Karnataka Rains: ಬೆಂಗಳೂರು, ಮಂಡ್ಯ ಸೇರಿ ರಾಜ್ಯದ ಹಲವೆಡೆ ಮಳೆ
Rain in many parts of the Karnataka; ಮಂಡ್ಯದಲ್ಲಿ ಕಾವೇರಿ ಹೋರಾಟದ ನಡುವೆ ಗುಡುಗು ಸಹಿತ ಮಳೆ ಸುರಿಯಿತು. ಏಕಾಏಕಿ ಗುಡುಗು, ಸಿಡಿಲು ಸಹಿತ ಭಾರಿ ಮಳೆ ಸುರಿಯಿತು. ಮಳೆಯ ಆಗಮನದಿಂದ ಮಂಡ್ಯದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಅತ್ತ ಕಲಬುರಗಿ ನಗರ ಸೇರಿದಂತೆ ಕಲಬುರಗಿ ಜಿಲ್ಲೆಯ ಹಲವಡೆ ಕೂಡ ಮಳೆಯಾಗಿದೆ.
ಬೆಂಗಳೂರು, ಸೆಪ್ಟೆಂಬರ್ 22: ಬೆಂಗಳೂರು ಮಹಾನಗರದ (Bangalore Rains) ಹಲವೆಡೆ, ಮಂಡ್ಯ, ಕಲಬುರಗಿ ಸೇರಿದಂತೆ ರಾಜ್ಯದ ಹಲವೆಡೆ ಶುಕ್ರವಾರ ಸಂಜೆ ಹಾಗೂ ರಾತ್ರಿ ದಿಢೀರ್ ಮಳೆ ಸುರಿಯಿತು. ಆ ಮೂಲಕ ಬಿಸಿಲ ಬೇಗೆಗೆ ಬಸವಳಿದಿದ್ದ ಧರೆಗೆ ತುಸು ತಂಪೆರೆಯಿತು. ಬೆಂಗಳೂರಿನ ಮೆಜೆಸ್ಟಿಕ್, ಟೌನ್ ಹಾಲ್, ಕೆ.ಆರ್.ಮಾರ್ಕೆಟ್, ಮಲ್ಲೇಶ್ವರಂ, ರಾಜಾಜಿನಗರ, ಶಾಂತಿನಗರ ಸೇರಿದಂತೆ ಹಲವೆಡೆ ಶುಕ್ರವಾರ ರಾತ್ರಿ ಹಠಾತ್ ವರ್ಷಧಾರೆಯಾಯಿತು. ಮಳೆಯಿಂದ ವಾಹನ ಸವಾರರು ಪರದಾಟ ನಡೆಸುವಂತಾಯಿತು. ಸಂಚಾರ ದಟ್ಟಣೆ ಉಂಟಾಯಿತು.
ಮಂಡ್ಯದಲ್ಲಿ ಕಾವೇರಿ ಹೋರಾಟದ ನಡುವೆ ಗುಡುಗು ಸಹಿತ ಮಳೆ ಸುರಿಯಿತು. ಏಕಾಏಕಿ ಗುಡುಗು, ಸಿಡಿಲು ಸಹಿತ ಭಾರಿ ಮಳೆ ಸುರಿಯಿತು. ಮಳೆಯ ಆಗಮನದಿಂದ ಮಂಡ್ಯದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಕಲಬುರಗಿ ನಗರ ಸೇರಿದಂತೆ ಕಲಬುರಗಿ ಜಿಲ್ಲೆಯ ಹಲವಡೆ ಕೂಡ ಮಳೆಯಾಗಿದೆ. ಗುಡುಗು ಸಹಿತ ಮಳೆ ಸುರಿದಿದೆ. ಕಳೆದ ಕೆಲವು ದಿನಗಳಿಂದ ಮಳೆ ಇಲ್ಲದೇ ಕಂಗಾಲಾಗಿದ್ದ ಜನರು ತುಸು ನಿರಾಳರಾಗಿದ್ದಾರೆ. ಸುಮಾರು ಅರ್ದಗಂಟೆಯಿಂದ ಜಿಲ್ಲೆಯ ವಿವಿಧಡೆ ಮಳೆ ಸುರಿದಿದೆ.
ಇದನ್ನೂ ಓದಿ: ಕೃಷಿ ಭೂಮಿಯಲ್ಲಿ ಕೋಳಿ ಸಾಕಾಣಿಕೆ ವಾಣಿಜ್ಯ ಚಟುವಟಿಕೆಯಲ್ಲ: ಹೈಕೋರ್ಟ್ ಆದೇಶ
ಬೆಂಗಳೂರಿನ ಹಲವೆಡೆ ಗುರುವಾರ ರಾತ್ರಿಯೂ ಭಾರಿ ಮಳೆಯಾಗಿತ್ತು. ರಾಮಕೃಷ್ಣ ಆಶ್ರಮ ವೃತ್ತ, ಬಸವನಗುಡಿ, ಹನುಮಂತನಗರ, ಮುನೇಶ್ವರ ಬ್ಲಾಕ್, ಶ್ರೀನಿವಾಸ ನಗರ ಸೇರಿದಂತೆ ನಗರದ ಹಲವು ಕಡೆಗಳಲ್ಲಿ ಗುರುವಾರ ರಾತ್ರಿ ಮಳೆಯಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