ಮಂಡ್ಯ: ಮಾಸ್ಕ್‌ಮ್ಯಾನ್ ಹುಟ್ಟಿ ಬೆಳೆದಿದ್ದು ನಮ್ಮ ಗ್ರಾಮದಲ್ಲೇ, ಹುಟ್ಟು ಸೋಮಾರಿ ಎಂದ ಗ್ರಾಮಸ್ಥರು

ಧರ್ಮಸ್ಥಳ ಕೇಸ್​ಗೆ ಸಂಬಂಧಿಸಿದಂತೆ ಇತ್ತೀಚೆಗೆ ಶಾಸಕ ಜನಾರ್ದನ ರೆಡ್ಡಿ ಅನಾಮಿಕ ಮಾಸ್ಕ್​ಮ್ಯಾನ್ ತಮಿಳುನಾಡಿನವನು ಎಂದು ಹೇಳಿದ್ದರು. ನಿನ್ನೆ ಮಾಸ್ಕ್​ಮ್ಯಾನ್​​ನೊಂದಿಗೆ ಕೆಲಸ ಮಾಡಿದ್ದ ಓರ್ವ ವ್ಯಕ್ತಿಯನ್ನು ವಿಚಾರಣೆ ಮಾಡಲಾಗಿತ್ತು. ಇದೀಗ ಆ ಮಾಸ್ಕ್​ಮ್ಯಾನ್​ ಮಂಡ್ಯ ಮೂಲದವನು ಎಂದು ಸ್ವತಃ ಮಂಡ್ಯ ಗ್ರಾಮಸ್ಥರೇ ಹೇಳುತ್ತಿದ್ದಾರೆ.

ಮಂಡ್ಯ: ಮಾಸ್ಕ್‌ಮ್ಯಾನ್ ಹುಟ್ಟಿ ಬೆಳೆದಿದ್ದು ನಮ್ಮ ಗ್ರಾಮದಲ್ಲೇ, ಹುಟ್ಟು ಸೋಮಾರಿ ಎಂದ ಗ್ರಾಮಸ್ಥರು
ಮಾಸ್ಕ್‌ಮ್ಯಾನ್
Edited By:

Updated on: Aug 21, 2025 | 1:16 PM

ಮಂಡ್ಯ, ಆಗಸ್ಟ್​ 21: ಧರ್ಮಸ್ಥಳದಲ್ಲಿ (Dharmasthala) ಶವಗಳ ಶೋಧ ನಡೆಸಿದ ಎಸ್‌ಐಟಿ ಇದೀಗ ದೂರುದಾರನ ಹಿನ್ನೆಲೆ ಶೋಧಿಸುತ್ತಿದೆ. ಮಾಸ್ಕ್‌ಮ್ಯಾನ್ ಬಗ್ಗೆ ತನಿಖೆ ತೀವ್ರಗೊಳಿಸಿದೆ. ಮಾಸ್ಕ್‌ಮ್ಯಾನ್ ಜೊತೆ ಕೆಲಸ ಮಾಡಿದ್ದ ವ್ಯಕ್ತಿ ವಿಚಾರಣೆ ವೇಳೆ ನೂರಾರು ಶವಗಳನ್ನು ಹೂತಿರುವುದು ಸುಳ್ಳು ಎಂದು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದರು. ಅಷ್ಟೇ ಅಲ್ಲದೆ ಶಾಸಕ ಜನಾರ್ದನ ರೆಡ್ಡಿ ಮಾಸ್ಕ್‌ಮ್ಯಾನ್​ ತಮಿಳುನಾಡಿನವನು ಎಂದಿದ್ದರು. ಹೀಗಿರುವಾಗ ಇದೀಗ ಆ ಮಾಸ್ಕ್‌ಮ್ಯಾನ್ ಮಂಡ್ಯ (Mandya) ಮೂಲದ ವ್ಯಕ್ತಿ ಎನ್ನಲಾಗುತ್ತಿದೆ.

ಭೀಮ ಅಂತೆಲ್ಲ ಹೇಳುವುದು ಸುಳ್ಳು ಎಂದು ಗ್ರಾಮಸ್ಥರು

ಈ ವಿಚಾರವಾಗಿ ಟಿವಿ9ಗೆ ಗ್ರಾಮಸ್ಥರಾದ ನಿಂಗರಾಜು ಮತ್ತು ಶಂಕರೇಗೌಡ ಮಾಹಿತಿ ನೀಡಿದ್ದಾರೆ. ದೂರುದಾರ ಮಂಡ್ಯ ಮೂಲದವನು. ಹುಟ್ಟಿ ಬೆಳೆದಿದ್ದು ನಮ್ಮ ಗ್ರಾಮದಲ್ಲೇ. ಮಾಸ್ಕ್​ಮ್ಯಾನ್ ಧರ್ಮಾಧಿಕಾರಿ ಬಗ್ಗೆ ಹೇಳುತ್ತಿರುವುದು ಸುಳ್ಳು ಎಂದು ಗ್ರಾಮಸ್ಥರು ಹೇಳಿದ್ದಾರೆ.

