಕ ಜಿಲ್ಲೆಯ ಜನರು ಶಾಕ್ ಆಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಜೋಳದ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರತಿ ಕಿಲೋಗೆ ನಲವತ್ತು ರೂಪಾಯಿಗೆ ಮಾರಾಟವಾಗುತ್ತಿದ್ದ ಜೋಳ, ಇದೀಗ ಎಂಬತ್ತು ರೂಪಾಯಿಗೆ ಮಾರಾಟವಾಗುತ್ತಿದೆ. ಮುಂದಿನ ದಿನದಲ್ಲಿ ಇನ್ನು ಹೆಚ್ಚಾಗುವ ಆತಂಕ ಎದುರಾಗಿದೆ.

ರೊಟ್ಟಿ ಮಂದಿ ಶಾಕ್

ಸಿರಿಧಾನ್ಯಗಳಲ್ಲಿ ಪ್ರಮುಖ ಧಾನ್ಯವಾಗಿರುವ ಜೋಳ, ಉತ್ತರ ಕರ್ನಾಟಕದ ಪ್ರಮುಖ ಆಹಾರದ ಬೆಳೆಯಾಗಿದೆ. ಜೋಳದ ರೊಟ್ಟಿ ತಿಂದರೆ ತಾಕತ್ತು ಹೆಚ್ಚಾಗುತ್ತದೆ. ರೋಗರುಜಿನಗಳು ಬರುವುದಿಲ್ಲ ಎನ್ನುವ ನಂಬಿಕೆ ಜನರಲ್ಲಿದೆ. ಇನ್ನು ಜೋಳ ಬೆಳೆಯಲು ಯಾವುದೇ ರಾಸಾಯನಿಕಗಳನ್ನು ಬಳಸದೇ ಇರುವುದು ಕೂಡ ಜನರಿಗೆ ಜೋಳದ ಮೇಲೆ ಪ್ರೀತಿ ಹೆಚ್ಚಿಸಿದೆ. ಆದ್ರೆ, ಇದೀಗ ರೊಟ್ಟಿ ಮಂದಿ ಶಾಕ್ ಆಗುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಸಾಮಾನ್ಯವಾಗಿ ಪ್ರತಿ ಕಿಲೋ ಜೋಳದ ಬೆಲೆ 45 ರಿಂದ 50 ರೂಪಾಯಿಗೆ ಮಾರಾಟವಾಗುತ್ತದೆ. ಆದ್ರೆ, ಈ ಬಾರಿ ಪ್ರತಿ ಕಿಲೋ ಉತ್ತಮ ಜೋಳ, 75 ರಿಂದ 80 ರೂಪಾಯಿಗೆ ಮಾರಾಟವಾಗುತ್ತಿದೆ.

ಇದನ್ನೂ ಓದಿ:Belagavi: ಪ್ರಚಾರದ ವೇಳೆ ಜೋಳದ ರೊಟ್ಟಿ ಮಾಡಿದ ಖಾನಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್

ಹೆಚ್ಚಿನ ಜನರು ಬಳಸದೆ ಇರುವ ಹೈಬ್ರೀಡ್ ಜೋಳ ಕೂಡ ಐವತ್ತು ರೂಪಾಯಿ ಮೇಲೆ ಮಾರಾಟವಾಗುತ್ತಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಕ್ವಿಂಟಲ್​ಗೆ ನಾಲ್ಕು ಸಾವಿರಕ್ಕೆ ಮಾರಾಟವಾಗಿದ್ದ ಜೋಳ, ಇದೀಗ 8 ಸಾವಿರಕ್ಕೆ ಮಾರಾಟವಾಗುತ್ತಿದೆ. ಇದು ಗ್ರಾಹಕರ ಆತಂಕಕ್ಕೆ ಕಾರಣವಾಗಿದೆ. ಅಕ್ಕಿಗಿಂತ ಜೋಳದ ಮೇಲೆಯೇ ಹೆಚ್ಚು ಅವಲಂಬಿತರಾಗಿರುವ ಉತ್ತರ ಕರ್ನಾಟಕ ಮಂದಿಗೆ ಜೋಳದ ಬೆಲೆ ಕೇಳಿ ಶಾಕ್ ಆಗುತ್ತಿದ್ದಾರೆ. ಹೀಗಾಗಿ ಈ ಮೊದಲು ಇಪ್ಪತ್ತರಿಂದ ಐವತ್ತು ರೂಪಾಯಿ ಕಿಲೋ ಜೋಳ ಖರೀದಿಸುತ್ತಿದ್ದ ಗ್ರಾಹಕರು, ಇದೀಗ ಬೆಲೆ ಹೆಚ್ಚಳದಿಂದ ಐದು ಕಿಲೋ ಖರೀದಿಸುತ್ತಿದ್ದಾರೆ.

