ಮುಡಾ ಹಗರಣ ಟೆನ್ಷನ್​ ನಡುವೆಯೂ ಕಾಂಗ್ರೆಸ್ ಪಾಳೆಯದಲ್ಲಿ ಅಸಮಾಧಾನ ಸ್ಫೋಟ!

ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್​ನಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಒಂದು ಕಡೆ ಸಿಎಂ ಸಿದ್ದರಾಮಯ್ಯಗೆ ಮುಡಾ ಹಗರಣದ ಕಾನೂನು ಸಂಕಷ್ಟ ಎದುರಾಗಿದೆ. ಈ ಆತಂಕದ ನಡುವೆಯೂ ಸರ್ಕಾರದ ನೇಮಕಾತಿಗಳ ಬಗ್ಗೆ ಪಕ್ಷದ ಸಚಿವರು ಮುಖಂಡರ ಬೇಸರ ಸ್ಪೋಟಗೊಳ್ಳತೊಡಗಿದೆ.

ಮುಡಾ ಹಗರಣ ಟೆನ್ಷನ್​ ನಡುವೆಯೂ ಕಾಂಗ್ರೆಸ್ ಪಾಳೆಯದಲ್ಲಿ ಅಸಮಾಧಾನ ಸ್ಫೋಟ!
ಕರ್ನಾಟಕ ಕಾಂಗ್ರೆಸ್​
Follow us
ಪ್ರಸನ್ನ ಗಾಂವ್ಕರ್​
| Updated By: ರಮೇಶ್ ಬಿ. ಜವಳಗೇರಾ

Updated on:Sep 04, 2024 | 5:19 PM

ಬೆಂಗಳೂರು, (ಸೆಪ್ಟೆಂಬರ್ 04): ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಒಂದೂವರೆ ವರ್ಷಗಳಾಯಿತು. ಅದ್ಯಾಕೋ ಜನರು ಎಷ್ಟರ ಮಟ್ಟಿಗೆ ಖುಷಿಯಾಗಿದ್ದಾರೋ ಗೊತ್ತಿಲ್ಲ. ಆದರೆ ಶಾಸಕರು ಸಚಿವರು ಕಾರ್ಯಕರ್ತರಂತೂ ಸರ್ಕಾರದ ನಡೆ ಬಗ್ಗೆ ಬೇಸರಗೊಂಡಿದ್ದಾರೆ. ವಿವಿಧ ಅಕಾಡೆಮಿ ಸದಸ್ಯರ ನೇಮಕ, ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರ ನೇಮಕದ ಬಗ್ಗೆ ಕಾಂಗ್ರೆಸ್ ನಲ್ಲಿ ಅಪಸ್ವರ ಎದ್ದಿದೆ. ನೇಮಕಾತಿ ಗೊಂದಲಗಳ ಬಗ್ಗೆ ರಾಹುಲ್ ಗಾಂಧಿವರೆಗೆ ದೂರು ನೀಡಲು ನಾಯಕರ ನಿರ್ಧಾರ ಮಾಡಿದ್ದಾರೆ. ನೇಮಕಾತಿಯಲ್ಲಿ ಸ್ವಜನ ಪಕ್ಷಪಾತದ ಆರೋಪ ಮಾಡುತ್ತಿರುವ ಕೈ ನಾಯಕರು, ಕೆಲವು ನಿರ್ಧಾರಗಳಲ್ಲಿ ಸಂಬಂಧಪಟ್ಟ ಸಚಿವರಿಗೇ ಮಾಹಿತಿ ನೀಡುತ್ತಿಲ್ಲ ಎಂದು ಬೇಸರದ ಜೊತೆಗೆ ಅಸಮಾಧಾನ ಹೊರಹಾಕುತ್ತಿದ್ದಾರೆ.

ನಿಗಮ-ಮಂಡಳಿ ಸದಸ್ಯರ ನಿರ್ದೇಶಕರ ನೇಮಕಕ್ಕೆ ಗೃಹ ಸಚಿವ ಡಾ.ಪರಮೇಶ್ವರ ನೇತೃತ್ವದ ಸಮಿತಿ ಮಾಡಲಾಗಿದೆ. ಆದರೆ ಆ ಸಮಿತಿಯ ಗಮನಕ್ಕೂ ಬಾರದೆ ಸಿಎಂ‌ ಕಚೇರಿಯಿಂದಲೇ ನೇರ ನೇಮಕ ಆರೋಪ ಕೇಳಿ ಬರುತ್ತಿದೆ. ಸಂಬಂಧಿಸಿದ ಇಲಾಖೆ ಸಚಿವರ ಗಮನಕ್ಕೂ ಬಾರದೆ ನೇಮಕಕ್ಕೆ ಖಂಡನೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಬಳಿ ಕ್ಷಮೆಯಾಚಿಸಿದ ಬೆಲ್ಲದ್, ಬಿಜೆಪಿ ಶಾಸಕನ ಕ್ಷಮಾಪಣೆ ಪತ್ರಕ್ಕೆ ಸಿಎಂ ಶ್ಲಾಘನೆ

ಕಳೆದ ಬಾರಿ ಸರ್ಕಾರದಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದವರೇ ಈ ಬಾರಿಯೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಎಂಬ ಆರೋಪವಿದೆ. ಆಯಾ ಕ್ಷೇತ್ರದಲ್ಲಿ ಏನೂ ಸಾಧನೆ ಮಾಡದವರಿಗೆ ಕುರ್ಚಿ ಭಾಗ್ಯ ನೀಡಲಾಗುತ್ತಿದೆ, ಪಕ್ಷದ ಎರಡು, ಮೂರನೇ ಹಂತದ ನಾಯಕರು, ಕಾರ್ಯಕರ್ತರಿಗೆ ಅವಕಾಶ ಸಿಗುತ್ತಿಲ್ಲ.‌ ಸಿಂಡಿಕೇಟ್ ಸದಸ್ಯ ಸ್ಥಾನ ಬಹುತೇಕ ಸಾಹಿತಿಗಳು, ಸಾಹಿತಿಗಳ ಸೋಗಿನಲ್ಲಿರುವವರಿಗೆ ಆದ್ಯತೆ ನೀಡಿರುವ ದೂರು ಕೇಳಿಬರುತ್ತಿದೆ.

ಸ್ವಪಕ್ಷಿಯರಿಗೆ ಆಯಕಟ್ಟಿನ ಹುದ್ದೆ ನೀಡುತ್ತಿರುವ ವರ್ಗಾವಣೆ ಮಾಡುತ್ತಿರುವ ಬಗ್ಗೆ ಈ ಹಿಂದೆಯೇ ಶಾಸಕ ಶಾಮನೂರು ಶಿವಶಂಕರಪ್ಪ ಬಹಿರಂಗ ಆಕ್ರೋಶ ವ್ಯಕ್ತಪಡಿಸಿದ್ದರು. ಬಹುತೇಕ ನಾಮನಿರ್ದೇಶನದಲ್ಲಿ ವೀರಶೈವ ಲಿಂಗಾಯತರು, ಕಡೆಗಣನೆ ಬಗ್ಗೆ ಜನಾಂಗದ ಮುಖಂಡರಲ್ಲಿ ಬೇಗುದಿ ವ್ಯಕ್ತವಾಗಿತ್ತು. ವೀರಶೈವ ಲಿಂಗಾಯತರು, ಒಕ್ಕಲಿಗರನ್ನು ಕಡೆಗಣಿಸಲಾಗುತ್ತಿದೆ ಎಂಬ ಆಕ್ಷೇಪವೂ ಇದೆ. ಶೈಕ್ಷಣಿಕ ವಲಯದ ಗಂಧ ಗಾಳಿ ಗೊತ್ತಿಲ್ಲದವರಿಗೂ ಮಣೆ ಹಾಕಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಗೃಹ ಸಚಿವ ಡಾ. ಜಿ.ಪರಮೇಶ್ವರ ನೇತೃತ್ವದ ಸಮಿತಿ ಗಮನಕ್ಕೂ ಬಾರದ ನೇಮಕ ಆಗಿರುವ ಬಗ್ಗೆ ಹಿರಿಯ ಸಚಿವರೇ ಬೇಸರ ವ್ಯಕ್ತಪಡಿಸಿದ್ದಾರೆ. ಡಾ.ಪರಮೇಶ್ವರ ಸಮಿತಿ ಏಕೆ ಬೇಕಿತ್ತು ಎಂದು ಕಾಂಗ್ರೆಸ್ ನಲ್ಲಿ ಪ್ರಶ್ನೆ ಎದ್ದಿದೆ.

ಒಂದು ಕಡೆ ಸಿಎಂ ಸಿದ್ದರಾಮಯ್ಯ ಕಾನೂನು ಸಮರದಲ್ಲಿ ಹೋರಾಟ ಮಾಡುತ್ತಿದ್ದಾರೆ. ಇತ್ತ ಸರ್ಕಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಕಾಂಗ್ರೆಸ್ ನಾಯಕರಿಗೆ ಸಮಾಧಾನ ತರುತ್ತಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 5:16 pm, Wed, 4 September 24

ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ
ಮುಡಾ ಹಗರಣದಲ್ಲಿ ಕ್ಲೀನ್​ಚಿಟ್; ಸಿಎಂ ರಿಯಾಕ್ಷನ್ ಇದು
ಮುಡಾ ಹಗರಣದಲ್ಲಿ ಕ್ಲೀನ್​ಚಿಟ್; ಸಿಎಂ ರಿಯಾಕ್ಷನ್ ಇದು
ರಥೋತ್ಸವದ ವೇಳೆ ವಿಟ್ಲದಲ್ಲಿ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​
ರಥೋತ್ಸವದ ವೇಳೆ ವಿಟ್ಲದಲ್ಲಿ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​
ಜಿಂಕೆಯ ವೇಗ, ಹದ್ದಿನ ಕಣ್ಣು... ನಿತೀಶ್ ಕುಮಾರ್ ರೆಡ್ಡಿ ಸೂಪರ್ ಕ್ಯಾಚ್
ಜಿಂಕೆಯ ವೇಗ, ಹದ್ದಿನ ಕಣ್ಣು... ನಿತೀಶ್ ಕುಮಾರ್ ರೆಡ್ಡಿ ಸೂಪರ್ ಕ್ಯಾಚ್
ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು
ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು