ಮೈಮುಲ್ ಅಧ್ಯಕ್ಷ ರಾಜೀನಾಮೆ, ಸಿಎಂ ಆಪ್ತ ಸಚಿವರ ಕಿರುಕುಳಕ್ಕೆ ರಿಸೈನ್ ಮಾಡಿದ್ರಾ?

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ (ಮುಡಾ) ಬಹುಕೋಟಿ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ. ಮುಡಾದಿಂದ ಸಿಎಂ ಸಿದ್ದರಾಮಯ್ಯನವರ ಪತ್ನಿಗೆ ಸೈಟ್ ಹಂಚಿಕೆ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದ್ದು, ಇದು ಭಾರೀ ಸಂಚಲನ ಮೂಡಿಸಿದೆ. ಇದರ ಬೆನ್ನಲ್ಲೇ ಇದೀಗ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಮೈಮುಲ್) ಅಧ್ಯಕ್ಷ ರಾಜೀನಾಮೆ ನೀಡಿದ್ದಾರೆ. ಸಚಿವರ ಕಿರುಕುಳಕ್ಕೆ ಬೇಸತ್ತ ಮೈಮುಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ಮೈಮುಲ್ ಅಧ್ಯಕ್ಷ ರಾಜೀನಾಮೆ, ಸಿಎಂ ಆಪ್ತ ಸಚಿವರ ಕಿರುಕುಳಕ್ಕೆ ರಿಸೈನ್ ಮಾಡಿದ್ರಾ?
ಪಿ.ಎಂ.ಪ್ರಸನ್ನ
Follow us
| Updated By: ರಮೇಶ್ ಬಿ. ಜವಳಗೇರಾ

Updated on: Jul 02, 2024 | 10:21 PM

ಮೈಸೂರು,(ಜುಲೈ 02): ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಮೈಮುಲ್‌) ಅಧ್ಯಕ್ಷ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಿರಿಯಾಪಟ್ಟಣ ಜೆಡಿಎಸ್‌ ಮಾಜಿ ಶಾಸಕ ಕೆ ಮಹದೇವ್‌ ಅವರ ಪುತ್ರ ಪಿ.ಎಂ. ಪ್ರಸನ್ನ ಅವರು ಮೈಮುಲ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಚಿವ ಕೆ ವೆಂಕಟೇಶ್ ಅವರ ಕಿರುಕುಳಕ್ಕೆ ಬೇಸತ್ತು ಪ್ರಸನ್ನ ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ಸಚಿವ ಕೆ.ವೆಂಕಟೇಶ್ ಅವರು 6 ತಿಂಗಳಲ್ಲಿ 24 ನೋಟಿಸ್ ಕೊಟ್ಟು ಕಿರುಕುಳ ನೀಡುತ್ತಿದ್ದಾರೆ ಎಂದು ಇತ್ತೀಚೆಗಷ್ಟೇ ಪ್ರಸನ್ನ ಅವರು ಆರೋಪಿಸಿದ್ದರು. ಅಲ್ಲದೇ ಸಚಿವರು ತಮ್ಮ ಪುತ್ರನ ಭವಿಷ್ಯಕ್ಕಾಗಿ ಕಿರುಕುಳ ನೀಡಿದ್ದಾರೆ ಎಂದು ಕಳೆದ ವಾರ ಅಷ್ಟೇ ಬಹಿರಂಗವಾಗಿ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಪ್ರಸನ್ನ ಅವರು ದಿಢೀರ್ ಅಂತ ತಮ್ಮ ಮೈಮುಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದ್ರೆ, ಈವರೆಗೂ ರಾಜೀನಾಮೆ ಅಂಗೀಕಾರವಾಗಿಲ್ಲ‌.

