ಪಂಚಮಸಾಲಿ ಜನರ ಮೇಲೆ ಲಾಠಿಚಾರ್ಜ್: ಸರ್ಕಾರ, ಗೃಹ ಇಲಾಖೆಗೆ ಹೈಕೋರ್ಟ್​ ನೋಟಿಸ್​

ಧಾರವಾಡದಲ್ಲಿ ಪಂಚಮಸಾಲಿ ಸಮುದಾಯದ ಪ್ರತಿಭಟನೆಯ ಮೇಲೆ ನಡೆದ ಲಾಠಿಚಾರ್ಜ್‌ಗೆ ಸಂಬಂಧಿಸಿದಂತೆ ಧಾರವಾಡ ಹೈಕೋರ್ಟ್ ಏಕಸದಸ್ಯ ಪೀಠ ಸರ್ಕಾರ, ಗೃಹ ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ. ಲಾಠಿಚಾರ್ಜ್‌ನಲ್ಲಿ ಗಾಯಗೊಂಡವರ ಪರವಾಗಿ ಸಲ್ಲಿಸಲಾದ ರಿಟ್ ಅರ್ಜಿಯನ್ನು ಹೈಕೋರ್ಟ್‌ ಪರಿಗಣಿಸಿದೆ. ಸರ್ಕಾರದ ನಿರ್ಲಕ್ಷ್ಯದಿಂದಾಗಿ ಕೋರ್ಟ್ ಮೊರೆ ಹೋಗುವುದು ಅನಿವಾರ್ಯವಾಯಿತು ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಪಂಚಮಸಾಲಿ ಜನರ ಮೇಲೆ ಲಾಠಿಚಾರ್ಜ್: ಸರ್ಕಾರ, ಗೃಹ ಇಲಾಖೆಗೆ ಹೈಕೋರ್ಟ್​ ನೋಟಿಸ್​
ಪಂಚಮಸಾಲಿ ಜನರ ಮೇಲೆ ಲಾಠಿಚಾರ್ಜ್: ಸರ್ಕಾರ, ಗೃಹ ಇಲಾಖೆಗೆ ಹೈಕೋರ್ಟ್​ ನೋಟಿಸ್​
Follow us
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ಗಂಗಾಧರ​ ಬ. ಸಾಬೋಜಿ

Updated on:Dec 21, 2024 | 3:15 PM

ಧಾರವಾಡ, ಡಿಸೆಂಬರ್​ 21: ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿಚಾರ್ಜ್ (lathi charge)​ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಹೈಕೋರ್ಟ್ ಏಕಸದಸ್ಯ ಪೀಠದಿಂದ ಸರ್ಕಾರ, ಗೃಹ ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ನೋಟಿಸ್ ಜಾರಿ ಮಾಡಿದ್ದು, ಸ್ಪಷ್ಟನೆ ಕೆಳಲಾಗಿದೆ. ಲಾಠಿಚಾರ್ಜ್​ ವಿರುದ್ಧ ಜಯಮೃತ್ಯುಂಜಯ ಶ್ರೀ, ಪಂಚಮಸಾಲಿ ವಕೀಲರ ಪರಿಷತ್ ಸೇರಿದಂತೆ ಧಾರವಾಡ ಹೈಕೋರ್ಟ್​ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಹಾಗಾಗಿ ಇದೀಗ ನೋಟಿಸ್ ಜಾರಿ ಮಾಡಲಾಗಿದೆ.

ಯಾವುದಕ್ಕೂ ಸಿದ್ದರಾಮಯ್ಯ ಸ್ಪಂದಿಸಿಲ್ಲ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ರಿಟ್ ಅರ್ಜಿ ಸಲ್ಲಿಕೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಲಾಠಿಚಾರ್ಜ್​ ಬಳಿಕ 12 ಜನರ ಮೇಲೆ ಎಫ್​​ಐಆರ್​ ದಾಖಲಿಸಿದ್ದಾರೆ. ಎಫ್​ಐಆರ್​ ರದ್ದುಪಡಿಸಬೇಕೆಂದು ನಾವು ಸರ್ಕಾರಕ್ಕೆ ಕೇಳಿದ್ದೆವು. ಲಾಠಿಚಾರ್ಜ್​​ ಸಂಬಂಧ ಸಿಎಂ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದೆವು. ಆದರೆ ಯಾವುದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿಲ್ಲ. ಹೀಗಾಗಿ ಕೋರ್ಟ್ ಮೊರೆ ಹೋಗಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಂಚಮಸಾಲಿ ಪ್ರತಿಭಟನೆಯಲ್ಲಿ ಪೊಲೀಸರಿಂದಲೇ ಕಲ್ಲು ತೂರಾಟ: ಸ್ವಾಮೀಜಿ ಗಂಭೀರ ಆರೋಪ

