ವಿಶೇಷಚೇತನರಿಗೆ ಹೆದ್ದಾರಿಯಲ್ಲಿ ಟೋಲ್ ಫ್ರಿ ಎಂಬ ಪ್ರಹಸನ! ಗೊಂದಲದ ಗೂಡಾಗಿರುವ ನಿಯಮಗಳು, ಅಪರಿಪೂರ್ಣ ಮಾಹಿತಿ

| Updated By: ಸಾಧು ಶ್ರೀನಾಥ್​

Updated on: Nov 30, 2023 | 5:36 PM

ವಿಶೇಷ ಚೇತನರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 2003ರಲ್ಲಿ ಹೊಸ ಆದೇಶ ಮಾಡಿತ್ತು. ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಇವರ ವಾಹನಗಳಿಗೆ ಟೋಲ್ ಪಡೆಯಬಾರದು ಎಂದಿತ್ತು. ಇದಾದ ನಂತರ ಆದೇಶದಲ್ಲಿ ಮಾರ್ಪಾಡು ಮಾಡಿದ ಪ್ರಾಧಿಕಾರವು ವಿಶೇಷಚೇತನರು ಸ್ವತಃ ವಾಹನ ಪಡೆದಿರಬೇಕು ಅಂತೆಲ್ಲಾ ರೂಲ್ಸು ತಂದಿದೆ. ಅದರಿಂದ ಫಲಾನುಭವಿಗಳು ಪರದಾಡುವಂತಾಗಿದೆ.

ವಿಶೇಷಚೇತನರಿಗೆ ಹೆದ್ದಾರಿಯಲ್ಲಿ ಟೋಲ್ ಫ್ರಿ ಎಂಬ ಪ್ರಹಸನ! ಗೊಂದಲದ ಗೂಡಾಗಿರುವ ನಿಯಮಗಳು, ಅಪರಿಪೂರ್ಣ ಮಾಹಿತಿ
ವಿಶೇಷಚೇತನರಿಗೆ ಹೆದ್ದಾರಿಯಲ್ಲಿ ಟೋಲ್ ಫ್ರಿ ಎಂಬ ಪ್ರಹಸನ! ಗೊಂದಲದ ಗೂಡು
Follow us on

ವ್ಯಕ್ತಿ ದೈಹಿಕ ನ್ಯೂನತೆಯಿಂದ ಬಳಲುತ್ತಿದ್ದು ವಿಶೇಷ ಚೇತನರಾಗಿದ್ದರೆ ( physically challenged), ಹಾಗೂ ಅವರದ್ದೇ ಹೆಸರಿನಲ್ಲಿ ವಾಹನ ನೋಂದಣಿ ಮಾಡಿಕೊಂಡಿದ್ದರೆ ದೇಶದ ಯಾವುದೇ ಹೆದ್ದಾರಿಗಳ ಟೋಲ್ ಪ್ಲಾಜಾದಲ್ಲಿ ಶುಲ್ಕ ಪಾವತಿ ಮಾಡದೆ (toll free), ಉಚಿತವಾಗಿ ಸಂಚಾರ ಮಾಡಬಹುದಾಗಿದೆ. ಹಾಗಾದ್ರೆ ಇದಕ್ಕೆ ಅರ್ಹತೆ ಏನು ಅನ್ನೋದರ‌ ಮಾಹಿತಿ ಇಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ(national highway authority) ಶುಲ್ಕ ವಿನಾಯಿತಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೂಲಕ ಹೆಸರು ನೊಂದಾಣಿ ಮಾಡಿಕೊಳ್ಳಬೇಕು. 2023ರ ಫೆಬ್ರವರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದ್ದು, ವಿಶೇಷ ಚೇತನರು ತಮ್ಮ ಹೆಸರಿನಲ್ಲಿ ವಾಹನ ಖರೀದಿಸಿ, ಆರ್‌ಟಿಒ ಸಂಸ್ಥೆಯಲ್ಲಿ ನೋಂದಣಿ ಮಾಡಿಸಬೇಕು. ಲಭ್ಯವಾದ ಆರ್‌ಸಿ ಕಾರ್ಡ್ ಅನ್ನು ಪ್ರಾಧಿಕಾರಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ, ಶುಲ್ಕ ವಿನಾಯಿತಿಗಾಗಿ ಜೀರೋ ಫಾಸ್ಟ್ ಟ್ಯಾಗ್ (zero fasttag) ನ ಸೇವೆ ಸಿಗಲಿದೆ.

ಯೋಜನೆ ಉದ್ದೇಶ ಮತ್ತು ಮಹತ್ವ: ವಿಶೇಷ ಚೇತನರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 2003ರಲ್ಲಿ ಹೊಸ ಆದೇಶ ಮಾಡಿತ್ತು. ವಿಶೇಷ ಚೇತನರು ಹೆದ್ದಾರಿಯಲ್ಲಿ ಪ್ರಯಾಣಿಸುವ ವಾಹನಗಳಿಗೆ ಟೋಲ್ ಪಡೆಯಬಾರದು ಎಂದು ತಿಳಿಸಿತ್ತು. ಈ ಮೂಲಕ ವಿಶೇಷ ಚೇತನರಿಗೆ ಟೋಲ್ ವಿನಾಯಿತಿ ಕೂಡ ಪ್ರಕಟಿಸಲಾಗಿತ್ತು.

ಇದಾದ ನಂತರ ಆದೇಶದಲ್ಲಿ ಮಾರ್ಪಾಡು ಮಾಡಿದ ಪ್ರಾಧಿಕಾರವು ವಿಶೇಷಚೇತನರು ಸ್ವತಃ ವಾಹನ ಪಡೆದಿರಬೇಕು. ಜತೆಗೆ, ಅವರ ಹೆಸರಿನಲ್ಲಿಯೇ ನೋಂದಣಿ ಆಗಿರಬೇಕು. ಅಲ್ಲದೇ ಅವರೇ ವಾಹನ ಚಲಾವಣೆ ಮಾಡಬೇಕು ಎಂದು ಆದೇಶಿಸಿತ್ತು. ಈ ವಿಚಾರ ಸಾಕಷ್ಟು ಗೊಂದಲಕ್ಕೆ ಕಾರಣವಾಗಿತ್ತು. ಹಾಗಾಗಿ 2023ರ ಫೆಬ್ರವರಿಯಲ್ಲಿ ಹೊಸದಾಗಿ ಆದೇಶ ಮಾಡಿರುವ ಹೆದ್ದಾರಿ ಪ್ರಾಧಿಕಾರವು ವಿಶೇಷ ಚೇತನರಿಗೆ ಸ್ವಂತ ವಾಹನ ಇದ್ದು ಜತೆಗೆ, ಚಾಲನ ಪರವಾನಗಿ ಪಡೆದಿರುವ ಯಾರು ಬೇಕಾದರು ಈ ವಾಹನ ಚಾಲನೆ ಮಾಡಿದರೂ ವಿನಾಯತಿ ಲಭಿಸುವಂತೆ ಆದೇಶಿಸಿದೆ.

ಹಾಗಾದರೆ ನಿಯಮ ಏನ್ ಹೇಳುತ್ತೆ.. ವಾಹನ ಖರೀದಿಯ ವೇಳೆ ಸರಕಾರ ಒಂದಷ್ಟು ಶುಲ್ಕ ಹಾಕಲಿದೆ. ಆದರೆ, ವಿಶೇಷ ಚೇತನರಿಗೆ ಇದರಲ್ಲಿ ವಿನಾಯಿತಿ ನೀಡಲಾಗಿದೆ. ಆದೇಶದ ಪ್ರಕಾರ ವಿಶೇಷ ಚೇತನರಿಗೆ ಚಾಲನೆಗೆ ಅನುಕೂಲವಾಗುವಂತೆ ವಾಹನವನ್ನು ಮಾರ್ಪಾಡು ಮಾಡಬೇಕು. ಈ ವಾಹವನ್ನು ಸ್ಥಳೀಯ ಸಾರಿಗೆ ಇಲಾಖೆಯಲ್ಲಿ ನೋಂದಣಿ ಮಾಡಬೇಕು. ಬಳಿಕ ಆರ್‌ಟಿಒಯಿಂದ ವಿಶೇಷ ಚೇತನರ ನೋಂದಣಿ ರಿಜಿಸ್ಟರ್ ಅಡಾಪ್‌ಟೆಡ್ ವಾಹನ ಎಂದು ನಮೂದಿಸಲಾಗುತ್ತದೆ.

ಈ ಆರ್‌ಸಿ ಪುಸ್ತಕವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಆನ್‌ಲೈನ್ ಮೂಲಕ ವಿಶೇಷ ಚೇತನರ ಕಾರ್ಡ್ ಸೇರಿಸಿ ಅರ್ಜಿ ಸಲ್ಲಿಸಿದರೆ, ಪ್ರಾಧಿಕಾರ ಪರಿಶೀಲನೆ ಮಾಡಿ ಇವರಿಗೆ ಜಿರೋ ಫಾಸ್ಟ್ ಟ್ಯಾಗ್ ಕಳುಹಿಸಿಕೊಡುತ್ತದೆ. ಇದನ್ನು ವಾಹನದ ಮೇಲೆ ಅಂಟಿಸಿ ದೇಶದ ಪ್ರತಿ ಟೋಲ್‌ಗಳಲ್ಲಿ ಶುಲ್ಕದಿಂದ ವಿನಾಯಿತಿ ಪಡೆದುಕೊಳ್ಳಬಹುದು.

