Voter ID Scam:ಚಿಲುಮೆ ಮುಖ್ಯಸ್ಥ ರವಿಕುಮಾರ್ ಜನ್ಮ ಜಾಲಾಡುತ್ತಿರುವ ಪೊಲೀಸ್ರು

ಬೆಂಗಳೂರಿನಲ್ಲಿ ಮತದಾರರ ಮಾಹಿತಿ ಸಂಗ್ರಹ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಚಿಲುಮೆ ಸಂಸ್ಥೆ ಮುಖ್ಯಸ್ಥ ರವಿಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ರವಿ ಕುಮಾರ್​ ಕಚೇರಿ, ಮನೆಯಲ್ಲಿ ಪೊಲೀಸ್ರು ಜಾಲಾಡುತ್ತಿದ್ದಾರೆ.

Voter ID Scam:ಚಿಲುಮೆ ಮುಖ್ಯಸ್ಥ ರವಿಕುಮಾರ್ ಜನ್ಮ ಜಾಲಾಡುತ್ತಿರುವ ಪೊಲೀಸ್ರು
Chilume founder Ravi kumar
TV9kannada Web Team

| Edited By: Ramesh B Jawalagera

Nov 23, 2022 | 10:42 PM

ಬೆಂಗಳೂರು:  ಚಿಲುಮೆ ಸಂಸ್ಥೆಯಿಂದ ಮತದಾರರ ಖಾಸಗಿ ಮಾಹಿತಿ ಸಂಗ್ರಹ ಪ್ರಕರಣದ ಕಿಂಗ್ ಪಿನ್ ರವಿಕುಮಾರ್ ಅನ್ನ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಖುದ್ದು ಕೇಂದ್ರ ವಿಭಾಗದ ಡಿಸಿಪಿ ನೇತೃತ್ವದಲ್ಲಿ ನಡೆಯುತ್ತಿರುವ ತನಿಖೆ ವೇಳೆ ಕಿಂಗ್ ಪಿನ್ ಬಿಚ್ಚಿಟ್ಟ ಮಹತ್ವದ ಮಾಹಿತಿ ಕಲೆ ಹಾಕ್ತಿದ್ದು, ಇಡೀ ಪ್ರಕರಣದ ಹಿಂದಿನ ಕಾಣದ ಕೈಗಳ ಕೈವಾಡ ಏನು..? ಯಾವೆಲ್ಲಾ ರಾಜಕಾರಣಿಗಳ ಮಸಲತ್ತಿನ ಒತ್ತಡದಲ್ಲಿ ಮತದಾರರ ಖಾಸಗಿ ಮಾಹಿತಿ ಕಲೆಹಾಕಲಾಯ್ತು ಅನ್ಮೋದು ಇನ್ನೂ ನಿಗೂಢವಾಗಿದ್ದು ತನಿಖೆ ನಡೆಸುತ್ತಿರುವ ಪೊಲೀಸರ ನಿದ್ದೆಗೆಡಿಸಿದೆ‌.

