Karnataka Weather: ಕರ್ನಾಟಕದಲ್ಲಿ ಇಂದಿನಿಂದ 4 ದಿನ ಅಧಿಕ ಮಳೆ ಸಾಧ್ಯತೆ; ಬೆಂಗಳೂರಿನಲ್ಲೂ ಎರಡು ದಿನ ವರುಣನ ಆರ್ಭಟ
Karnataka Weather Today: ಜೂನ್ 27 ಮತ್ತು ಜೂನ್ 28ರಂದು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ನಾಳೆ (ಜೂನ್ 26) ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಭಾಗದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ನಿನ್ನೆ (ಜೂನ್ 24) ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಇಂದು ಸಹ ಅದೇ ವಾತಾವರಣ ಮುಂದುವರೆಯಲಿದೆ.
ಬೆಂಗಳೂರು: ಕರ್ನಾಟಕ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿ ಸರಿಸುಮಾರು 20 ದಿನ ಆಗಿದೆ. ಆರಂಭದಲ್ಲಿ ಸಾಧಾರಣ ಮಳೆ ಸುರಿಯಬಹುದೆಂದು ನಿರೀಕ್ಷಿಸಲಾಗಿತ್ತಾದರೂ ಭಾರೀ ಮಲೆನಾಡು, ಕರಾವಳಿ ಹಾಗೂ ಉತ್ತರ ಕರ್ನಾಟಕದ ಕೆಲವೆಡೆ ಭಾರೀ ಮಳೆ ಸುರಿದು ಒಂದಷ್ಟು ಅವಾಂತರಗಳನ್ನೂ ಸೃಷ್ಟಿಸಿದೆ. ಕೃಷಿಕರಂತೂ ಶುರುವಿನಲ್ಲೇ ಹೀಗಾದರೆ ಇನ್ನುಳಿದ ಮಳೆಗಾಲವನ್ನು ಹೇಗಪ್ಪಾ ಕಳೆಯುವುದು ಎಂದು ಚಿಂತಿತರಾಗಿದ್ದರು. ಆದರೆ, ಅಷ್ಟರಲ್ಲಿ ಮಳೆ ಅಬ್ಬರ ಕೊಂಚ ಕಡಿಮೆಯಾಗಿದೆ. ಹಾಗಂತ, ಇನ್ನು ಸದ್ಯಕ್ಕೆ ಮಳೆಯಿಲ್ಲ ಎಂದು ಭಾವಿಸೂವಂತೆಯೂ ಇಲ್ಲ. ಏಕೆಂದರೆ ಈಗಾಗಲೇ ಭಾರತೀಯ ಹವಾಮಾನ ಇಲಾಖೆ ಮತ್ತೆ ಮಳೆಯ ಆರ್ಭಟ ಶುರುವಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಅದರ ಪ್ರಕಾರ ಜೂನ್ 28ರ ತನಕ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುವ ನಿರೀಕ್ಷೆ ಇದೆ.
ಕರ್ನಾಟಕದ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಎರಡೂ ಭಾಗಗಳಲ್ಲಿ ಮಳೆಯ ಅಬ್ಬರ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಪ್ರಾದೇಶಿಕ ವಲಯದ ನಿರ್ದೇಶಕ ಸಿ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗುವ ಸಂಭವ ಹೆಚ್ಚಿದೆ. ರಾಜಧಾನಿ ಬೆಂಗಳೂರಿನಲ್ಲೂ ಎರಡು ದಿನ ಉತ್ತಮ ಮಳೆಯಾಗಬಹುದು. ಈಗಾಗಲೇ ನೆರೆ ರಾಜ್ಯಗಳಲ್ಲಿ ಮಳೆಯಾಗುತ್ತಿದ್ದು, ಕರ್ನಾಟಕದಲ್ಲೂ ಮತ್ತೊಂದು ಸುತ್ತಿನ ಮಳೆ ಸುರಿಯಬಹುದು ಎಂದು ಹೇಳಿದ್ದಾರೆ.
ಜೂನ್ 27 ಮತ್ತು ಜೂನ್ 28ರಂದು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ನಾಳೆ (ಜೂನ್ 26) ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಭಾಗದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ನಿನ್ನೆ (ಜೂನ್ 24) ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಇಂದು ಸಹ ಅದೇ ವಾತಾವರಣ ಮುಂದುವರೆಯಲಿದೆ. ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣ ಇರಲಿದ್ದು, ಬೆಳಗ್ಗೆ ಕೆಲ ಕಾಲ ಮಳೆ ಸುರಿಯಲಿದೆ. ನಡುವೆ ಕೊಂಚ ಬಿಡುವು ಕೊಟ್ಟರೂ ಮಧ್ಯಾಹ್ನದ ನಂತರ ಮತ್ತೆ ಮಳೆಯಾಗಲಿದೆ ಎಂದು ತಿಳಿಸಿದ್ದಾರೆ.
ಜೂನ್ 27 ಹಾಗೂ 28 ರಂದು ಕರ್ನಾಟಕ ಮಾತ್ರವಲ್ಲದೇ ತೆಲಂಗಾಣ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ತ್ರಿಪುರಾ, ಮಿಜೋರಾಂ, ಮಣಿಪುರ, ನಾಗಾಲ್ಯಾಂಡ್, ಮೇಘಾಲಯ, ಒಡಿಶಾ, ಗೋವಾ, ಪುದುಚೇರಿ, ಪಶ್ಚಿಮ ಬಂಗಾಳ, ಚತ್ತೀಸ್ಗಡ, ಹಿಮಾಲಯ ಪ್ರಾಂತ್ಯದಲ್ಲಿ ಉತ್ತಮ ಮಳೆಯಾಗುವ ಸಂಭವವಿದೆ.
ಇದನ್ನೂ ಓದಿ: ಜೂನ್ 28ರ ತನಕ ಭಾರತದ 13 ರಾಜ್ಯಗಳಲ್ಲಿ ಭಾರೀ ಮಳೆ; ಕರ್ನಾಟಕದಲ್ಲೂ ಎರಡು ದಿನಗಳ ಕಾಲ ವರುಣ ಆರ್ಭಟಿಸುವ ಸಾಧ್ಯತೆ
Karnataka Dam Water Level: ತಗ್ಗಿದ ಮಳೆ, ಕಬಿನಿ ಜಲಾಶಯಕ್ಕೆ ಕಡಿಮೆ ಆಯ್ತು ಒಳಹರಿವಿನ ಪ್ರಮಾಣ
Published On - 8:51 am, Fri, 25 June 21