AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anganwadi Recruitment 2026: ಮಂಗಳೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ!

ಮಂಗಳೂರು ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಡೆಯುವ ಈ ನೇಮಕಾತಿಗೆ ಆಸಕ್ತ ಮಹಿಳಾ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆಗಸ್ಟ್ 10 ಕೊನೆಯ ದಿನಾಂಕ. ವಿವಿಧ ತಾಲೂಕುಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವರ ಹಾಗೂ ಅರ್ಜಿ ಸಲ್ಲಿಸಬೇಕಾದ ಕಚೇರಿ ವಿಳಾಸಗಳನ್ನು ನೀಡಲಾಗಿದೆ. ಇದು ಸ್ಥಳೀಯ ಮಹಿಳೆಯರಿಗೆ ಉತ್ತಮ ಅವಕಾಶ.

Anganwadi Recruitment 2026: ಮಂಗಳೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ!
ಅಂಗನವಾಡಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ!
ಅಕ್ಷತಾ ವರ್ಕಾಡಿ
|

Updated on:Jul 15, 2026 | 12:58 PM

Share

ಮುಖ್ಯಾಂಶಗಳು

  • ಮಂಗಳೂರು ಅಂಗನವಾಡಿ ಹುದ್ದೆಗಳ ವಿವರ: ತಾಲೂಕುವಾರು ಖಾಲಿ ಸ್ಥಾನಗಳು
  • ಅಂಗನವಾಡಿ ನೇಮಕಾತಿ ಅರ್ಜಿ ಸಲ್ಲಿಕೆ ವಿಧಾನ ಮತ್ತು ಅಂತಿಮ ದಿನಾಂಕ
  • ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಕಚೇರಿ ವಿಳಾಸಗಳು ಇಲ್ಲಿವೆ

ಮಂಗಳೂರು ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿರುವ ಮಹಿಳಾ ಅಭ್ಯರ್ಥಿಗಳಿಗೆ ಇಲಾಖೆಯು ಉತ್ತಮ ಅವಕಾಶವೊಂದನ್ನು ತಂದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಯಡಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳ ಭರ್ತಿಗಾಗಿ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿಯು ಆಫ್‌ಲೈನ್ ಮೂಲಕ ನಡೆಯಲಿದ್ದು, ಆಸಕ್ತರು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿ ನಡೆಯುತ್ತಿರುವ ತಾಲೂಕುಗಳು, ಖಾಲಿ ಇರುವ ಹುದ್ದೆಗಳ ವಿವರ ಹಾಗೂ ಕಚೇರಿಯ ವಿಳಾಸಗಳ ಸಂಪೂರ್ಣ ಮಾಹಿತಿ ಕೆಳಗಿನಂತಿದೆ.

ವಿವಿಧ ತಾಲೂಕುವಾರು ಖಾಲಿ ಹುದ್ದೆಗಳ ವಿವರ:

ಈ ನೇಮಕಾತಿ ಪ್ರಕ್ರಿಯೆಯಡಿ ಮಂಗಳೂರಿನ ನಗರ ಹಾಗೂ ಗ್ರಾಮಾಂತರ ಪ್ರದೇಶಗಳು ಸೇರಿದಂತೆ ಒಟ್ಟು ಆರು ಪ್ರಮುಖ ವ್ಯಾಪ್ತಿಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ 7 ಅಂಗನವಾಡಿ ಕಾರ್ಯಕರ್ತೆ ಹಾಗೂ 32 ಸಹಾಯಕಿ ಹುದ್ದೆಗಳಿದ್ದು, ಗ್ರಾಮಾಂತರ ವ್ಯಾಪ್ತಿಯಲ್ಲಿ 4 ಕಾರ್ಯಕರ್ತೆ ಹಾಗೂ 39 ಸಹಾಯಕಿ ಹುದ್ದೆಗಳು ಖಾಲಿ ಇವೆ. ಉಳಿದಂತೆ ತಾಲೂಕುಗಳ ವಿವರ ಹೀಗಿದೆ:

  • ಮಂಗಳೂರು ತಾಲೂಕು ವ್ಯಾಪ್ತಿ: 14 ಸಹಾಯಕಿ ಹುದ್ದೆಗಳು.
  • ಮುಲ್ಕಿ ತಾಲೂಕು ವ್ಯಾಪ್ತಿ: 3 ಸಹಾಯಕಿ ಹುದ್ದೆಗಳು.
  • ಮೂಡುಬಿದಿರೆ ತಾಲೂಕು ವ್ಯಾಪ್ತಿ: 4 ಸಹಾಯಕಿ ಹುದ್ದೆಗಳು.
  • ಉಳ್ಳಾಲ ತಾಲೂಕು ವ್ಯಾಪ್ತಿ: 4 ಅಂಗನವಾಡಿ ಕಾರ್ಯಕರ್ತೆ ಹಾಗೂ 18 ಸಹಾಯಕಿ ಹುದ್ದೆಗಳು.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಉದ್ಯೋಗ 2026: 10ನೇ ತರಗತಿ ಪಾಸಾದವರಿಗೆ ಸರ್ಕಾರಿ ಉದ್ಯೋಗದ ಅವಕಾಶ

ಅರ್ಜಿ ಸಲ್ಲಿಕೆಯ ವಿಧಾನ ಮತ್ತು ಕೊನೆಯ ದಿನಾಂಕ:

ಅರ್ಹ ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆಫ್‌ಲೈನ್ (Offline) ಮೂಲಕವೇ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಆಗಸ್ಟ್ 10 ರೊಳಗಾಗಿ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ನಗರ ಅಥವಾ ಗ್ರಾಮಾಂತರ ಕಚೇರಿಗೆ ತಲುಪಿಸಬೇಕಾಗಿ ಪ್ರಕಟಣೆಯಲ್ಲಿ ಕೋರಲಾಗಿದೆ. ನಿಗದಿತ ದಿನಾಂಕದ ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಕಚೇರಿ ವಿಳಾಸಗಳು:

ಅರ್ಜಿ ನಮೂನೆ ಹಾಗೂ ನೇಮಕಾತಿಯ ಇತರ ನಿಯಮಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಇಲಾಖೆಯು ನಗರ ಮತ್ತು ಗ್ರಾಮಾಂತರ ಭಾಗಕ್ಕೆ ಪ್ರತ್ಯೇಕ ಕಚೇರಿಗಳ ವಿಳಾಸವನ್ನು ನೀಡಿದೆ.

  • ಮಂಗಳೂರು ನಗರ ವ್ಯಾಪ್ತಿ: ನಗರದ ವೆಲೆನ್ಸಿಯಾ ಸಿಲ್ಕ್ ಕ್ರಾಸ್ ರೋಡ್ ರಸ್ತೆಯಲ್ಲಿರುವ ‘ಮಂಗಳೂರು ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ’ಯನ್ನು ಸಂಪರ್ಕಿಸಬಹುದು.
  • ಮಂಗಳೂರು ಗ್ರಾಮಾಂತರ ವ್ಯಾಪ್ತಿ: ನಗರದ ಉರ್ವ ಮಾರ್ಕೆಟ್ ಕಟ್ಟಡದ 3ನೇ ಮಹಡಿಯಲ್ಲಿರುವ ‘ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನೆ ಕಚೇರಿ’ಯನ್ನು ಭೇಟಿ ಮಾಡಬಹುದು.

ಅಂಗನವಾಡಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವ ಮಂಗಳೂರು ಭಾಗದ ಅರ್ಹ ಮಹಿಳೆಯರು ಈ ಆಫ್‌ಲೈನ್ ಅರ್ಜಿ ಪ್ರಕ್ರಿಯೆಯನ್ನು ಬಳಸಿಕೊಂಡು, ಆಗಸ್ಟ್ 10ರ ಒಳಗಾಗಿ ತಮ್ಮ ಅರ್ಜಿಗಳನ್ನು ಸಲ್ಲಿಸಿ ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:57 pm, Wed, 15 July 26