ಸಂಸ್ಥೆ ಮುಖ್ಯಸ್ಥ ರವಿಕುಮಾರ್ ಮನೆ ಜಾಲಾಡಿದ ಪೊಲೀಸ್ರು

ಮತದಾರರ ಖಾಸಗಿ ಮಾಹಿತಿ ಸಂಗ್ರಹಿಸಿದ ಆರೋಪದ ಹಿನ್ನಲೆ ಚಿಲುಮೆ ಸಂಸ್ಥೆ ಮುಖ್ಯಸ್ಥ ರವಿಕುಮಾರ್ ಸೇರಿದಂತೆ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಹಲಸೂರು ಗೇಟ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ಇದುವರೆಗೆ ಸಂಸ್ಥೆಯ ಕಚೇರಿ, ರವಿಕುಮಾರ್ ನಿವಾಸ ಸೇರಿ ಚಿಲುಮೆ ಬಳಸಿದ್ದ ಬಿಎಲ್ ಓ ಕಾರ್ಡ್ ಹಲವು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. ಒಂದು ಕಡೆ ಇದು ಬಿಬಿಎಂಪಿಯ ಆರ್ ಓಗಳ ಎಡವಟ್ಟೊ ಅಥವ ಬಂಧಿತ ಲೋಕೇಶ್ ಕಳ್ಳಾಟವೋ ಅನ್ನೊ ಗೊಂದಲ ಶುರುವಾಗಿದ್ದು, ಚುನಾವಣಾ ಆಯೋಗದಿಂದ ಬಂದ ಆ ಒಂದು ಮಾಹಿತಿ ಪೊಲೀಸರ ತನಿಖೆ ದಿಕ್ಕನ್ನೇ ಬದಲಾಯಿಸಿದೆ. ಇನ್ನು ಇದೆಲ್ಲದರ ನಡುವೆ ಖಾಕಿ ಖೆಡ್ಡಾದಲ್ಲಿರುವ ರವಿಕುಮಾರ್ ನ ಬಳಸ್ತಿದ್ದ ಮೊಬೈಲ್ ನಾಪತ್ತೆಯಾಗಿದ್ದು ಪೊಲೀಸರು ಶೋಧ ಮುಂದುವರೆಸಿದ್ದಾರೆ‌. ಇಂದು‌ ಕೂಡ ತನಿಖೆ ಭಾಗವಾಗಿ ಚಿಲುಮೆ ಮುಖ್ಯಸ್ಥ ರವಿಕುಮಾರ್ ಮಲ್ಲೇಶ್ವರಂ‌ ನಿವಾಸ ಇಂಚಿಂಚೂ ಜಾಲಾಡಿದ್ದು ಎರಡು ಲ್ಯಾಪ್ ಟಾಪ್ ವಶಕ್ಕೆ ಪಡೆದಿದ್ದಾರೆ. ಕೆಲ ಮಹತ್ವದ ದಾಖಲೆಗಳನ್ನ ಸೀಜ್ ಮಾಡಿ ಪರಿಶೀಲನೆ ನಡೆಸ್ತಿದ್ದಾರೆ.

ಮತದಾರರ ಖಾಸಗಿ ಮಾಹಿತಿ ಸಂಗ್ರಹಿಸಿದ್ದ ಚಿಲುಮೆ, ಇದಕ್ಕಾಗಿ ಬಿಎಲ್ ಓ ಕಾರ್ಡ್ ಬಳಕೆ ಮಾಡಿತ್ತು. ಅಸಲಿಗೆ ಈ ಕಾರ್ಡ್ ನೀಡಿದ್ಯಾರು ಅನ್ನೊ ಅನುಮಾನ ಶುರುವಾಗಿದೆ.. ಪೊಲೀಸ್ ಮೂಲಗಳ ಪ್ರಕಾರ ಈ ಕಾರ್ಡ್ ಗಳನ್ನು ಚುನಾವಣಾ ಅಧಿಕಾರಿಗಳು ಮಾತ್ರ ಅಧಿಕೃತವಾಗಿ ನೀಡುತ್ತಾರೆ.. ಬಿಬಿಎಂಪಿಯ ಆರ್ ಓ ಗಳಿಗೆ ಈ ಕಾರ್ಡ್ ನೀಡುವ ಅವಕಾಶವಿಲ್ಲ. ಆದರೆ ಸದ್ಯ ಪತ್ತೆಯಾಗಿರುವ ಕಾರ್ಡ್ ಗಳು ಹಲವು ಅನುಮಾನಕ್ಕೆಡೆ ಮಾಡಿಕೊಟ್ಟಿವೆ. ಗೊಂದಲದ ಗೂಡಾದ ಬಿಎಲ್ ಓ ಐಡಿ ಕಾರ್ಡ್ ಗಳ ಅಸಲಿ ಬಣ್ಣ ಬಯಲು ಮಾಡಲು ಮುಂದಾದ ಖಾಕಿ, ಸಿಕ್ಕ 60 ಐಡಿ ಕಾರ್ಡ್ ಗಳನ್ನು ವಶಕ್ಕೆ ಪಡೆದು, ಅದರ ಮೇಲಿನ ಸಹಿ ಹಾಗೂ ಸೀಲ್ ಗಳ ಸತ್ಯಾಸತ್ಯೆ ಹುಡುಕಲು ಮುಂದಾಗಿದ್ದಾರೆ.. ಅದರಂತೆ ಎಫ್ ಎಸ್ ಎಲ್ ಗೆ ಕಳುಹಿಸಿದ್ದು, ಇನ್ನೆರಡು ದಿನಗಳಲ್ಲಿ ಮಾಹಿತಿ ಬರೊ ಸಾಧ್ಯತೆಗಳಿವೆ.

