Madhu Bangarappa: ಅಧಿಕಾರ ಸ್ವೀಕರಿಸಿದ ಬಳಿಕ ಮೊದಲು ಸಹಿ ಮಾಡಿದ್ದೇ ಪಠ್ಯ ಪರಿಷ್ಕರಣೆಗೆ; ಮಧು ಬಂಗಾರಪ್ಪ

ಮಕ್ಕಳಿಗೆ ಅಗತ್ಯವಿರುವ ಪಠ್ಯ ಬೋಧನೆ ಮಾಡಿದರೆ ಸಾಕು. ನಾವು ಪ್ರಣಾಳಿಕೆಯಲ್ಲಿ ಹೇಳಿದಂತೆ ಪಠ್ಯ ಪರಿಷ್ಕರಣೆ ಮಾಡಿದ್ದೇವೆ. ಆದರೆ ಬಿಜೆಪಿಯವರು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದು ಅದನ್ನು ತಿರುಚಿದರು. ಆಪರೇಷನ್ ಕಮಲ ಮೂಲಕ ಬಿಜೆಪಿಯವರು ಅಧಿಕಾರಕ್ಕೆ ಬಂದಿದ್ದು. ಸಂವಿಧಾನ ಬಾಹಿರವಾಗಿ ಅಧಿಕಾರಕ್ಕೆ ಬಂದವರು ಪಠ್ಯ ತಿರುಚಿದ್ದರು ಎಂದು ಮಧು ಬಂಗಾರಪ್ಪ ಹೇಳಿದರು.

Madhu Bangarappa: ಅಧಿಕಾರ ಸ್ವೀಕರಿಸಿದ ಬಳಿಕ ಮೊದಲು ಸಹಿ ಮಾಡಿದ್ದೇ ಪಠ್ಯ ಪರಿಷ್ಕರಣೆಗೆ; ಮಧು ಬಂಗಾರಪ್ಪ
ಮಧು ಬಂಗಾರಪ್ಪ
Follow us
|

Updated on: Sep 15, 2023 | 7:26 PM

ಬೆಂಗಳೂರು, ಸೆಪ್ಟೆಂಬರ್ 15: ನಾವು ಅಧಿಕಾರಕ್ಕೆ ಬಂದರೆ ಪಠ್ಯ ಪರಿಷ್ಕರಣೆ ಮಾಡುವುದಾಗಿ ಹೇಳಿದ್ದೆವು. ಅಧಿಕಾರ ಸ್ವೀಕರಿಸಿದ ಬಳಿಕ ಮೊದಲು ಸಹಿ ಮಾಡಿದ್ದೇ ಪಠ್ಯ ಪರಿಷ್ಕರಣೆಗೆ. ಪಠ್ಯ ಪರಿಷ್ಕರಣೆ ಕಡತಕ್ಕೆ ಮೊದಲು ಸಹಿ ಮಾಡಿದ್ದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಹೇಳಿದರು. ಕಾಂಗ್ರೆಸ್​ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದು 100 ದಿನಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಟಿವಿ9 ಕನ್ನಡ ಬೆಂಗಳೂರಿನ ಲಲಿತ್​ ಅಶೋಕ್​​​ ಹೋಟೆಲ್​ನಲ್ಲಿ ಆಯೋಜಿಸಿರುವ ಕನಸಿನ ಕರುನಾಡು (TV9 Karnataka Summit 2023) ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಅಗತ್ಯವಿರುವ ಪಠ್ಯ ಬೋಧನೆ ಮಾಡಿದರೆ ಸಾಕು. ನಾವು ಪ್ರಣಾಳಿಕೆಯಲ್ಲಿ ಹೇಳಿದಂತೆ ಪಠ್ಯ ಪರಿಷ್ಕರಣೆ ಮಾಡಿದ್ದೇವೆ. ಆದರೆ ಬಿಜೆಪಿಯವರು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದು ಅದನ್ನು ತಿರುಚಿದರು. ಆಪರೇಷನ್ ಕಮಲ ಮೂಲಕ ಬಿಜೆಪಿಯವರು ಅಧಿಕಾರಕ್ಕೆ ಬಂದಿದ್ದು. ಸಂವಿಧಾನ ಬಾಹಿರವಾಗಿ ಅಧಿಕಾರಕ್ಕೆ ಬಂದವರು ಪಠ್ಯ ತಿರುಚಿದ್ದರು. ಸಾಂವಿಧಾನಾತ್ಮಕವಾಗಿ ಜನರಿಂದ ಆಯ್ಕೆಯಾದ ನಾವು ಪರಿಷ್ಕರಿಸಿದ್ದೇವೆ. ಕೆಲವು ವ್ಯಕ್ತಿಗಳು ತಿರುಚಿದ್ದ ಪಠ್ಯವನ್ನು ಪರಿಷ್ಕರಣೆ ಮಾಡಿದ್ದೇವೆ ಎಂದು ಮಧು ಬಂಗಾರಪ್ಪ ಹೇಳಿದರು.

