ವಿಶ್ವನಾಥ್ ಹಣಕಾಸಿನ ವ್ಯವಹಾರದ ಪಿನ್ ಟು ಪಿನ್ ಡೀಟೈಲ್ಸ್ ಬಿಚ್ಚಿಟ್ಟ ಮಹದೇವ್

ವಿಧಾನಪರಿಷತ್ ಬಿಜೆಪಿ ಸದಸ್ಯ ವಿಶ್ವನಾಥ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಸಾಲದ ಹಣ ವಾಪಸ್ ಕೇಳಲು ಹೋಗಿದ್ದ ವ್ಯಕ್ತಿ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಹೆಚ್.​​​ ವಿಶ್ವನಾಥ್ ವಿರುದ್ಧ ದೇವರಾಜ ಠಾಣೆಯಲ್ಲಿ ಕೇಸ್ ಬುಕ್ ಆಗಿದೆ. ಆದರೆ, ಇದರ ಹಿಂದೆ ಸಿಎಂ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಕುಮ್ಮಕ್ಕಿದೆ ಎಂದಿದ್ದಾರೆ. ಇನ್ನು ಬಗ್ಗೆ ದೂರುದಾರ, ವಿಶ್ವನಾಥ್ ಜೊತೆಗಿನ ಹಣಕಾಸಿನ ವ್ಯವಹಾರದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ವಿಶ್ವನಾಥ್ ಹಣಕಾಸಿನ ವ್ಯವಹಾರದ ಪಿನ್ ಟು ಪಿನ್ ಡೀಟೈಲ್ಸ್ ಬಿಚ್ಚಿಟ್ಟ ಮಹದೇವ್
Mahadev And H Vishwanath
Edited By:

Updated on: May 20, 2026 | 5:08 PM

ಮೈಸೂರು, (ಮೇ 20): ಹಣಕಾಸಿನ Financial) ವಿಚಾರಕ್ಕೆ ಸಂಬಂಧಿಸಿದಂತೆ ಜೆಪಿ ವಿಧಾನಪರಿಷತ್ ಸದಸ್ಯ ಎಚ್​​​ ವಿಶ್ವನಾಥ್ (H Vishwanath) ವಿರುದ್ಧ ಎಫ್​​ಐಆರ್ ದಾಖಲಾಗಿದೆ. ಮಹದೇವ್ ಎನ್ನುವ ವ್ಯಕ್ತಿ ಎಂಟಿಬಿ ನಾಗರಾಜ್ ಅವರ ಮೂಲಕ ವಿಶ್ವನಾಥ್​ ಅವರಿಗೆ ಸಾಲ ಕೊಡಿಸಿದ್ದರು. ಬಳಿಕ ಆ ಹಣವನ್ನು ವಾಪಸ್ ಕೇಳಿದ್ದಕ್ಕೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದು, ಈ ಸಂಬಂಧ ನ್ಯಾಯಾಲದ ಮೊರೆ ಹೋಗಿದ್ದರು. ಇದೀಗ ಕೋರ್ಟ್ ಆದೇಶದ ಮೇರೆಗೆ ವಿಶ್ವನಾಥ್ ವಿರುದ್ಧ ಮೈಸೂರಿನ (Mysuru) ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಈ ಬಗ್ಗೆ ಸ್ವತಃ ದೂರುದಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಪ್ರಕರಣದ ಪಿನ್ ಟು ಪಿನ್ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಮುಖ್ಯಾಂಶಗಳು

  • ಮೈಸೂರಿನಲ್ಲಿ ಎಂಎಲ್​​ಸಿ ಹೆಚ್​.ವಿಶ್ವನಾಥ್ ವಿರುದ್ಧ ಎಫ್​ಐಆರ್​
  • ಕೋರ್ಟ್ ಆದೇಶದ ಮೇರೆಗೆ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ FIR ದಾಖಲು
  • ಕಾಂಗ್ರೆಸ್ ಮುಖಂಡ ಕೋಟೆಹುಂಡಿ ಮಹದೇವು ಮೇಲೆ ಹಲ್ಲೆ ಆರೋಪ
  • ವಿಶ್ವನಾಥ್ ಹಣಕಾಸಿನ ವ್ಯವಹಾರದ ಪಿನ್ ಟು ಪಿನ್ ಡೀಟೈಲ್ಸ್ ಬಿಚ್ಚಿಟ್ಟ ಮಹದೇವ್

ಎಂ.ಟಿ.ಬಿ ನಾಗರಾಜ್ ಬಳಿ 35 ಲಕ್ಷ ಕೊಡಿಸಿದ್ದೆ

ಮೈಸೂರಿನಲ್ಲಿಂದು ಮಾಧ್ಯಮಗಳ ಜತೆ ಮಾತನಾಡಿದ ಕಾಂಗ್ರೆಸ್ ಮುಖಂಡ ಕೋಟೆಹುಂಡಿ ಮಹದೇವ್, ಎಂ.ಎಲ್.ಸಿ ವಿಶ್ವನಾಥ್ ನನಗೆ ಅನ್ಯಾಯ ಮಾಡಿದ್ದಾರೆ. ಈ ಹಿಂದೆ ವಿಶ್ವನಾಥ್ ಎಂಪಿ ಆಗಿದ್ದಾಗ ಎಂ.ಟಿ.ಬಿ ನಾಗರಾಜ್ ಬಳಿ 35 ಲಕ್ಷ ಕೊಡಿಸಿದ್ದೆ. ನಾನು 12 ಲಕ್ಷ ಪಡೆದಿದ್ದೆ. ಆ ಸಮಯದಲ್ಲಿ ವಿಶ್ವನಾಥ್ ಮಗ ಕೂಡ ಇದ್ದರು. ವಿಶ್ವನಾಥ್ ಚಾಮುಂಡೇಶ್ವರಿ ತಾಯಿ ಸನ್ನಿಧಿಯಲ್ಲಿ ಆಣೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಇದನ್ನೂ ನೋಡಿ: ವಿಶ್ವನಾಥ್ ವಿರುದ್ಧ ಎಫ್‌ಐಆರ್: ಸಿಎಂ ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಆರೋಪ

ನನ್ನ ಆಸ್ತಿಯನ್ನು ಅಡ ಇಟ್ಟಿದ್ದೇನೆ

ದುಡ್ಡಿಗಾಗಿ ನನ್ನ ಆಸ್ತಿಯನ್ನು ಅಡ ಇಟ್ಟಿದ್ದೇನೆ. ಇದೀಗ ಬಡ್ಡಿಯೂ ಬೆಳೆದಿದೆ. ನನ್ನ ಆಸ್ತಿ ಬಗ್ಗೆ ಅಕ್ಕ ತಂಗಿಯರು ಕೇಸ್ ಹಾಕಿದ್ದಾರೆ. ಇದೀಗ ಸಾಲ ವಾಪಸ್ಸು ಕೊಡಿ ನಾನು ಎಂಟಿ.ಬಿ ಹತ್ರ ಪತ್ರ ಪಡೆದುಕೊಳ್ಳಬೇಕು ಎಂದು ಕೇಳಿದ್ದೆ. ಜಲದರ್ಶಿನಿಯಲ್ಲಿ ಹಣ ಕೇಳಲು ಹೋದಾಗ ನನಗೆ ಬೈದು ಹಲ್ಲೆ ಮಾಡಿದ್ರು. ಈ ಬಗ್ಗೆ ಮೈಸೂರಿನಲ್ಲಿ FIR ಆಗಲಿಲ್ಲ. ಕೋರ್ಟ್ ಮೊರೆ ಹೋಗಿ FIR ಹಾಕಿಸಿದ್ದೇನೆ. ನನ್ನ ತಾಯಿ ಹೆಂಡ್ತಿ ಬಗ್ಗೆ ಕೆಟ್ಟದಾಗಿ ಈ ವಯಸ್ಸಿನಲ್ಲಿ ಮಾತನಾಡಿದ್ದಾರೆ ಎಂದು ವಿಶ್ವನಾಥ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಮಾಣ ಮಾಡಲಿ

ಇವರಿಗಾಗಿ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಇದೀಗ ನೀನು ಸಿದ್ದರಾಮಯ್ಯ ಚೇಲಾ ಅಂತಾರೆ. ಈ ಪ್ರಕರಣಕ್ಕೂ ಸಿದ್ದರಾಮಯ್ಯಗೂ ಯತೀಂದ್ರ ಗೂ ಸಂಬಂಧವಿಲ್ಲ. ವಿಶ್ವನಾಥ್ 35 ಲಕ್ಷ ಹಣ ಎಂ.ಟಿ.ಬಿ ನಾಗರಾಜ್ ಗೆ ಕೊಡಬೇಕು. ಬಡ್ಡಿ ಬೆಳೆದು ಕೋಟ್ಯಂತರ ಹಣ ಆಗಿದೆ. ಅದನ್ನು ಕೊಡಬೇಕು . ವಿಶ್ವನಾಥ್ ಸತ್ಯವಂತರಾಗಿದ್ದಾರೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಮಾಣ ಮಾಡಲಿ ಎಂದಿದ್ದಾರೆ.

ವಿಶ್ವನಾಥ್ ಹೇಳಿದ್ದೇನು?

ನಿನಗೆ ಸಾಲ ಕೊಡಲು 55 ಲಕ್ಷ ರೂಪಾಯಿ ಎಲ್ಲಿಂದ ಬಂತು? ನಾನು 50 ವರ್ಷದಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ನಾನು ಸದನದಲ್ಲೇ‌ ಸತ್ಯವಂತ ಎಂದು ಪ್ರಮಾಣ ಮಾಡಿದ್ದೇನೆ. ಕೋಟೆಹುಂಡಿ ಮಹದೇವ ನಮ್ಮ ಮನೆ ಮುಂದೆ ಬಂದು ನಿಲ್ಲುತ್ತಿದ್ದ. ಸಿದ್ದರಾಮಯ್ಯ ಮಗನನ್ನು ನಾನು ಹೆಚ್​ಎಂ ಎಂದು ಹೇಳಿದ್ದೆ. ಈಗ ಅದನ್ನು ತೀರಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಎಫ್‌ಐಆರ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರುತ್ತೇನೆ ಎಂದು ಎಂದಿದ್ದಾರೆ.

ಕರ್ನಾಟದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
Follow Us