AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RT nagar: ಓವರ್ ಡೋಸ್​​ ಇಂಜೆಕ್ಷನ್​ ಮತ್ತು ಮಾತ್ರೆ ನೀಡಿದ್ದೇ ಮಹಿಳೆಯ ಸಾವಿಗೆ ಕಾರಣವಾಯ್ತಾ?

woman death: ಕವಿತಾ ಸಾವಿಗೆ ಆಸ್ಪತ್ರೆ ವಿರುದ್ಧ ಕಿಡಿಕಾರಿರುವ ಪತಿ ಸುನೀಲ್ ಮತ್ತು ಸಂಬಂಧಿಕರು ಹೆಲ್ತ್ ಸಮ್ಮರಿಯಲ್ಲಿ 2023ರಲ್ಲಿ ಸಾವನ್ನಪ್ಪಿರುವುದಾಗಿ ಚಿರಾಯು ಆಸ್ಪತ್ರೆಯವರು ರಿಪೋರ್ಟ್ ನೀಡಿರುವುದಾಗಿ ಹೇಳಿದ್ದಾರೆ.

RT nagar: ಓವರ್ ಡೋಸ್​​ ಇಂಜೆಕ್ಷನ್​ ಮತ್ತು ಮಾತ್ರೆ ನೀಡಿದ್ದೇ ಮಹಿಳೆಯ ಸಾವಿಗೆ ಕಾರಣವಾಯ್ತಾ?
ಓವರ್ ಡೋಸ್​​ ಇಂಜೆಕ್ಷನ್​ ಮತ್ತು ಮಾತ್ರೆ ನೀಡಿದ್ದೇ ಮಹಿಳೆಯ ಸಾವಿಗೆ ಕಾರಣವಾಯ್ತಾ?
TV9 Web
| Edited By: |

Updated on: Nov 23, 2022 | 4:41 PM

Share

ಬೆಂಗಳೂರು: ನ್ಯುಮೋನಿಯಾದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು (woman) ಬೆಂಗಳೂರಿನ ಆರ್​​.ಟಿ. ನಗರದ (RT nagar Bangalore) ಚಿರಾಯು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ನ್ಯುಮೋನಿಯಾದಿಂದ ಆಸ್ಪತ್ರೆಗೆ ದಾಖಲಾಗಿದ್ದ ಕವಿತಾ (24) ಮೃತಪಟ್ಟವರು (death). ಓವರ್ ಡೋಸ್​​ ಇಂಜೆಕ್ಷನ್​ ಮತ್ತು ಮಾತ್ರೆ ನೀಡಿದ್ದೇ ಸಾವಿಗೆ ಕಾರಣವೆಂದು ಆಸ್ಪತ್ರೆಯ ವೈದ್ಯರ ವಿರುದ್ಧ ಮೃತ ಕವಿತಾ ಪತಿ ಸುನೀಲ್ ಆರೋಪ ಮಾಡಿದ್ದಾರೆ. ಕವಿತಾ ಮೃತಪಟ್ಟ ವಿಷಯ ತಿಳಿಯುತ್ತಲೇ ಸಂಬಂಧಿಕರು ಆಸ್ಪತ್ರೆ ಮುಂದೆ ಜಮಾಯಿಸಿ, ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 7 ತಿಂಗಳ ಹಿಂದೆಯಷ್ಟೇ ಕವಿತಾ-ಸುನೀಲ್ ಮದುವೆ ಆಗಿತ್ತು. ಒಂದು ತಿಂಗಳ ಹಿಂದೆ ಕವಿತಾಳಿಗೆ ಗರ್ಭಪಾತ ಆಗಿತ್ತು. ಬಳಿಕ ಸಣ್ಣಪುಟ್ಟ ಸಮಸ್ಯೆಯಿಂದ ಕವಿತಾ ಬಳಲುತ್ತಿದ್ದರು.

ನ್ಯುಮೋನಿಯಾ ಅಂತ ಬಂದ ಮಹಿಳೆಯ ಜೀವ ತೆಗೆದ ಖಾಸಗಿ ಆಸ್ಪತ್ರೆ?

ಕವಿತಾ ಸಾವಿಗೆ ಆಸ್ಪತ್ರೆ ವಿರುದ್ಧ ಕಿಡಿಕಾರಿರುವ ಪತಿ ಸುನೀಲ್ ಮತ್ತು ಸಂಬಂಧಿಕರು ಹೆಲ್ತ್ ಸಮ್ಮರಿಯಲ್ಲಿ 2023ರಲ್ಲಿ ಸಾವನ್ನಪ್ಪಿರುವುದಾಗಿ ಚಿರಾಯು ಆಸ್ಪತ್ರೆಯವರು ರಿಪೋರ್ಟ್ ನೀಡಿದ್ದಾರೆ. ಹೃದಯಾಘಾತ, ಡೆಂಗ್ಯೂ, ಕೋವಿಡ್ ಪಾಸಿಟಿವ್ ನಿಂದ ಸಾವನ್ನಪ್ಪಿದ್ದಾರೆ ಅಂತ ವೈದ್ಯರು ಹೇಳ್ತಿದ್ದಾರೆ. ಆದರೆ ಓವರ್ ಡೋಸ್ ಮಾತ್ರೆ, ಇಂಜೆಕ್ಷನ್ ನೀಡಿದ್ದೇ ನನ್ನ ಪತ್ನಿ ಸಾವಿಗೆ ಕಾರಣ ಎಂದು ಮೃತ ಕವಿತಾಳ ಪತಿ ಸುನಿಲ್ ಗಂಭೀರ ಆರೋಪ ಮಾಡಿದ್ದಾರೆ. ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

11 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಟೆಕ್ಕಿ ದಂಪತಿ, ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ:

ಬೆಂಗಳೂರು: ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದ ರಿಚರ್ಡ್ ಗಾರ್ಡನ್ ನಲ್ಲಿ ನವೆಂಬರ್ 10ರಂದು ನಡೆದಿದೆ. ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಶ್ವೇತಾ (27) ನೇಣಿಗೆ ಶರಣಾದ ದುರ್ದೈವಿ. ಪತಿ ಅಭಿಷೇಕ್ ವಿರುದ್ಧ ಮೃತಳ ಕುಟುಂಬಸ್ಥರು ಇದೀಗ ಆರೋಪ ಮಾಡಿದ್ದಾರೆ. ಅಂದಹಾಗೆ ಶ್ವೇತಾ-ಅಭಿಷೇಕ್ ಜೋಡಿ11 ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು.

ಐಬಿಎಂ ಕಂಪನಿ ಉದ್ಯೋಗಿಯಾಗಿದ್ದ ಶ್ವೇತ, ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕನನ್ನು ಮದುವೆಯಾಗಿದ್ದರು. ಮದುವೆಗೂ ಮುನ್ನ ಯುವತಿಯೊಬ್ಬಳೊಂದಿಗೆ ಅಭಿಷೇಕ್ ಸಂಬಂಧ ಹೊಂದಿದ್ದನಂತೆ. ಮದುವೆಯ ನಂತರ ಈ ವಿಚಾರ ಗೊತ್ತಾಗಿ ದಂಪತಿ ನಡುವೆ ಜಗಳವಾಗಿತ್ತು. ಪರಸ್ಪರ ರಾಜಿ ಪಂಚಾಯತಿ ಬಳಿಕ ಇಬ್ಬರೂ ಒಟ್ಟಿಗೆ ಜೀವನ ಸಾಗಿಸುತ್ತಿದ್ದರು.

ಈ‌ ನಡುವೆ ಅಭಿಷೇಕ್ ಪುನಃ ತನ್ನ ಹಳೇ ಚಾಳಿ‌ ಮುಂದುವರೆಸಿದ್ದನಂತೆ. ಅದರಿಂದ ಬೇಸತ್ತ ಶ್ವೇತಾ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Also Read:

ಸಂವಿಧಾನವೇ ನಮ್ಮ ರಾಷ್ಟ್ರಧರ್ಮ; ನಾಡಿನ ಜನತೆಗೆ ಸಂವಿಧಾನ ದಿನದ ಶುಭಕಾಮನೆ ತಿಳಿಸಿದ ಸಿಎಂ ಬೊಮ್ಮಾಯಿ

Also Read:

Fact Check ಸಂವಿಧಾನದ ಪೀಠಿಕೆಯ ಹಿಂಭಾಗದ ಖಾಲಿ ಪುಟ ಓದುತ್ತಿರುವ ಅಮಿತ್ ಶಾ; ವೈರಲ್ ಚಿತ್ರದ ಸತ್ಯಾಸತ್ಯತೆ ಏನು?

ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!