ಕುಮಾರಸ್ವಾಮಿ ಏನು ಸಾಚ ಅಲ್ಲ, ಅವರು ಜೈಲಿಗೆ ಹೋಗುವ ಕಾಲ ಹತ್ತಿರ ಬಂದಿದೆ: ಕೈ ಶಾಸಕ ಸ್ಫೋಟಕ ಹೇಳಿಕೆ
ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ತೀವ್ರ ಸ್ವರೂಪ ಪಡೆದುಕೊಂಡಿದೆ. ಆದ್ರೆ, ಇದರ ಹಿಂದೆ ಕಾಂಗ್ರೆಸ್ ಸರ್ಕಾರದ ಕೈವಾಡವಿದೆ ಎಂದು ಜೆಡಿಎಸ್ ನಾಯಕರು ಆರೋಪಿಸಿದ್ದಾರೆ. ಈ ಸಂಬಂದ ಆರೋಪ-ಪ್ರತ್ಯಾರೋಪಗ: ನಡೆಯುತ್ತಿವೆ. ಇದರ ಮಧ್ಯ ಕಾಂಗ್ರೆಸ್ ಶಾಸಕರೊಬ್ಬರು, ರೇವಣ್ಣನ ಪರಿಸ್ಥಿತಿ ಕುಮಾರಸ್ವಾಮಿಗೂ ಬರುತ್ತೆ. ಕುಮಾರಸ್ವಾಮಿ ಏನು ಸಾಚ ಅಲ್ಲ, ಅವರು ಜೈಲಿಗೆ ಹೋಗುವ ಕಾಲ ಹತ್ತಿರ ಬಂದಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮಂಡ್ಯ, (ಮೇ 12): ಕುಮಾರಸ್ವಾಮಿ (HD Kumaraswamy) ಏನು ಸಾಚ ಅಲ್ಲ. ರೇವಣ್ಣನಂತೆ ಕುಮಾರಸ್ವಾಮಿ ಜೈಲಿಗೆ ಹೋಗುವ ಕಾಲ ಹತ್ತಿರ ಬಂದಿದೆ. kಉಮಾರಸ್ವಾಮಿ ವಿರುದ್ಧವೂ ಮಹಿಳೆಯರು ದೂರು ಕೊಡುತ್ತಾರೆ. ಕುಮಾರಸ್ವಾಮಿ ಲೈಂಗಿಕ ದೌರ್ಜನ್ಯ ಮಾಡಿರುವ ಬಗ್ಗೆ ಕೇಳಿದ್ದೇವೆ. ರಾಧಿಕಾ ಅವರನ್ನ ಪತ್ನಿ ರೀತಿ ಕಾಣುತ್ತಿದ್ದಾರಾ? ಪೆನ್‌ಡ್ರೈವ್ ಪ್ರಕರಣ(Prajwal Revanna Pen drive Case) ಬಳಿಕ ಕುಮಾರಸ್ವಾಮಿ ವಿರುದ್ಧವೂ ದೂರು ಕೊಡಲು ಧೈರ್ಯ ಮಾಡಲಿದ್ದಾರೆ. ಎಂದು ಮದ್ದೂರು ಕಾಂಗ್ರೆಸ್ ಶಾಸಕ ಕದಲೂರು ಉದಯ್ ಹೊಸ ಬಾಂಬ್ ಸಿಡಿಸಿದ್ದಾರೆ.
ಮಂಡ್ಯದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮದ್ದೂರು ಕಾಂಗ್ರೆಸ್ ಶಾಸಕ ಕದಲೂರು ಉದಯ್, ಇಷ್ಟು ದಿನ ಯಾರು ಬಂದು ದೂರು ಕೊಡಲು ಧೈರ್ಯ ಮಾಡಿರಲಿಲ್ಲ. ಕುಮಾರಸ್ವಾಮಿ ಲೈಂಗಿಕ ದೌರ್ಜನ್ಯ ಮಾಡಿರುವ ಬಗ್ಗೆ ಕೇಳಿದ್ದೇವೆ. ರಾಧಿಕಾ ಅವರನ್ನ ಪತ್ನಿ ರೀತಿ ಕಾಣುತ್ತಿದ್ದಾರಾ? ಈ ರೀತಿ ಬಹಳಷ್ಟು ನಡೆದಿರಬಹುದು. ಅವರ ಆಪ್ತರೆ ಹಲವಾರು ಬಾರಿ ಹೇಳಿದ್ದಾರೆ. ಕುಮಾರಸ್ವಾಮಿ ಏನು ಸಾಚಾ ಅಲ್ಲ. ಪೆನ್‌ಡ್ರೈವ್ ಪ್ರಕರಣ ಬಳಿಕ ಕುಮಾರಸ್ವಾಮಿ ವಿರುದ್ಧವೂ ದೂರು ಕೊಡಲು ಧೈರ್ಯ ಮಾಡಲಿದ್ದಾರೆ. ಯಾರಾದರೂ ದೂರು ಕೊಟ್ಟರೆ ಸರ್ಕಾರ ತನಿಖೆ ಮಾಡಲಿದೆ ಎಂದು ಹೊಸ ಬಾಂಬ್ ಸಿಡಿಸಿದರು.
ಕುಮಾರಸ್ವಾಮಿ ಏನ್ ಸಾಚಾನ? ಮಗಳ ವಯಸ್ಸಿನವರನ್ನ ಪುಸಲಾಯಿಸಿ ಮಗಳು ಹುಟ್ಟಿಸಿ ರೋಡ್‌ನಲ್ಲಿ ಬಿಟ್ಟಿದ್ದಾರೆ. ಕುಮಾರಸ್ವಾಮಿ ನೀಚ ಕೆಲಸ ಮಾಡಿದ್ದಾರೆ. ಸಿಎಂ ಆಗಿದ್ದವರು ಇಂತಹ ನೀಚ ಕೆಲಸ ಮಾಡುತ್ತಾರ? ಜೀವನದುದ್ದಕ್ಲೂ ಬ್ಲಾಕ್ ಮೇಲ್, ಅಪಪ್ರಚಾರ ಮಾಡುತ್ತಾ ಬಂದಿದ್ದಾರೆ. ಬೇರೆಯವರನ್ನ ಮುಳುಗಿಸಿದ್ದೆ ಕುಮಾರಸ್ವಾಮಿ ಸಾಧನೆ. ಇವರ ಮನೆ ಹೆಣ್ಣು ಮಕ್ಕಳು ಮರ್ಯಾದೆ ರೋಡ್‌ನಲ್ಲಿ ಹರಾಜಾಗಿದ್ದರೆ ಪ್ರತಿಭಟನೆ ಮಾಡ್ತಿದ್ರಾ? ಸ್ವಂತಕ್ಕೆ ಬೇಕಾಗಿರೋದನ್ನ ಮಾತ್ರ ಕುಮಾರಸ್ವಾಮಿ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇನ್ನು ಇದೇ ವೇಳೆ ಪ್ರಜ್ವಲ್ ಕೇಸ್ನಲ್ಲಿ ಕೈವಾಡವಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಮಾತನಾಡಿದ ಉದಯ್, ಸಂಸದ ಪ್ರಜ್ವಲ್ ರೇವಣ್ಣ ವಿಡಿಯೋವನ್ನು ಸರ್ಕಾರ ಮಾಡಿಸಿತ್ತಾ? ಪ್ರಜ್ವಲ್ನೇ ವಿಡಿಯೋ ಮಾಡಿಕೊಂಡಿದ್ದನು. ಪ್ರಜ್ವಲ್ ರೇವಣ್ಣ ಜೆಡಿಎಸ್ ಸಂಸದ. ಜೆಡಿಎಸ್ ಒಂದು ಕುಟುಂಬಕ್ಕೆ ಸೀಮಿತವಾದ ಪಕ್ಷ. ಇದು ಒಂದು ಕುಟುಂಬಕ್ಕೆ ಸೇರಿದ ವಿಚಾರ. ಕುಮಾರಸ್ವಾಮಿ ಜನರ ಮುಂದೆ ಕ್ಷಮೆ ಕೇಳಬೇಕು. ಆದರೆ ಕಾರ್ಯಕರ್ತರನ್ನ ಎತ್ತಿ ಕಟ್ಟಿ ಪ್ರತಿಭಟನೆ ಮಾಡಿಸುತ್ತಿದ್ದಾರೆ. ಡಿಸಿಎಂ ಬಗ್ಗೆ ಅಪಪ್ರಚಾರ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.
ಜೆಡಿಎಸ್ ಪಕ್ಷ ಯಾವ ಪುರುಷಾರ್ಥಕ್ಕೆ ಪ್ರತಿಭಟನೆ ಮಾಡುತ್ತಿದೆ. ಯಾವ ಘನಕಾರ್ಯ ಮಾಡಿದ್ದಾರೆಂದು ಪ್ರತಿಭಟನೆ. ಬಹಳಷ್ಟು ಜನ ಹೆಣ್ಣು ಮಕ್ಕಳಿಗೆ ಅನ್ಯಾಯವಾಗಿದೆ. ಸಂತ್ರಸ್ತೆಯರ ಪರ ಯಾವ ಜೆಡಿಎಸ್ ನಾಯಕರು ಧ್ವನಿ ಎತ್ತಿಲ್ಲ. ಅವರಿಗೆ ಧೈರ್ಯ ಹೇಳಿ, ಸಾಂತ್ವನ ಹೇಳುವ ಕೆಲಸ ಮಾಡಲಿಲ್ಲ. ಇವರ ಮನೆ ಹೆಣ್ಣುಮಕ್ಕಳು ಆಗಿದ್ದರೆ ಹೀಗೆ ಮಾಡ್ತಿದ್ದರಾ? ಯಾವ ನೈತಿಕತೆ ಇಟ್ಟುಕೊಂಡು ಜೆಡಿಎಸ್ ಪ್ರತಿಭಟನೆ ಮಾಡುತ್ತಿದೆ . ಕಾಂಗ್ರೆಸ್ ಸರ್ಕಾರ ನೀಚ ಸರ್ಕಾರ ಅಂತಾರೆ. ಬಡವರಿಗೆ ಯೋಜನೆ ಕೊಟ್ಟ ಸರ್ಕಾರ ನೀಚ ಸರ್ಕಾರವಾ. ಗ್ರಾಮ ಪ.ಚಾಯತಿಯಿಂದ ವಿಧಾನಸಭೆವರೆಗೂ ದಬ್ಬಾಳಿಕೆಯ ಮಾಡಿಕೊಂಡೆ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