ಕೊಪ್ಪಳ ಲವ್ ಜಿಹಾದ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ದೂರು ನೀಡಿದ ಯುವತಿ; ಮುಸ್ತಫಾ ವಿರುದ್ಧವೂ ಕೇಸ್​​!

ಕೊಪ್ಪಳದಲ್ಲಿ ಲವ್ ಜಿಹಾದ್ ಪ್ರಕರಣ ಮಹತ್ವದ ತಿರುವು ಪಡೆದಿದೆ. ಮುಸ್ತಫಾ ಪ್ರೀತಿಸುತ್ತಿದ್ದ ಯುವತಿ ತಮ್ಮ ಮೇಲೆ ಹಲ್ಲೆ ಹಾಗೂ ಜೀವ ಬೆದರಿಕೆ ಹಾಕಿದ 8-10 ಅಪರಿಚಿತರ ವಿರುದ್ಧ ಪೊಲೀಸ ಠಾಣೆಗೆ ದೂರು ನೀಡಿದ್ದಾಳೆ. ಇನ್ನೊಂದೆಡೆ ವಿಎಚ್‌ಪಿ ಮುಖಂಡರು ಮುಸ್ತಫಾ ಖಾದ್ರಿ ವಿರುದ್ಧ ಐಟಿ ಕಾಯ್ದೆಯಡಿ ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.

ಕೊಪ್ಪಳ ಲವ್ ಜಿಹಾದ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ದೂರು ನೀಡಿದ ಯುವತಿ; ಮುಸ್ತಫಾ ವಿರುದ್ಧವೂ ಕೇಸ್​​!
ಲವ್ ಜಿಹಾದ್ ಪ್ರಕರಣ
Image Credit source: tv9 kannada
Edited By:

Updated on: Apr 12, 2026 | 9:51 PM

ಕೊಪ್ಪಳ, ಏಪ್ರಿಲ್​ 12: ನಗರದಲ್ಲಿ ಲವ್ ಜಿಹಾದ್ ಪ್ರಕರಣ (Love Jihad Case) ಸಾಕಷ್ಟು ಸದ್ದು ಮಾಡುತ್ತಿದೆ. ನರ್ಸಿಂಗ್​ ಓದುತ್ತಿದ್ದ ಹಿಂದೂ ವಿದ್ಯಾರ್ಥಿನಿಯನ್ನ ಪುಸಲಾಯಿಸಿದ ಹಿನ್ನೆಲೆ ಮುಸ್ತಫಾ ವಿರುದ್ಧ ಲವ್ ಜಿಹಾದ್​ ಆರೋಪ ಕೇಳಿಬಂದಿತ್ತು. ಅಷ್ಟೇ ಅಲ್ಲದೆ ಆತನ ಮೂಬೈಲ್​​ನಲ್ಲಿ ಹಿಂದೂ ಹುಡುಗಿಯರ ಅನೇಕ ಅಶ್ಲೀಲ ಫೋಟೋ, ವಿಡಿಯೋಗಳು ಪತ್ತೆಯಾಗಿದ್ದವು. ಆತನ ವಿರುದ್ಧ ಹಿಂದೂ ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. 8-10 ಅಪರಿಚಿತ ಹುಡುಗರ ವಿರುದ್ಧ ಮುಸ್ತಫಾ ಪ್ರೀತಿಸುತ್ತಿದ್ದ ಯುವತಿ ಕೊಪ್ಪಳ ನಗರ ಠಾಣೆಯಲ್ಲಿ ದೂರು (Complaint) ದಾಖಲಿಸಿದ್ದಾಳೆ.

ದೂರಿನಲ್ಲಿ ಏನಿದೆ?

ಕೊಪ್ಪಳ ಲವ್ ಜಿಹಾದ್ ಪ್ರಕರಣ ಸದ್ಯ ದೊಡ್ಡ ತಿರುವು ಪಡೆದುಕೊಂಡಿದೆ. ಮುಸ್ತಫಾ ಪ್ರೀತಿಸುತ್ತಿದ್ದ ಯುವತಿಯಿಂದ ಕೊಪ್ಪಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, 8-10 ಅಪರಿಚಿತ ಹುಡುಗರು ಎಂದು ಉಲ್ಲೇಖಿಸಿದ್ದಾಳೆ. ಏಪ್ರಿಲ್‌ 9ರಂದು ನಾನು, ಮುಸ್ತಫಾ ನಮ್ಮ ಕಿಮ್ಸ್ ಮೆಡಿಕಲ್ ಕಾಲೇಜಿನ ಹಿಂದುಗಡೆ ಇರುವ ನೀರಿದ ಟ್ಯಾಂಕ್ ಬಳಿ ಊಟ ಮಾಡುತ್ತಾ ಕುಳಿತಿದ್ದೆವು. ಆಗ ಅಲ್ಲಿಗೆ ಸುಮಾರು 8-10 ಸ್ಥಳೀಯ ಹುಡುಗರು ಬಂದು ನಮ್ಮನ್ನು ವಿಚಾರಿಸಿದರು. ನಮ್ಮ ಹೆಸರು ಹಾಗೂ ವಿಳಾಸ ತಿಳಿದುಕೊಂಡು, ನೀವಿಬ್ಬರೂ ಬೇರೆ ಧರ್ಮದವರೆಂದು ಮುಸ್ತಫಾಗೆ ಬೈಯ್ದರು. ಎದ್ದು ಹೋಗುವಾಗ ನಮ್ಮನ್ನು ತಡೆದು ಹಲ್ಲೆ ನಡೆಸಿದರು.