ಮಾಧ್ಯಮಗಳಲ್ಲಿ ಬರುವ ಟೀಕೆ ಟಿಪ್ಪಣಿಗಳು ಏನೇ ಇರಲಿ, ನಾವು ಮಾಡುತ್ತಿರುವ ಕೆಲಸದ ಮೇಲೆ ನಮಗೆ ನಂಬಿಕೆ ಇದೆ. ಜನರ ವಿಶ್ವಾಸದಿಂದ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದೇವೆ. ಜನರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಆಡಳಿತ ನೀಡಲಿದ್ದೇವೆ, ನೀಡುತ್ತಿದ್ದೇವೆ ಎಂದು ಅವರು ಹೇಳಿದರು.

ಶಿಕ್ಷಣ ಇಲಾಖೆಯಲ್ಲಿ ಸಮಸ್ಯೆಗಳು, ಸವಾಲುಗಳು ಇವೆ. ಆದರೆ, ನನಗೆ ಕೊಟ್ಟಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದೇನೆ ಎಂಬ ವಿಶ್ವಾಸವಿದೆ. ಜನರಿಗೆ ನನ್ನ ಕೆಲಸದ ಬಗ್ಗೆ ಮೆಚ್ಚುಗೆಯಾಗುವಂತೆ ಕಾರ್ಯನಿರ್ವಹಿಸುತ್ತಿದ್ದೇನೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Ramalinga Reddy: ಇನ್ಮುಂದೆ ಸಾರಿಗೆ ಸಿಬ್ಬಂದಿಗೂ ಪಿಂಚಣಿ; ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಘೋಷಣೆ

ಏನೇ ನೀತಿ ರೂಪಿಸಿದ್ದರೂ ಅದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಾಡಬೇಕು. ನಾನು ಅಧಿಕಾರ ಸ್ವೀಕರಿಸಿದ ಮೊದಲೇ ಮಾಡಿದ ಕೆಲಸ ಪಠ್ಯ ಪರಿಷ್ಕರಣೆಗೆ ಸಹಿ ಮಾಡಿದೆ. ನಾನು ಕಾಂಗ್ರೆಸ್​​ ಚುನಾವಣಾ ಪ್ರಣಾಳಿಕೆ ಸಮಿತಿಯಲ್ಲಿದ್ದೆ. ನಾವು ಜನರಿಗೆ ಕೊಟ್ಟ ಭರವಸೆಯೇ ಅದಾಗಿತ್ತು. ನಾವೇನು ಬದಲಾವಣೆ ಮಾಡಿದೆವು? ಅದು ಮಕ್ಕಳ ವಿರುದ್ಧವಾಗಿರಲಿಲ್ಲ. ಮಕ್ಕಳ ಪರವಾದ ನಿರ್ಧಾರ ನಾವು ಕೈಗೊಂಡೆವು. ಹಿಂದಿನ ಸರ್ಕಾರ ಮಾಡಿರುವ ತಪ್ಪನ್ನು ಸರಿ ಮಾಡುವ ಕೆಲಸ ನಾವು ಮಾಡಿದೆವು ಎಂದು ಅವರು ಹೇಳಿದರು.

ಮೂರು ಪರೀಕ್ಷಾ ವಿಧಾನಗಳನ್ನು ನಾವು ಘೋಷಣೆ ಮಾಡಿದೆವು. ಅದರ ವಿರುದ್ಧ ಬಂದ ಅಭಿಪ್ರಾಯಗಳು ಕೆಲವೇ ಕೆಲವು ಇದ್ದವು. ಅದು ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಅಷ್ಟೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಮಧು ಬಂಗಾರಪ್ಪ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