ಮೈಸೂರು: ಕಾಡಾನೆ ನೋಡಲು ಬಂದಿದ್ದಾತ ಸಲಗದ ದಾಳಿಗೆ ಬಲಿಯಾದ

ಕಾಡಾನೆಗಳನ್ನು ನೋಡಲು ಬಂದಿದ್ದ ಚೆನ್ನಪ್ಪ ಅವರ ಮೇಲೆ ಹಿಂಡಿನಲ್ಲಿದ್ದ ಸಲಗವೊಂದು ಏಕಾಏಕಿ ದಾಳಿ ನಡೆಸಿತ್ತು. ಆನೆ ದಾಳಿಗೆ ಸಿಲುಕಿದ ಅವರು ಸ್ಥಳದಲ್ಲಿಯೇ ಪ್ರಾಣಬಿಟ್ಟರು.

ಮೈಸೂರು: ಕಾಡಾನೆ ನೋಡಲು ಬಂದಿದ್ದಾತ ಸಲಗದ ದಾಳಿಗೆ ಬಲಿಯಾದ
ಕಾಡಾನೆ ದಾಳಿಗೆ ವ್ಯಕ್ತಿ ಬಲಿ
TV9kannada Web Team

| Edited By: ganapathi bhat

Apr 07, 2022 | 10:45 AM

ಮೈಸೂರು: ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕೆಲ್ಲೂಪುರ ಗ್ರಾಮದಲ್ಲಿ ಕಾಡಾನೆ ದಾಳಿಗೆ ದೇಪೇಗೌಡನಪುರದ ನಿವಾಸಿ ಚೆನ್ನಪ್ಪ (36) ಮೃತಪಟ್ಟಿದ್ದಾರೆ.

ಓಂಕಾರ ಅರಣ್ಯ ವಲಯದಿಂದ ಗ್ರಾಮಕ್ಕೆ ಆನೆಗಳು ಆಹಾರ ಅರಸಿಕೊಂಡು ಬಂದಿದ್ದವು. ಕಾಡಾನೆಗಳನ್ನು ನೋಡಲು ದೇಪೇಗೌಡನಪುರದಿಂದ ಚೆನ್ನಪ್ಪ ಎಂಬ ವ್ಯಕ್ತಿ ಬಂದಿದ್ದರು. ಆ ಸಂದರ್ಭದಲ್ಲಿ ಹಿಂಡಿನಲ್ಲಿದ್ದ ಸಲಗವೊಂದು ಏಕಾಏಕಿ ಚೆನ್ನಪ್ಪನ ಮೇಲೆ ದಾಳಿ ನಡೆಸಿದೆ. ಆನೆ ದಾಳಿಗೆ ಸಿಲುಕಿದ ಚೆನ್ನಪ್ಪ ಪ್ರಾಣಬಿಟ್ಟಿದ್ದಾರೆ.

ಈ ಬಗ್ಗೆ ಕೆಲ್ಲೂಪುರ, ಮಲ್ಲಹಳ್ಳಿ, ಮಲ್ಕುಂಡಿ ಗ್ರಾಮಸ್ಥರಿಂದ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಆನೆ ದಾಳಿ ನಡೆದ ಸ್ಥಳದಲ್ಲಿ ಸೇರಿರುವ ಜನಸಮೂಹ

ನಿಲ್ಲದ ಕಾಡಾನೆ ಉಪಟಳ: 40 ಆನೆಗಳಿಂದ ನೂರಾರು ಎಕರೆ ಭತ್ತದ ಬೆಳೆ ನಾಶ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada