ಮಿಮ್ಸ್‌ನಲ್ಲಿ ಮೂಲಭೂತ ಸೌಕರ್ಯವಿದ್ದರೂ ಆರಂಭವಾಗದ ‘ತಾಯಿ ಎದೆಹಾಲು ಬ್ಯಾಂಕ್’!

ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಜಿಪಂ ಸಿಇಒ ಕೆ.ಆರ್. ನಂದಿನಿ ಅವರ ಶ್ರಮದಿಂದ 25 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ 'ತಾಯಿ ಎದೆಹಾಲು ಬ್ಯಾಂಕ್' ಉದ್ಘಾಟನೆಯಾಗಿ 4 ತಿಂಗಳು ಕಳೆದರೂ ಕಾರ್ಯಾರಂಭಿಸಿಲ್ಲ. ಪಾಶ್ಚರೈಸ್ ಹಾಗೂ ಡೀಪ್ ಫ್ರೀಜರ್ ಉಪಕರಣಗಳ ಖರೀದಿಗೆ 36 ಲಕ್ಷ ಅನುದಾನ ಸಿಗದೆ ನೆನೆಗುದಿಗೆ ಬಿದ್ದಿದ್ದು, ಪ್ರತಿ ತಿಂಗಳು ಎದೆಹಾಲು ವಂಚಿತವಾಗುತ್ತಿರುವ 60 ನವಜಾತ ಶಿಶುಗಳಿಗೆ ನೆರವಾಗಲು ಸರ್ಕಾರದ ಶೀಘ್ರ ಕ್ರಮ ಅಗತ್ಯವಿದೆ.

ಮಿಮ್ಸ್‌ನಲ್ಲಿ ಮೂಲಭೂತ ಸೌಕರ್ಯವಿದ್ದರೂ ಆರಂಭವಾಗದ ತಾಯಿ ಎದೆಹಾಲು ಬ್ಯಾಂಕ್!
Mims
Edited By:

Updated on: Sep 02, 2026 | 12:08 PM

ಮುಖ್ಯಾಂಶಗಳು

  • ಮಂಡ್ಯ ಮಿಮ್ಸ್‌ನಲ್ಲಿ ಮೂಲಭೂತ ಸೌಕರ್ಯವಿದ್ದರೂ ಆರಂಭವಾಗದ ತಾಯಿ ಎದೆಹಾಲು ಬ್ಯಾಂಕ್
  • ಉಪಕರಣ ಖರೀದಿಗೆ 36 ಲಕ್ಷ ರೂಪಾಯಿ ಅನುದಾನ ನೀಡದ ಸರ್ಕಾರ.
  • ಪ್ರತಿ ತಿಂಗಳು 36 ನವಜಾತ ಶಿಶುಗಳಿಗೆ ಎದೆ ಹಾಲಿನ ಕೊರತೆ.

ಮಂಡ್ಯ, ಸೆಪ್ಟೆಂಬರ್ 02: ಜಿಲ್ಲೆಯ ಮಿಮ್ಸ್ (MIMS) ಆಸ್ಪತ್ರೆಯಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಸ್ಥಾಪಿಸಲಾಗಿರುವ ತಾಯಿ ಎದೆ ಹಾಲು ಶೇಖರಣಾ ಘಟಕ ಉದ್ಘಾಟನೆಯಾಗಿ ನಾಲ್ಕು ತಿಂಗಳು ಕಳೆದರೂ ಇಂದಿಗೂ ಸಾರ್ವಜನಿಕ ಸೇವೆಗೆ ಲಭ್ಯವಾಗಿಲ್ಲ. ಸಾಮಾನ್ಯವಾಗಿ ಜಾಗೃತಿ ಹಾಗೂ ಪೋಸ್ಟರ್‌ ಪ್ರಚಾರಕ್ಕೆ ಲಕ್ಷಾಂತರ ರೂಪಾಯಿ ಅನುದಾನ ಪೋಲಾಗುತ್ತಿತ್ತು. ಆದರೆ ಮಂಡ್ಯ ಜಿಪಂ ಸಿಇಒ ಕೆ.ಆರ್. ನಂದಿನಿ ಅವರು ಈ ಹಣವನ್ನು ವ್ಯರ್ಥ ಮಾಡದೆ, ಎದೆಹಾಲು ವಂಚಿತ ಹಸುಗೂಸುಗಳ ರಕ್ಷಣೆಗೆ ಪಣತೊಟ್ಟು ಮಿಲ್ಕ್ ಬ್ಯಾಂಕ್ ಸ್ಥಾಪನೆಗೆ ವಿನಿಯೋಗಿಸಿದ್ದರು.

ಉಪಕರಣಗಳ ಖರೀದಿಗೆ ಬೇಕಿದೆ 36 ಲಕ್ಷ ರೂ. ಅನುದಾನ

ಪ್ರಸ್ತುತ ಮಿಮ್ಸ್ ಆಸ್ಪತ್ರೆಯ ಘಟಕದಲ್ಲಿ ಮೂಲಭೂತ ಸೌಕರ್ಯಗಳು ಪೂರ್ಣಗೊಂಡಿವೆ. ಆದರೆ ಎದೆಹಾಲು ಬ್ಯಾಂಕ್ ಸಂಪೂರ್ಣವಾಗಿ ಕಾರ್ಯಾಚರಿಸಲು ಪಾಶ್ಚರೈಸ್, ವರ್ಟಿಕಲ್ ಲ್ಯಾಮಿನಾರ್ ಹಾಗೂ ಡೀಪ್ ಫ್ರೀಜರ್ ಎಂಬ ಮೂರು ಪ್ರಮುಖ ಉಪಕರಣಗಳ ಅಗತ್ಯವಿದೆ. ಆರು ತಿಂಗಳ ಕಾಲ ಎದೆಹಾಲನ್ನು ಸುರಕ್ಷಿತವಾಗಿ ಸಂರಕ್ಷಿಸುವ ಸಾಮರ್ಥ್ಯವಿರುವ ಈ ಉಪಕರಣಗಳ ಖರೀದಿಗೆ36 ಲಕ್ಷ ರೂ. ಅನುದಾನದ ಅವಶ್ಯಕತೆಯಿದ್ದು, ಸರ್ಕಾರದ ನಿರಾಸಕ್ತಿಯಿಂದಾಗಿ ಉಪಕರಣಗಳ ಪೂರೈಕೆ ನೆನೆಗುದಿಗೆ ಬಿದ್ದಿದೆ.

ತಿಂಗಳಿಗೆ 30ಕ್ಕೂ ಹೆಚ್ಚು ನವಜಾತ ಶಿಶುಗಳಿಗೆ ಎದೆ ಹಾಲಿನ ಕೊರತೆ

ಪ್ರತಿ ತಿಂಗಳು ಮಿಮ್ಸ್ ಆಸ್ಪತ್ರೆಯಲ್ಲಿ ಸುಮಾರು 250 ನವಜಾತ ಶಿಶುಗಳು ದಾಖಲಾಗುತ್ತಿದ್ದು, ಈ ಪೈಕಿ 30 ರಿಂದ 60 ಮಕ್ಕಳಿಗೆ ತಾಯಿಯ ಹಾಲಿನ ಕೊರತೆ ಎದುರಾಗುತ್ತಿದೆ. ಎದೆಹಾಲು ಸಿಗದೆ ತೊಂದರೆ ಅನುಭವಿಸುತ್ತಿರುವ ಈ ಕಂದಮ್ಮಗಳಿಗೆ ನೆರವಾಗಲು ಜಿಪಂ ಸಿಇಒ ಅತ್ಯುತ್ತಮ ಹೆಜ್ಜೆ ಇಟ್ಟಿದ್ದರೂ, ಉಪಕರಣಗಳ ಕೊರತೆಯಿಂದಾಗಿ ಯೋಜನೆಯ ಉದ್ದೇಶ ಈಡೇರುತ್ತಿಲ್ಲ. ಸರ್ಕಾರ ತಕ್ಷಣವೇ ಸ್ಪಂದಿಸಿ ಅಗತ್ಯ ಉಪಕರಣಗಳನ್ನು ಪೂರೈಸಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದಿಲೀಪ್​, ಚೌಡಹಳ್ಳಿ

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದವನು. ಕಳೆದ 13 ವರ್ಷದಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.‌ಪತ್ರಿಕೋಧ್ಯಮ ಪದವಿದರನಾಗಿದ್ದೇನೆ.ಮೊದಲಿಗೆ ಮೈಸೂರಿನ ಸ್ಥಳಿಯ ವಾಹಿನ ಹಾಗೂ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದೆ.ನಂತರ ಪಬ್ಲಿಕ್ ಟಿವಿಯಲ್ಲಿ ಚಾಮರಾಜನಗರ ಜಿಲ್ಲಾವರದಿಗಾರನಾಗುವ ಅವಕಾಶ ಸಿಕ್ಕಿತು. ಅದಾದ ಬಳಿಕ ಐದು ವರ್ಷಗಳ ಕಾಲ ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಬಳಿಕ 2018 ರಲ್ಲಿ ಟಿರ್ವಿ ಮೈಸೂರು ವರದಿಗಾರನಾಗುವ ಅವಕಾಶ ಸಿಕ್ಕಿತು. ಅಂದಿನಿಂದ ಮೈಸೂರು ಜಿಲ್ಲಾ ವರದಿಗಾರರನಾಗಿ ಕೆಲಸ ನಿರ್ವಹಿಸಿದ್ದೇನೆ. ಸಧ್ಯ ಮಂಡ್ಯ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಕೃಷಿ, ಸಾಹಿತ್ಯ ಆಸಕ್ತಿ ಇದೆ.

Read More
Loading...
Unable to load recommendations.
Follow Us