ಸಿದ್ದರಾಮಯ್ಯರಿಗೆ ಸೋಮಾರಿ ಸಿದ್ದ ಪದ ಬಳಸಿಲ್ಲ: ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ
ಫೇಸ್ ಬುಕ್ ಲೈವ್‌ನಲ್ಲಿ ಸಂಸದ ಪ್ರತಾಪ ಸಿಂಹ ಇಂದು ಮಾತನಾಡಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ಸೋಮಾರಿ ಸಿದ್ದ ಪದ ಬಳಸಿಲ್ಲ. ಸಿದ್ದರಾಮಯ್ಯರನ್ನು ದೃಷ್ಟಿಯಲ್ಲಿ ಇಟ್ಕೊಂಡು ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಕಲ್ಲು ಬೀಸಿದರೆ ಹಣ್ಣು ಕೊಡಲು ನಾನು ಮರವಲ್ಲ. ನಾನು ಸಹ ತೀವ್ರವಾಗಿಯೇ ಕಲ್ಲು ಬಿಸಾಡುತ್ತೇನೆ ಎಂದು ಕಿಡಿಕಾರಿದ್ದಾರೆ.
ಮೈಸೂರು, ಡಿಸೆಂಬರ್ 27: ಸಿಎಂ ಸಿದ್ದರಾಮಯ್ಯ ಅವರಿಗೆ ಸೋಮಾರಿ ಸಿದ್ದ ಪದ ಬಳಸಿಲ್ಲ. ಸಿದ್ದರಾಮಯ್ಯರನ್ನು ದೃಷ್ಟಿಯಲ್ಲಿ ಇಟ್ಕೊಂಡು ಹೇಳಿಲ್ಲ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಸ್ಪಷ್ಟನೆ ನೀಡಿದ್ದಾರೆ. ಫೇಸ್ ಬುಕ್ ಲೈವ್‌ನಲ್ಲಿ ಮಾತನಾಡಿದ ಅವರು, ನೀವು ಕಲ್ಲು ಬಿಸಾಡಿದರೆ, ನಾನು ಹಣ್ಣು ಕೊಡಲ್ಲ. ಕಲ್ಲು ಬೀಸಿದರೆ ಹಣ್ಣು ಕೊಡಲು ನಾನು ಮರವಲ್ಲ. ನಾನು ಸಹ ತೀವ್ರವಾಗಿಯೇ ಕಲ್ಲು ಬಿಸಾಡುತ್ತೇನೆ ಎಂದು ಕಿಡಿಕಾರಿದ್ದಾರೆ.
ನಿಮ್ಮ ಕರ್ನಾಟಕ ಕಾಂಗ್ರೆಸ್ ಫೇಸ್ ಬುಕ್ ಪೇಜ್ನಲ್ಲಿ ಅಣ್ಣ ನಾಡಕಳ್ಳ, ತಮ್ಮ ಮರಗಳ್ಳ ಅಂತ ಬರೆದುಕೊಂಡಿದ್ದಿರಿ. ಈ ರೀತಿ ಬರೆದು ನನ್ನ ಬಳಿ ನೀವು ಯಾವ ರೀತಿ ಗೌರವ ಕೊಡಿ ಅಂತಾ ಕೇಳುತ್ತಿರಾ ಎಂದು ಪ್ರಶ್ನಿಸಿದ್ದಾರೆ.
ಎಫ್ಐಆರ್‌ನಲ್ಲಿ ನನ್ನ ತಮ್ಮನ ಹೆಸರಿಲ್ಲ. ನನ್ನ ಅಭಿವೃದ್ಧಿ ಕೆಲಸಗಳು ಬಹಳಷ್ಟು ಜನರ ಕಣ್ಣು ಕುಕ್ಕುತ್ತಿದೆ ಹೀಗಾಗಿ ಈ ರೀತಿ ತಿರುಚುತ್ತಿದ್ದಾರೆ. ಮೈಸೂರಿನಲ್ಲಿ ನಿಮ್ಮ ಬಾಲಬುಡುಕರು ಬಹಳಷ್ಟು ಜನ ಹುಟ್ಟಿಕೊಂಡಿದ್ದಾರೆ. ಅದರಲ್ಲಿ ಸ್ವಲ್ಪ ಜನ ಲೋಕಸಭಾ ಚುನಾವಣಾ ಆಕಾಂಕ್ಷಿಗಳಿದ್ದಾರೆ. ಮೊದಲು ನೀವು ಅಭ್ಯರ್ಥಿ ಹೆಸರು ಘೋಷಣೆ ಮಾಡಿ. ಆವಾಗ ಅವರೇ ಕಿತ್ತಾಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ದಾಖಲಾಯ್ತು ಎಫ್ಐಆರ್, ಏನಿದು ಪ್ರಕರಣ?
ನನ್ನ ಹೆಸರು ಬಳಸಿ ರಾಜಕೀಯ ಮಾಡುತ್ತಿದ್ದಾರೆ. ಜೊತೆಗೆ ನಿಗಮ ಮಂಡಳಿ ಘೋಷಣೆ ಮಾಡಿ ಅವರಿಗೆ ಪುನರ್ವಸತಿ ಕಲ್ಪಿಸಿ. ಆಗ ಅವರೆ ಸುಮ್ಮನಾಗುತ್ತಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಪ್ರತಾಪ್ ಸಿಂಹ ವಿರುದ್ಧ ಎಫ್ಐಆರ್ ದಾಖಲು
ನಾನು ಸೋಮಾರಿ ಸಿದ್ದ ಅಲ್ಲ ಎಂದು ಪ್ರತಾಪ್ ಸಿಂಹ ಹೇಳಿಕೆ ವಿಚಾರವಾಗಿ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರತಾಪ್ ಸಿಂಹ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. 1860ರ ಐಪಿಸಿ ಸೆಕ್ಷನ್ 504, 153ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಸಿಎಂ ಸಿದ್ದರಾಮಯ್ಯರನ್ನು ಸೋಮಾರಿ ಎಂದು ಟೀಕಿಸಿದ್ದರು.
ನಿನ್ನೆ ಹುಣಸೂರಿನಲ್ಲಿ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಜಾತಿಗಳ ನಡುವೆ ದ್ವೇಷ ಹರಡುತ್ತಿದ್ದಾರೆಂದು ಟೀಕಿಸಿದ್ದರು. ಈ ಸಂಬಂಧ ಮೈಸೂರು ಗ್ರಾಮಾಂತರ ಕಾಂಗ್ರೆಸ್ ಘಟಕದ ಅಧ್ಯಕ್ಷ ವಿಜಯಕುಮಾರ್ ದೂರು ನೀಡಿದ್ದರು. ಸಂಸದ ಪ್ರತಾಪ್ ಸಿಂಹ ಹೇಳಿಕೆ ಖಂಡಿಸಿ ನಿನ್ನೆ ಕಾಂಗ್ರೆಸ್ ಪ್ರತಿಭಟನೆ ಕೂಡ ಮಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:27 pm, Wed, 27 December 23