AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಚಾಮುಂಡಿ ದೇವಿ ಟವರ್ ಆಫ್ ಪವರ್’: ಮೈಸೂರು ದಸರಾಗೆ ಚಾಲನೆ ನೀಡಿದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ

ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ತಾನು ಉದ್ಘಾಟನೆ ಮಾಡಲು ಬಂದಿಲ್ಲ, ಪ್ರಾರ್ಥನೆ ಮಾಡಲು ಬಂದಿರುವುದಾಗಿ ತಿಳಿಸಿದ ಶ್ರೀಗಳು, ನಾಡಿನ ಜನತೆಗೆ ಮಣ್ಣು, ನೀರು ಹಾಗೂ ಪ್ರಕೃತಿ ಸಂರಕ್ಷಣೆಯ ಜತೆಗೆ ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತೆ ಸ್ಫೂರ್ತಿದಾಯಕ ಸಂದೇಶ ನೀಡಿದರು.

‘ಚಾಮುಂಡಿ ದೇವಿ ಟವರ್ ಆಫ್ ಪವರ್’: ಮೈಸೂರು ದಸರಾಗೆ ಚಾಲನೆ ನೀಡಿದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ
ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿಕೆ
ಮಂಜುನಾಥ ಕೆಬಿ
| Edited By: |

Updated on:Oct 11, 2026 | 2:52 PM

Share

ಮುಖ್ಯಾಂಶಗಳು

  • ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳಿಂದ ಮೈಸೂರು ದಸರಾ ಉದ್ಘಾಟನೆ.
  • ದಸರಾ ಉದ್ಘಾಟನೆ ಮಾಡಲು ಬಂದಿಲ್ಲ, ಪ್ರಾರ್ಥನೆ ಮಾಡಲು ಬಂದಿದ್ದೇನೆ ಎಂದ ಶ್ರೀಗಳು.
  • ಮಣ್ಣು, ನೀರು ಹಾಗೂ ಪರಿಸರ ಸಂರಕ್ಷಣೆ ಮಾಡುವಂತೆ ಸಮಾಜಕ್ಕೆ ವಿಶೇಷ ಸಂದೇಶ.

ಮೈಸೂರು, ಅಕ್ಟೋಬರ್ 11: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರು ವಿದ್ಯುಕ್ತ ಚಾಲನೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಶ್ರೀಗಳು, “ನಾನು ದಸರಾ ಉದ್ಘಾಟಿಸಲು ಬಂದಿಲ್ಲ, ಚಾಮುಂಡೇಶ್ವರಿ ತಾಯಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದಿದ್ದೇನೆ” ಎಂದರು.

ಮೈಸೂರು ನಾಡಿನ ಗತವೈಭವದ ಸಂಕೇತ

ಶ್ರೀಗಳು ತಮ್ಮ ಭಾಷಣದಲ್ಲಿ, ಮೈಸೂರು ನಾಡಿನ ಗತವೈಭವದ ಸಂಕೇತವಾಗಿದ್ದು, ಭೂತ, ಭವಿಷ್ಯ ಹಾಗೂ ವರ್ತಮಾನಗಳ ಸಂಗಮವಾಗಿದೆ ಎಂದು ಬಣ್ಣಿಸಿದರು. ನಾಡನ್ನು ಜಾತಿಯಿಂದ ಕಟ್ಟದೆ ನೀತಿ ಮತ್ತು ಪ್ರೀತಿಯಿಂದ ಕಟ್ಟಬೇಕು ಎಂದು ಕರೆ ನೀಡಿದ ಅವರು, ಪಂಪನ ‘ಮಾನವ ಕುಲ ತಾನೊಂದೇ ವಲಂ’ ತತ್ತ್ವವನ್ನು ಸ್ಮರಿಸಿದರು. ಮೈಸೂರಿನ ರಾಜರು ಅಧಿಕಾರ ನಡೆಸಿ ಜನರ ಮನಸ್ಸನ್ನು ಆಳಿದರು ಎಂದ ಶ್ರೀಗಳು, ಭೂಮಿ, ನೀರು ಮತ್ತು ಗಾಳಿಯನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ. ಅಣೆಕಟ್ಟುಗಳು ನಮ್ಮ ಅನ್ನದ ತಟ್ಟೆಗಳಿದ್ದಂತೆ, ಇವು ನಿಸರ್ಗ ನೀಡಿದ ಕೊಡುಗೆಯಾಗಿದ್ದು ಪರಿಸರ ಸಂರಕ್ಷಣೆ ಅತ್ಯಗತ್ಯ ಎಂದು ಕಿವಿಮಾತು ಹೇಳಿದ್ದಾರೆ. ನಾನು ದೀಪ ಹಚ್ಚಿದ್ದೇನೆ ಬೆಳಕು ದೇವಿಯದು, ಚಾಮುಂಡಿ ದೇವಿ ಟವರ್ ಆಫ್ ಪವರ್ ಎಂದರು.