ಇದನ್ನೂ ಓದಿ: ಸಿಎಂ ಆಪ್ತ, ಸಚಿವ ಕೆ ವೆಂಕಟೇಶ್​​ನಿಂದ ಮೈಮುಲ್ ಅಧ್ಯಕ್ಷನಿಗೆ ಕಿರುಕುಳ, ಆರೋಪ

ಶಾಸಕ ಜಿ.ಟಿ. ದೇವೇಗೌಡ ಬಣದಲ್ಲಿ ಗುರುತಿಸಿಕೊಂಡಿದ್ದ ಪಿ.ಎಂ. ಪ್ರಸನ್ನ ಅವರು 2021ರಲ್ಲಿ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿ. (ಮೈಮುಲ್‌) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಮೈಮುಲ್‌ ಆಡಳಿತ ಮಂಡಳಿಯಲ್ಲಿ ಚುನಾಯಿತ 15 ಮಂದಿ ಸೇರಿದಂತೆ ಒಟ್ಟು 20 ನಿರ್ದೇಶಕರು ಇದ್ದಾರೆ. ಇದರಲ್ಲಿ 12 ನಿರ್ದೇಶಕರು ಜಿ.ಟಿ. ದೇವೇಗೌಡ ಬಣದಲ್ಲಿ ಗುರುತಿಸಿಕೊಂಡಿರುವುದರಿಂದ ಈ ಬಣಕ್ಕೆ ಬಹುಮತವಿತ್ತು. ಅಧ್ಯಕ್ಷ ಸ್ಥಾನಕ್ಕೆ ಪ್ರಸನ್ನ ಅವರನ್ನು ಕಣಕ್ಕಿಳಿಸುವ ಸಂಬಂಧ ಜಿ.ಟಿ. ದೇವೇಗೌಡರು ನಿರ್ಧಾರ ತೆಗೆದುಕೊಂಡಿದ್ದರು. ಅದರಂತೆ ಎರಡನೇ ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿರುವ ಪ್ರಸನ್ನ ಅವರು ಅವಿರೋಧವಾಗಿ ಮೈಮುಲ್‌ ಅಧ್ಯಕ್ಷರಾಗಿದ್ದರು.

ಡಿಸೆಂಬರ್ ನಲ್ಲಿ ನಡೆಯಬೇಕಿದ್ದ ಎಂಡಿಸಿಸಿ ಬ್ಯಾಂಕ್ (MDCC Bank) ಚುನಾವಣೆಯನ್ನು ರಾಜ್ಯ ಸರ್ಕಾರ ಮುಂದೂಡಿತ್ತು. ಅಲ್ಲದೇ ಜಿ.ಟಿ ದೇವೇಗೌಡ (GT Devegowda) ಮಗ, ಶಾಸಕ ಹರೀಶ್ ಗೌಡನನ್ನು ಅಪೇಕ್ಸ್ ಬ್ಯಾಂಕ್ ಉಪಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದೂ ಆಯ್ತು. ಬಳಿಕ ಮೈಮೂಲ್ ವಶ ಪಡಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಪ್ಲ್ಯಾನ್ ಮಾಡಿದ್ದರು. ಇದಕ್ಕಾಗಿ ಸಚಿವ ವೆಂಕಟೇಶ್​ ಅವರನ್ನು ಮುಂದೆ ಬಿಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು.

ಇನ್ನು ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್ ಮೂಲಕ ಆಪರೇಷನ್ ನಡೆಯುತ್ತಿದ್ದು, ವಾಸಸ್ಥಳ ದೃಢೀಕರಣ ವಿಚಾರವಾಗಿಯೇ ಹೆಚ್ಚು ಬಾರಿ ನೋಟೀಸ್ ಕೊಟ್ಟು ಕಿರುಕುಳ ನೀಡಲಾಗುತ್ತದೆ. ಮೈಮೂಲ್ ಇತರ ಸದಸ್ಯರನ್ನು ಬೆದರಿಸುವ ಮೂಲಕ ಪ್ರಸನ್ನ ಮೇಲೆ ಒತ್ತಡ ಹೇರಲಾಗುತ್ತಿದೆ. ಈ ಮೂಲಕ ಸದ್ಯ ಸಚಿವ ವೆಂಕಟೇಶ್ ವಿರುದ್ಧ ದ್ವೇಷ ರಾಜಕಾರಣದ ಗಂಭೀರ ಆರೋಪ ಕೇಳಿಬಂದಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ
ಮುಂಬೈ: ಮುಗಿಲು ಮುಟ್ಟಿದ ಸಂಭ್ರಮ: ರೋಹಿತ್​, ಕೊಹ್ಲಿ ಪರ ಫ್ಯಾನ್ಸ್​ ಘೋಷಣೆ
ಮುಂಬೈ: ಮುಗಿಲು ಮುಟ್ಟಿದ ಸಂಭ್ರಮ: ರೋಹಿತ್​, ಕೊಹ್ಲಿ ಪರ ಫ್ಯಾನ್ಸ್​ ಘೋಷಣೆ
ರಾಮನಗರ ಬಿಬಿಎಂಪಿ ವ್ಯಾಪ್ತಿಗೆ ಸೇರಿಸುವ ಡಿಕೆಶಿ ಆಶಯಕ್ಕೆ ರಾಜಣ್ಣ ಸ್ವಾಗತ
ರಾಮನಗರ ಬಿಬಿಎಂಪಿ ವ್ಯಾಪ್ತಿಗೆ ಸೇರಿಸುವ ಡಿಕೆಶಿ ಆಶಯಕ್ಕೆ ರಾಜಣ್ಣ ಸ್ವಾಗತ
ಟೀಮ್ ಇಂಡಿಯಾ ವಿಜಯೋತ್ಸವ: ಎಲ್ಲಿ ನೋಡಿದರಲ್ಲಿ ಜನ, ಅಭಿಮಾನಿಗಳ ಸಂಭ್ರಮ
ಟೀಮ್ ಇಂಡಿಯಾ ವಿಜಯೋತ್ಸವ: ಎಲ್ಲಿ ನೋಡಿದರಲ್ಲಿ ಜನ, ಅಭಿಮಾನಿಗಳ ಸಂಭ್ರಮ
ದರ್ಶನ್​ ಈಗ ಜಾಮೀನು ಕೇಳೋಕೆ ಆಗಲ್ಲ: ಕಾರಣ ತಿಳಿಸಿದ ಲಾಯರ್​
ದರ್ಶನ್​ ಈಗ ಜಾಮೀನು ಕೇಳೋಕೆ ಆಗಲ್ಲ: ಕಾರಣ ತಿಳಿಸಿದ ಲಾಯರ್​
ಮುಂಬೈನಲ್ಲಿ ಟೀಂ ಇಂಡಿಯಾ ಭರ್ಜರಿ ರೋಡ್​ ಶೋ
ಮುಂಬೈನಲ್ಲಿ ಟೀಂ ಇಂಡಿಯಾ ಭರ್ಜರಿ ರೋಡ್​ ಶೋ
ಜಮೀನು ಬೆಲೆ ₹ 62 ಕೋಟಿ ಆಗುತ್ತೆ, ಮುಡಾ ನಮಗೆ ಹಣ ಕೊಡಲಿ: ಸಿದ್ದರಾಮಯ್ಯ
ಜಮೀನು ಬೆಲೆ ₹ 62 ಕೋಟಿ ಆಗುತ್ತೆ, ಮುಡಾ ನಮಗೆ ಹಣ ಕೊಡಲಿ: ಸಿದ್ದರಾಮಯ್ಯ
ವಾವ್​! ಮಳೆಯಿಂದಾಗಿ ಮತ್ತೆ ಜೀವ ಕಳೆ ಪಡೆದ ಸಿರಿಮನೆ ಜಲಪಾತ
ವಾವ್​! ಮಳೆಯಿಂದಾಗಿ ಮತ್ತೆ ಜೀವ ಕಳೆ ಪಡೆದ ಸಿರಿಮನೆ ಜಲಪಾತ
ಸ್ವೀಟ್​ ಅಂಗಡಿಗಳ ಮೇಲೆ ದಾಳಿ; ಪತ್ತೆಯಾಯ್ತು ಕ್ಯಾನ್ಸರ್​ ಕಾರಕ ಅಂಶ
ಸ್ವೀಟ್​ ಅಂಗಡಿಗಳ ಮೇಲೆ ದಾಳಿ; ಪತ್ತೆಯಾಯ್ತು ಕ್ಯಾನ್ಸರ್​ ಕಾರಕ ಅಂಶ
ಮುಡಾ ನೀಡಿದ್ದನ್ನೇ ಸಿಎಂ ಪತ್ನಿ ಸ್ವೀಕರಿಸಿದ್ದು ಅಪರಾಧವಾಗಿದೆ: ಪೊನ್ನಣ್ಣ
ಮುಡಾ ನೀಡಿದ್ದನ್ನೇ ಸಿಎಂ ಪತ್ನಿ ಸ್ವೀಕರಿಸಿದ್ದು ಅಪರಾಧವಾಗಿದೆ: ಪೊನ್ನಣ್ಣ
ಧುಮ್ಮಿಕ್ಕಿ ಹರಿಯುವ ಜಲಪಾತದಲ್ಲಿ ಯುವಕನಿಂದ ಮೀನು ಹಿಡಿಯುವ ಹುಚ್ಚು ಸಾಹಸ!
ಧುಮ್ಮಿಕ್ಕಿ ಹರಿಯುವ ಜಲಪಾತದಲ್ಲಿ ಯುವಕನಿಂದ ಮೀನು ಹಿಡಿಯುವ ಹುಚ್ಚು ಸಾಹಸ!