ಇದನ್ನೂ ಓದಿ: ಕೊಪ್ಪಳದಲ್ಲೂ ಲವ್ ಜಿಹಾದ್: ಯುವತಿಯರ ಅಶ್ಲೀಲ ವಿಡಿಯೋಗಳು ಪತ್ತೆ; ಸಿಡಿದೆದ್ದ ಹಿಂದೂ ಯುವಕರು

ಮುಸ್ತಫಾಗೆ ಜೀವ ಬೆದರಿಕೆ ಹಾಕಿ 2 ಮೊಬೈಲ್ ಪಡೆದಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಯುವತಿ ದೂರು ನೀಡಿದ್ದಾಳೆ. ಯುವತಿ ದೂರಿನನ್ವಯ ಬಿಎನ್‌ಎಸ್ ಸೆಕ್ಷನ್‌ 115(2), 126(2), 352, 351, 190ರಡಿ ಮೊಕದ್ದಮೆ ದಾಖಲು ಮಾಡಲಾಗಿದೆ.

ಮುಸ್ತಫಾ ಖಾದ್ರಿ ವಿರುದ್ಧವೂ ದೂರು

ಅತ್ತ ಅಪರಿಚಿತ ಹುಡುಗರ ವಿರುದ್ಧ ಯುವತಿ ದೂರು ನೀಡಿದರೆ, ಇತ್ತ ಮುಸ್ತಫಾ ಖಾದ್ರಿ ವಿರುದ್ಧವೂ ದೂರು ದಾಖಲಾಗಿದೆ. ವಿಹೆಚ್‌ಪಿ ಮುಖಂಡ ಸಂಗಮೇಶ ಹಿರೇಮಠ ದೂರಿನನ್ವಯ ಐಟಿ ಕಾಯ್ದೆ 66(E)67(a) ಅಡಿಯಲ್ಲಿ ಮುಸ್ತಫಾ ವಿರುದ್ಧ ಮೊಕದ್ದಮೆ ದಾಖಲಾಗಿದೆ.

ಅಸಭ್ಯವರ್ತನೆಯ ಸಾವಿರಾರು ಫೋಟೋ, ವಿಡಿಯೋಗಳು ಪತ್ತೆ

ಏ.9ರಂದು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಯುವತಿ ಜೊತೆ ಅಸಭ್ಯವರ್ತನೆ ಮಾಡುತ್ತಿರುವ ಮಾಹಿತಿ ಬಂದಿತ್ತು. ಹೋಗಿ ಪರಿಶೀಲಿಸಿದಾಗ ಮುಸ್ತಫಾ ಯುವತಿಯನ್ನು ಪ್ರೀತಿಸುತ್ತೇನೆ ಅಂದಿದ್ದ. ಬಳಿಕ ಆತನ ಎರಡು ಮೊಬೈಲ್‌ಫೋನ್‌ ತೆಗೆದುಕೊಂಡು‌ ನೋಡಿದ್ದೆವು. ಒಂದು ಮೊಬೈಲ್‌ನಲ್ಲಿ 3000 ಫೋಟೋ, 6000 ವಿಡಿಯೋಗಳಿದ್ದವು. ಮತ್ತೊಂದರಲ್ಲಿ 4000 ಸಾವಿರ ಫೋಟೋ, 3700 ವಿಡಿಯೋಗಳಿದ್ದವು.

ಇದನ್ನೂ ಓದಿ: ನವ ವಿವಾಹಿತೆ ನಾಪತ್ತೆ ಕೇಸ್​​ಗೆ ಟ್ವಿಸ್ಟ್​: ಮುಸ್ಲಿಂ ಯುವಕನ ಜೊತೆ ಯುವತಿ ಪತ್ತೆ; ಪೊಲೀಸ್​​ ಠಾಣೆಯಲ್ಲಿ ಹೈಡ್ರಾಮಾ

16 ಹೆಣ್ಣುಮಕ್ಕಳ ಅಶ್ಲೀಲ, ಮಾನಸಿಕ ಹಿಂಸೆ ನೀಡಿರುವ ವಿಡಿಯೋಗಳಿವೆ. ಮುಸ್ತಫಾ ವಿಡಿಯೋಗಳನ್ನ ಇನ್ನೊಬ್ಬರಿಗೆ ರವಾನಿಸುವ ಸಾಧ್ಯತೆ ಇದೆ. ಆತನ ವಿರುದ್ಧ ಕಾನೂನು ಕ್ರಮ‌ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us