ಬೆಳಗ್ಗೆ 4ಗಂಟೆಯಿಂದಲೇ 500 ಅಡಿ ಎತ್ತರದ ಚಿಮಿಣಿ ಏರಿ ಕುಳಿತ ಕಾರ್ಮಿಕ: ಬೇಡಿಕೆ ಏನು ಗೊತ್ತಾ?
ಪಿಎಸ್ಎಸ್ಕೆ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸದಿಂದ ವಜಾಗೊಂಡ ಕಾರ್ಮಿಕ ರಾಮಕೃಷ್ಣ, ತನ್ನ ಕೆಲಸವನ್ನು ಮರಳಿ ಪಡೆಯುವ ಒತ್ತಾಯದಲ್ಲಿ ಕಾರ್ಖಾನೆಯ ಚಿಮಣಿಯ ಮೇಲೆ 15 ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದಾರೆ. ಅಧಿಕಾರಿಗಳು ಮತ್ತು ಪೊಲೀಸರು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಆಡಳಿತ ಮಂಡಳಿಯ ಭರವಸೆಯ ಬಳಿಕ ಚಿಮಿಣಿಯಿಂದ ಕೆಳಗಿಳಿದಿದ್ದಾರೆ.

ಮಂಡ್ಯ, ಫೆಬ್ರವರಿ 17: ಜಿಲ್ಲೆಯ ಪಾಂಡವಪುರ ತಾಲೂಕಿನ ಪಿಎಸ್ಎಸ್ಕೆ ಪ್ರತಿಷ್ಠಿತ ಸಕ್ಕರೆ ಕಾರ್ಖಾನೆ 5 ವರ್ಷಗಳ ಹಿಂದೆ ನಷ್ಟದ ನೆಪವೊಡ್ಡಿದ ಸರ್ಕಾರ, ಆ ಕಾರ್ಖಾನೆಯನ್ನ ಖಾಸಗಿ ಸಂಸ್ಥೆಗೆ ಗುತ್ತಿದೆ ನೀಡಿತ್ತು. ಆರಂಭದಲ್ಲಿ ನೌಕರರನ್ನ (Worker) ಕೆಲಸದಿಂದ ವಜಾ ಮಾಡುವ ಪ್ರಶ್ನೆಯೇ ಇಲ್ಲ ಎಂದಿದ್ದ ಆಡಳಿತ ಮಂಡಳಿ, ಬಳಿಕ ನೌಕರರನ್ನು ಕಿತ್ತು ಬೀಸಾಕಿತ್ತು. ಕಂಪನಿಯ ನಿರ್ಧಾರ ಖಂಡಿಸಿ ಕಾರ್ಖಾನೆಯ 500 ಅಡಿ ಎತ್ತರದ ಚಿಮಿಣಿ ಏರಿದ್ದ ಓರ್ವ ಕಾರ್ಮಿಕ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಪ್ರತಿಭಟಿಸಿದ್ದರು. ಸತತ 15 ಗಂಟೆ ಬಳಿಕ ಕೊನೆಗೆ ಕಾರ್ಮಿಕ ಕಾರ್ಖಾನೆಯ ಚಿಮಣಿಯಿಂದ ಕೆಳಗಿಳಿದ್ದಾರೆ.
ಕೊನೆಗೂ ಚಿಮಿಣಿಯಿಂದ ಇಳಿದ ಕಾರ್ಮಿಕ
ಮಂಡ್ಯದ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಕೆಲಸದಿಂದ ವಜಾಗೊಳಿಸಿದರು ಎಂಬ ಕಾರಣಕ್ಕೆ ಚಿಮಿಣಿ ಏರಿದ್ದ ನೊಂದ ಕಾರ್ಮಿಕ ರಾಮಕೃಷ್ಣ ಆಡಳಿತ ಮಂಡಳಿಯ ನಿರ್ಧಾರವನ್ನು ವಿನೂತನವಾಗಿ ಖಂಡಿಸಿದ್ದರು. ಮುಂಜಾನೆ 4 ಗಂಟೆಗೆ ಚಿಮಣಿ ಮೇಲೇರಿದ್ದ ಕಾರ್ಮಿಕ ರಾಮಕೃಷ್ಣ, ಪೊಲೀಸರು, ಅಧಿಕಾರಿಗಳು ಮನವಿ ಮಾಡಿದ್ರೂ ಕೆಳಗಿಳಿದಿರಲಿಲ್ಲ. ಆದೇಶ ಪ್ರತಿ ಕೈಸೇರುವವರೆಗೂ ಕೆಳಗಿಳಿಯುವುದಿಲ್ಲ ಎಂದು ಪಟ್ಟು ಹಿಡಿದ್ದರು. ಆದರೆ ಬುಧವಾರದ ಒಳಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ಆಡಳಿತ ಮಂಡಳಿ ಭರವಸೆ ನೀಡಿದ ಹಿನ್ನೆಲೆ ರಾಮಕೃಷ್ಣ ಬುಧವಾರದ ಒಳಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ಆಡಳಿತ ಮಂಡಳಿ ಭರವಸೆ ನೀಡಿದ ಹಿನ್ನೆಲೆ ಚಿಮಣಿಯಿಂದ ಕೆಳಗಿಳಿದಿದ್ದಾರೆ.
ಇದನ್ನೂ ಓದಿ: ಕೆಲಸದಿಂದ ವಜಾ, ನ್ಯಾಯಕ್ಕಾಗಿ ಪಾಂಡವಪುರ ಸಕ್ಕರೆ ಕಾರ್ಖಾನೆಯ ಚಿಮಣಿ ಹತ್ತಿದ ಕಾರ್ಮಿಕ ರಾಮಕೃಷ್ಣ
ಅಂದಹಾಗೇ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಒಂದು ಕಾಲದಲ್ಲಿ ಪ್ರತಿಷ್ಠಿತ ಸಕ್ಕರೆ ಕಾರ್ಖಾನೆಗಳಲ್ಲಿ ಒಂದಾಗಿತ್ತು. ಕಳೆದ 5 ವರ್ಷಗಳ ಹಿಂದೆ ಅಂದಿನ ಸರ್ಕಾರ ನಷ್ಟದ ಕಾರಣ ಹೇಳಿ ನಿರಾಣಿ ಮಾಲೀಕತ್ವದ ನಿರಾಣಿ ಶುಗರ್ಸ್ ಸಂಸ್ಥೆಗೆ 40 ವರ್ಷಗಳ ಅವಧಿಗೆ ಗುತ್ತಿಗೆ ನೀಡಿತ್ತು. ಗುತ್ತಿಗೆ ಕರಾರು ವೇಳೆ PSSK ನೌಕರರನ್ನ ಮುಂದುವರೆಸುವಂತೆ ಹಾಗೂ ನೌಕರರು ಒಪ್ಪಿದ್ದಲ್ಲಿ VRS ನೀಡುವಂತೆ ಸೂಚಿಸಲಾಗಿತ್ತು.
ಆರಂಭದಲ್ಲಿ ನಿಯಮ ಪಾಲಿಸುವುದಾಗಿ ಹೇಳಿದ್ದ ನಿರಾಣಿ ಶುಗರ್ಸ್‌ನವರು ಕಾಲ ಕಳೆದಂತೆ ಒಂದೊಂದೆ ಒಪ್ಪಂದಗಳನ್ನ ಬ್ರೇಕ್ ಮಾಡುತ್ತಾ ಬರುತ್ತಾರೆ. ಅದರ ಮುಂದುವರಿದ ಭಾಗವಾಗಿ ಕಳೆದ ಹತ್ತಾರು ವರ್ಷಗಳಿಂದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 45 ಜನ ನೌಕರರನ್ನು ಏಕಾಏಕಿ ಕೆಲಸದಿಂದ ವಜಾಗೊಳಿಸಲಾಗಿದೆ. ಇದರಿಂದ ಕಾರ್ಖಾನೆ ಉದ್ಯೋಗ ನಂಬಿ ಬದುಕು ಸಾಗಿಸುತ್ತಿದ್ದ ಕುಟುಂಬಗಳೀಗ ಬೀದಿಗೆ ಬಿದ್ದಂತಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.