ನಮ್ಮ ಪರವಾಗಿ ಪ್ರಭುಲಿಂಗ ನಾವದಗಿ, ಪೂಜಾ ವಾದ ಮಂಡಿಸಿದ್ದಾರೆ. ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶ ಆಗಿದೆ. ಹಲ್ಲೆ ಆಗಿದ್ದಕ್ಕೆ ಪಂಚಮಸಾಲಿ ಸಮಾಜದವರು ಧೃತಿಗೆಡುವುದು ಬೇಡ. ಡಿ.23ರಂದು ಹಲ್ಲೆಗೊಳಗಾದವರ ಮನೆಗಳಿಗೆ ಭೇಟಿ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ನ್ಯಾಯಾಂಗ ತನಿಖೆ ಆಗಬೇಕು: ನ್ಯಾಯವಾದಿ ಪೂಜಾ ಸವದತ್ತಿ

ನ್ಯಾಯವಾದಿ ಪೂಜಾ ಸವದತ್ತಿ ಪ್ರತಿಕ್ರಿಯಿಸಿದ್ದು, ಹೋರಾಟದ ವೇಳೆ 144 ಸೆಕ್ಷನ್ ಜಾರಿ ಆಗಿರಲಿಲ್ಲ. ನೇರವಾಗಿ ಲಾಠಿಚಾರ್ಜ್ ಮಾಡಿದ್ದಾರೆ. ಇದನ್ನೆಲ್ಲ ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಲಾಠಿಚಾರ್ಜ್​​ ಬಳಿಕ ಪುನಃ ಸತ್ಯಾಗ್ರಹವಿತ್ತು. ಸ್ವಾಮೀಜಿ ಡಿ. 19ರವರೆಗೆ ಹೋರಾಟದಲ್ಲಿದ್ದರು. ಹೀಗಾಗಿ ನಿನ್ನೆ ರಿಟ್ ಅರ್ಜಿ ಸಲ್ಲಿಸಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿಚಾರ್ಜ್​: ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ

ಪ್ರಭುಲಿಂಗ ನಾವದಗಿ ಮತ್ತು ನಾವು ಕೇಸ್ ರೆಡಿ ಮಾಡಿ ಅರ್ಜಿ ಹಾಕಿದ್ದೇವೆ. ಮಧ್ಯಾಹ್ನ ವಿಚಾರಣೆ ಮಾಡಿ ನೋಟಿಸ್ ಜಾರಿಗೆ ಆದೇಶ ಆಗಿದೆ. ನ್ಯಾಯಾಂಗ ತನಿಖೆ ಆಗಬೇಕು. ನ್ಯಾಯಾಂಗ ಆಯೋಗದಿಂದ ಕಮಿಟಿ ರಚನೆಗೆ ಆಗ್ರಹಿಸಿದ್ದೇವೆ. ಲಾಠಿಚಾರ್ಜ್ ಮಾಡಲು ಕೊಟ್ಟವರ ವಿರುದ್ಧ ಕ್ರಮ ಆಗಬೇಕು. ಈ ಸಂಬಂಧ ತನಿಖೆ ಆಗಬೇಕು. ಸರ್ಕಾರದ ಹತ್ತು ಅಂಗಗಳಿಗೆ ಪ್ರತಿವಾದಿ ಮಾಡಲಾಗಿದೆ. ಸರ್ಕಾರ, ಗೃಹ ಇಲಾಖೆ ಮತ್ತು ಪೊಲೀಸ್ ಇಲಾಖೆ ಒಳಗೊಂಡಿದೆ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:02 pm, Sat, 21 December 24

ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​
ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​
ರವಿ ಆರೋಪಿಯಾಗಿದ್ದರು, ಆದರೆ ಉಳಿದ ಬಿಜೆಪಿ ಶಾಸಕರು ಠಾಣೆಯಲ್ಲಿ ಯಾಕೆ? ಖರ್ಗೆ
ರವಿ ಆರೋಪಿಯಾಗಿದ್ದರು, ಆದರೆ ಉಳಿದ ಬಿಜೆಪಿ ಶಾಸಕರು ಠಾಣೆಯಲ್ಲಿ ಯಾಕೆ? ಖರ್ಗೆ
ಆತ್ಮಸಾಕ್ಷಿಯೇ ಎಲ್ಲದಕ್ಕೂ ನ್ಯಾಯ ಒದಗಿಸುತ್ತದೆ: ಶಿವಕುಮಾರ್
ಆತ್ಮಸಾಕ್ಷಿಯೇ ಎಲ್ಲದಕ್ಕೂ ನ್ಯಾಯ ಒದಗಿಸುತ್ತದೆ: ಶಿವಕುಮಾರ್
ಬಿಜೆಪಿ ಕಚೇರಿಯಲ್ಲಿ ಸಿಟಿ ರವಿ ಸುದ್ದಿಗೋಷ್ಠಿಯ ನೇರಪ್ರಸಾರ
ಬಿಜೆಪಿ ಕಚೇರಿಯಲ್ಲಿ ಸಿಟಿ ರವಿ ಸುದ್ದಿಗೋಷ್ಠಿಯ ನೇರಪ್ರಸಾರ
ನಿಂದನೆ ನಡೆದಿದ್ದು ಸದನದ ಒಳಗೋ, ಹೊರಗೋ ಅನ್ನೋದು ಖಚಿತವಾಗಿಲ್ಲ: ಪರಮೇಶ್ವರ್
ನಿಂದನೆ ನಡೆದಿದ್ದು ಸದನದ ಒಳಗೋ, ಹೊರಗೋ ಅನ್ನೋದು ಖಚಿತವಾಗಿಲ್ಲ: ಪರಮೇಶ್ವರ್
ನಾನೆಂಥವನು ಅಂತ ಚಿಕ್ಕಮಗಳೂರು ಜನಕ್ಕೆ ಗೊತ್ತು: ಸಿಟಿ ರವಿ
ನಾನೆಂಥವನು ಅಂತ ಚಿಕ್ಕಮಗಳೂರು ಜನಕ್ಕೆ ಗೊತ್ತು: ಸಿಟಿ ರವಿ
ಬಿಗ್​ಬಾಸ್ ಮನೆಯಲ್ಲಿ ಭೂತ, ಬಿದ್ದು ಒದ್ದಾಡಿದ ಚೈತ್ರಾ, ಮನೆ ಮಂದಿಗೆ ಭಯ
ಬಿಗ್​ಬಾಸ್ ಮನೆಯಲ್ಲಿ ಭೂತ, ಬಿದ್ದು ಒದ್ದಾಡಿದ ಚೈತ್ರಾ, ಮನೆ ಮಂದಿಗೆ ಭಯ
Video: ಜರ್ಮನಿಯ ಕ್ರಿಸ್​ಮಸ್ ಮಾರ್ಕೆಟ್​ನಲ್ಲಿ ಜನರ ಮೇಲೆ ಹರಿದ ಕಾರು
Video: ಜರ್ಮನಿಯ ಕ್ರಿಸ್​ಮಸ್ ಮಾರ್ಕೆಟ್​ನಲ್ಲಿ ಜನರ ಮೇಲೆ ಹರಿದ ಕಾರು
ತಿರುಪತಿ 7 ದ್ವಾರಗಳ ರಹಸ್ಯ ಮತ್ತು ಆಧ್ಯಾತ್ಮಿಕ ಮಹತ್ವ ತಿಳಿಯಿರಿ
ತಿರುಪತಿ 7 ದ್ವಾರಗಳ ರಹಸ್ಯ ಮತ್ತು ಆಧ್ಯಾತ್ಮಿಕ ಮಹತ್ವ ತಿಳಿಯಿರಿ