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಕೆಪಿಎಸ್‌ಸಿ ನೇಮಕಾತಿ ಹಗರಣ: ತನಿಖೆ ವಿಚಾರವಾಗಿ ಇಡಿ-ಸಿಐಡಿ ನಡುವೆ ಜಟಾಪಟಿ!
ಕೆಪಿಎಸ್‌ಸಿ ನೇಮಕಾತಿ ಹಗರಣ: ತನಿಖೆ ವಿಚಾರವಾಗಿ ಇಡಿ-ಸಿಐಡಿ ನಡುವೆ ಜಟಾಪಟಿ!
ಸಿಇಸಿ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಆಗ್ರಹಿಸಿ ವಿಪಕ್ಷಗಳ ಮಾರ್ಚ್
ಸಿಇಸಿ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಆಗ್ರಹಿಸಿ ವಿಪಕ್ಷಗಳ ಮಾರ್ಚ್
ಮೈಸೂರು ದಸರಾ: ಖಾಸಗಿ ದರ್ಬಾರ್ ಮತ್ತು ರತ್ನಖಚಿತ ಸಿಂಹಾಸನದ ವಿಶೇಷತೆ
ಮೈಸೂರು ದಸರಾ: ಖಾಸಗಿ ದರ್ಬಾರ್ ಮತ್ತು ರತ್ನಖಚಿತ ಸಿಂಹಾಸನದ ವಿಶೇಷತೆ
ಮೈಸೂರು ಅರಮನೆಗೆ ಭೇಟಿ ನೀಡಿದ ನಟಿ ಕಾಜಲ್ ಅಗರ್ವಾಲ್; ಗತವೈಭವ ಕಂಡು ಬೆರಗು
ಮೈಸೂರು ಅರಮನೆಗೆ ಭೇಟಿ ನೀಡಿದ ನಟಿ ಕಾಜಲ್ ಅಗರ್ವಾಲ್; ಗತವೈಭವ ಕಂಡು ಬೆರಗು
ಬಿಗ್ ಬಾಸ್ ಮನೆಯಲ್ಲಿ ಗಂಧರ್ವರು vs ರಾಕ್ಷಸರು; ಮಂಜು ಅಬ್ಬರ
ಬಿಗ್ ಬಾಸ್ ಮನೆಯಲ್ಲಿ ಗಂಧರ್ವರು vs ರಾಕ್ಷಸರು; ಮಂಜು ಅಬ್ಬರ
ಇಂದು ಈ ರಾಶಿಯವರು ಸಾಲದ ವಿಚಾರದಲ್ಲಿ ಸ್ವಲ್ಪ ಜಾಗೃತರಾಗಿರಿ
ಇಂದು ಈ ರಾಶಿಯವರು ಸಾಲದ ವಿಚಾರದಲ್ಲಿ ಸ್ವಲ್ಪ ಜಾಗೃತರಾಗಿರಿ
ಬೆಂಗಳೂರಿನಾದ್ಯಂತ ವರುಣಾರ್ಭಟ: ರಾತ್ರಿ ಮಳೆಗೆ ರಸ್ತೆಗಳು ಜಲಾವೃತ
ಬೆಂಗಳೂರಿನಾದ್ಯಂತ ವರುಣಾರ್ಭಟ: ರಾತ್ರಿ ಮಳೆಗೆ ರಸ್ತೆಗಳು ಜಲಾವೃತ
ಮುಂಬೈನ ಡಿಪೋದಲ್ಲಿ ಭಾರೀ ಬೆಂಕಿ ಅವಘಡ; ಧಗಧಗನೆ ಹೊತ್ತಿ ಉರಿದ ಬಸ್‌ಗಳು
ಮುಂಬೈನ ಡಿಪೋದಲ್ಲಿ ಭಾರೀ ಬೆಂಕಿ ಅವಘಡ; ಧಗಧಗನೆ ಹೊತ್ತಿ ಉರಿದ ಬಸ್‌ಗಳು
ಶಿವರಾಜ್‌ಕುಮಾರ್ ಆಗಮನ ವೇಳೆ ಪಟಾಕಿ ಸ್ಫೋಟ; ತಪ್ಪಿದ ದೊಡ್ಡ ಅಪಾಯ
ಶಿವರಾಜ್‌ಕುಮಾರ್ ಆಗಮನ ವೇಳೆ ಪಟಾಕಿ ಸ್ಫೋಟ; ತಪ್ಪಿದ ದೊಡ್ಡ ಅಪಾಯ
ಹೆಚ್ಚಿತು ಗಾನವಿ, ಯಶಸ್ ನಡುವಿನ ಆಪ್ತತೆ; ಸೌಂದರ್ಯಾ ಶೆಟ್ಟಿ ಕಥೆ ಏನು?
ಹೆಚ್ಚಿತು ಗಾನವಿ, ಯಶಸ್ ನಡುವಿನ ಆಪ್ತತೆ; ಸೌಂದರ್ಯಾ ಶೆಟ್ಟಿ ಕಥೆ ಏನು?