ಕನಸಿನ ಮನೆ ಆಸೆ ತೋರಿಸಿ ಹಣ ಪೀಕಿ ಯಮಾರಿಸುತ್ತಿದ್ದ ರಿಯಲ್ ಎಸ್ಟೇಟ್ ಕಂಪನಿಗಳಿಗೆ ಬಿಸಿ ಮುಟ್ಟಿಸಿದ ರೇರಾ

ಕನಸಿನ ಮಲೆ ಆಸೆ ತೋರಿಸಿ ಹಣ ಪೀಕಿ ಯಮಾರಿಸುತ್ತಿದ್ದ ಬೆಂಗಳೂರಿನ ರಿಯಲ್ ಎಸ್ಟೇಟ್ ವಂಚಕರಿಗೆ ಬಿಸಿ ರೇರಾ ಮುಟ್ಟಿಸಿದೆ.

ಕನಸಿನ ಮನೆ ಆಸೆ ತೋರಿಸಿ ಹಣ ಪೀಕಿ ಯಮಾರಿಸುತ್ತಿದ್ದ ರಿಯಲ್ ಎಸ್ಟೇಟ್ ಕಂಪನಿಗಳಿಗೆ ಬಿಸಿ ಮುಟ್ಟಿಸಿದ ರೇರಾ
RERA
TV9kannada Web Team

| Edited By: Ramesh B Jawalagera

Nov 23, 2022 | 5:14 PM

ಬೆಂಗಳೂರು: ಬೆಂಗಳೂರಲ್ಲಿ ಸೈಟ್ ಕೊಡಿಸ್ತೀನಿ ಅಂತ ಟೋಪಿ ಹಾಕೋರ ಹಾವಳಿ ಜೋರಾಗಿದೆ. ಕನಸಿನ ಮನೆ ಕೊಳ್ಳೋಕೆ ಮುಂದೆ ಬರುವ ಮಂದಿಗೆ ದೊಡ್ಡ ದೊಡ್ಡ ಬಿಲ್ಡರ್ ಕಂಪನಿಗಳು ವಂಚಿಸಿ ಹಣ ಪೀಕಿ ಯಮಾರಿಸುತ್ತಿದ್ದ ದೂರಿನ ಮೇರೆಗೆ ರೇರಾ, ರಿಯಲ್ ಎಸ್ಟೇಟ್ (real estate) ವಂಚಕರಿಗೆ ಬಿಸಿ ಮುಟ್ಟಿಸಿದೆ‌.

ಬಿಲ್ಡರ್​ಗಳ ಕೊಂಬು ಮುರಿದ ರೇರಾ

ಹೌದು… ದುಡ್ಡು ಪಡೆದು ಪ್ರಾಪರ್ಟಿ ನೀಡದೆ ವಂಚಿಸುತ್ತಿದ್ದ ಬಿಲ್ಡರ್ ಗಳಿಗೆ ರೇರಾ ಬಿಸಿ ಮುಟ್ಟಿಸಿದೆ‌. ಜನರಿಗೆ ವಂಚಿಸುತ್ತಿದ್ದ ಬಿಲ್ಡರ್ ಗಳ ವಿರುದ್ಧ ಕ್ರಮಕ್ಕೆ ಮುಂದಾಗಿರುವ ರೇರಾ, ನಿಗಧಿತ ಸಮಯಕ್ಕೆ ನಿವೇಶನ ಕಟ್ಟಿಕೊಡದ ಮತ್ತು ರೇರಾ ನಿಯಮ ಉಲ್ಲಂಘಿಸಿದ ಕಂಪನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ‌. ಆರಂಭಿಕ ಹಂತವಾಗಿ ನಗರದ 10 ಪ್ರತಿಷ್ಠಿತ ಕಂಪನಿಗಳ ಪಟ್ಟಿ ರೇರಾ ತಯಾರಿಸಿದ್ದು ರಿಕವರಿ ಮಾಡಿಕೊಳ್ಳಲು ಯೋಚಿಸಿದೆ‌. ಇನ್ನು ಟಿವಿ9 ಕನ್ನಡಕ್ಕೆ ರೇರಾ ರೆಡಿ ಮಾಡಿದ ನಗರದ ಆ ಹತ್ತು ಬಿಲ್ಡರ್ ಗಳ ಪಟ್ಟಿ ಸಿಕ್ಕಿದೆ. ಅವು ಯಾವುವು ಎನ್ನುವ ಪಟ್ಟಿ ಈ ಕೆಳಗಿನಂತಿದೆ ನೋಡಿ.

ಜನರಿಗೆ ಉಂಡೇನಾಮ ಹಾಕುತ್ತಿದ್ದ 10 ಬಿಲ್ಡರ್​ಗಳ ಪಟ್ಟಿ

1. ಇಥಕಾ ಎಸ್ಟೇಟ್ pvt. ltd. – 46 ದೂರು – 13,26,59,1313 ಕೋಟಿ ರೂಪಾಯಿ

2. GM ಇನ್ಫಿನಿಟ್ ಡ್ವೆಲ್ಲಿಂಗ್ pvt. ltd. – 44 ದೂರು – 11,07,56,741 ಕೋಟಿ ರೂ.

3. ಯುನಿಶೈರ್ ಹೌಸಿಂಗ್ LLP – 41 ದೂರು – 15,26,01,314 ಕೋಟಿ ರೂ.

4. ಸ್ಕೈಲಾರ್ಕ್ ಮ್ಯಾನ್ಷನ್ pvt. ltd. – 39 ದೂರು – 12,42,77,005 ಕೋಟಿ ರೂ.

5. ಮಂತ್ರಿ ಟೆಕ್ನಾಲಜಿ ಕಾನ್ಸ್ಟಿಲೇಷನ್ pvt. ltd. – 37 ದೂರು – 13,53,44,410 ಕೋಟಿ ರೂ.

6. ಮಂತ್ರಿ ಡೆವಲಪ್ಪರ್ಸ್ pvt. ltd. – 26 ದೂರು – 20,92,23,949 ಕೋಟಿ ರೂ.

7. ನಿತೇಶ್ ಹೌಸಿಂಗ್ ಡೆವಲಪ್ಪರ್ಸ್ pvt. ltd. – 36 ದೂರು – 39,60,58,888 ಕೋಟಿ ರೂ.

8. ಸಂಚಯ ಲ್ಯಾಂಡ್ ಎಸ್ಟೇಟ್ pvt. ltd. – 27 ದೂರು – 4,69,71,975 ಕೋಟಿ ರೂ.

9. M/s ARV ಇನ್ಫಾಸ್ಟ್ರಕ್ಚರ್ಸ್ – 16 ದೂರು – 3,88,37,090 ಕೋಟಿ ರೂ.

10. ಸಾಯಿ ಆಶಿರ್ವಾದ್ ಬಿಲ್ಡರ್ಸ್ & ಡೆವಲ್ಲಪರ್ಸ್ – 16 ದೂರು – 11,20,000 ಲಕ್ಷ ರೂ.

ಈ ಬಗ್ಗೆ ಟಿವಿ9 ಕನ್ನಡಕ್ಕೆ ಮಾತನಾಡಿದ ರೇರಾ ಕಾರ್ಯದರ್ಶಿ ಇಬ್ರಾಹಿಂ ಮೈಗೂರ್, ರೇರಾಗೆ ಸಾವಿರಾರು ದೂರುಗಳು ಈ ಸಂಬಂಧ ಬರುತ್ತಿದೆ. ಒಂದೊಂದೇ ಪ್ರಕರಣ ದಾಖಲಿಸಿಕೊಂಡು ಬಿಲ್ಡರ್ ಗಳ ಮಾಹಿತಿ ಕಲೆಹಾಕುತ್ತಿದ್ದೇವೆ. ಸದ್ಯಕ್ಕೆ ಈ ಹತ್ತು ಬಿಲ್ಡರ್ಸ್ ಹಾಗೂ ಡೆವಲ್ಲಪರ್ಸ್ ಗಳ ಮಾಹಿತಿ ಪಡೆದುಕೊಂಡಿದ್ದೇವೆ. ಈ ಸಂಬಂಧ ಕಂಪೆನಿಗಳಿಗೆ ನೋಟೀಸ್ ಕೊಟ್ಟು ರಿಕವರಿ ಮಾಡುವಂತೆ ಹೇಳುತ್ತೇವೆ. ಈಗಾಗಲೇ ಹಲವು ಕಂಪನಿಗಳು ಗ್ರಾಹಕರಿಗೆ ಪ್ರಾಪರ್ಟಿ ಅಥವಾ ಹಣ ವಾಪಾಸ್ ಮಾಡಲು ಒಪ್ಪಿಕೊಂಡಿದೆ.‌ ರೇರಾ ನಿಯಮದ ಪ್ರಕಾರ ಎಲ್ಲರಿಗೂ 60 ದಿನಗಳ ಗಡುವು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಈ ಹತ್ತು ಕಂಪನಿಗಳ ವಿರುದ್ಧ ಒಟ್ಟು 313 ಜನರಿಂದ ರೇರಾಗೆ ದೂರು ಬಂದಿದೆ. ಈ 313 ಗ್ರಾಹಕರಿಗೆ ಇವರಿಂದ 127,79,90,277 ಕೋಟಿ ರೂ. ಮೌಲ್ಯದ ಪ್ರಾಪರ್ಟಿ ವಂಚನೆಯಾಗಿದೆ ಎಂದು ರೇರಾ ತಿಳಿಸಿದೆ.

ಒಟ್ಟಾರೆ ನಗರದಲ್ಲಿ ದಿನದಿಂದ ದಿನಕ್ಕೆ ಸೈಟ್ ಕೊಡ್ತೀವಿ ಅಂತ ಹಣ ತಗೊಂಡು ವಂಚಿಸುವವರ ಸಂಖ್ಯೆ ಹೆಚ್ಚಾಗ್ತಿದೆ. ಇದಕ್ಕೆ ರೇರಾ ಸಂಪೂರ್ಣವಾಗಿ ಕಡಿವಾಣ ಹಾಕಬೇಕಿದೆ.

ವರದಿ: ಕಿರಣ್ ಸೂರ್ಯ ಟಿವಿ9 ಬೆಂಗಳೂರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada