ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ; ಶಿರಾದ ಎಮ್ಮೇರಹಳ್ಳಿ ಗೇಟ್​ನಲ್ಲಿ ದುಷ್ಕೃತ್ಯ

ಅಪರಿಚಿತ ಯುವಕರ ಗುಂಪಿನಿಂದ ಸಾದಿಕ್ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಶಿರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ; ಶಿರಾದ ಎಮ್ಮೇರಹಳ್ಳಿ ಗೇಟ್​ನಲ್ಲಿ ದುಷ್ಕೃತ್ಯ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ganapathi bhat

Updated on: Jul 06, 2021 | 5:32 PM

ತುಮಕೂರು: ಹಾಡಹಗಲೇ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆ ಶಿರಾದ ಎಮ್ಮೇರಹಳ್ಳಿ ಗೇಟ್​ನಲ್ಲಿ ನಡೆದಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ 28 ವರ್ಷ ವಯಸ್ಸಿನ ಸಾದಿಕ್ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಿದ ದುಷ್ಕೃತ್ಯ ನಡೆದಿದೆ. ಅಪರಿಚಿತ ಯುವಕರ ಗುಂಪಿನಿಂದ ಸಾದಿಕ್ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಶಿರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ಕೆಲ ದಿನಗಳ ಹಿಂದೆ ಮದನ್ ಹತ್ಯೆ ನಡೆದಿತ್ತು. ಈ ಪ್ರಕರಣದ ಆರೋಪಿಗಳ ಮೇಲೆ ಪೊಲೀಸರಿಂದ ಫೈರಿಂಗ್ ನಡೆದಿದೆ. ಮಹೇಶ್, ನವೀನ್ ಕಾಲಿಗೆ ಪೊಲೀಸರು ಗುಂಡೇಟು ಮಾಡಿದ್ದರು. ಬೆಂಗಳೂರಿನ ಜಯನಗರ ಪಿಐ ಸುದರ್ಶನ್‌, ಎಸಿಪಿ ಶ್ರೀನಿವಾಸ್‌ರಿಂದ ಆರೋಪಿಗಳ ಕಾಲಿಗೆ ತಲಘಟ್ಟಪುರ ಬಳಿಯ ತುರಹಳ್ಳಿ ಫಾರೆಸ್ಟ್‌ನಲ್ಲಿ ಗುಂಡಿನ ದಾಳಿ ನಡೆದಿತ್ತು.

ಕೋರ್ಟ್ ಬಳಿ ಏಳು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಸ್ಥಳ ಮಹಜರಿಗೆ ಕರೆದೊಯ್ದಿದ್ದ ವೇಳೆ ಆರೋಪಿಗಳಾದ ಮಹೇಶ್, ನವೀನ್ PSI ಚಂದನ್, ASI ಲಕ್ಷ್ಮಣ್ ಆಚಾರ್ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ್ದರು. ಶರಣಾಗುವಂತೆ ಸೂಚಿಸಿದರೂ ಕೇಳದೆ ಪರಾರಿಗೆ ಯತ್ನಿಸಿದ್ದರು. ಈ ವೇಳೆ ಆರೋಪಿಗಳ ಕಾಲಿಗೆ ಫೈರಿಂಗ್ ಮಾಡಿ ವಶಕ್ಕೆ ಪಡೆಯಲಾಗಿತ್ತು. PSI ಚಂದನ್, ASI ಲಕ್ಷ್ಮಣ್ ಆಚಾರ್ ಕೈಗೆ ಗಾಯಗಳಾಗಿತ್ತು. ಹಾಗೂ ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.

ಹಿನ್ನೆಲೆ ಸಿದ್ದಾಪುರ ಕಿಂಗ್ ಪಟ್ಟಕ್ಕಾಗಿ ಮದನ್ ಕೊಲೆ ಮಾಡಲಾಗಿತ್ತು. ಹತ್ಯೆಯಾಗಿರೊ ಶಾಂತಿನಗರ ಲಿಂಗನ ಶಿಷ್ಯನಾಗಿದ್ದ ಮಹೇಶ. ಬದುಕಿದ್ದಾಗಲೇ ಮಹೇಶ್ ಸಿದ್ದಾಪುರನ ಕಿಂಗ್ ಮಾಡ್ತಿನಿ ಎಂದು ಲಿಂಗ ಹೇಳುತ್ತಿದ್ದ. ಇದೇ ಕಾರಣಕ್ಕೆ 2020 ರಲ್ಲಿ ಲಿಂಗನನ್ನು ಸಿದ್ದಾಪುರ ನಾಗ &ಟೀಂ ಕೊಲೆ ಮಾಡಿದ್ದರು. ಸದ್ಯ ಸಿದ್ದಾಪುರ ನಾಗ ಜೈಲಿನಲ್ಲಿದ್ದಾನೆ. ಇದೇ ಕೊಲೆ ರಿವೆಂಜ್ ಗಾಗಿ ನಾಗನಿಗೆ ಸ್ಪಾಟ್ ಫಿಕ್ಸ್ ಮಾಡಲು ಮಹೇಶ್ & ಟೀಂ ಸ್ಕೆಚ್ ರೆಡಿ ಮಾಡಿದ್ದರು.

ಈ ವಿಷಯ ಲೀಕ್ ಆಗಿ, ಮಹೇಶ್ ಹತ್ಯೆಗೆ ನಾಗ ಜೈಲಲ್ಲಿದ್ದುಕೊಂಡೇ ಹುಡುಗರನ್ನು ರೆಡಿ ಮಾಡಿದ್ದ. ಹೀಗಾಗಿ ಜೈಲು ಸೇರೋದು ಸೇಫ್ ಅಂತ ಡಿಸೈಡ್ ಮಾಡಿದ್ದರು. ಜೈಲು‌ ಸೇರಲು ಕೊಲೆ ಮಾಡಿಯೇ‌ ಹೋಗ್ಬೇಕು ಅಂತ ನಾಗನಿಗೆ ಫೈನಾನ್ಸ್ ಮಾಡ್ತಿದ್ದ ಮೃತ ಮದನ್ಗೆ ಮುಹೂರ್ತ ಫಿಕ್ಸ್ ಮಾಡಿದ್ದ. ಬಳಿಕ ಮದನ್ ಕೊಲೆಗೆ ಲಿಂಗ ಶಿಷ್ಯಂದಿರಾದ ಎಸ್.ಆರ್ ನಗರ ಗಿರಿ, ಪ್ರಕಾಶ್ ಸಾಥ್ ನೀಡಿದ್ದರು. ಸದ್ಯ ಎಸ್ಕೇಪ್ ಆಗಿರೊ 3 ಜನ ಆರೋಪಿಗಳಿಗೆ ಹುಡುಕಾಟ ನಡೆಯುತ್ತಿದೆ. ಮಹೇಶ್ ಈ ಹಿಂದೆ ಕೂಡ ಹಲವು ಕೇಸ್ನಲ್ಲಿ ಜೈಲು ಸೇರಿದ್ದ.

ಇದನ್ನೂ ಓದಿ: ನವಜಾತ ಶಿಶು ಕೊಲೆ ಪ್ರಕರಣ: ಬಂಧಿತ ಮಹಿಳೆಯಿಂದ ಕ್ಷಣಕ್ಕೊಂದು ಹೇಳಿಕೆ; ಶಿಶು, ಮಹಿಳೆಯ ಡಿಎನ್​ಎ ಪರೀಕ್ಷೆಗೆ ನಿರ್ಧಾರ

Rekha Kadiresh: ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ.. ಮತ್ತೋರ್ವ ಆರೋಪಿ ಅರೆಸ್ಟ್

ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು