Video: ಸಾಂಸ್ಕೃತಿಕನಗರಿ ಮೈಸೂರಿನಲ್ಲೊಂದು ವಿಚಿತ್ರ ಜಾತ್ರೆ; ಇಲ್ಲಿ ಭಕ್ತಿಗಿಂತ ಶಕ್ತಿಗೆ ಹೆಚ್ಚಿನ ಮಹತ್ವ

ಜಾತ್ರೆ ಅಂದರೆ ನಮ್ಮ ಕಣ್ಣುಮುಂದೆ ಬರುವುದು ಊರದೇವತೆಯ ಮೆರವಣಿಗೆ, ಶ್ರದ್ದಾ ಭಕ್ತಿಯ ಸಮ್ಮಿಲನ. ಆದ್ರೆ, ಸಾಂಸ್ಕೃತಿಕ ನಗರಿ ಮೈಸೂರಿನ ಕುರುಬಾರಳ್ಳಿಯ ನಡೆಯುವ ಜಾತ್ರೆ ಮಾತ್ರ ಪುಲ್ ಡಿಫರೆಂಟ್.ಇಲ್ಲಿ ಭಕ್ತಿಗಿಂತ ಶಕ್ತಿಗೆ ಹೆಚ್ಚಿನ ಮಹತ್ವವಿದೆ.

Follow us
ರಾಮ್​, ಮೈಸೂರು
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 29, 2023 | 6:08 PM

ಮೈಸೂರು, ಅ.29: ನಗರದ ಕುರುಬಾರಹಳ್ಳಿಯಲ್ಲಿ ಬನ್ನಿ ಮಹಾಕಾಳೇಶ್ವರಿ ಜಾತ್ರೆ(Mahakaleshwar Jatre) ನಡೆಯುತ್ತದೆ. ಈ ದೇವಿ ಜಾತ್ರೆಗೆ ತನ್ನದೇ ಆದ ಐತಿಹಾಸಿಕ ಹಿನ್ನಲೆ ಇದೆ. ಶತಮಾನಗಳಿಂದ ಇಲ್ಲಿ ದೇವಿಯ ಜಾತ್ರೆಯನ್ನು ನಡೆಸಲಾಗುತ್ತಿದೆ. ಎಲ್ಲೆಡೆ ರಥಗಳಲ್ಲಿ ಅಥವಾ ತೆರೆದ ಜೀಪಿನಲ್ಲಿ ದೇವಿಯ ಉತ್ಸವ ಮೂರ್ತಿ ಇಟ್ಟು ಮೆರವಣಿಗೆ ಮಾಡುವುದು ವಾಡಿಕೆ. ಆದ್ರೆ, ಇಲ್ಲಿಯ ಮೆರವಣಿಗೆಯೇ ವಿಭಿನ್ನ. ತಾಯಿ ಬನ್ನಿ ಮಹಾಕಾಳೇಶ್ವರಿಯ ಮೂರ್ತಿಯನ್ನು ಬಿದಿರಿನ ಬೊಂಬಿನಲ್ಲಿ ಇಟ್ಟು ಮೆರವಣಿಗೆ ಮಾಡಲಾಗುತ್ತದೆ. ದೇವಿಗೆ ವಿಶೇಷವಾಗಿ ಹೂವಿನ ಅಲಂಕಾರ ಮಾಡಲಾಗುತ್ತದೆ. ರಾಜ ಮಹಾರಾಜರ ಕಾಲದಿಂದಲೂ ಈ ಆಚರಣೆಯನ್ನು ಹೀಗೆಯೆ ನಡೆಸಿಕೊಂಡು ಬರಲಾಗುತ್ತಿದೆ.

ಈ ಜಾತ್ರೆಯಲ್ಲಿ ಜನ ಏಳೋದು ಬೀಳೋದು ಸಾಮಾನ್ಯ. ನೂರಾರು ಜನ ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಜನರಲ್ಲೆ ಎರಡು ಗುಂಪುಗಳನ್ನಾಗಿ ಮಾಡಲಾಗುತ್ತದೆ. ಒಂದು ಗುಂಪು ದೇವಿಯ ಮುಂಭಾಗದಲ್ಲಿದ್ರೆ, ಮತ್ತೊಂದು ಗುಂಪು ದೇವಿಯ ಹಿಂಭಾಗದಲ್ಲಿರುತ್ತೆ. ಮುಂದಿನ ಗುಂಪು ದೇವಿಯ ಉತ್ಸವದ ಮೂರ್ತಿಯನ್ನು ಹಿಂದಕ್ಕೆ ತಳ್ಳಿದ್ರೆ. ಹಿಂದಿನ ಗುಂಪು ಮುಂದಕ್ಕೆ ತಳ್ಳುವ ಕೆಲಸ ಮಾಡುತ್ತೆ. ಇದರಿಂದ ದೇವಿಯನ್ನು ತೂಗಿಸಿದಂತಾಗಿ, ದೇವಿ ಸಂಪ್ರೀತಳಾಗುತ್ತಾಳೆ. ಸಕಲರಿಗೂ ಸನ್ಮಂಗಳವನ್ನುಂಟು ಮಾಡುತ್ತಾಳೆ ಎನ್ನುವುದು ಜನರ ನಂಬಿಕೆ. ಹೀಗಾಗಿ ಹಿರಿಯರು ಪ್ರಾರಂಭಿಸಿರುವ ಈ ಜಾತ್ರೆಯನ್ನು ಯುವ ಪೀಳಿಗೆ ಮುಂದುವರಿಸಿಕೊಂಡು ಬರುತ್ತಿದೆ. ಈ ಜಾತ್ರೆಯಲ್ಲಿ ಭಾಗವಹಿಸಿದ್ರೆ ಸಕಲವೂ ಒಳಿತಾಗುತ್ತದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ.

ಇದನ್ನೂ ಓದಿ:ಹಾಸನಾಂಭೆ ಉತ್ಸವ ಸಂಪನ್ನ: ಪುನೀತ್ ರಾಜಕುಮಾರ್ ಪುತ್ಥಳಿ ಜೊತೆ ಬಂದು ದೇವಿಯ ದರ್ಶನ ಮಾಡಿದ ಅಪ್ಪು ಅಭಿಮಾನಿಗಳು!

ಮುಂದೆಯೂ ಇದೇ ರೀತಿ ಜಾತ್ರೆಯನ್ನು ನಡೆಸುವ ಉದ್ದೇಶವನ್ನು ಎಲ್ಲರೂ ಹೊಂದಿದ್ದಾರೆ. ಎಲ್ಲೆಡೆ ನಡೆಯುವ ಜಾತ್ರೆಗಳಿಗಿಂತ ಕುರುಬಾರಳ್ಳಿಯಲ್ಲಿ ನಡೆಯುವ ಜಾತ್ರೆ ವಿಭಿನ್ನವಾಗಿದೆ. ಒಟ್ಟಾರೆ ಆಧುನಿಕತೆಯ ಭರಾಟೆಯಲ್ಲೂ ಜನ ನಮ್ಮ ಆಚಾರ ವಿಚಾರ ಸಂಪ್ರದಾಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