AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಟಾಕಿ ಕಿಡಿಗೆ ಹೊತ್ತಿ ಉರಿದ ಗುಜರಿ ಅಂಗಡಿ, ರಾಯಚೂರಿನಲ್ಲಿ ನಾಲ್ಕೈದು ಕ್ವಿಂಟಲ್ ಹತ್ತಿ ಭಸ್ಮ

ರಾಯಚೂರಿನ ಗ್ರಾಮವೊಂದರಲ್ಲಿ ಹೊಲದಲ್ಲಿ ಬೆಳೆಯಲಾಗಿದ್ದ ಹತ್ತಿಯನ್ನು ಬಿಡಿಸಿ ಮನೆಯ ಮಾಳಿಗೆ ಮೇಲೆ ಸಂಗ್ರಹಿಸಲಾಗಿತ್ತು. ನಿನ್ನೆ ತಡ ರಾತ್ರಿ ಕಿಡಿಗೇಡಿಗಳು ಪಟಾಕಿಗೆ ಕಿಡಿ ಹೊತ್ತಿಸಿ ಹತ್ತಿಗೆ ಬೀಸಾಡಿರುವ ಶಂಕೆ ವ್ಯಕ್ತವಾಗಿದೆ. ಪಟಾಕಿ ಕಿಡಿ ತಗುಲಿ ನಾಲ್ಕೈದು ಕ್ವಿಂಟಲ್ ಹತ್ತಿ ಸುಟ್ಟು ಭಸ್ಮವಾಗಿದೆ. ಹೊಗೆ ಆವರಿಸುತ್ತಿದ್ದಂತೆ ಗ್ರಾಮಸ್ಥರು ಬೆಂಕಿ ನಂದಿಸಿದ್ದಾರೆ.

ಪಟಾಕಿ ಕಿಡಿಗೆ ಹೊತ್ತಿ ಉರಿದ ಗುಜರಿ ಅಂಗಡಿ, ರಾಯಚೂರಿನಲ್ಲಿ ನಾಲ್ಕೈದು ಕ್ವಿಂಟಲ್ ಹತ್ತಿ ಭಸ್ಮ
ಪಟಾಕಿ ಕಿಡಿಗೆ ಹೊತ್ತಿ ಉರಿದ ಗುಜರಿ ಅಂಗಡಿ, ರಾಯಚೂರಿನಲ್ಲಿ ನಾಲ್ಕೈದು ಕ್ವಿಂಟಲ್ ಹತ್ತಿ ಭಸ್ಮ
TV9 Web
| Edited By: ಆಯೇಷಾ ಬಾನು|

Updated on: Nov 14, 2023 | 1:20 PM

Share

ರಾಯಚೂರು, ನ.14: ರಾಜ್ಯದೆಲ್ಲೆಡೆ ದೀಪಾವಳಿ ಹಬ್ಬದ (Deepavali) ಸಂಭ್ರಮ ಮನೆ ಮಾಡಿದೆ. ಪಟಾಕಿ (Fire Crackers) ಸಿಡಿಸಿ ಕೆಲವರು ಸಂಭ್ರಮಿಸಿದರೆ ಮತ್ತೆ ಕೆಲವೆಡೆ ಅದೇ ಪಟಾಕಿಗಳಿಂದ ಅನಾಹುತಗಳು ಸಂಭವಿಸಿವೆ. ದೀಪಾವಳಿ ಹಬ್ಬದಂದೇ ಸುಮಾರು ಮೂರುವರೆ ಲಕ್ಷ ಬೆಲೆ ಬಾಳೋ 4 ಎಲೆಕ್ಟ್ರಿಕ್ ಬೈಕ್​ಗಳು ಸುಟ್ಟು ಭಸ್ಮವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇನ್ನು ಮತ್ತೊಂದೆಡೆ ರಾಯಚೂರಿನಲ್ಲಿ ಕಿಡಿಗೇಡಿಗಳ ಪಟಾಕಿ ಕೃತ್ಯಕ್ಕೆ ಹತ್ತಿ ರಾಶಿ ಸುಟ್ಟು ಭಸ್ಮವಾಗಿದೆ. ರಾಯಚೂರು ತಾಲೂಕಿನ ತುರುಕನಡೋಣಿ ಗ್ರಾಮದಲ್ಲಿ ಲತಮ್ಮ ಅನ್ನೋ ರೈತ ಮಹಿಳೆಗೆ ಸೇರಿದ ಹತ್ತಿ ಭಸ್ಮವಾಗಿದೆ. ಹಬ್ಬದ ಸಂಭ್ರಮದಲ್ಲಿರಬೇಕಿದ್ದ ಲತಮ್ಮ ಅವರ ಬಾಳಿನಲ್ಲಿ ಕತ್ತಲು ಆವರಿಸಿದೆ.

ಹೊಲದಲ್ಲಿ ಬೆಳೆಯಲಾಗಿದ್ದ ಹತ್ತಿಯನ್ನು ಬಿಡಿಸಿ ಮನೆಯ ಮಾಳಿಗೆ ಮೇಲೆ ಸಂಗ್ರಹಿಸಲಾಗಿತ್ತು. ನಿನ್ನೆ ತಡ ರಾತ್ರಿ ಕಿಡಿಗೇಡಿಗಳು ಪಟಾಕಿಗೆ ಕಿಡಿ ಹೊತ್ತಿಸಿ ಹತ್ತಿಗೆ ಬೀಸಾಡಿರುವ ಶಂಕೆ ವ್ಯಕ್ತವಾಗಿದೆ. ಪಟಾಕಿ ಕಿಡಿ ತಗುಲಿ ನಾಲ್ಕೈದು ಕ್ವಿಂಟಲ್ ಹತ್ತಿ ಸುಟ್ಟು ಭಸ್ಮವಾಗಿದೆ. ಹೊಗೆ ಆವರಿಸುತ್ತಿದ್ದಂತೆ ಗ್ರಾಮಸ್ಥರು ಬೆಂಕಿ ನಂದಿಸಿದ್ದಾರೆ. ಲಕ್ಷಾಂತರ ರೂ.ಮೌಲ್ಯದ ಹತ್ತಿ ಸುಟ್ಟ ಹಿನ್ನೆಲೆ ಈ ಬಗ್ಗೆ ಪರಿಶೀಲಿಸಿ ಸೂಕ್ತ ಪರಿಹಾರ ನೀಡುವಂತೆ ಲತಮ್ಮ ಆಗ್ರಹಿಸಿದ್ದಾರೆ.

ಪಟಾಕಿಯಿಂದ ಗುಜರಿ ಅಂಗಡಿಗೆ ಬೆಂಕಿ

ಇನ್ನು ಮತ್ತೊಂದೆಡೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಪಟಾಕಿಯಿಂದ ಗುಜರಿ ಅಂಗಡಿಗೆ ಬೆಂಕಿ ಹತ್ತುಕೊಂಡಿದೆ. ಮುಬಾರಕ್ ಎಂಬುವವರಿಗೆ ಸೇರಿದ ಗುಜುರಿ ಅಂಗಡಿಗೆ ಪಟಾಕಿ ಕಿಡಿ ಬಿದ್ದು ಬೆಂಕಿ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಅಂಗಡಿಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿವೆ. ಪಟಾಕಿಯ ಕಿಡಿ ಗುಜರಿ ಅಂಗಡಿ ಮೇಲೆ ಬಿದ್ದು ಬೆಂಕಿ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಇದನ್ನೂ ಓದಿ: ಮನೆ ದೀಪಾಲಂಕಾರಕ್ಕೆ ಅಕ್ರಮ ವಿದ್ಯುತ್ ಸಂಪರ್ಕ: ಸತ್ಯ ಒಪ್ಪಿಕೊಂಡ ಕುಮಾರಸ್ವಾಮಿ ಹೇಳಿದ್ದಿಷ್ಟು!

ಪಟಾಕಿಯಿಂದಲೇ ಕತ್ತಲಾಯ್ತು ಹಲವರ ಬದುಕು

ದೀಪಾವಳಿ ಹಬ್ಬದ ದಿನವೇ ಹಲವರ ಬದುಕು ಕತ್ತಲಾಗಿದೆ. ಬೆಂಗಳೂರಿನಲ್ಲಿ ಪಟಾಕಿ ಸಿಡಿಸಿದ ಹಲವರು ಕಣ್ಣು ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ. ಪಟಾಕಿ ಸಿಡಿಸುವ ವೇಳೆ ಗಾಯಗೊಂಡವರ ಸಂಖ್ಯೆ 43ಕ್ಕೆ ಏರಿಯಾಗಿದೆ. ಇದರಲ್ಲಿ 13 ಮಂದಿ ಮಕ್ಕಳಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಬ್ಬರು ಸಿಡಿಸಿದ ಪಟಾಕಿಯಿಂದಲೇ 12 ಮಂದಿಗೆ ಗಾಯವಾಗಿದೆ. ಮಿಂಟೋ ಆಸ್ಪತ್ರೆ, ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More