ವಾಹನ ರಿಜಿಸ್ಟರ್ ಶುಲ್ಕ: ಸಾಮಾನ್ಯರು ವಾಹನ ಖರೀದಿಸಿದರೆ ಸರಕಾರ ಅವರಿಗೆ ಶೇ. 28ರಷ್ಟು ಜಿಎಸ್‌ಟಿ ಹಾಗೂ 1ರಷ್ಟು ಸೆಸ್ ವಿಧಿಸುತ್ತದೆ. ವಿಶೇಷ ಚೇತನರಿಗೆ ಇದರಿಂದ ರಿಯಾಯಿತಿ ನೀಡಲಾಗಿದೆ. ಶೇ.1ರಷ್ಟು ಸೆಸ್‌ನಿಂದ ಸಂಪೂರ್ಣ ವಿನಾಯಿತಿ ಇದೆ. 28 ಪರ್ಸೆಂಟ್ ಬದಲಿಗೆ ಶೇ.18ರಷ್ಟು ಜಿಎಸ್‌ಟಿ ಪಾವತಿ ಮಾಡಬೇಕಾಗುತ್ತದೆ. ಜತೆಗೆ, ರಸ್ತೆ ತೆರಿಗೆಯಿಂದ ಸಂಪೂರ್ಣ ಮುಕ್ತಿ ಇದೆ.

ಅಪರಿಪೂರ್ಣ ಮಾಹಿತಿ: ಇನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೀಡಿರುವ ಟೋಲ್ ವಿನಾಯತಿ ಕುರಿತು ವಿಶೇಷ ಚೇತರಿಗೆ ಸರಿಯಾದ ಮಾಹಿತಿ ಇಲ್ಲ. ಈ ಹಿನ್ನೆಲೆ ಸಾಕಷ್ಟು ಮಾಹಿತಿ ನೀಡುವ ಕೆಲಸ ಆಗಬೇಕಿದೆ. ಅಲ್ಲದೆ ರಾಷ್ಟೀಯ ಹೆದ್ದಾರಿ ಪ್ರಾಧಿಕಾರ ನೀಡುವ ಟೋಲ್ ಶುಲ್ಕ ವಿನಾಯಿತಿಯಲ್ಲಿ ಸಾಕಷ್ಟು ನ್ಯೂನತೆಗಳಿವೆ. ಸರಕಾರ 21 ವಿವಿಧ ರೀತಿಯ ವಿಶೇಷ ಚೇತನರನ್ನು ಗುರುತಿಸಿದೆ.

ಇದನ್ನೂ ಓದಿ:  ಏರ್​ಪೋರ್ಟ್​​ ನಿರ್ಮಾಣಕ್ಕಾಗಿ ನಿಜಾಮರ ಕಾಲದ ಊರನ್ನು ಸಿನಿಮಾ ಶೈಲಿಯಲ್ಲಿ ಖಾಲಿ ಮಾಡಿಸಲು ಮುಂದಾದ ಜಿಲ್ಲಾಡಳಿತ, ಕೆರಳಿದ ಸ್ಥಳೀಯರು

ಆದರೆ, ಪ್ರಾಧಿಕಾರ ನೀಡುವುದು ಮಾತ್ರ ದೈಹಿಕ ನ್ಯೂನತೆ ಹೊಂದಿರುವವರಿಗೆ ಮಾತ್ರ. ಬಾಕಿ ಉಳಿದ ವಿಶೇಷ ಚೇತನರಿಗೆ ಈ ಯೋಜನೆ ಲಭ್ಯವಾಗಿಲ್ಲ. ವಾಹನ ಖರೀದಿಯ ವೇಳೆಯು ಇಂತಿಷ್ಟೇ ಇರಬೇಕೆಂದು ನಿಯಮಗಳನ್ನು ರೂಪಿಸಿದೆ. ಈ ಯೋಜನೆಯ ಲಾಭ ಪಡೆದುಕೊಳ್ಳುವ ವಿಶೇಷ ಚೇತನರು‌ ಇನ್ನಷ್ಟು ಮಾಹಿತಿ‌ ಪಡೆದುಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