ತಾಯಂದಿರು ಮಕ್ಕಳಿಗೆ ಫೇಸ್‌ಬುಕ್ ತೋರಿಸುವ ಬದಲು ಕನ್ನಡ ಸಾಹಿತ್ಯ ಕಲಿಸಿ ಎಂದ ಸ್ವಾಮೀಜಿ

ಮುಂದುವರಿದು ಮಾತನಾಡಿದ ಶ್ರೀಗಳು, ಸಾಲುಮರದ ತಿಮ್ಮಕ್ಕ ಮತ್ತು ಹರೆಕಾಳ ಹಾಜಪ್ಪ ಅವರ ಉದಾಹರಣೆ ನೀಡಿ ಮರ-ಗಿಡ ಬೆಳೆಸಲು ಹಾಗೂ ಸಮಾಜಮುಖಿ ಕಾರ್ಯಗಳನ್ನು ಮಾಡಲು ಕರೆ ನೀಡಿದರು. ಕೇವಲ ತಂತ್ರಜ್ಞಾನ ಬೆಳೆದರೆ ಸಾಲದು, ಊಟವನ್ನು ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ, ರೈತನ ಬೆವರು ಭೂಮಿಗೆ ಇಳಿಯಲೇಬೇಕು ಎಂದರು. ತಾಯಂದಿರು ಮಕ್ಕಳಿಗೆ ಫೇಸ್‌ಬುಕ್ ತೋರಿಸುವ ಬದಲು ಕನ್ನಡ ಸಾಹಿತ್ಯ, ಕವಿತೆ ಹಾಗೂ ವಚನಗಳನ್ನು ಕಲಿಸಿ ಕನ್ನಡ ಸಂಸ್ಕೃತಿಯನ್ನು ಉಳಿಸಬೇಕು ಎಂದು ಮನವಿ ಮಾಡಿದರು.

ಡಿ.ಕೆ ಶಿವಕುಮಾರ್ ಏನಂದ್ರು?

ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್, ಈ ಐತಿಹಾಸಿಕ ದಸರಾ ಮಹೋತ್ಸವದಲ್ಲಿ ಭಾಗಿಯಾಗಿರುವುದು ತಮ್ಮ ಬದುಕಿನ ಸ್ಮರಣೀಯ ಕ್ಷಣ ಹಾಗೂ ಪೂರ್ವಜನ್ಮದ ಪುಣ್ಯ ಎಂದು ಹೇಳಿದರು. ಕೊಪ್ಪಳದ ಗವಿಮಠವು ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಬರ ಎದುರಿಸಲು ಶ್ರೀಗಳು ಕೈಗೊಂಡ ಜಲದೀಕ್ಷೆ ಕಾರ್ಯಾಚರಣೆ ಅಭೂತಪೂರ್ವವಾದದ್ದು. ಜ್ಞಾನದ ಜ್ಯೋತಿಯನ್ನು ಬೆಳಗಿಸುವ ಮೂಲಕ ಶ್ರೀಗಳು ನಾಡಿಗೆ ದೊಡ್ಡ ಸಂದೇಶ ನೀಡಿದ್ದಾರೆ ಮತ್ತು ಅವರ ಉಪಸ್ಥಿತಿಯಿಂದ ಈ ದಸರಾ ಆಚರಣೆಗೆ ನಿಜವಾದ ಅರ್ಥ ಬಂದಿದೆ ಎಂದು ಅವರು ಶ್ರೀಗಳ ಸರಳತೆ ಹಾಗೂ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:47 pm, Sun, 11 October 26

Follow Us
ಮಂಜುನಾಥ ಕೆಬಿ
ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಬಿಗ್ ಬಾಸ್ ಕನ್ನಡ ಸೀಸನ್ 13: ವೈಲ್ಡ್ ಕಾರ್ಡ್ ಮೂಲಕ ಕಾಮನರ್ ಕುಮಾರಿ ಎಂಟ್ರಿ
ಬಿಗ್ ಬಾಸ್ ಕನ್ನಡ ಸೀಸನ್ 13: ವೈಲ್ಡ್ ಕಾರ್ಡ್ ಮೂಲಕ ಕಾಮನರ್ ಕುಮಾರಿ ಎಂಟ್ರಿ
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ದಸರಾ ಉದ್ಘಾಟನೆಗೂ ಮುನ್ನ ಚಾಮುಂಡೇಶ್ವರಿ ದರ್ಶನ ಪಡೆದ ಗವಿಸಿದ್ದೇಶ್ವರ ಶ್ರೀ
ದಸರಾ ಉದ್ಘಾಟನೆಗೂ ಮುನ್ನ ಚಾಮುಂಡೇಶ್ವರಿ ದರ್ಶನ ಪಡೆದ ಗವಿಸಿದ್ದೇಶ್ವರ ಶ್ರೀ
ಚೆನ್ನೈ ಮೆಟ್ರೋದಲ್ಲಿ ಪ್ರಧಾನಿ ಮೋದಿ–ಸಿಎಂ ವಿಜಯ್ ಪ್ರಯಾಣ
ಚೆನ್ನೈ ಮೆಟ್ರೋದಲ್ಲಿ ಪ್ರಧಾನಿ ಮೋದಿ–ಸಿಎಂ ವಿಜಯ್ ಪ್ರಯಾಣ
ಮಾಗಡಿ ಮಾರುಕಟ್ಟೆಯಲ್ಲಿ ರಾಶಿ ರಾಶಿ ಕಸ ಕಂಡು ಗರಂ ಆದ್ರು ಸಚಿವ ಬಾಲಕೃಷ್ಣ!
ಮಾಗಡಿ ಮಾರುಕಟ್ಟೆಯಲ್ಲಿ ರಾಶಿ ರಾಶಿ ಕಸ ಕಂಡು ಗರಂ ಆದ್ರು ಸಚಿವ ಬಾಲಕೃಷ್ಣ!
Live: ಮೈಸೂರು ದಸರಾ ಉದ್ಘಾಟನೆ ನೇರಪ್ರಸಾರ
Live: ಮೈಸೂರು ದಸರಾ ಉದ್ಘಾಟನೆ ನೇರಪ್ರಸಾರ
ಮೈಸೂರು ದಸರಾಗೆ ಕ್ಷಣಗಣನೆ: ಗವಿಸಿದ್ದೇಶ್ವರ ಶ್ರೀಗಳಿಂದ ನಾಡಹಬ್ಬಕ್ಕೆ ಚಾಲನೆ
ಮೈಸೂರು ದಸರಾಗೆ ಕ್ಷಣಗಣನೆ: ಗವಿಸಿದ್ದೇಶ್ವರ ಶ್ರೀಗಳಿಂದ ನಾಡಹಬ್ಬಕ್ಕೆ ಚಾಲನೆ
ಎವರೆಸ್ಟ್ ಶಿಖರದ ಮೇಲೆ ಕನ್ನಡ ಧ್ವಜ ಹಾರಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗರು!
ಎವರೆಸ್ಟ್ ಶಿಖರದ ಮೇಲೆ ಕನ್ನಡ ಧ್ವಜ ಹಾರಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗರು!
ಉಕ್ರೇನ್‌ಗೆ ಕೈಕೊಟ್ಟ ಅಮೆರಿಕ: ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಆಕ್ರೋಶ
ಉಕ್ರೇನ್‌ಗೆ ಕೈಕೊಟ್ಟ ಅಮೆರಿಕ: ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಆಕ್ರೋಶ