AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರಿನಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಗೆ ರೈತರು ಹೈರಾಣು: ರಾತ್ರಿ ವಿದ್ಯುತ್ ಸಮಸ್ಯೆ, ಗೃಹಿಣಿಯರು ಮಕ್ಕಳ ಪರದಾಟ

ನಿರ್ಲಕ್ಷ,ನೀರಾವರಿ ಅಧಿಕಾರಿಗಳ ಬೇಜವಾಬ್ದಾರಿತನದಿಂದ ರೈತರು ಹೈರಾಣಾಗಿದ್ದಾರೆ. ಅದರಲ್ಲೂ ವಿದ್ಯುತ್​ನಿಂದಲೇ ಹೆಚ್ಚಿನ ಸಮಸ್ಯೆ ಉಲ್ಭಣವಾಗ್ತಿದೆ. ಬರೀ ರೈತರು ಮಾತ್ರ ವಿದ್ಯುತ್ ಸಮಸ್ಯೆಯಿಂದ ನಲುಗುತ್ತಿಲ್ಲ. ವಿದ್ಯುತ್ ಕಣ್ಣಾಮುಚ್ಚಾಲೆ ಆಟಕ್ಕೆ ಗೃಹಿಣಿಯರು, ಶಾಲಾ ಮಕ್ಕಳು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ.

ರಾಯಚೂರಿನಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಗೆ ರೈತರು ಹೈರಾಣು: ರಾತ್ರಿ ವಿದ್ಯುತ್ ಸಮಸ್ಯೆ, ಗೃಹಿಣಿಯರು ಮಕ್ಕಳ ಪರದಾಟ
ಒಲೆ ಬೆಳಕಿನಲ್ಲಿ ಹೋಮ್ ವರ್ಕ್ ಮಾಡುತ್ತಿರುವ ಮಕ್ಕಳು
ಭೀಮೇಶ್​​ ಪೂಜಾರ್
| Edited By: |

Updated on: Oct 23, 2023 | 4:35 PM

Share

ರಾಯಚೂರು, ಅಕ್ಟೋಬರ್ 23: ಮಳೆ ಕೊರತೆ ಹಿನ್ನೆಲೆ ಜಲವಿದ್ಯುತ್ ಉತ್ಪಾದನೆ ಕುಂಠಿತಗೊಂಡಿದ್ರಿಂದ ವಿದ್ಯುತ್ (Power) ಸಮಸ್ಯೆ ದಿನೇ ದಿನೇ ಹೆಚ್ಚಾಗ್ತಿದೆ. ಪಂಪ್​ಸೆಟ್​ಗೆ ಸರಿಯಾದ ವಿದ್ಯುತ್ ಪೂರೈಕೆಯಿಲ್ಲದೇ ರೈತರ ನಿದ್ದೆಗೆಡಿಸಿದೆ. ಆದ್ರೆ ಬರೀ ರೈತರಷ್ಟೇ ಅಲ್ಲ ವಿದ್ಯುತ್ (Electricity Issue) ಕಣ್ಣಾಮುಚ್ಚಾಲೆಯಿಂದ ಈಗ ಗೃಹಿಣಿಯರು, ಶಾಲಾ ಮಕ್ಕಳು ಪರದಾಡ್ತಿದ್ದಾರೆ. ಒಲೆಯ ಬೆಳಕಲ್ಲಿ ಅಕ್ಷರಾಭ್ಯಾಸ ಮಾಡ್ತಿರೊ ಬಾಲಕ, ಕತ್ತಲಲ್ಲೇ ಮನೆ ಮಂದಿಗೆ ಅಡುಗೆ ಸಿದ್ಧಪಡಿಸ್ತಿರೊ ಗೃಹಿಣಿ, ಹೊರಗೆ ಹೋದ್ರೆ ಹಾವು ಚೇಳುಗಳ ಕಾಟ, ಹೀಗಾಗಿ ಮನೆಯಲ್ಲೇ ಇರೋ ಮಕ್ಕಳು ವಿದ್ಯುತ್ ಸಮಸ್ಯೆಯಿಂದ ಮೊಬೈಲ್​ಗೆ ದಾಸರಾಗ್ತಿದ್ದಾರೆ.

ಹೌದು, ರಾಜ್ಯದಲ್ಲಿ ಉಲ್ಬಣಗೊಂಡಿರೋ ಬರಗಾಲದಿಂದ ಒಂದರ ಮೇಲೊಂದರಂತೆ ಸಮಸ್ಯೆ ಹೆಚ್ಚಾಗ್ತಿವೆ. ಮಳೆಯಿಲ್ಲದೇ ಬೆಳೆ ಒಣಗಿ ಹೋಗ್ತಿದ್ರೆ, ಇದರ ಜೊತೆ ಮಳೆಯಿಲ್ಲದೇ ಜಲ ವಿದ್ಯುತ್ ಉತ್ಪಾದನೆ ಕೂಡ ಕುಂಠಿತಗೊಂಡಿದೆ. ಹೀಗಾಗಿ ಇಡಿ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಬೆಳೆ ಕಾಪಾಡಲು ರೈತರು ಪಂಪ್​ಸೆಟ್ ಮೊರೆ ಹೋಗಿದ್ರು ವಿದ್ಯುತ್ ಸರಿಯಾಗಿ ಸಿಗ್ತಿಲಿಲ್ಲ. ಪದೇ ಪದೇ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಶುರುವಾಗಿದೆ. ಹೀಗಾಗಿ ರೈತರು ಪಂಪ್​ಸೆಟ್​ ಮೂಲಕವೂ ಬೆಳೆ ಕಾಪಾಡಲಾಗ್ತಿಲ್ಲ. ಪಂಪ್​ಸೆಟ್ ಮೂಲಕ ಬೆಳೆಗೆ ನೀರುಣಿಸಬೇಕಂದ್ರೆ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಬೇಕು. ಆದ್ರೆ ರಾಯಚೂರಿನಲ್ಲಿ ಬರೀ ನಾಲ್ಕೈದು ಗಂಟೆ ವಿದ್ಯುತ್ ಕೊಡಲಾಗ್ತಿದೆ..ಆ ಮಧ್ಯೆ ವಿದ್ಯುತ್ ಕಟ್ ಆಫ್ ಆಗತ್ತೆ. ಹೀಗಾಗಿ ಜಿಲ್ಲೆ ರೈತರು ಪಂಪ್​ಸೆಟ್ ಮೂಲಕವೂ ಬೆಳೆಗೆ ನೀರು ಹಾಯಿಸಲಾಗ್ತಿಲ್ಲ. ಸರಣಿ ಪ್ರತಿಭಟನೆ ನಡಿಸಿ,ಹೆದ್ದಾರಿ ಬಂದ್ ಮಾಡಿದ್ರು ಪ್ರಯೋಜನವಾಗ್ತಿಲ್ಲ. ಹೀಗಾಗಿ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ.

ಇದನ್ನೂ ಓದಿ: ರಾಯಚೂರಿನಲ್ಲಿ ಫ್ರೀ ಸೈಟ್​ಗೆ ಮತ್ತೆ ಕೆಲವರ ಅಲೆದಾಟ! ಅತಿಕ್ರಮಣಕ್ಕೆ ಮುಂದಾದವರ ಮೇಲೆ ಎಫ್​​ಐಆರ್ ಅಸ್ತ್ರ

ನಿರ್ಲಕ್ಷ,ನೀರಾವರಿ ಅಧಿಕಾರಿಗಳ ಬೇಜವಾಬ್ದಾರಿತನದಿಂದ ರೈತರು ಹೈರಾಣಾಗಿದ್ದಾರೆ. ಅದರಲ್ಲೂ ವಿದ್ಯುತ್​ನಿಂದಲೇ ಹೆಚ್ಚಿನ ಸಮಸ್ಯೆ ಉಲ್ಭಣವಾಗ್ತಿದೆ. ಬರೀ ರೈತರು ಮಾತ್ರ ವಿದ್ಯುತ್ ಸಮಸ್ಯೆಯಿಂದ ನಲುಗುತ್ತಿಲ್ಲ. ವಿದ್ಯುತ್ ಕಣ್ಣಾಮುಚ್ಚಾಲೆ ಆಟಕ್ಕೆ ಗೃಹಿಣಿಯರು, ಶಾಲಾ ಮಕ್ಕಳು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಯಚೂರಿನ ಗ್ರಾಮೀಣ ಭಾಗಗಳಲ್ಲಿ ಹೊಲ, ಗದ್ದೆಗಳಿಂದ ಸಂಜೆ ಮನೆಗೆ ಬರೋರಿಗೆ ಉಪಚರಿಸಲು ಗೃಹಿಣಿಯರಿಗೆ ಸಾಧ್ಯವಾಗ್ತಿಲ್ಲ. ಇಳಿ ಸಂಜೆ ಹೊತ್ತಲ್ಲಿ ವಿದ್ಯುತ್ ಕಡಿತಗೊಳ್ತಿದೆ. ಕತ್ತಲಲ್ಲೇ ಗೃಹಿಣಿಯರು ಮನೆಮಂದಿಗೆ ಅಡುಗೆ ಮಾಡೋ ದುಸ್ಥಿತಿ ಎದುರಾಗಿದೆ. ಇತ್ತ ಶಾಳಾ ಮಕ್ಕಳ ಸ್ಥಿತಿಯಂದು ಹೇಳತೀರದು..ವಿದ್ಯುತ್ ಇಲ್ಲದ ಹಿನ್ನೆಲೆ ಹಾವು ಚೇಳುಗಳ ಕಾಟಕ್ಕೆ ಜನ ಹೊರಗಡೆ ಓಡಾಟ ಮಾಡ್ತಿಲ್ಲ. ಇತ್ತ ಮಕ್ಕಳು,ಕೆಲ ಬಾಲಕರು ಒಲೆ ಬೆಳಕಿನಲ್ಲಿ ಓದೊಸ್ಥಿತಿಯಿದೆ.

ಹೀಗೆ ವಿದ್ಯುತ್ ಸಮಸ್ಯೆಯಿಂದ ಚೈನ್​ ಲಿಂಕ್ ಮಾದರಿಯಲ್ಲಿ ಸಂಕಷ್ಟಗಳು ಉಲ್ಭಣಗೊಳ್ತಿವೆ. ಕೂಡಲೇ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕಿದೆ. ಗ್ರಾಮೀಣ ಭಾಗದ ಜನರ ಕಷ್ಟಸುಖಗಳನ್ನ ಆಲಿಸಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Bhemesh Poojar
Bhemesh Poojar

ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.ಈ ಹಿಂದೆ ಬೆಂಗಳೂರು ನಗರದಲ್ಲಿ ಕ್ರೈಂ ರಿಪೋರ್ಟರ್ ಆಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ.ಟಿವಿ9 ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ರಾಯಚೂರು ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ನನ್ನ ಹವ್ಯಾಸ ಕ್ರಿಕೆಟ್ ಆಡುವುದು.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು