ಅಧಿಕಾರಿಗಳ ಉದಾಸೀನಕ್ಕೆ ಸತ್ಯಾಗ್ರಹ ಸೌಧ ಬಲಿ: ಶಿವಪುರ ಸತ್ಯಾಗ್ರಹ ಸ್ಮರಣಾರ್ಥದ ಕಟ್ಟಡದಲ್ಲಿ ನಿರ್ವಹಣೆ ಇಲ್ಲದೆ ಕಸ, ಕಡ್ಡಿ, ಜೇಡಗಳದ್ದೇ ರಾಜಭಾರ
1979 ಸೆಪ್ಟಂಬರ್ 26 ರಂದು ಕೆಂಗಲ್ ಹನುಮಂತಯ್ಯ ಅವರ ನೇತೃತ್ವದಲ್ಲಿ ಈ ಕಟ್ಟಡವನ್ನ ನಿರ್ಮಾಣ ಮಾಡಲಾಯ್ತು. ಹೋರಾಟದ ನೆನಪಿಗಾಗಿ ಈ ಬೃಹತ್ ಕಟ್ಟಡ ತಲೆ ಎತ್ತಿ ನಿಂತಿತ್ತು. ಇಂತಹ ಕಟ್ಟಡವೀಗ ಪಾಳು ಬೀಳುವ ಸ್ಥಿತಿಗೆ ಬಂದು ನಿಂತಿದೆ.
ಮಂಡ್ಯ: 1938ರಲ್ಲಿ ನಡೆದಿದ್ದ ಶಿವಪುರ ಸತ್ಯಾಗ್ರಹದ(Shivapura Flag Satyagraha) ನೆನಪಿನಾರ್ಥ ನಿರ್ಮಾಣವಾಗಿದ್ದ ಸತ್ಯಾಗ್ರಹ ಸೌಧದ ಸ್ಥಿತಿ ಈಗ ಪಾಳುಬಿದ್ದ ಭೂತದ ಮನೆಯಂತಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ(Negligence) ಬೃಹತ್ ಸೌಧ ಪಾಳುಬಿದ್ದಿದೆ. ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿರುವ ಸತ್ಯಾಗ್ರಹ ಸೌಧ ಕರೆಂಟ್ ಇಲ್ಲದೆ ಕತ್ತಲಾಗಿದೆ. ಗುಟ್ಕಾ ಪ್ಯಾಕೇಟ್, ಚಾಕೋಲೆಟ್ ಕವರ್ ಇಡೀ ಸೌಧವನ್ನು ಆವರಿಸಿವೆ. ಧ್ವಜ ಸತ್ಯಾಗ್ರಹಕ್ಕೆ ಸಾಕ್ಷಿಯಾಗಿದ್ದ ಕಟ್ಟಡವೀಗ ಅಧಿಕಾರಿಗಳ ಹುಂಬತನಕ್ಕೆ ಬಲಿಯಾಗಿ ಹೋಗಿದೆ. ಬ್ರಿಟಿಷರ ವಿರುದ್ದ ತೊಡೆತಟ್ಟಿ ಧ್ವಜ ಹಾರಿಸಿದ್ದ ಸ್ಥಳವೀಗ ಅನಾಥವಾಗಿದೆ. ಸರಿಯಾದ ನಿರ್ವಹಣೆ ಇಲ್ಲದೆ ಕಟ್ಟಡ ಪಾಳು ಬಿದ್ದಿದೆ.
1938ರಲ್ಲಿ ಬ್ರಿಟೀಷರ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ಶುರುವಾಗಿತ್ತು. ಭಾರತ ಸ್ವಾತಂತ್ರಕ್ಕಾಗಿ ಹೋರಾಟ ನಡೆಸುತ್ತಿದ್ದ ದಿನಗಳವು. ಅಂದು ಮಮತಾ ಗಾಂಧಿ ನೇತೃತ್ವದಲ್ಲಿ ಮೈಸೂರು ಬೆಂಗಳೂರು ಹೈವೆ ಮದ್ಯೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಬ್ರಿಟಿಷರಿಗೆ ಕನ್ನಡಿಗರು ತೊಡೆ ತಟ್ಟಿದ್ರು. ದೊಡ್ಡ ಮಟ್ಟದ ಹೋರಾಟಕ್ಕೆ ಶಿವಪುರ ಸಾಕ್ಷಿಯಾಗಿತ್ತು. ಅದರ ಸ್ಮರಣಾರ್ಥಕ್ಕೆ ನಿರ್ಮಾಣವಾಗಿದ್ದು ಈ ಸತ್ಯಾಗ್ರಹ ಸೌಧ. 1979 ಸೆಪ್ಟಂಬರ್ 26 ರಂದು ಕೆಂಗಲ್ ಹನುಮಂತಯ್ಯ ಅವರ ನೇತೃತ್ವದಲ್ಲಿ ಈ ಕಟ್ಟಡವನ್ನ ನಿರ್ಮಾಣ ಮಾಡಲಾಯ್ತು. ಹೋರಾಟದ ನೆನಪಿಗಾಗಿ ಈ ಬೃಹತ್ ಕಟ್ಟಡ ತಲೆ ಎತ್ತಿ ನಿಂತಿತ್ತು. ಇಂತಹ ಕಟ್ಟಡವೀಗ ಪಾಳು ಬೀಳುವ ಸ್ಥಿತಿಗೆ ಬಂದು ನಿಂತಿದೆ. ಅಧಿಕಾರಿಗಳ ಎಡವಟ್ಟಿಗೆ ಕಟ್ಟಡ ದುಸ್ಥಿತಿಗೆ ಬಂದು ತಲುಪಿದೆ.
ಬ್ರಿಟಿಷರ ವಿರುದ್ಧ ತೊಡೆ ತಟ್ಟಿ ಧ್ವಜವನ್ನಾರಿಸಿ ಬಳಿಕ ಸ್ವಾತಂತ್ರ ಸಂಗ್ರಾಮದಲ್ಲಿ ಭಾಗಿಯಾದ ಸ್ವಾತಂತ್ರ ಹೋರಾಟಗಾರರ ಸ್ಮರಣಾರ್ಥ ಈ ಕಟ್ಟಡ ನಿರ್ಮಾಣವಾಗಿದೆ. ಅದನ್ನ ಕಾಪಾಡಿಕೊಂಡು ಹೋಗುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಆದ್ರೆ ಅಂತ ಕಟ್ಟಡವೇ ಇಂದು ಸರಿಯಾದ ನಿರ್ವಹಣೆ ಇಲ್ಲದೆ ಹಾಳಾಗಿ ಹೋಗುತ್ತಿರುವುದು ನಿಜಕ್ಕೂ ದುರಂತವೇ ಸರಿ. ಇನ್ಮುಂದೆಯಾದ್ರು ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ. ಇಲ್ದೆ ಹೋದ್ರೆ ಇತಿಹಾಸವುಳ್ಳ ಸತ್ಯಾಗ್ರಹ ಕಟ್ಟಡ ಕೇವಲ ಇತಿಹಾಸದ ಪುಸ್ತಕದಲ್ಲಿ ಮಾತ್ರ ಕಾಣ ಸಿಗಲಿದೆ.
ವರದಿ: ಸೂರಜ್ ಪ್ರಸಾದ್, ಟಿವಿ9 ಮಂಡ್ಯ