ಸಾರ್ವಜನಿಕರಿಗೆ ಮತ್ತೊಂದು ದರ ಏರಿಕೆಯ ಬಿಸಿ: KMF ನಂದಿನಿ ತುಪ್ಪ, ಬೆಣ್ಣೆ ದರ ಹೆಚ್ಚಳ

KMF Nandini prices hiked: ಜಿಎಸ್‌ಟಿ ಇಳಿಕೆಯ ಹಿನ್ನಲೆಯಲ್ಲಿ ಕೆಲ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆ ಮಾಡಿದ್ದರಿಂದ ಕರ್ನಾಟಕ ಹಾಲು ಮಹಾಮಂಡಳವು (ಕೆಎಂಎಫ್​​) ತುಪ್ಪ, ಬೆಣ್ಣೆ ದರವನ್ನು ಇಳಿಕೆ ಮಾಡಿತ್ತು. ಆದ್ರೆ, ಇದೀಗ ಮತ್ತೆ ದಿಢೀರನೇ ಏರಿಕೆ ಮಾಡಿದ್ದು, ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ ತಟ್ಟಲಿದೆ. ಹಾಗಾದ್ರೆ, ತುಪ್ಪ, ಬೆಣ್ಣೆ ಕೆಜಿಗೆ ಎಷ್ಟು ಏರಿಕೆಯಾಗಿದೆ? ಹೊಸ ದರ ಯಾವಾಗಿನಿಂದ ಜಾರಿಗೆ ಎನ್ನುವ ವಿವರ ಇಲ್ಲಿದೆ.

ಸಾರ್ವಜನಿಕರಿಗೆ ಮತ್ತೊಂದು ದರ ಏರಿಕೆಯ ಬಿಸಿ: KMF ನಂದಿನಿ ತುಪ್ಪ, ಬೆಣ್ಣೆ ದರ ಹೆಚ್ಚಳ
ನಂದಿನಿ ತುಪ್ಪ, ಬೆಣ್ಣೆ
Edited By:

Updated on: Jul 23, 2026 | 7:44 PM

ಬೆಂಗಳೂರು, (ಜುಲೈ 23): ಸ್ವಲ್ಪ ದಿನದ ಹಿಂದಷ್ಟೇ ತುಪ್ಪ ಸೇರಿದಂತೆ ನಂದಿನಿ (Nandini) ಉತ್ಪನ್ನಗಳ ದರ ಇಳಿಕೆ ಮಾಡಿದ್ದ ಕರ್ನಾಟಕ ಹಾಲು ಮಹಾಮಂಡಳವು (ಕೆಎಂಎಫ್​​) , ಇದೀಗ ದಿಢೀರ್ ಅಂತ ತುಪ್ಪ, ಬೆಣ್ಣೆ ದರ ಏರಿಕೆ ಮಾಡಿದೆ. ಒಂದು ಕೆ.ಜಿ ತುಪ್ಪಕ್ಕೆ (Nandni Ghee) 15 ರೂಪಾಯಿ ಹೆಚ್ಚಳವಾಗಿದ್ದರೆ, ಬೆಣ್ಣೆ (butter) ದರ ಕೆಜಿಗೆ ಬರೋಬ್ಬರಿ 22 ರೂ. ಏರಿಕೆ ಮಾಡಲಾಗಿದೆ. ಹೊಸ ದರ ನಾಳೆಯಿಂದ (ಜುಲೈ 24) ಜಾರಿ ಬರಲಿದ್ದು, ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ ತಟ್ಟಲಿದೆ.

ಪರಿಷ್ಕೃತ ದರ ಹೀಗಿದೆ

1 kg ತುಪ್ಪ 700 ರಿಂದ 715ಕ್ಕೆ ಹೆಚ್ಚಳವಾಗಲಿದೆ. ಇನ್ನು 610 ರೂಪಾಯಿ ಇದ್ದ 1 KG ಬೆಣ್ಣೆ ದರ ಈಗ 660ಕ್ಕೆ ಏರಿಕೆಯಾಗಲಿದೆ. ಇನ್ನು ಪರಿಷ್ಕೃತ ದರ ಜುಲೈ 24 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಇನ್ನು ತುಪ್ಪ ಹಾಗೂ ಬೆಣ್ಣೆ ದರ ಏರಿಕೆ ಹಿನ್ನೆಲೆಯಲ್ಲಿ ಗೃಹ ಬಳಕೆ ಹಾಗೂ ಹೋಟೆಲ್ ಉದ್ಯಮದ ಮೇಲೂ ಪರಿಣಾಮ ಬೀರಲಿದ್ದು, ತುಪ್ಪ, ಬೆಣ್ಣೆಯಿಂದ ಮಾಡುವ ಆಹಾರ ಪದಾರ್ಥಗಳ ದರ ಏರಿಕೆಯಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿ: ಸರ್ಕಾರಿ ಶಾಲಾ ಶಿಕ್ಷಕರಿಗೆ ತಟ್ಟಿದ ಮೊಟ್ಟೆ ದರ ಏರಿಕೆ ಬಿಸಿ: ಸರ್ಕಾರ ನೀಡುವ ಹಣ ಹೆಚ್ಚಳಕ್ಕೆ ಮನವಿ

ಕೇಂದ್ರ ಸರ್ಕಾರ ಸರಕು ಮತ್ತು ಸೇವಾ(ಜಿಎಸ್​​ಟಿ) ಕಡಿತ ಮಾಡಿದ್ದರಿಂದ ಈ ಹಿಂದೆ ತುಪ್ಪ ಹಾಗೂ ನಂದಿನಿ ಉತ್ಪನ್ನಗಳ ದರವನ್ನು ಶೇ.7ರಷ್ಟು ಇಳಿಕೆ ಮಾಡಲಾಗಿತ್ತು. ಬಳಿಕ ಕಳೆದ ವರ್ಷ ನವೆಂಬರ್​​ನಲ್ಲಿ ಸಹ ಶೇ.15ರಷ್ಟು ತುಪ್ಪ,  ಶೆ.6ರಷ್ಟು ಬೆಣ್ಣೆ ದರ ಏರಿಕೆ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಹೆಚ್ಚಳ ಮಾಡಲಾಗಿದ್ದು, ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳಲಿದೆ.KMF Hikes Nandini Ghee & Butter Prices in Karnataka; Revised Rates Effective From Tomorrow

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:41 pm, Thu, 23 July 26

Follow Us