ಇದನ್ನೂ ಓದಿ: ಧರ್ಮಸ್ಥಳ ಕೇಸಿಗೆ ಟ್ವಿಸ್ಟ್! ಅನಾಮಿಕನ ಮುಖವಾಡ ಕಳಚಿದ ಗೆಳೆಯ ರಾಜು

ಇದನ್ನೂ ಓದಿ
ಧರ್ಮಸ್ಥಳ ಪ್ರಕರಣ​: ಮಾಜಿ DC ಸಸಿಕಾಂತ್​ ಸೆಂಥಿಲ್​ ಷಡ್ಯಂತ್ರ ಎಂದ ರೆಡ್ಡಿ
ಧರ್ಮಸ್ಥಳ ಪ್ರಕರಣ: ಅನನ್ಯಾ ಭಟ್ ನಾಪತ್ತೆ ಅಸಲಿಯತ್ತೇನು?
ಧರ್ಮಸ್ಥಳದಲ್ಲಿ ಶವ ಹೂತಿದ್ದ ಪ್ರಕರಣ: ಆರ್​ಟಿಐ ಮಾಹಿತಿಯಲ್ಲಿ ಅಚ್ಚರಿಯ ಅಂಶ
ಧರ್ಮಸ್ಥಳದ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ ಎಂದ ಡಿಕೆ ಶಿವಕುಮಾರ್!

25 ವರ್ಷಗಳ ಹಿಂದೆ ನಮ್ಮೂರಿನಿಂದ ಧರ್ಮಸ್ಥಳಕ್ಕೆ ಹೋಗಿದ್ದ. ನಾವು ಧರ್ಮಸ್ಥಳಕ್ಕೆ ಹೋಗಿದ್ದಾಗ ಆತ ನಮ್ಮನ್ನು ಭೇಟಿ ಮಾಡುತ್ತಿದ್ದ. ದೇವಸ್ಥಾನಕ್ಕೂ ನಮ್ಮನ್ನು ಬಿಡಿಸುತ್ತಿದ್ದ. ಈತನಿಗೆ ಗ್ರಾಮದಲ್ಲಿ ಜಾಗ ಇತ್ತು, ಅದನ್ನು ಮಾರಿಕೊಂಡಿದ್ದಾನೆ ಎಂದರು.

ಕಳೆದ ಐದಾರು ವರ್ಷಗಳ ಹಿಂದೆ ಮತ್ತೆ ಬಂದು ಇದೇ ಗ್ರಾಮದಲ್ಲಿ ಇದ್ದು ಹೋಗಿದ್ದ. ಆಗ ಹಸುಗಳನ್ನ ತೆಗೆದುಕೊಳ್ಳಲು ಬ್ಯಾಂಕ್ ಲೋನ್ ಕೊಡಿಸಿದ್ದೆ. ಅದನ್ನು ಕಟ್ಟಿರಲಿಲ್ಲ. ನಮ್ಮ ಇಟ್ಟಿಗೆ ಪ್ಯಾಕ್ಟರಿಯಲು ಕೆಲಸ ಮಾಡಿಕೊಂಡಿದ್ದ. ಬಳಿಕ ದುಡ್ಡಿ ತೆಗೆದುಕೊಂಡು ಏಕಾಏಕಿ ಖಾಲಿ ಮಾಡಿಕೊಂಡು ಹೋಗಿದ್ದ. ಈತನ ಸಹೋದರ ಈಗಲು ಧರ್ಮಸ್ಥಳದಲ್ಲಿ ಇದ್ದಾನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಧರ್ಮಸ್ಥಳ ಕೇಸ್​ಗೆ ಬಿಗ್ ಟ್ವಿಸ್ಟ್: ಅನಾಮಿಕ ಮಾಸ್ಕ್ ಮ್ಯಾನ್ ತಮಿಳುನಾಡಿನವ, ಸಸಿಕಾಂತ್ ಸೆಂಥಿಲ್ ಆಪ್ತ ಎಂದ ಜನಾರ್ದನ ರೆಡ್ಡಿ

ದೂರುದಾರನ ಕ್ಯಾರೆಕ್ಟರ್ ಸರಿ ಇಲ್ಲ, ಆತ 3 ಮದುವೆಯಾಗಿದ್ದ. ಆತ ಹುಟ್ಟು ಸೋಮಾರಿ, ಇಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಅವರ ತಂದೆ-ತಾಯಿ ಮತ್ತು ಮೂರ್ನಾಲ್ಕು ಜನ ಅಣ್ಣ-ತಮ್ಮಂದಿರಿದ್ದು, ಅವರೆಲ್ಲಾ ಒಳ್ಳೆಯವರು. ಆದರೆ ಇವನು ಮಾತ್ರ ಫ್ರಾಡ್. ಒಂದೂವರೆ ವರ್ಷದ ಹಿಂದೆ ಆತ ನನಗೆ ಫೋನ್ ಮಾಡಿದ್ದ ಎಂದು ಗ್ರಾಮಸ್ಥರಾದ ನಿಂಗರಾಜು ಮತ್ತು ಶಂಕರೇಗೌಡ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us