ಮೈಸೂರು: ಮನೆಯೊಂದರಲ್ಲಿ 10 ಬಗೆಯ ಹಾವುಗಳ ಸಂಗ್ರಹಣೆ, ಓರ್ವ ಅರೆಸ್ಟ್

ಮೈಸೂರಿನ ರಾಜೀವ್‌ನಗರದ ಮನೆಯಲ್ಲಿ ಅಕ್ರಮವಾಗಿ ಹಾವುಗಳನ್ನು ಇಟ್ಟುಕೊಂಡಿದ್ದ ಆರೋಪಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಆರೋಪಿ ಬಳಿ ಇದ್ದ 10 ಬಗೆಯ ಹಾವುಗಳು ಸೇರಿದಂತೆ ಹಾವಿನ ವಿಷವನ್ನು ತೆಗೆಯುವ ಯಂತ್ರವನ್ನು ಕೂಡ ವಶಕ್ಕೆ ಪಡೆದು, ಆರೋಪಿ ವಿರುದ್ಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.

ಮೈಸೂರು: ಮನೆಯೊಂದರಲ್ಲಿ 10 ಬಗೆಯ ಹಾವುಗಳ ಸಂಗ್ರಹಣೆ, ಓರ್ವ ಅರೆಸ್ಟ್
ಆರೋಪಿ ಅರೆಸ್ಟ್
Edited By: ಕಿರಣ್ ಹನುಮಂತ್​ ಮಾದಾರ್

Updated on: Sep 27, 2023 | 7:22 AM

ಮೈಸೂರು, ಸೆ.27: ಮನೆಗಳಲ್ಲಿ ಬೆಕ್ಕು, ನಾಯಿ, ಹಸು ಸೇರಿದಂತೆ ಇನ್ನಿತರ ಪ್ರಾಣಿಗಳನ್ನು ಸಾಕುವುದು ಸರ್ವೇ ಸಾಮಾನ್ಯ. ಆದರೆ, ಇಲೊಬ್ಬ ಆಸಾಮಿ ಮನೆಯಲ್ಲಿ ಅಕ್ರಮವಾಗಿ ಅಪರೂಪದ ಹಾವು (Snake)ಗಳನ್ನು ಸಂಗ್ರಹಿಸಿ, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಹೌದು, ಮೈಸೂರು(Mysore) ಸಿಐಡಿ ಅರಣ್ಯ ಸಂಚಾರಿ ದಳ ಸಿಬ್ಬಂದಿಯವರು ಖಚಿತ ಮಾಹಿತಿ ಮೇರೆಗೆ ಆರೋಪಿ ಸಂದೀಪ್ ಅಲಿಯಾಸ್ ದೀಪು ಎಂಬಾತನ ಮನೆಗೆ ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಹಾವುಗಳನ್ನು ರಕ್ಷಣೆ ಮಾಡಿ, ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.

10 ಬಗೆಯ ಹಾವು ಸಂಗ್ರಹಣೆ

ಇನ್ನು ಆರೋಪಿ ಸಂದೀಪ್ ಮೈಸೂರಿನ ರಾಜೀವ್‌ನಗರದ ತನ್ನ ಮನೆಯಲ್ಲಿ ಅಕ್ರಮವಾಗಿ ಹಾವುಗಳನ್ನು ಇಟ್ಟುಕೊಂಡಿದ್ದ. ಇದೀಗ ಆತನನ್ನು ಬಂಧಿಸಲಾಗಿದ್ದು, ಆರೋಪಿ ಬಳಿ ಇದ್ದ 4 ನಾಗರಹಾವು, 4 ಮಣ್ಣುಮುಕ್ಕ ಹಾವು, 2 ಆಭರಣದ ಹಾವು, 2ಕಟ್ಟಾವು, 1 ತೋಳದ ಹಾವು, 1 ಪಚ್ಚೆ ಹಾವು, 2 ಗರಗಸ ಮಂಡಲ ಹಾವು, 2 ಕೇರೆ ಹಾವು, 1 ನೀರು ಹಾವು, 4 ಪುನುಗು ಬೆಕ್ಕು ಸೇರಿ ಆತನ ಬಳಿಯಿದ್ದ ಹಾವಿನ ವಿಷವನ್ನು ತೆಗೆಯುವ ಯಂತ್ರವನ್ನು ಕೂಡ ವಶಕ್ಕೆ ಪಡೆದು, ಆರೋಪಿ ವಿರುದ್ಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ:ಹಾವು ತಿನ್ನಲು ಬಾತ್ ರೂಮಿಗೆ ನುಗ್ಗಿದ ಮತ್ತೊಂದು ಬೃಹತ್​​ ನಾಗ, ಎಷ್ಟು ದೊಡ್ಡದು ಅಂದರೆ… ವಿಡಿಯೋ ನೋಡಿ ಬಿಡಿ

ಎರಡು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು

ತುಮಕೂರು: ಎರಡು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಮಂಗಳವಾಡ ಗ್ರಾಮದಲ್ಲಿ‌ ನಡೆದಿದೆ. ಕೋಟಬಂಡೆ ಗ್ರಾಮದ ಈಶ್ವರಪ್ಪ(36), ನಾಗರಾಜು(42) ಮೃತ ರ್ದುದೈವಿಗಳು. ಇನ್ನು ಓರ್ವನಿಗೆ ಗಂಭೀರ ‌ ಗಾಯವಾಗಿದ್ದು, ಗೌರಸಂದ್ರ ಮಾರಮ್ಮ ಜಾತ್ರೆ ಮುಗಿಸಿ ಹಿಂದಿರುಗುವಾಗ ಈ ದುರ್ಘಟನೆ ನಡೆದಿದೆ. ಮೃತದೇಹಗಳನ್ನು ಪಾವಗಡ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಸ್ಥಳಕ್ಕೆ ಅರಸೀಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
Follow Us