ರವಿ ಕುಮಾರ್​ ಮೊಬೈಲ್​ಗಾಗಿ ಪೊಲೀಸರ ಶೋಧ

ಇನ್ನು ಈ ವೇಳೆ ಸೀಲು ಮತ್ತು ಹಾಕಲಾದ ಸಹಿ ಅಸಲಿಯತ್ತಾದರೇ ಬಿಬಿಎಂಪಿ ಅಧಿಕಾರಿಗಳಿಗೆ ಅದು ಕಂಠಕವಾಗಲಿದೆ.. ಇಲ್ಲವಾದಲ್ಲಿ ಅದು ಲೊಕೇಶ್ ನ ಕಳ್ಳಾಟದಲ್ಲಿ ತಯಾರಾದ ಐಡಿ ಕಾರ್ಡ್ ಗಳ ಎಂಬ ಬಗ್ಗೆ ತನಿಖೆ ನಡೆಯಲಿದೆ‌. ಹೀಗಾಗಿ ಸದ್ಯ ಪೊಲೀಸರ ಚಿತ್ತ ಎಫ್ ಎಸ್ ಎಲ್ ವರದಿಯ ಕಡೆ ನೆಟ್ಟಿದೆ.. ಇನ್ನು ಈ ನಡುವೆ ಈಗಾಗಲೇ ಬಿಬಿಎಂಪಿಯಿಂದ ಅಮಾನತ್ತಾದ ಮೂವರು ಸೇರಿದಂತೆ 40 ಆರ್ ಓಗಳಿಗೆ ಇಆರ್ ಓ ನೋಟಿಸ್ ನೀಡಿದ್ದು, ಈ ಸಂಬಂಧ ವಿಚಾರಣೆ ನಡೆಸುತಿದ್ದಾರೆ.ಇದೆಲ್ಲದರ ನಡುವೆ ಚಿಲುಮೆ ಮುಖ್ಯಸ್ಥ ರವಿಕುಮಾರ್ ಬಂಧಿಸಿದ ಹಲಸೂರು ಗೇಟ್ ಪೊಲೀಸರು ಆತನ ಮೊಬೈಲ್ ತಡಕಾಡಿದ್ದಾರೆ. ಆದ್ರೆ ಈ ವೇಳೆ ಆತನ ಮೊಬೈಲ್ ಪತ್ತೆಯಾಗದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇನ್ನು ಮೊಬೈಲ್ ಸಂಬಂಧಿತ ಪ್ರಶ್ನೆಗೆ ಎಲ್ಲೊ ಕಳೆದುಹೊಗಿದೆ ಎಂಬ ಸಬೂಬು ಹೇಳುತ್ತಿರುವ ರವಿಕುಮಾರ್ ಮಾತಿನ ಹಿಂದೆ ಪೊಲೀಸರಿಗೆ ಅನುಮಾನ ಮತ್ತಷ್ಟು ಹೆಚ್ಚು ಮಾಡಿದೆ. ಆತ ಯಾರ್ಯಾರ ಜೊತೆ ಕಾಲ್ ಮಾಡಿದ್ದ ಅನ್ನೊದರ ಕಾಲ್ ಡಿಟೈಲ್ಸ್ ಇದ್ದರೂ ಆತನ ಮೊಬೈಲ್ ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಕೆಲ ಮಹತ್ವದ ದಾಖಲೆಗಳು ಸಿಗುವ ನಿರಿಕ್ಷೆ ಇದೆ. ಮೇಲಾಗಿ ರವಿಕುಮಾರ್ ಸಂಪರ್ಕದಲ್ಲಿ ಕೆಲ ರಾಜಕಾರಣಿಗಳು ಇರುವ ಶಂಕೆ ಇದ್ದು, ಆತನ ಮೊಬೈಲ್ ಗಾಗಿ ಶೋಧ ಆರಂಭವಾಗಿದೆ.ಇನ್ನು ಆರೋಪಿ ರವಿಕುಮಾರ್ ನಿಂದಲೇ ಸಮಿಕ್ಷಾ ಆ್ಯಪ್ ನ ಓಪನ್ ಮಾಡಿಸಿದ್ದು, ಈ ವೇಳೆ ಆತ ಸಾರ್ವಜನಿಕರ ಸಂಗ್ರಹಿಸಿದ್ದ ಮಾಹಿತಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ಮೇಲ್ನೊಟಕ್ಕೆ ಮಾಹಿತಿಗಳನ್ನು ನಾಶ ಮಾಡಿರುವ ಅನುಮಾನ ಮೂಡಿದೆ.ಆದರೆ ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಮಾಹಿತಿಗಳು ಲಭ್ಯವಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

