ಸಾಂಸ್ಕೃತಿಕ ನಗರಿಯಲ್ಲಿ ಸುಗ್ಗಿ ಸಂಭ್ರಮ: ಕಲರ್ಪುಲ್ ವೇದಿಕೆಯಲ್ಲಿ ಕಲಾತಂಡಗಳ ಕಲರವ
ಮೈಸೂರಿನ ಕಲಾಮಂದಿರದಲ್ಲಿ ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಕರ್ನಾಟಕ ಜಾನಪದ ಅಕಾಡೆಮಿಯಿಂದ ಜಾನಪದ ಸುಗ್ಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಲಾತಂಡಗಳು ಪ್ರದರ್ಶಿಸಿದ ಕಲಾವೈಭವದ ಚಿತ್ರೋಟ ಇಲ್ಲಿದೆ, ಕಣ್ತುಂಬಿಕೊಳ್ಳಿ.

ಮೈಸೂರು: ಕಲರ್‌ಫುಲ್ ವೇದಿಕೆಯಲ್ಲಿ ಮೇಳೈಸಿದ ಜಾನಪದದ ರಂಗು. ಪೂಜಾಕುಣಿತ, ಕಂಸಾಳೆ, ವೀರಗಾಸೆ, ನಗಾರಿ ತಂಡ, ಚಿಟ್ ಮೇಳ, ಡೊಳ್ಳು ಕುಣಿತ, ಗೊರವರ ಕುಣಿತ, ಕೊಡವರ ಸಾಂಪ್ರದಾಯಿಕ ನೃತ್ಯ.. ಹೀಗೆ ಒಂದೇ ವೇದಿಕೆಯಲ್ಲಿ ನಾನಾ ಜಾನಪದ ನೃತ್ಯಗಳು ಅನಾವರಣಗೊಂಡವು.
ನಿನ್ನೆ ಮೈಸೂರಿನ ಕಲಾಮಂದಿರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಆ ಹಬ್ಬ ಜಾನಪದ ಹಬ್ಬವಾಗಿತ್ತು. ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಕರ್ನಾಟಕ ಜಾನಪದ ಅಕಾಡೆಮಿಯಿಂದ ಜಾನಪದ ಸುಗ್ಗಿ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹತ್ತಕ್ಕೂ ಹೆಚ್ಚು ಕಲಾತಂಡಗಳು ಭಾಗವಹಿಸಿ ತಮ್ಮ ಕಲೆಯನ್ನ ಪ್ರದರ್ಶನ ಮಾಡಿದ್ವು.
ಜಾನಪದ ಸುಗ್ಗಿ ಲೋಕದ ಅನಾವರಣ ಕಾರ್ಯಕ್ರಮದಲ್ಲಿ ಸಾಕಷ್ಟು ಯುವ ಸಮೂಹ ಕೂಡ ಪಾಲ್ಗೊಂಡು ತಮಟೆ, ಡೊಳ್ಳಿನ ಶಬ್ದಕ್ಕೆ ಸಖತ್ ಸ್ಟೆಪ್ಸ್ ಹಾಕಿ ಎಂಜಾಯ್ ಮಾಡಿದ್ರು. ಸಾಕಷ್ಟು ದಿನಗಳಿಂದ ಆನ್ಲೈನ್ ಕ್ಲಾಸ್ ಹಾಗೂ ಮನೆಯಲ್ಲಿದ್ದು ಬೋರಾಗಿದ್ದ ವಿದ್ಯಾರ್ಥಿಗಳಿಗೆ ಜಾನಪದ ಸುಗ್ಗಿ ಕಾರ್ಯಕ್ರಮ ಹೊಸ ಲೋಕಕ್ಕೆ ಕರೆದುಕೊಂಡು ಹೋಯ್ತು.
ಒಟ್ಟಾರೆ, ಜಾನಪದ ಕಲೆಗಳನ್ನು ನಗರದ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಸಹಕಾರಿಯಾಗಿತ್ತು. ಜೊತೆಗೆ ಕೊರೊನಾದಿಂದ ಇಷ್ಟು ದಿನ ಮನೆಯಲ್ಲಿದ್ದ ಕಲಾವಿದರಿಗೂ ಈ ಕಾರ್ಯಕ್ರಮ ಹೊಸ ಆರಂಭ ನೀಡಿತು.









ಜಾನಪದ ಜಾತ್ರೆಯಲ್ಲಿ ಕಿಕ್ಕೇರಿಸೋ ದಂಗಲ್, ಗೆದ್ದು ಬೀಗಿದ ಕುಸ್ತಿಪಟುಗಳು!




