Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್‌ನವರು ಯಾವತ್ತಾದರೂ ಬಿಜೆಪಿಯನ್ನ ಹೊಗಳಿದ್ದಾರಾ? ನಮ್ಮ ಸರ್ಕಾರಕ್ಕೆ ಪ್ರಚಾರದ ಹುಚ್ಚು ಇಲ್ಲ -ಕೋಟ ಶ್ರೀನಿವಾಸ ಪೂಜಾರಿ

ಬೊಮ್ಮಾಯಿ ಅವರ ಸರ್ಕಾರ ಸರ್ವರಿಗೂ ನ್ಯಾಯ ಕೊಡುವ ದಿಕ್ಕಿನಲ್ಲಿ ಕಠಿಣವಾದ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡಿದೆ. ಹಿಜಾಬ್ ಸೇರಿದಂತೆ ಎಲ್ಲ ಪ್ರಕರಣವನ್ನು ಕಾನೂನು ಚೌಕಟ್ಟಿನಲ್ಲಿ ಬಗೆಹರಿಸಿದೆ. ಯಾರಿಗೂ ಆತಂಕ ಬೇಡ, ಎಲ್ಲದಕ್ಕೂ ನಾವು ಉತ್ತರ ಕೊಡಲು ಸಿದ್ಧವಿದ್ದೇವೆ -ಕೋಟ ಶ್ರೀನಿವಾಸ ಪೂಜಾರಿ

ಕಾಂಗ್ರೆಸ್‌ನವರು ಯಾವತ್ತಾದರೂ ಬಿಜೆಪಿಯನ್ನ ಹೊಗಳಿದ್ದಾರಾ? ನಮ್ಮ ಸರ್ಕಾರಕ್ಕೆ ಪ್ರಚಾರದ ಹುಚ್ಚು ಇಲ್ಲ -ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ
Follow us
TV9 Web
| Updated By: ಆಯೇಷಾ ಬಾನು

Updated on:Apr 08, 2022 | 11:27 AM

ಮೈಸೂರು: ಅಲ್ಖೈದಾ ಹೇಳಿಕೆ ಹಿಂದೆ RSS ಕೈವಾಡವಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಮೈಸೂರಿನಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ಕೊಟ್ಟಿದ್ದಾರೆ. ಕಾಂಗ್ರೆಸ್‌ನವರು ಯಾವತ್ತಾದರೂ ಬಿಜೆಪಿಯನ್ನ ಹೊಗಳಿದ್ದಾರಾ? ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಯಾವಾಗ ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಬದ್ದವಾಗಿದೆ ಅಂದಿದ್ದಾರೆ? ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಬೊಮ್ಮಾಯಿ ಅವರ ಸರ್ಕಾರ ಸರ್ವರಿಗೂ ನ್ಯಾಯ ಕೊಡುವ ದಿಕ್ಕಿನಲ್ಲಿ ಕಠಿಣವಾದ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡಿದೆ. ಹಿಜಾಬ್ ಸೇರಿದಂತೆ ಎಲ್ಲ ಪ್ರಕರಣವನ್ನು ಕಾನೂನು ಚೌಕಟ್ಟಿನಲ್ಲಿ ಬಗೆಹರಿಸಿದೆ. ಯಾರಿಗೂ ಆತಂಕ ಬೇಡ, ಎಲ್ಲದಕ್ಕೂ ನಾವು ಉತ್ತರ ಕೊಡಲು ಸಿದ್ಧವಿದ್ದೇವೆ ಎಂದರು. ಇನ್ನು ಮುಸ್ಲಿಂ ವ್ಯಾಪಾರಿಗಳ ವಿರುದ್ಧ ವ್ಯಾಪಾರ ದಂಗಲ್ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ಯಾರೋ ಒಬ್ಬರು ಟೀಕೆ ಪ್ರತಿ ಟೀಕೆ ಮಾಡಿರುತ್ತಾರೆ. ಆದರೆ ಸರ್ಕಾರ ಎಲ್ಲರನ್ನು ಸಮಾನವಾಗಿ ತೆದುಕೊಂಡು ಹೋಗುತ್ತದೆ. ಇದರಲ್ಲಿ ಮೂಗು ತೂರಿಸಲು ಸರ್ಕಾರಕ್ಕೆ ಪ್ರಚಾರದ ಹುಚ್ಚು ಇಲ್ಲ. ಸರ್ಕಾರ ಜನರ ಭಾವನೆ ಅರ್ಥ ಮಾಡಿಕೊಂಡು ನಡೆಯುತ್ತಿದೆ ಎಂದಿದ್ದಾರೆ.

ಸಿದ್ದರಾಮಯ್ಯನವರು ನಿವೃತ್ತಿ ಆಗುವುದು ಬಹಳ ಒಳ್ಳೆಯದು ಮುಸ್ಕಾನ್ ಹೊಗಳಿ ಅಲ್ಖೈದಾ ಮುಖ್ಯಸ್ಥ ವಿಡಿಯೋ ವಿಚಾರಕ್ಕೆ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಉಮೇಶ್ ಕತ್ತಿ ತಿರುಗೇಟು ಕೊಟ್ಟಿದ್ದಾರೆ. ಇದು ಬಿಜೆಪಿ ಮಾಡಿಸಿದ ವಿಡಿಯೋ ಎಂದಿದ್ದ ಸಿದ್ದರಾಮಯ್ಯ ಹೇಳಿಕೆಗೆ ಸಿದ್ದರಾಮಯ್ಯ ಸಿಎಂ ಆಗಿ ಬಹಳ‌ ಒಳ್ಳೆಯ ಕೆಲಸ‌ ಮಾಡಿದ್ದಾರೆ. ವಿಪಕ್ಷ ನಾಯಕರಿಗೆ ಇದೀಗ ನಿವೃತ್ತಿಯ ಅಗತ್ಯವಿದೆ. ಸಿದ್ದರಾಮಯ್ಯನವರು ನಿವೃತ್ತಿ ಆಗುವುದು ಬಹಳ ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ. ಇನ್ನು ರಾಜ್ಯದಲ್ಲಿ ಹಿಂದೂಯೇತರರಿಗೆ ವ್ಯಾಪಾರ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿ ಮಾತನಾಡಿರುವ ಅವರು, ಸಮಸ್ಯೆ ಪರಿಹಾರಕ್ಕೆ ಸರ್ಕಾರ ಮಧ್ಯಪ್ರವೇಶದ ಅಗತ್ಯವಿಲ್ಲ. ಸರ್ಕಾರ ಮಧ್ಯಪ್ರವೇಶಿಸುವ ಅಗತ್ಯ ಇನ್ನೂ ಬಂದಿಲ್ಲ ಎಂದು ಕೊಡಗು ಜಿಲ್ಲೆ ವಿರಾಜಪೇಟೆಯಲ್ಲಿ ಉಮೇಶ್ ಕತ್ತಿ ತಿಳಿಸಿದ್ದಾರೆ.

RSS ಎಂದಾದರೂ ದೇಶದ್ರೋಹದ ಕೃತ್ಯವೆಸಗಿದೆಯಾ? ಚುನಾವಣೆ ಬಂದಾಗ ಆರ್‌ಎಸ್ಎಸ್ ಬೈಯ್ಯುತ್ತಾರೆ. ಮುಸ್ಲಿಮರ ವೋಟಿಗಾಗಿ RSS ಅನ್ನು ಟೀಕಿಸುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮುತಾಲಿಕ್ ಕಿಡಿಕಾರಿದ್ದಾರೆ. ನೀವು ಅಲ್‌ಖೈದಾಗೆ ಆರ್‌ಎಸ್‌ಎಸ್‌ ಹೋಲಿಸುತ್ತೀರಿ. RSS ಎಂದಾದರೂ ದೇಶದ್ರೋಹದ ಕೃತ್ಯವೆಸಗಿದೆಯಾ? ಒಂದು ಉದಾಹರಣೆ ಕೊಡಿ ಎಂದು ಮುತಾಲಿಕ್ ಪ್ರಶ್ನೆ ಮಾಡಿದ್ದಾರೆ. RSS ಅನ್ನು ಅಲ್‌ಖೈದಾಗೆ ಹೋಲಿಸಿದ್ದು ಖಂಡನೀಯ. ಸಿದ್ದರಾಮಯ್ಯ ಅಕ್ಷಮ್ಯ ಅಪರಾಧವನ್ನ ಮಾಡಿದ್ದಾರೆ. ವೋಟ್‌ಗಾಗಿ ದೇಶ ಭಕ್ತಿ ಹಿನ್ನೆಲೆಗೆ ತೊಂದರೆ ಕೊಡಬೇಡಿ ಎಂದು ಸಿದ್ದರಾಮಯ್ಯ ವಿರುದ್ಧ ಪ್ರಮೋದ್ ಮುತಾಲಿಕ್ ಆಕ್ರೋಶ ಹೊರ ಹಾಕಿದ್ದಾರೆ.

ಧಾರ್ಮಿಕ ಕ್ಷೇತ್ರಗಳಲ್ಲಿ ಮುಸ್ಲಿಮರ ಅಂಗಡಿ ತೆರವು ವಿಚಾರಕ್ಕೆ ಸಂಬಂಧಿಸಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಯಲ್ಲಮ್ಮ ದೇವಸ್ಥಾನದ ಸಂಬಂಧ ಪಟ್ಟಹಾಗೇ ಅಲ್ಲಿನ ಶಾಸಕರಿಗೆ ಮನವಿ ಕೊಟ್ಟಿದ್ದೇವೆ. ಇಡೀ ರಾಜ್ಯದಲ್ಲಿ ಮುಜರಾಯಿ ಇಲಾಖೆ ದೇವಸ್ಥಾನದಲ್ಲಿರುವ ಮುಸ್ಲಿಂ ವ್ಯಾಪಾರಿಗಳನ್ನ ಅಲ್ಲಿಂದ ಹೊರ ಹಾಕಬೇಕು. ಕಾಯ್ದೆ ಪ್ರಕಾರ, ಕಾನೂನು ಆಧಾರದ ಮೇಲೆ ಅವರಿಗೆ ನೋಟೀಸ್ ಕೊಟ್ಟು ತೆರವುಗೊಳಿಸಬೇಕು‌. ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಭೇಟಿಯಾಗಿ ಮನವಿ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.

ಶಕ್ತಿಸ್ವರೂಪಿಣಿ ದೇವಿ ಬಿಜೆಪಿ ನಾಯಕರ ಆತ್ಮವನ್ನು ಶುದ್ಧೀಕರಿಸಲಿ ಇನ್ನು ಮತ್ತೊಂದು ಕಡೆ ದರ್ಗಾಕ್ಕೆ ಕರಗ ಹೋಗೋದಕ್ಕೆ ವಿರೋಧ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಬಿಜೆಪಿ ನಾಯಕರ ಆತ್ಮವನ್ನು ಶುದ್ಧೀಕರಿಸಲಿ ಎಂದು ಟ್ವೀಟ್ ಮಾಡಿದ್ದಾರೆ. ಎಲ್ಲರಿಗೂ ಲೋಕ ಕಲ್ಯಾಣಾರ್ಥದ ಕರಗ ಮಹೋತ್ಸವದ ಶುಭಾಶಯ. ಧರ್ಮರಾಯ ಸ್ವಾಮಿ ದೇವಸ್ಥಾನದ “ಸಾಮರಸ್ಯದ ಉತ್ಸಾಹವು” ಕರ್ನಾಟಕ ಮತ್ತು ಭಾರತದ ಶ್ರೀಮಂತ ವೈಭವ ಮತ್ತು ಸಂಪ್ರದಾಯಗಳನ್ನು ಸಂಕೇತಿಸುತ್ತದೆ. ” ಶಕ್ತಿ ಸ್ವರೂಪಿಣಿ ದೇವಿಯು” ಅಪಾರ ದ್ವೇಷ, ಮತ್ತು ಹಿಂಸೆಯಿಂದ ಕೂಡಿದ ಬಿಜೆಪಿ ನಾಯಕರ “ಆತ್ಮ” ವನ್ನು ಶುದ್ಧೀಕರಿಸಲಿ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Rishabh Pant: ಸತತ ಎರಡು ಸೋಲು: ಪಂದ್ಯ ಮುಗಿದ ಬಳಿಕ ರಿಷಭ್ ಪಂತ್ ಆಡಿದ ಮಾತುಗಳೇನು?

ರಾಮನಗರ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ; ಮೇಕೆದಾಟು ಪಾದಯಾತ್ರೆ ಮೇಲೆ ನೇರ ಕರಿನೆರಳು: ನಾವಿಬ್ಬರೇ ಹೆಜ್ಜೆ ಹಾಕ್ತೀವಿ -ಸಿದ್ಧರಾಮಯ್ಯ

Published On - 11:26 am, Fri, 8 April 22