ರಾಜಕಾರಣಿಗಳ ಹೆಸರು ಹೇಳಲು ಮಾತ್ರ ಹಿಂದೇಟು

ಉಳಿದಂತೆ ಪ್ರಕರಣ ದಾಖಲಾಗುತಿದ್ದಂತೆ ಪೊಲೀಸರು ದಾಳಿ ನಡೆಸಿ ಸಂಗ್ರಹಿಸಿದ್ದ 6 ಮೊಬೈಲ್,2 ಲ್ಯಾಪ್ ಟಾಪ್ ಹಾಗೂ 2 ಹಾರ್ಡ್ ಡಿಸ್ಕ್ ಹಾಗೂ 2 ಸಿಪಿಯೂಗಳನ್ನು ಎವಿಡೆನ್ಸ್ ಮಾಡಲು ಸಿಐಡಿ ಟೆಕ್ನಿಕಲ್ ವಿಂಗ್ ಗೆ ರವಾನಿಸಲು ಸಿದ್ಧತೆ ಮಾಡುತಿದ್ದಾರೆ.. ಈಗಾಗಲೇ ಮೊಬೈಲ್ ಗಳನ್ನು ಕಳುಹಿಸಲು ಕೊರ್ಟ್ ಅನುಮತಿ ನೀಡಿದ್ದು, ಹಾರ್ಡ್ ಡಿಸ್ಕ್ ಹಾಗೂ ಲ್ಯಾಪ್ ಟಾಪ್ ಅನುಮತಿಗೆ ಪೊಲೀಸರು ಕಾದುಕುಳಿತಿದ್ದಾರೆ. ಚಿಲುಮೆ ಸಂಸ್ಥೆಯ ಮುಖ್ಯಸ್ಥ, ಪ್ರಕರಣದ ಕಿಂಗ್ ಪಿನ್ ರವಿಕುಮಾರ್ ಪೊಲೀಸರ ಮುಂದೆ ತನಗಿದ್ದ ಒತ್ತಾಯ, ತಾನು ಮಾಡಿದ ಕೆಲಸ ಕುರಿತಂತೆ ಒಂದೊಂದೇ ಮಾಹಿತಿ ಹೊರಹಾಕ್ತಿದ್ದಾನೆ. ಮತದಾಋ ಖಾಸಗಿ ಮಾಹಿತಿ ಕುರಿತು ಬಾಯ್ಬಿಡ್ತಿರೋಆರೋಪಿ, ತಾನು ಮಾಡಿದ ತಪ್ಪೊಪ್ಪಿಕೊಂಡಿರುವ ರವಿಕುಮಾರ್ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಮುಂದೆ ತಪ್ಪು ಮಾಡಿದ್ದೀನಿ ಸರ್, ಕ್ಷಮಿಸಿ ಬಿಡಿ ಅಂತಿದ್ದಾನಂತೆ, ಕೆಲವರ ಒತ್ತಡದಿಂದ ಈ ರೀತಿ ಮಾಡಿದ್ದೇನೆ ಎಂದು ಹೇಳ್ತಿರುವ ರವಿಕುಮಾರ್ ರಾಜಕಾರಣಿಗಳ ಹೆಸರು ಹೇಳಲು ಮಾತ್ರ ಹಿಂದೇಟು ಹಾಕ್ತಿದ್ದನಂತೆ.

ಬಿಬಿಎಂಪಿ ಚುನಾವಣೆ ನಿಟ್ಟಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಮುಂದಾಗಿದ್ದ ಬಿಬಿಎಂಪಿ ಎಲ್ಲಾ ಕ್ಷೇತ್ರಗಳ ಆರ್ ಓ ಗಳಿಂದ ಮತದಾರರ ಪಟ್ಟಿ ಪರಿಷ್ಕರಣೆ ಈ ಬಗ್ಗೆ ಜಾಗೃತಿ ಕಾರ್ಯಕ್ಕೆ ಮುಂದಾಗಿದ್ದ ಚಿಲುಮೆ ಸಂಸ್ಥೆ ಚಿಲುಮೆ ಸಂಸ್ಥೆಗೆ ವೋಟರ್ ಐಡಿ ಹಾಗೂ ಆಧಾರ್ ಲಿಂಕ್ ಮಾಡುವ ಜವಾಬ್ದಾರಿ ನೀಡಲಾಗಿದ್ದು, ದುರ್ಬಳಕೆ ಮಾಡಿಕೊಂಡಿದ್ದ ಕೆಲವು ಅಧಿಕಾರಿಗಳು ಹಾಗೂ ಚಿಲುಮೆ ಸಿಬ್ಬಂದಿ ಪೊಲೀಸರ ಮಹಜರು ಪ್ರಕ್ರಿಯೆ ವೇಳೆ‌ ಕೆಲ ಕಡತಗಳ ಪರಿಶೀಲನೆ ಬಿಬಿಎಂಪಿಯಿಂದಲೂ ಕೆಲ ದಾಖಲೆಗಳನ್ನ ಪಡೆದಿರುವ ತನಿಖಾ ತಂಡ ಕಡತಗಳ ಪರಿಶೀಲನೆ ವೇಳೆ ಕೆಲವು ಆರ್ ಓ ಗಳು ಅಧಿಕಾರ ದುರ್ಬಳಕೆ ಸಂಬಂಧಿಸಿದಂತೆ ಮಾಹಿತಿ ಬೆಳಕಿಗೆ ಬಂದಿದೆ.

ಮತದಾರರ ಗೌಪ್ಯ ಮಾಹಿತಿ ಕಳವು ವಿಚಾರ ಗೊತ್ತಿದ್ದೆ ಆಗಿದೆಯೇ ಎಂದು ಪೊಲೀಸರ ತನಿಖೆ ಆರ್ ಓಗಳನ್ನ ಕರೆಯಿಸಿ ವಿಚಾರಣೆ ಮಾಡುತ್ತಿರುವ ಪೊಲೀಸರು ಸದ್ಯ ವಶಕ್ಕೆ ಪಡೆದಿರುವ ತನಿಖಾಧಿಕಾರಿಗಳಿಂದ ಮುಂದುವರೆದ ತನಿಖೆ ಪ್ರತಿಯೊಂದು ಆಯಾಮದ ವಿಚಾರದ ತನಿಖೆಗೆ ಸ್ಪೆಷಲ್ ಟೀ ರಚನೆ ವಿಶೇಷ ತಂಡಗಳಿಂದ ಮುಂದುವರೆದ ಕಡತಗಳ ಪರಿಶೀಲನೆ ಪರಿಶೀಲನೆ ಬಳಿಕ ಮತ್ತಷ್ಟು ಸ್ಫೋಟಕ ರಹಸ್ಯ ಹೊರ ಬರುವ ಸಾಧ್ಯತೆ ಇದೆ. ಡಿಜಿಟಲ್ ಸಮೀಕ್ಷಾ ಆ್ಯಪ್ ಸರ್ವರ್ ಡೌನ್ ಬಗ್ಗೆಯೂ ಪೊಲೀಸರ ತನಿಖೆ ಮುಂದುವರೆಸಿದ್ದು ಬಂಧಿತ ರವಿಕುಮಾರ್ ಜತೆಗೆ ನುರಿತ ಟೆಕ್ನಿಕಲ್ ಟೀಂ ನಿಂದ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು, ಕೊನೆಗೂ ಡಿಜಿಟಲ್ ಸಮೀಕ್ಷಾ ಆ್ಯಪ್ ಅನ್ನು ರವಿಕುಮಾರ್ ಬಂಧಿಸಿ ವಿಚಾರಣೆ ನಡೆಸ್ತಿದ್ದಂತೆ ಓಪನ್ ಮಾಡಲಾದ ಆ್ಯಪ್ ಆ್ಯಪ್‌ನಲ್ಲಿದ್ದ ಪ್ರತಿ ಅಂಶಗಳನ್ನು ಪರಿಶೀಲನೆ ನಡೆಸ್ತಿರುವ ಪೊಲೀಸರು ಆ್ಯಪ್‌ನಲ್ಲಿ ಹಲವು ವಿಧಾನಸಭಾ ಕ್ಷೇತ್ರಗಳ ಮತದಾರರ ಡೀಟೇಲ್ಸ್ ಇರೋದು ಪತ್ತೆ ಸದ್ಯ ರವಿಕುಮಾರ್ ನನ್ನ ತೀವ್ರ ವಿಚಾರಣೆ ನಡೆಸ್ತಿದ್ದಾರೆ.

ಪ್ರತ್ಯೇಕ ತಂಡಗಳಾಗಿ ಹಲವು ಆಯಾಮಗಳಲ್ಲಿ ಇಡೀ ಪ್ರಕರಣದ ತನಿಖೆ ಚುರುಕು ಗೊಳಿಸಿರುವ ಪೋಲಿಸರಿಗೆ ಮೇಲ್ನೋಟಕ್ಕೆ ರಾಜಕಾರಣಿಗಳ ಒತ್ತಡದಿಂದಲೇ ಮತದಾರರ ಖಾಸಗಿ ಡೀಟೇಲ್ಸ್ ಕಲೆ ಹಾಕಲಾಗಿದೆ ಅನ್ನೋದು ಗೊತ್ತಾಗಿದೆ‌. ಸದ್ಯ ಪೊಲೀಸರಿಗೆ ಮೂಡಿದ ಹಲವು ಅನುಮಾನಗಳಿಗೆ ಪುಷ್ಟಿ ನೀಡುವ ಅಗತ್ಯ ದಾಖಲೆಗಳಿಗಾಗಿ ಶೋಧ ಮುಂದುವರೆಸಿದ್ದಾರೆ. ಈ ಆಯಾಮದಲ್ಲಿ ರವಿಕುಮಾರ್ ನ ಬಾಯ್ಬಿಡಿಸಲು ಮುಂದಾಗ್ತಿರೋ ಪೊಲೀಸರು, ರವಿಕುಮಾರ್ ಗೆ ಒತ್ತಡ ಹಾಕಿದ್ದು ಯಾರು?ಯಾರ್ಯಾರಿಗೆ ಮತದಾರರ ಮಾಹಿತಿ ಸಂಗ್ರಹ ಮಾಡಿಕೊಡಲಾಗಿದೆ.? ರವಿಕುಮಾರ್ ಸಂಪರ್ಕದಲ್ಲಿ ಯಾರೆಲ್ಲಾ ರಾಜಕೀಯ ನೇತಾರರು, ವ್ಯಕ್ತಿಗಳಿದ್ದಾರೆ..? ಅನ್ನೋದನ್ನ ಪತ್ತೆ ಹಚ್ಚಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ತನಿಖೆ ಚುರುಕುಗೊಳಿಸಿರುವ ಹಲಸೂರ್ ಗೇಟ್ ಪೊಲೀಸರು ಮತ್ತಷ್ಟು ಆರೋಪಿಗಳನ್ನ ಖೆಡ್ಡಾಗೆ ಕೆಡವಲು ಶೋಧ ಮುಂದುವರೆಸಿದ್ದಾರೆ.

