ವರಿಷ್ಠರು ಯಾರ ಹೆಸರು ಸೂಚಿಸ್ತಾರೋ ಅವರು ಸ್ಪರ್ಧಿಸುತ್ತೇವೆ: ಪುತ್ರನನ್ನು ಚುನಾವಣಾ ಕಣಕ್ಕಿಳಿಸುವ ಬಗ್ಗೆ ಸುಳಿವು ನೀಡದ ಎಂಟಿಬಿ
ನನ್ನನ್ನು ಸ್ಪರ್ಧಿಸಲು ಹೇಳಿದ್ರೆ ನಾನೇ ಸ್ಪರ್ಧಿಸುತ್ತೇನೆ. ನನ್ನ ಮಗನನ್ನು ನಿಲ್ಲಿಸಲು ಹೇಳಿದ್ರೆ ಮಗ ಸ್ಪರ್ಧೆ ಮಾಡಲಿದ್ದಾನೆ ಎಂದು ಚುನಾವಣಾ ಅಖಾಡಕ್ಕೆ ಪುತ್ರನನ್ನು ಕಣಕ್ಕಿಳಿಸುವ ಬಗ್ಗೆ ಸಚಿವ ಎಂಟಿಬಿ ನಾಗರಾಜ್ ಸುಳಿವು ನೀಡಿದರು.
ರಾಯಚೂರು: ವರಿಷ್ಠರು (high command) ಯಾರ ಹೆಸರು ಸೂಚಿಸ್ತಾರೋ ಅವರು ಸ್ಪರ್ಧಿಸುತ್ತೇವೆ. ನನ್ನನ್ನು ಸ್ಪರ್ಧಿಸಲು ಹೇಳಿದ್ರೆ ನಾನೇ ಸ್ಪರ್ಧಿಸುತ್ತೇನೆ. ನನ್ನ ಮಗನನ್ನು ನಿಲ್ಲಿಸಲು ಹೇಳಿದ್ರೆ ಮಗ ಸ್ಪರ್ಧೆ ಮಾಡಲಿದ್ದಾನೆ ಎಂದು ಚುನಾವಣಾ ಅಖಾಡಕ್ಕೆ ಪುತ್ರನನ್ನು ಕಣಕ್ಕಿಳಿಸುವ ಬಗ್ಗೆ ಸಚಿವ ಎಂಟಿಬಿ ನಾಗರಾಜ್ ಸುಳಿವು ನೀಡಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿ ನಾನು ಬಿಟ್ಟು ಹೋಗುವುದಿಲ್ಲ. ಈ ಬಾರೀ ಹೊಸಕೋಟೆಯಿಂದ ಸ್ಪರ್ಧಿಸುತ್ತೇನೆ. 120 ಸ್ಥಾನ ತರುತ್ತೇವೆ. ಬಿಜೆಪಿ ಅಧಿಕಾರಕ್ಕೆ ತರುವುದೊಂದೆ ನಮ್ಮ ಗುರಿ. ಸಿದ್ದರಾಮಯ್ಯಗೆ ಸಿದ್ರಾಮುಲ್ಲಾ ಖಾನ್ ಎನ್ನುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಯಾರು ಕರೆಯುತ್ತಾರೋ ಅದು ಅವರವರ ವೈಯಕ್ತಿಕ ಹೇಳಿಕೆ ಎಂದರು.
ಇನ್ನು ಎಂಟಿಬಿ ಎರಡನೇ ಹಂತದ ಸಮುದಾಯ ನಾಯಕನ ಪಟ್ಟಕ್ಕೆ ಓಡಾಟ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಮೊದಲನೆ ಹಂತ, ಎರಡನೇ ಹಂತದ ನಾಯಕರಾಗಬೇಕು ಅನ್ನೋ ಮನಸ್ಥಿತಿಯಿಲ್ಲ. ನಮ್ಮಂಥ ಶಕ್ತಿ ಇರೋರು ಸಮುದಾಯದ ಸಂಘಟನೆ ಮಾಡಬೇಕು ಅಷ್ಟೇ ಎಂದು ಎಂಟಿಬಿ ನಾಗರಾಜ್ ಹೇಳಿದರು.
ಇದನ್ನೂ ಓದಿ: ಇನ್ಸ್ಪೆಕ್ಟರ್ ನಂದೀಶ್ ಸಾವು ಪ್ರಕರಣ: ಬೆಂಗಳೂರಿನಲ್ಲಿ ಸಚಿವ ಎಂಟಿಬಿ ನಾಗರಾಜ್ ಸ್ಪಷ್ಟನೆ
ರಾಜ್ಯ ಹಾಗೂ ಮಹಾರಾಷ್ಟ್ರದ ಮಧ್ಯೆ ಗಡಿ ವಿವಾದ ವಿಚಾರ ಹಿನ್ನೆಲೆ ಪ್ರತಿಕ್ರಿಯಿಸಿದ ಅವರು ಗಡಿ ವಿಚಾರದಲ್ಲಿ ಬಹಳ ಖ್ಯಾತೆ ತೆಗೆದಿದ್ದಾರೆ. ಕನ್ನಡ ಸಂಘಟನೆ ಹೋರಾಟಗಾರರು ಪ್ರತಿಭಟಿಸುತ್ತಿದ್ದಾರೆ. ಈ ಕೇಸ್ ನ್ಯಾಯಾಲಯದಲ್ಲಿದೆ. ಅದನ್ನ ಸಾಮರಸ್ಯವಾಗಿ ಬಗೆಹರಿಸಬೇಕು ಎಂದರು.
ಕಾಂಗ್ರೆಸ್ ರಾಜ್ಯದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ: ಸಿಎಂ ಬೊಮ್ಮಾಯಿ
ತುಮಕೂರು: ರಾಜ್ಯದ ಜನರನ್ನು ದಾರಿ ತಪ್ಪಿಸುವ ಕೆಲಸ ಕಾಂಗ್ರೆಸ್ (Congress) ಮಾಡುತ್ತಿದೆ. ಜಾತಿ ಆಧಾರಿತವಾಗಿ ವೋಟ್ ಕೇಳುವ ಕಾಂಗ್ರೆಸ್ ಆಟ ಬಯಲಾಗಿದೆ. ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ಮಾಡಿದರು. ಜಿಲ್ಲೆಯಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿ, ಸಿದ್ದರಾಮಯ್ಯ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ.
ಸಮಾಜ ಕಲ್ಯಾಣ ಇಲಾಖೆಯ ತಲೆದಿಂಬು ವಿತರಣೆಯಲ್ಲಿ ಅಕ್ರಮವಾಗಿದೆ. ಸಿದ್ದರಾಮಯ್ಯ ಹೇಳುವ ಯಾವುದೂ ಸತ್ಯ ಆಗುವುದಿಲ್ಲ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮತ್ತು ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಸಿಎಂ ಆಗಲ್ಲ ಅಂತಾ ಹೇಳಿದ್ದರು. ಆದರೆ ಇಬ್ಬರೂ ನಾಯಕರು ಮುಖ್ಯಮಂತ್ರಿ ಆದರು ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.