AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ನೀರಿನ ಅಭಾವ, ಐಪಿಎಲ್​​ ಪಂದ್ಯ ಸ್ಥಳಾಂತರಕ್ಕೆ ಚಿಂತನೆ: ಕರ್ನಾಟಕ ಬಂದ್ ಎಚ್ಚರಿಕೆ ನೀಡಿದ ವಾಟಾಳ್

ಬೆಂಗಳೂರಿನಲ್ಲಿ ಯಾವ ಏರಿಯಾಗೆ ಹೋದ್ರೂ, ಯಾವ ವಾರ್ಡ್​ಗೆ ಹೋದ್ರೂ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ಜನರು ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಇದೇ ಕಾರಣಕ್ಕೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿರುವ ಐಪಿಎಲ್​​ ಪಂದ್ಯ ಬೆಂಗಳೂರಿನಿಂದ ಬೇರೆ ರಾಜ್ಯಕ್ಕೆ ಸ್ಥಳಾಂತರಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚಿಂತನೆ ನಡೆಸಿದೆ. ಆದರೆ ಯಾವುದೇ ಕಾರಣಕ್ಕೂ ಸ್ಥಳಾಂತರಿಸಬಾರದು ಎಂದು ವಾಟಾಳ್​ ನಾಗರಾಜ್​ ಒತ್ತಾಯಿಸಿದ್ದಾರೆ.

ಬೆಂಗಳೂರಲ್ಲಿ ನೀರಿನ ಅಭಾವ, ಐಪಿಎಲ್​​ ಪಂದ್ಯ ಸ್ಥಳಾಂತರಕ್ಕೆ ಚಿಂತನೆ: ಕರ್ನಾಟಕ ಬಂದ್ ಎಚ್ಚರಿಕೆ ನೀಡಿದ ವಾಟಾಳ್
ವಾಟಾಳ್​ ನಾಗರಾಜ್​ ನೇತೃತ್ವದಲ್ಲಿ ಪ್ರತಿಭಟನೆ
ವಿನಾಯಕ ಬಡಿಗೇರ್​
| Updated By: ಗಂಗಾಧರ​ ಬ. ಸಾಬೋಜಿ|

Updated on:Mar 16, 2024 | 3:41 PM

Share

ಬೆಂಗಳೂರು, ಮಾರ್ಚ್​​ 16: ಐಪಿಎಲ್ (IPL)​​ ಪಂದ್ಯ ಬೆಂಗಳೂರಿನಿಂದ ಬೇರೆ ರಾಜ್ಯಕ್ಕೆ ಸ್ಥಳಾಂತರವಾಗುವ ಹಿನ್ನೆಲೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಮುಖ್ಯದ್ವಾರ ಬಳಿ ಕನ್ನಡ ಹೋರಾಟಗಾರ ವಾಟಾಳ್​ ನಾಗರಾಜ್​ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗಿದೆ. ಒಂದು ವೇಳೆ ಐಪಿಲ್ ನಡೆಸದೆ ಹೋದರೆ ಕರ್ನಾಟಕ ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಲ್ಲಿ ನೀರಿನ ಅಭಾವ ಶುರುವಾಗಿದ್ದರಿಂದ ಕ್ರಿಕೆಟ್​ ಮ್ಯಾಚ್​ ಬೇರೆ ರಾಜ್ಯಕ್ಕೆ ಶಿಫ್ಟ್ ​​ಮಾಡಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಚಿಂತನೆ ನಡೆಸಿದೆ. ಹೀಗಾಗಿ ಯಾವುದೇ ಕಾರಣಕ್ಕೂ IPL ಮ್ಯಾಚ್​​ ಬೇರೆ ರಾಜ್ಯಕ್ಕೆ ಸ್ಥಳಾಂತರ ಬೇಡ. IPL​ ಪಂದ್ಯಗಳನ್ನ ಬೆಂಗಳೂರಿನಿಂದ ಸ್ಥಳಾಂತರ ಮಾಡದಂತೆ ಒತ್ತಾಯ ಮಾಡಲಾಗಿದೆ.

ನೀರಿಲ್ಲಾ ಅಂತಾ ಹೇಳಿ ಐಪಿಎಲ್ ಪಂದ್ಯ ಸ್ಥಳಾಂತರ ಮಾಡುವುದು ಅಪಮಾನ ಎಂದ ವಾಟಳ್ ನಾಗರಾಜ್

ಈ ವೇಳೆ ಮಾತನಾಡಿದ ವಾಟಳ್ ನಾಗರಾಜ್​, ನೀರಿಲ್ಲಾ ಅಂತಾ ಹೇಳಿ ಐಪಿಎಲ್ ಪಂದ್ಯ ಬೇರೆ ರಾಜ್ಯದಲ್ಲಿ ನಡೆಸುವುದು ಅಪಮಾನ. ಹೇಳದೆ ಕೇಳದೆ ಕಾವೇರಿ ನೀರು ತಮಿಳುನಾಡಿಗೆ ಕೊಟ್ಟಿದ್ದು ಅಪಮಾನ. ಐಪಿಎಲ್ ನಡೆಯಲೇ ಬೇಕು. ನಮ್ಮ ಮನವಿಗೆ ಆಡಳಿತ ಮಂಡಳಿ ಒಪ್ಪಿಕೊಂಡಿದೆ. ತಂತ್ರಾಗಾರಿಕೆ ನಡೆಸಿ ಐಪಿಲ್ ನಡೆಸದೆ ಹೋದರೆ ಕರ್ನಾಟಕ ಬಂದ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಒಂದು ರೂಪಾಯಿ ದಾನ ಕೊಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಮೊಬೈಲ್ ಹ್ಯಾಕ್ ಮಾಡ್ತಾರೆ ಖದೀಮರು

ಐಪಿಎಲ್ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಬಾರದು ಎಂಬ ವಾದ ಇದೆ. ಇದಕ್ಕೂ ನಮಗೂ ಬಾರಿ ನಂಟಿದೆ. ಈ ಹಿಂದೆ ಈ ಮೈದಾನ ಸೆಂಟ್ರಲ್ ಕಾಲೇಜ್​​ನಲ್ಲಿ ಇತ್ತು. ನನಗೂ ಕ್ರಿಕೆಟ್ ಸಂಸ್ಥೆಗೂ ಬಾರಿ ಸಂಬಂಧ. ಈ ಸ್ಟೇಡಿಯಂ ಹಾಗೂ ಇದರ ಹಿನ್ನೆಲೆ ಬಹಳ. ಇದು ಬಾಂಧವ್ಯ ಜೊತೆ ರಾಜ್ಯದ ಗೌರವ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು ದೇವಾಲಯಗಳ ಪ್ರಸಾದದ ಹಿಂದಿದೆ ಇತಿಹಾಸ; ಅದರ ಕಥಾಸಾರ ಸವಿಯುವ ಭಾಗ್ಯ ನಗರವಾಸಿಗಳಿಗೆ ಪ್ರಾಪ್ತಿ

ಬೆಂಗಳೂರಿನಲ್ಲಿ ಯಾವ ಏರಿಯಾಗೆ ಹೋದ್ರೂ, ಯಾವ ವಾರ್ಡ್​ಗೆ ಹೋದ್ರೂ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ಜನರು ಕುಡಿಯುವ ನೀರಿಗೆ ಪರದಾಡುವಂತಾಗಿದೆ. ನೀರಿನ ಬವಣೆ ಕಲ್ಯಾಣ ಮಂಟಪಗಳಿಗೂ ತಟ್ಟಿದ್ದು, ಬುಕ್ ಆಗಿರೋ ಮದುವೆ ಮತ್ತು ಸಮಾರಂಭಗಳಿಗೆ ನೀರು ಹೊಂದಿಸೋದೇ ಸವಾಲಾಗಿದೆ. ಹೀಗಾಗಿ, ಹೊಸದಾಗಿ ಬುಕ್ಕಿಂಗ್​ ಮಾಡೋದನ್ನ ಕೈ ಬಿಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 3:36 pm, Sat, 16 March 24

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