ಕಾಶಿ ಜ್ಞಾನವಾಪಿ ವರದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಇತಿಹಾಸ ತಜ್ಞ ಡಾ ಶೆಲ್ವಪಿಳೈ ಅಯ್ಯಂಗಾರ್
ಮೈಸೂರಿನಲ್ಲಿ ಟಿವಿ9 ಜೊತೆ ಮಾತನಾಡಿರುವ ಇತಿಹಾಸ ತಜ್ಞ ಡಾ. ಶೆಲ್ವಪಿಳೈ ಅಯ್ಯಂಗಾರ್, ಕಾಶಿ ಜ್ಞಾನವಾಪಿ ವರದಿ ಅತ್ಯಂತ ವೈಜ್ಞಾನಿಕವಾಗಿ ತಯಾರಿಸಿ ಮಂಡಿಸಲಾಗಿದೆ. ಒಬ್ಬ ಇತಿಹಾಸ ಸಂಶೋಧನಾ ವಿದ್ಯಾರ್ಥಿಯಾಗಿ ನನಗೆ ತುಂಬಾ ಖುಷಿ ಕೊಟ್ಟಿದೆ. ವರದಿಯನ್ನು ಸಂಪೂರ್ಣ ಓದಿದ್ದೇನೆ ಎಂದು ಹೇಳಿದ್ದಾರೆ. ಕನ್ನಡ, ಸಂಸ್ಕೃತ, ತೆಲುಗು, ತಮಿಳು, ಪರ್ಸಿಯನ್, ಅರೆಬಿಕ್ ಮತ್ತು ಬ್ರಾಹ್ಮಿ ಸೇರಿದಂತೆ ಲಿಪಿಗಳು ಪತ್ತೆಯಾಗಿವೆ ಎಂದಿದ್ದಾರೆ.
ಮೈಸೂರು, ಜನವರಿ 27: ಕಾಶಿ ಜ್ಞಾನವಾಪಿ (Gnanavapi) ವರದಿ ಅತ್ಯಂತ ವೈಜ್ಞಾನಿಕವಾಗಿ ತಯಾರಿಸಿ ಮಂಡಿಸಲಾಗಿದೆ. ಒಬ್ಬ ಇತಿಹಾಸ ಸಂಶೋಧನಾ ವಿದ್ಯಾರ್ಥಿಯಾಗಿ ನನಗೆ ತುಂಬಾ ಖುಷಿ ಕೊಟ್ಟಿದೆ. ವರದಿಯನ್ನು ಸಂಪೂರ್ಣ ಓದಿದ್ದೇನೆ ಎಂದು ಇತಿಹಾಸ ತಜ್ಞ ಡಾ. ಶೆಲ್ವಪಿಳೈ ಅಯ್ಯಂಗಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, ಕನ್ನಡ, ಸಂಸ್ಕೃತ, ತೆಲುಗು, ತಮಿಳು, ಪರ್ಸಿಯನ್, ಅರೆಬಿಕ್ ಮತ್ತು ಬ್ರಾಹ್ಮಿ ಸೇರಿದಂತೆ ಲಿಪಿಗಳು ಪತ್ತೆಯಾಗಿವೆ. ಅದರಲ್ಲಿ ಕನ್ನಡದ ದೊಡರಸಯ್ಯನ ನರಸಣಭಿಂನ್ನಹ ಎಂದು ಇದೆ. ಇದು 16ನೇ ಶತಮಾನದ ಶಾಸನವಾಗಿದೆ. ಕನ್ನಡ ಗೊತ್ತಿರುವ ಯಾರು ಬೇಕಾದರೂ ಓದಬಹುದಾಗಿದೆ. ಇದು ಕಾಶಿ ವಿಶ್ವನಾಥನಿಗೆ ಸೇವೆ ಸಲ್ಲಿಸಿ ಹಾಕಿಸಿಕೊಂಡಿರುವ ಶಾಸನವಾಗಿರಬಹುದು ಎಂದು ಹೇಳಿದ್ದಾರೆ.
