ತುಂಗಭದ್ರಾ ಮತ್ತೆ ತುಂಬಿದೆ: ಮುಂಗಾರು, ಹಿಂಗಾರು ಎರಡು ಬೆಳೆಗೆ ನೀರು: ಸಿಎಂ ಘೋಷಣೆ
ಕ್ರಸ್ಟ್ ಗೇಟ್ ಕಿತ್ತು ಅಪಾರ ಪ್ರಮಾಣ ನೀರು ನದಿಗೆ ಹರಿದುಹೋಗಿದೆ. ಹೀಗಾಗಿ ರೈತರಲ್ಲಿ ಆತಂಕ ಮನೆ ಮಾಡಿತ್ತು. ಆದ್ರೆ, ಇದೀಗ ವರುಣನ ಕೃಪೆಯಿಂದ ಮತ್ತೆ ತುಂಗಾಭದ್ರಾ ಜಲಾಶಯದ ಒಡಲು ತುಂಬಿದ್ದು, ಮುಂಗಾರು ಮತ್ತು ಹಿಂಗಾರು ಎರಡು ಬೆಳಗೆ ನೀರು ಕೊಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಕೊಪ್ಪಳ, (ಸೆಪ್ಟೆಂಬರ್ 22): ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶಗಳಲ್ಲಿ ಮುಂಗಾರು ಬೆಳೆ ಬೆಳೆದಿರುವ ರೈತರಿಗೆ ಸಿಎಂ ಸಿದ್ದರಾಮಯ್ಯ ಅವರು ಹಿಂಗಾರು ಬೆಳೆಯ ಸಿಹಿಸುದ್ದಿ ನೀಡಿದ್ದಾರೆ. ಇಂದು (ಸೆ.22) ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಲು ಮುನಿರಾಬಾದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ತುಂಗಭದ್ರಾ ಜಲಾಶಯ ಮತ್ತೆ ತುಂಬಿದೆ. ಮುಂಗಾರು ಮತ್ತು ಹಿಂಗಾರು ಎರಡು ಬೆಳೆಗೆ ನೀರು ಸಿಗುತ್ತದೆ ಎಂದು ಘೋಷಿಸಿದರು. ಈ ಮೂಲಕ ಈ ಭಾಗದ ರೈತರಿಗೆ ಎರಡನೇ ಬೆಳೆಗೆ ನೀರು ಕೊಡುವುದಾಗಿ ಸ್ಪಷ್ಟಪಡಿಸಿದರು.
ಕೊಪ್ಪಳ ತಾಲೂಕಿನ ಗಿಣಗೇರಾ ಏರಸ್ಟ್ರಿಪ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ತುಂಗಭದ್ರಾ ಜಲಾಶಯ ಮತ್ತೆ ತುಂಬಿದೆ. ಮುಂಗಾರು ಮತ್ತು ಹಿಂಗಾರು ಎರಡು ಬೆಳೆಗೆ ನೀರು ಸಿಗುತ್ತದೆ. ಗೇಟ್ ದುರಸ್ತಿ ಕೆಲಸವನ್ನು ಬಹಳ ಜಾಗೃತಿಯಿಂದ ಮಾಡಲಾಗಿತ್ತು/ ಎಲ್ಲರ ಶ್ರಮದಿಂದ 20 ಕ್ಕೂ ಹೆಚ್ಚು ಟಿಎಂಸಿ ನೀರು ಉಳದಿದೆ. ಮಳೆರಾಯನಿಗೆ ಸರ್ಕಾರದ ಪರವಾಗಿ ಧನ್ಯವಾದಗಳನ್ನು ಹೇಳುತ್ತೇನೆ. ಎರಡನೇ ಬೆಳೆಗೆ ನೀರು ಕೊಡಲಿಕ್ಕೆ ಸಾಧ್ಯವಾಗಬಹುದು. ತುಂಗಭದ್ರಾ ಜಲಾಶಯ 70 ವರ್ಷದ ಡ್ಯಾಂ ಇದೆ. ಐವತ್ತು ವರ್ಷಕ್ಕೆ ಗೇಟ್ ಬದಲಾವಣೆ ಮಾಡಬೇಕು ಅನ್ನೋ ನಿಯಮವಿದೆ. ತಜ್ಞರ ಕಮಿಟಿ ಮಾಡಲಾಗಿದೆ. ಅವರು ವರದಿ ನೀಡಿದ್ದಾರೆ. ಅವರ ವರದಿ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: Accident: ರಾಜ್ಯದ ಹಲವೆಡೆ ಭೀಕರ ಅಪಘಾತ; ಪ್ರತ್ಯೇಕ ಘಟನೆಗಳಲ್ಲಿ 6 ಜನರ ಸಾವು
ಹಿಂದಿನ ಐದು ವರ್ಷದಲ್ಲಿ ರಸ್ತೆಗಳು ಆಗಿಲ್ಲ. ಈ ಬಾರಿ ಹೆಚ್ಚಿನ ಮಳೆಯಿಂದಾಗಿ ಅನೇಕ ಕಡೆ ರಸ್ತೆ ಹಾಳಾಗಿವೆ. ರಾಜ್ಯಪಾಲರು ಅರ್ಕಾವತಿ ಪತ್ರ ಬರೆದಿದ್ದರೆ ಅದನ್ನು ನೋಡುತ್ತೇವೆ. ಅವರ ಕಚೇರಿಯಿಮಂದಲೇ ಸೋರಿಕೆಯಾಗಿದೆ. ಅದರ ಬಗ್ಗೆ ತನಿಖೆಯಾಗಲಿ ಎಂದರು.
ನಮ್ಮಲ್ಲಿ ಬೇರೆ ರಾಜ್ಯಕ್ಕಿಂತ ಹಾಲಿನ ದರ ಕಡಿಮೆ ಇದೆ ಎಂದು ಹೇಳಿದ್ದರು. ಮಾಗಡಿಯಲ್ಲಿ ಶಾಸಕರು, ರೈತರು ಕೇಳಿದ್ದರು. ಒಂದು ವೇಳೆ ಜಾಸ್ತಿ ಮಾಡಿದ್ರೆ ಅದನ್ನು ರೈತರಿಗೆ ಕೊಡಬೇಕು ಎಂದು ಹೇಳಿದ್ದೇನೆ. ಮುನಿರತ್ನ ವಿರುದ್ಧ ನಾವು ದ್ವೇಷದ ರಾಜಕಾರಣ ಮಾಡಲ್ಲ. ಅಪೆನ್ಸ್ ಮಾಡುವಂತೆ ನಾವು ಹೇಳಿದ್ದೇವಾ. ಅನೇಕ ಶಾಸಕರು ಬಂದ ಎಸ್ ಐ ಟಿ ಮಾಡುವಂತೆ ಹೇಳಿದ್ದರು. ಅವರ ಮೇಲೆ ಅನೇಕ ಆರೋಪಗಳಿವೆ. ಹೀಗಾಗಿ ಎಸ್ ಐ ಟಿ ರಚನೆ ಮಾಡಲಾಗಿದೆ. ನಾವು ದ್ವೇಷದ ರಾಜಕಾರಣ ಮಾಡಲ್ಲ ಎಂದು ಹೇಳಿದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