ಮುಂದಿನ ದಿನದಲ್ಲಿ ನೂರರ ಗಡಿದಾಟುವ ಭೀತಿ

ಇನ್ನು ಸದ್ಯ ಎಂಬತ್ತು ರೂಪಾಯಿಗೆ ಮಾರಾಟವಾಗುತ್ತಿರುವ ಉತ್ತಮ ಜೋಳ, ಮುಂದಿನ ದಿನದಲ್ಲಿ ಪ್ರತಿ ಕಿಲೋಗೆ ನೂರು ರೂಪಾಯಿ ದಾಟಿದರೂ ಕೂಡ ಅಚ್ಚರಿಯಿಲ್ಲ ಎಂದು ವ್ಯಾಪರಸ್ಥರು ಅಂತಿದ್ದಾರೆ. ದಿನದಿಂದ ದಿನಕ್ಕೆ ಜೋಳದ ಬೆಲೆ ಹೆಚ್ಚಾಗಲು ಕಾರಣ ನೋಡುವುದಾದರೆ, ಜೋಳದ ಉತ್ಫಾದನೆ ಗಣನೀಯವಾಗಿ ಕಡಿಮೆಯಾಗಿರುವುದು. ಕಳೆದ ವರ್ಷ ಅತಿವೃಷ್ಟಿಯಿಂದಾಗಿ ಹೆಚ್ಚಿನ ಜೋಳದ ಉತ್ಪಾದನೆಯಾಗಿರಲಿಲ್ಲ. ಜೋಳವನ್ನು ಹೆಚ್ಚಿನ ರೈತರು ಹಿಂಗಾರು ಬೆಳೆಯನ್ನಾಗಿ ಬೆಳೆಯುತ್ತಾರೆ. ಆದ್ರೆ, ಈ ಬಾರಿ ಹಿಂಗಾರು ಮಳೆ ಸರಿಯಾಗಿ ಆಗದೇ ಇರೋದರಿಂದ ಜೋಳದ ಉತ್ಪಾದನೆ ಈ ಬಾರಿ ಕೂಡ ಗಣನೀಯವಾಗಿ ಕಡಿಮೆಯಾಗುವ ಆತಂಕ ಎದುರಾಗಿದೆ.

ಇದನ್ನೂ ಓದಿ:ಸಂಸತ್​​ನಲ್ಲಿ ಇಂದು ರಾಗಿ ದೋಸೆ, ಜೋಳದ ರೊಟ್ಟಿ, ಕಾಳು ಪಲ್ಯ ಸೇರಿದಂತೆ 19 ಬಗೆಯ ಸಿರಿಧಾನ್ಯ ಊಟ

ರಾಜ್ಯದಲ್ಲಿ 6 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಜೋಳ

ರಾಜ್ಯದಲ್ಲಿ ಆರುವರೆ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜೋಳವನ್ನು ಬೆಳೆಯಲಾಗುತ್ತದೆ. ಆದ್ರೆ, ಇಲ್ಲಿವರಗೆ ಬಿತ್ತನೆಯಾಗಿದ್ದು ಕೇವಲ ಮೂರು ಲಕ್ಷ ಎಂಬತ್ತು ಸಾವಿರ ಹೆಕ್ಟೇರ್ ಮಾತ್ರ. ಇನ್ನು ಬಿತ್ತನೆಯಾಗಿರುವ ಜೋಳಕ್ಕೂ ಕೂಡ ಇದೀಗ ಮಳೆ ಬೇಕು. ಮಳೆಯಾಗದೇ ಇದ್ದರೆ ಇರುವ ಜೋಳದ ಬೆಳೆ ಕೂಡ ಹಾಳಾಗಿ ಹೋಗುತ್ತದೆ. ಈ ಹಿಂದಿನ ವರ್ಷದಲ್ಲಿ ಜೋಳಕ್ಕೆ ಹೆಚ್ಚಿನ ಬೆಲೆ ಇರದೇ ಇದ್ದಿದ್ದರಿಂದ ಹೆಚ್ಚಿನ ರೈತರು ಜೋಳವನ್ನು ಬೆಳೆಯುವುದನ್ನು ಬಿಟ್ಟು, ಪ್ರಮುಖ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಹೀಗಾಗಿ ಜೋಳದ ಬೆಳೆ ಬೆಳೆಯುವ ಕೃಷಿ ಪ್ರಮಾಣ ಕೂಡ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.

ಉತ್ತರ ಕರ್ನಾಟಕ ಮಂದಿ, ಅಕ್ಕಿ ಸೇರಿದಂತೆ ಬೇರೆ ಆಹಾರ ಧಾನ್ಯಗಳ ಬೆಲೆ ಹೆಚ್ಚಾದರೂ ಕೂಡ ಹೆಚ್ಚು ಚಿಂತಿಸೋದಿಲ್ಲ. ಆದ್ರೆ, ಇದೀಗ ಪ್ರಮುಖ ಆಹಾರ ಬೆಳೆಯಾಗಿರುವ ಜೋಳದ ಬೆಲೆ ಹೆಚ್ಚಳವಾಗಿದ್ದು, ಉತ್ತರ ಕರ್ನಾಟಕ ಮಂದಿಗೆ ಶಾಕ್ ತರಿಸಿದೆ. ಹೀಗಾಗಿ ಸರ್ಕಾರ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಿದೆ. ಇಲ್ಲವೇ ಪಡಿತರ ಅಂಗಡಿಗಳ ಮೂಲಕ ಜೋಳವನ್ನು ನೀಡುವ ಕೆಲಸ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