ಚಿಲುಮೆ ಸಂಸ್ಥೆಯಿಂದ ಮತದಾರರ ಮಾಹಿತಿ ಕಳವು ಪ್ರಕರಣ ಹಲಸೂರು ಗೇಟ್ ಪೊಲೀಸರಿಂದ ಚಿಲುಮೆ ಮುಖ್ಯಸ್ಥ ರವಿಕುಮಾರ್ ತೀವ್ರ ವಿಚಾರಣೆ ವಿಚಾರಣೆಯ ಹಂತ ಹಂತವನ್ನ ಖುದ್ದು ಅವಲೋಕಿಸುತ್ತಿರುವ ಡಿಸಿಪಿ ಶ್ರೀನಿವಾಸಗೌಡ ಬಂಧಿತ ಆರೋಪಿಗಳ ಹೇಳಿಕೆ ಮೇಲೆ ಸ್ಥಳ ಮಹಜರು ನಡೆಸಿದ್ದಾರೆ. ತನಿಖಾ ತಂಡ ಧರ್ಮೇಶ್, ಕೆಂಪೇಗೌಡ ರನ್ನ ಕರೆದೊಯ್ದು ಸ್ಥಳ ಮಹಜರು ಪ್ರಕ್ರಿಯೆ ಬನಶಂಕರಿಯ ಧರ್ಮೇಶ್ ಕಚೇರಿ ಮತ್ತು ಮನೆಯಲ್ಲಿ ಮಹಜರು ಮಹಜರು ವೇಳೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಚಿಲುಮೆ ಸಂಸ್ಥೆಯ ಕರಾರಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳ ಸಾಕ್ಷ್ಯಧಾರವಾಗಿ ಪೊಲೀಸರಿಗೆ ಲಭ್ಯವಾಗಿದೆ.

ಬಿಬಿಎಂಪಿ ಆರ್ ಓ ಗಳಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಒಟ್ಟು 40 ಆರ್​ಒಗಳಿಗೆ ನೋಟಿಸ್ ಕೊಟ್ಟಿದ್ದು, ವೈಯಕ್ತಿಕ ಮಾಹಿತಿ ಸಂಗ್ರಹಿಸಿದ್ದ ವಿಚಾರ ತಿಳಿದಿದ್ದ ಆರ್​ಒಗಳ ಕುರಿತಂತೆ ಈ ಸಂಬಂಧ ಹಲಸೂರು ಗೇಟ್​ ಪೊಲೀಸರಿಗೆ ದಾಖಲೆ ಲಭ್ಯ ವಾಗಿದೆ ಎನ್ನಲಾಕ್ತಿದೆ. ಹಂತ ಹಂತವಾಗಿ ಆರ್​ಒಗಳ ವಿಚಾರಣೆ ನಡೆಸುವ ಪೊಲೀಸರು ಮತದಾರರ ಖಾಸಗಿ ಮಾಹಿತಿ ಕಲೆಹಾಕಿದ ಸಂಸ್ಥೆಯ ಇಂಚಿಂಚೂ ಜಾಡನ್ನು ಜಾಲಾಡ್ತಿದೆ, ಮತ್ತಿನ್ಯಾವ ಮಿಕಗಳು‌ ಪೊಲೀಸರ ಬಲೆ ಬೀಳುತ್ತವೇ..? ನಿಜಕ್ಕೂ ಈ ಪ್ರಕರಣದಲ್ಲಿ ರಾಜಕಾರಣಿಗಳು ತಗ್ಲಾಕೊಳ್ತಾರಾ ಅನ್ನೋದು ಸದ್ಯದ ಯಕ್ಷಪ್ರಶ್ನೆಯಾಗಿದೆ.

ವರದಿ: ಶಿವಪ್ರಸಾದ್ ಟಿವಿ9 ಬೆಂಗಳೂರು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada