AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರು ಜಿಲ್ಲೆಯಲ್ಲಿ ಕಳಪೆ ಬೀಜಗಳ ಹಾವಳಿ: ನ್ಯಾಯಕ್ಕಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ರೈತರ ಪ್ರತಿಭಟನೆ

ರಾಯಚೂರು ಜಿಲ್ಲೆಯಲ್ಲಿ ಕಳಪೆ ಬೀಜಗಳ ಹಾವಳಿ ಶುರುವಾಗಿದೆ. ಹೀಗಾಗಿ ರೈತರು ನ್ಯಾಯಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಮಾಡಿದ್ದಾರೆ.ಕಳಪೆ ಬೀಜಗಳಿಂದ ಬಿತ್ತನೆ ಮಾಡಿದ ಬಳಿಕ ಸರಿಯಾದ ಫಸಲು ಬಾರದೇ ಮತ್ತೆ ಸಾಲದ ಸುಳಿಗೆ ರೈತರು ಸಿಲುಕುತ್ತಾರೆ. ಹೀಗಾಗಿ ಕಳಪೆ ಬೀಜಗಳ ಹಾವಳಿಗೆ ಕಡಿವಾಣ ಹಾಕುವಂತೆ ರೈತರು ಮನವಿ ಮಾಡಿದ್ದಾರೆ.

ರಾಯಚೂರು ಜಿಲ್ಲೆಯಲ್ಲಿ ಕಳಪೆ ಬೀಜಗಳ ಹಾವಳಿ: ನ್ಯಾಯಕ್ಕಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ರೈತರ ಪ್ರತಿಭಟನೆ
ರಾಯಚೂರು ಜಿಲ್ಲೆಯಲ್ಲಿ ಕಳಪೆ ಬೀಜಗಳ ಹಾವಳಿ: ನ್ಯಾಯಕ್ಕಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ರೈತರ ಪ್ರತಿಭಟನೆ
ಭೀಮೇಶ್​​ ಪೂಜಾರ್
| Edited By: |

Updated on: May 23, 2024 | 10:24 PM

Share

ರಾಯಚೂರು, ಮೇ 23: ಬಿಸಿಲುನಾಡು ರಾಯಚೂರಿನಲ್ಲಿ ಕಳಪೆ ಬೀಜಗಳ (seeds) ಹಾವಳಿ ಶುರುವಾಗಿದೆ. ಕಳಪೆ ಬೀಜಗಳನ್ನ ಕಡಿಮೆ ಹಣದಲ್ಲಿ ಮಾರಾಟ ಮಾಡಲಾಗುತ್ತಿರುವ ಹಿನ್ನೆಲೆ ಅನಕ್ಷರಸ್ಥ ರೈತರು (Farmers) ಮೋಸ ಹೋಗುತ್ತಿದ್ದಾರೆ. ಹೀಗಾಗಿ ಅಕ್ರಮ ತಡೆಯಲು ಹೋರಾಟ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಕಳಪೆ ಬೀಜಗಳ ಹಾವಳಿ ಶುರುವಾಗಿದೆಯಂತೆ ಆಕ್ರೋಶ ವ್ಯಕ್ತಪಡಿಸಿ ರೈತರು ನ್ಯಾಯಕ್ಕಾಗಿ ಹೋರಾಟ ನಡೆಸಿದ್ದಾರೆ.

ರೈತರು ರಾಯಚೂರು ನಗರದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಮಾಡಿದ್ದಾರೆ. ಕಳಪೆ ಬೀಜಗಳಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅನಕ್ಷರಸ್ಥ ರೈತರು 10, 20 ಕಡಿಮೆ ದರ ಅಂತ ಅಧಿಕೃತನೋ ಅನಧಿಕೃತನೋ ಅಂತ ಗೊತ್ತಾಗದೇ ಬೀಜಗಳನ್ನ ಖರೀದಿಸಿ ಬಿಡುತ್ತಾರೆ. ಇದರಿಂದ ಮುಂದೆ ಸಾಲ ಸೋಲ ಮಾಡಿ ಬಿತ್ತನೆ ಮಾಡಿದ ಬಳಿಕ ಸರಿಯಾದ ಫಸಲು ಬಾರದೇ ಮತ್ತೆ ಸಾಲದ ಸುಳಿಗೆ ರೈತರು ಸಿಲುಕುತ್ತಾರೆ. ಹೀಗಾಗಿ ಕಳಪೆ ಬೀಜಗಳ ಹಾವಳಿಗೆ ಕಡಿವಾಣ ಹಾಕುವಂತೆ ರೈತರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ರಾಯಚೂರಿನಲ್ಲಿ ರೈತರ ಬೆಳೆ ಪರಿಹಾರದ ಹಣ ಗೋಲ್ಮಾಲ್! 36 ದುರುಳರಿಂದ 75 ಲಕ್ಷಕ್ಕೂ ಅಧಿಕ ಹಣ ವಂಚನೆ

ಅಷ್ಟಕ್ಕೂ ರಾಯಚೂರು ತೆಲಂಗಾಣ, ಆಂಧ್ರದ ಗಡಿಯಲ್ಲಿರುವ ಜಿಲ್ಲೆ. ಇಲ್ಲಿ ಸಲೀಸಾಗಿ ಕಳಪೆ ಬೀಜ ಮಾರಾಟ ಮಾಡೋದು ಜಿಲ್ಲೆಗೆ ಎಂಟ್ರಿ ಕೊಡ್ತಾರೆ. ಹಳ್ಳಿ ಹಳ್ಳಿಗೆ ಸುತ್ತಿ ಕಡಿಮೆ ಬೆಲೆಗೆ ಹತ್ತಿ ಸೇರಿ ವಿವಿಧ ಬೆಳೆಗಳ ಬೀಜಗಳನ್ನ ಮಾರಾಟ ಮಾಡ್ತಿದ್ದಾರಂತೆ. ಈ ಬಗ್ಗೆ ಚೆಕ್​ಪೋಸ್ಟ್​ಗಳಲ್ಲೇ ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಬೇಕು. ಇಲ್ದಿದ್ರೆ ಹೆಚ್ಚಿನ ಸಮಸ್ಯೆ ಆಗತ್ತೆ ಅಂತ ರೈತರು ಆಗ್ರಹಿಸಿದ್ದಾರೆ.

ಕಳೆದ ಬಾರಿಯೂ ಇದೇ ರೀತಿ ಕಳಪೆ ಬೀಜಗಳನ್ನ ಪಡೆದಿದ್ದ ಅದೆಷ್ಟೋ ರೈತರು ಕೊನೆ ಕೊನೆಗೆ ಕೈ ಸುಟ್ಟುಕೊಂಡಿದ್ದರು. ಈ ಬಾರಿ ಹೀಗಾದ್ರೆ ಬರಗಾಲದಿಂದ ಬೀದಿಗೆ ಬಿದ್ದಿರೋ ರೈತರು ಮತ್ತೊಂದು ಸುತ್ತಿನ ಸಮಸ್ಯೆಗೆ ಸಿಲುಕುತ್ತಾರೆ ಅಂತ ರೈತರು ತಮ್ಮ ಅಳನ್ನ ತೋಡಿಕೊಂಡಿದ್ದಾರೆ. ಈ ಬಗ್ಗೆ ಕೃಷಿ ಜಂಟಿ ನಿರ್ದೇಶಕಿ ದೇವಿಕಾ ಮಾತನಾಡಿ, ರೈತರು ಬೀಜಗಳ ಖರೀದಿ ಬಗ್ಗೆ ಎಚ್ಚರ ವಹಿಸಬೇಕು. ಅಕ್ರಮವಾಗಿ ಬೀಜಗಳ ಮಾರಾಟ ಬಗ್ಗೆ ನಿಗಾ ವಹಿಸಲಾಗುತ್ತೆ ಎಂದು ಹೇಳಿದ್ದರು.

ಇದನ್ನೂ ಓದಿ: IIIT Raichur Recruitment 2024: ರಾಯಚೂರು ಐಐಐಟಿ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕ – 9 ಹುದ್ದೆ ಖಾಲಿಯಿವೆ, ವಿವರ ಇಲ್ಲಿದೆ

ಇದಷ್ಟೇ ಅಲ್ಲ ಕೆಲ ಅಧಿಕೃತ ರಸಗೊಬ್ಬರ ಮಳಿಗೆಗಳಲ್ಲೂ ರೈತರಿಗೆ ವಂಚಿಸಲಾಗ್ತಿದೆಯಂತೆ. ಬೀಜಗಳ ಪಾಕೆಟ್​ ಮೇಲೆ ಇರೋ ದರಕ್ಕಿಂತಲೂ ಹೆಚ್ಚಿನ ದರ ವಸೂಲಿ ಮಾಡ್ತಿದ್ದಾರೆ ಎಂದು ರೈತರು ಆರೋಪಿಸಿದ್ದು ಈ ಬಗ್ಗೆಯೂ ಅಧಿಕಾರಿಗಳು ಕ್ರಮಕೈಗೊಳ್ಳಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.