ವರದಿಯ ಪ್ರಕಾರ ಇದು 3500 ವರ್ಷಗಳ ಹಿಂದಿನಿಂದಲೂ ಇಲ್ಲೊಂದು ಮಹಾ ದೇವಾಲಯ ಇತ್ತು ಅನ್ನೋದು ಸೂಚಕವಾಗಿದೆ. ಪದೇ ಪದೇ ಇದನ್ನು ನಾಶ ಮಾಡಲಾಗಿದೆ ಎನ್ನುವುದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದು ನ್ಯಾಯಾಲಯಕ್ಕೆ ಬಿಟ್ಟ ವಿಚಾರ
ಇಲ್ಲಿ ಮತ್ತೆ ದೇವಸ್ಥಾನ ನಿರ್ಮಾಣವಾಗಬೇಕಾ ಅಥವಾ ಏನು ಮಾಡಬೇಕು ಎಂಬುದನ್ನು ನ್ಯಾಯಾಲಯ ತೀರ್ಮಾನ ಮಾಡಲಿದೆ. ಆದರೆ ಇದು ಸೂಕ್ಷ್ಮ, ಧಾರ್ಮಿಕ ವಿಚಾರವಾದ ಹಿನ್ನೆಲೆ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವುದು ಸೂಕ್ತ ಎಂದಿದ್ದಾರೆ.
ಇದನ್ನೂ ಓದಿ: ಜ್ಞಾನವಾಪಿ ಮಸೀದಿಯ ಎಎಸ್‌ಐ ಸಮೀಕ್ಷೆ ವರದಿ ಸಾರ್ವಜನಿಕಗೊಳಿಸಲಾಗುವುದು: ವಾರಣಾಸಿ ನ್ಯಾಯಾಲಯ
ಹಿಂದೂಗಳ ಕೆಲವೇ ಪವಿತ್ರ ಹಾಗೂ ಸ್ಥಳ ಪುರಾಣಗಳಲ್ಲಿ ಕಾಶಿ ಕೂಡ ಒಂದು. ಉಳಿದಂತೆ ಮಥುರ, ಅಯೋಧ್ಯಾ, ಕಾಶ್ಮೀರ, ಮಾರ್ತಾಂಡ ದೇಗುಲ ಇದೆ. ಇದು ಹಿಂದೂಗಳ ಪವಿತ್ರ ಸ್ಥಳವಾದ್ದರಿಂದ ಇದನ್ನು ಮುಸ್ಲಿಂರೇ ಬಿಟ್ಟು ಕೊಡುವ ಉದಾರತೆ ತೋರಬೇಕಿದೆ. ಈ ಹಿಂದೆ ಹಿಂದೂಗಳು ಹಲವು ಸ್ಥಳ ಬಿಟ್ಟು ಕೊಟ್ಟಿದ್ದಾರೆ. ಮುಸ್ಲಿಂರು ಮೈಸೂರು ಸೇರಿದಂತೆ ಹಲವು ಕಡೆ ಮಂದಿರ ನಿರ್ಮಾಣಕ್ಕೆ ಸಹಕರಿಸಿದ್ದಾರೆ. ಇಲ್ಲೂ ಕೂಡ ಅದೇ ರೀತಿ ಆದರೆ ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.
21 ಸಾವಿರಕ್ಕೂ ಹೆಚ್ಚು ದೇಗಲುಗಳ ಮೇಲೆ ದಾಳಿ
ವಿಶ್ವ ವ್ಯಾಪಿ 21 ಸಾವಿರಕ್ಕೂ ಹೆಚ್ಚು ದೇಗಲುಗಳ ಮೇಲೆ ದಾಳಿ ಮಾಡಿ ನಾಶ ಮಾಡಿ ಹೊಸ ಕಟ್ಟಡ ತಲೆ ಎತ್ತಿದೆ. ಇದನ್ನು ಇತಿಹಾಸ ತಜ್ಞರು ದಾಖಲಿಸಿದ್ದಾರೆ. ಕಾಶಿ ಸೇರಿದಂತೆ ಇವೆಲ್ಲಾ ಪ್ರಾಕೃತಿಕ ವೈಪರಿತ್ಯದಿಂದ ನಾಶವಾಗಿಲ್ಲ ದಾಳಿಕೋರರಿಂದಲೇ ನಾಶವಾಗಿದೆ. ಇದನ್ನು ದಾಳಿ ಮಾಡಿದವರೇ ಬರೆದುಕೊಂಡಿದ್ದಾರೆ. ದಾಳಿ ಮಾಡಿ ನಾಶ ಮಾಡಿದನ್ನು ಕೆಳಗೆ ಹಾಕಲು ಕಾರಣ ವಿಜಯದ ಪಾರುಪತ್ಯ. ನಾನು ಗೆದ್ದೆ ಎನ್ನುವುದನ್ನು ತೋರಿಸಲು ಎಲ್ಲವನ್ನೂ ಅಲ್ಲೇ ಉಳಿಸಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:40 pm, Sat, 27 January 24