Jumping Spider Arkavati: ನಂದಿ ಬೆಟ್ಟದ ತಪ್ಪಲಿನಲ್ಲಿ ಹೊಸ ಜೇಡ ಪ್ರಭೇದ ಪತ್ತೆ ‘ಅರ್ಕಾವತಿ’ ಎಂದು ನಾಮಕರಣ
ನಂದಿ ಬೆಟ್ಟದ ತಪ್ಪಲಿನಲ್ಲಿ ಹೊಸ ಜೇಡ ಪ್ರಭೇದ ಪತ್ತೆಯಾಗಿದ್ದು, ಅದಕ್ಕೆ ಅರ್ಕಾವತಿ ಎಂದು ನಾಮಕರಣ ಮಾಡಲಾಗಿದೆ.

ನಂದಿ ಬೆಟ್ಟದ ತಪ್ಪಲಿನಲ್ಲಿ ಹೊಸ ಜೇಡ ಪ್ರಭೇದ ಪತ್ತೆಯಾಗಿದ್ದು, ಅದಕ್ಕೆ ಅರ್ಕಾವತಿ ಎಂದು ನಾಮಕರಣ ಮಾಡಲಾಗಿದೆ. ದೊಡ್ಡಬಳ್ಳಾಪುರದ ನಂದಿ ಬೆಟ್ಟ ಸಮೀಪದ ತಪ್ಪಲಿನಲ್ಲಿ ಈ ಹೊಸ ಜೇಡವನ್ನು ಪರಿಸರಾಸಕ್ತರು ಪತ್ತೆ ಮಾಡಿದ್ದು ನಾಮಕರಣವೂ ಆಗಿದೆ. ಜಗತ್ತಿನಲ್ಲಿರುವ 50,000 ಜೇಡ ಪ್ರಬೇಧಗಳ ಹಾಗೂ ಕರ್ನಾಟಕದಲ್ಲಿರುವ 500 ಪ್ರಬೇಧಗಳ ಪಟ್ಟಿಗೆ ಹೊಸದೊಂದು ಸೇರ್ಪಡೆಯಾದಂತಾಗಿದೆ.
ಇನ್ನು ಈ ಜೇಡವು ಸಾಲ್ಟಿಸಿಡೆ(Salticidae) ಕುಟುಂಬಕ್ಕೆ ಸೇರಿರುವ ಈ ಜೇಡವಾಗಿದೆ, ತುಂಬಾ ಚುರುಕಾದ ಜೇಡವಾಗಿದ್ದು, ಇದರ ಅಳತೆ ಅರ್ಧ ಸೆಂಟಿಮೀಟರ್ಗೂ ಸ್ವಲ್ಪ ಕಡಿಮೆ ಇದೆ. ಆರ್ ಜನಾರ್ಧನ, ಚಿನ್ಮಯ್ ಸಿ ಮಳಿಯೆ, ಎಸ್ ಆಶಾ, ಜೆ ಚೇತನ್, ಎಸ್ಪಿ ಹರಿಚರಣ್, ನವೀನ್ ಅಯ್ಯರ್, ಕೆ ಸಾಕ್ಷಿ ಹಾಗೂ ಅಕ್ಷಯ್ ದೇಶಪಾಂಡೆ ತಂಡವು ಐದು ತಿಂಗಳ ವಾರಾಂತ್ಯದಲ್ಲಿ ಜೇಡ ಹುಡುಕಾಟ ಹಾಗೂ ಜೇಡದ ಮಾದರಿ ಸಂಗ್ರಹಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿತ್ತು.
ಈ ಜೇಡ ಬಹಳ ಅಪರೂಪದ್ದಾಗಿದ್ದು, ವಿಯೆಟ್ನಾಂ, ಚೀನಾ, ಭಾರತ, ಶ್ರೀಲಂಕಾ ಸೇರಿದಂತೆ ಜಗತ್ತಿನ 4 ದೇಶಗಳಲ್ಲಿ ಮಾತ್ರ ಈ ಪ್ರಭೇದವನ್ನು ಕಾಣಬಹುದಾಗಿದೆ. ಹಾಗಾದ್ರೆ ಈ ಜೇಡದ ಮಹತ್ವವೇನು ಎಂಬುದನ್ನು ತಿಳಿಯೋಣ.
ಈ ಜೇಡದ ಸಂಖ್ಯೆ ಅತಿ ವಿರಳ, ಇವುಗಳನ್ನು ಬೆಟ್ಟದ ತಪ್ಪಲಿನಲ್ಲಿ ಕಾಣಬಹುದು, ಕುರುಚಲು ಹುಲ್ಲುಗಳು ಬೆಳೆದಿರುವ ಪ್ರದೇಶ, ಬಂಡೆಗಳ ಮಧ್ಯೆ ಕಾಣಬಹುದು ಆದರೆ ಗಿಡ, ಮರ ಎಲೆಗಳ ನಡುವೆ ಇವುಗಳು ಎಲ್ಲೂ ಕಂಡುಬಂದಿಲ್ಲ. ಇವು ಹಗಲು ತುಂಬಾ ಚಟುವಟಿಕೆಯಿಂದ ಕೂಡಿರುತ್ತವೆ, ಸುರುಳಿಯಾಕಾರದಲ್ಲಿರುವ ಒಣ ಎಲೆಗಳಲ್ಲಿ ಹೆಣ್ಣು ಜೇಡವು ಗೂಡು ನಿರ್ಮಿಸಿ ಅಲ್ಲಿಯೇ ಮೊಟ್ಟೆ ಇಟ್ಟು ಮರಿಗಳು ಆಗುವವರೆಗೂ ಕಾಯುತ್ತವೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:05 am, Thu, 22 December 22