AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಂದು ಬೆಲೆ ಏರಿಕೆ ಬಿಸಿ: ಗ್ಯಾಸ್ ಬೆನ್ನಲ್ಲೇ ಗಗನಕ್ಕೇರಿದ ಅಕ್ಕಿ ದರ, ಕೆಜಿಗೆ 10 ರಿಂದ 20 ರೂ. ಹೆಚ್ಚಳ

Rice Price Hike Karnataka 2026; ದೇಶೀಯ ಮಾರುಕಟ್ಟೆಯಲ್ಲಿ ಪೂರೈಕೆ ಕೊರತೆ ಹಾಗೂ ರಫ್ತು ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಕ್ಕಿ ದರ ಪ್ರತಿ ಕೆಜಿಗೆ 10 ರಿಂದ 20 ರೂ.ವರೆಗೆ ದುಬಾರಿಯಾಗಿದೆ. ನವೆಂಬರ್‌ನಲ್ಲಿ ಹೊಸ ಬೆಳೆ ಬರುವವರೆಗೆ ಈ ಪೂರೈಕೆ ಕೊರತೆ ಮುಂದುವರಿಯಲಿದ್ದು, ಸದ್ಯಕ್ಕಂತೂ ಅಕ್ಕಿ ಬೆಲೆ ಇಳಿಕೆ ಅಸಾಧ್ಯ ಎಂದು ವರ್ತಕರು ತಿಳಿಸಿದ್ದಾರೆ.

ಮತ್ತೊಂದು ಬೆಲೆ ಏರಿಕೆ ಬಿಸಿ: ಗ್ಯಾಸ್ ಬೆನ್ನಲ್ಲೇ ಗಗನಕ್ಕೇರಿದ ಅಕ್ಕಿ ದರ, ಕೆಜಿಗೆ 10 ರಿಂದ 20 ರೂ. ಹೆಚ್ಚಳ
ಅಕ್ಕಿ ದರImage Credit source: tv9
ಗಣಪತಿ ಶರ್ಮಾ
|

Updated on: Jun 13, 2026 | 6:45 AM

Share

ಬೆಂಗಳೂರು, ಜೂನ್ 13: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ದಿನಬಳಕೆಯ ತರಕಾರಿ ಬೆಲೆ ಏರಿಕೆಯಿಂದ ಈಗಾಗಲೇ ಕಂಗಾಲಾಗಿರುವ ಜನಸಾಮಾನ್ಯರಿಗೆ ಇದೀಗ ಮತ್ತೊಂದು ಭಾರಿ ಆಘಾತ ಎದುರಾಗಿದೆ. ನಿತ್ಯದ ಊಟಕ್ಕೆ ಅತಿ ಅತ್ಯಗತ್ಯವಾಗಿರುವ ಅಕ್ಕಿಯ ಬೆಲೆಯಲ್ಲಿ (Rice Price) ದಿಢೀರ್ ಭಾರಿ ಏರಿಕೆ ಕಂಡುಬಂದಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ವಿವಿಧ ತಳಿಯ ಅಕ್ಕಿಗಳ ದರವು ಪ್ರತಿ ಕೆಜಿಗೆ 10 ರೂಪಾಯಿಯಿಂದ 20 ರೂಪಾಯಿಯವರೆಗೆ ದುಬಾರಿಯಾಗಿದ್ದು, ಮಧ್ಯಮ ಹಾಗೂ ಬಡ ವರ್ಗದ ಕುಟುಂಬಗಳ ಬಜೆಟ್ ಸಂಪೂರ್ಣ ಏರುಪೇರಾಗುವಂತೆ ಮಾಡಿದೆ.

ಮುಖ್ಯಾಂಶಗಳು

  • ಅಕ್ಕಿ ಬೆಲೆಯಲ್ಲಿ ಭಾರಿ ದರ ಏರಿಕೆ.
  • ಗ್ರಾಹಕರ ಜೇಬಿಗೆ ಮತ್ತಷ್ಟು ಆರ್ಥಿಕ ಹೊರೆ.
  • ಹೊಸ ಬೆಳೆ ಬರುವವರೆಗೆ ದರ ಇಳಿಕೆ ಅಸಾಧ್ಯ.

ಅಕ್ಕಿ ಬೆಲೆ ಏರಿಕೆಗೆ ಪ್ರಮುಖ ಕಾರಣಗಳೇನು?

ಮಾರುಕಟ್ಟೆಯ ವರ್ತಕರ ಪ್ರಕಾರ, ದೇಶೀಯ ಮಾರುಕಟ್ಟೆಯಲ್ಲಿ ಅಕ್ಕಿಗೆ ಬೇಡಿಕೆ ಹೆಚ್ಚಾಗಿದ್ದು, ಅದಕ್ಕೆ ತಕ್ಕಂತೆ ಪೂರೈಕೆಯ ಪ್ರಮಾಣದಲ್ಲಿ ಭಾರಿ ಕೊರತೆ ಉಂಟಾಗಿದೆ. ಇದರೊಂದಿಗೆ ಕೇಂದ್ರ ಸರ್ಕಾರವು ಅಕ್ಕಿ ರಫ್ತಿಗೆ (Export) ಮುಕ್ತ ಅವಕಾಶ ನೀಡಿರುವುದರಿಂದ, ದೇಶೀಯ ಮಾರುಕಟ್ಟೆಯಲ್ಲಿ ಉತ್ತಮ ತಳಿಯ ಅಕ್ಕಿಯ ಲಭ್ಯತೆ ಗಣನೀಯವಾಗಿ ಕ್ಷೀಣಿಸಿದೆ. ಇದು ನೇರವಾಗಿ ಮುಕ್ತ ಮಾರುಕಟ್ಟೆಯ ದರಗಳ ಮೇಲೆ ಪ್ರಭಾವ ಬೀರಿದೆ. ಸದ್ಯ ಅಕ್ಕಿ ದರ ಹೆಚ್ಚಾಗಿರುವುದರಿಂದ ಗ್ರಾಹಕರು ಖರೀದಿಯ ಪ್ರಮಾಣವನ್ನು ಕಡಿಮೆಗೊಳಿಸಿದ್ದು, ವ್ಯಾಪಾರಿಗಳ ಮಾರಾಟದಲ್ಲೂ ಭಾರಿ ಕುಸಿತ ಕಂಡುಬಂದಿದೆ ಎಂದು ವರ್ತಕರಾದ ಅರುಣ್ ಪರಮೇಶ್ ಆತಂಕ ವ್ಯಕ್ತಪಡಿಸಿದ್ದಾರೆ.

ನವೆಂಬರ್ ವರೆಗೂ ಬೆಲೆ ಇಳಿಕೆ ಅಸಾಧ್ಯ

ರೈತರು ಬೆಳೆದಿರುವ ಹೊಸ ಭತ್ತದ ಬೆಳೆ ಕಟಾವಾಗಿ, ಹೊಸ ಅಕ್ಕಿ ಮಾರುಕಟ್ಟೆಗೆ ಬರಲು ಇನ್ನು ಕನಿಷ್ಠ ನವೆಂಬರ್ ತಿಂಗಳವರೆಗೆ ಕಾಯಬೇಕಾಗಿದೆ. ಅಲ್ಲಿಯವರೆಗೂ ಮಾರುಕಟ್ಟೆಯಲ್ಲಿ ಅಕ್ಕಿಯ ಪೂರೈಕೆ ಕೊರತೆ ಹೀಗೆಯೇ ಮುಂದುವರಿಯಲಿದ್ದು, ಸದ್ಯಕ್ಕಂತೂ ಬೆಲೆ ಇಳಿಕೆಯಾಗುವ ಯಾವುದೇ ಲಕ್ಷಣಗಳಿಲ್ಲ. ಮಾರುಕಟ್ಟೆಯಲ್ಲಿ ಬೇಡಿಕೆ ಮತ್ತು ಪೂರೈಕೆಯ ನಡುವಿನ ವ್ಯತ್ಯಾಸ ಹೀಗೆಯೇ ಮುಂದುವರಿದರೆ, ಮುಂಬರುವ ದಿನಗಳಲ್ಲಿ ಕೆಲವು ಪ್ರೀಮಿಯಂ ತಳಿಯ ಅಕ್ಕಿ ದರಗಳು ಕೆಜಿಗೆ 100 ರೂಪಾಯಿಯ ಗಡಿ ದಾಟಿದರೂ ಆಶ್ಚರ್ಯವಿಲ್ಲ ಎಂದು ಅಕ್ಕಿ ವ್ಯಾಪಾರಿ ಸುರೇಶ್ ತಿಳಿಸಿದ್ದಾರೆ.

ವಿವಿಧ ತಳಿಯ ಅಕ್ಕಿಗಳ ಹಳೆಯ ಮತ್ತು ಹೊಸ ದರಗಳ ಪಟ್ಟಿ (ಪ್ರತಿ ಕೆ.ಜಿಗೆ)

ಸ್ಟೀಮ್ ರೈಸ್ 47 56
ರಾ ರೈಸ್ 50 62
ಕೋಲಂ ರೈಸ್ 68 80
ಕೋಲಂ ಸ್ಟೀಮ್ 55 65

ಒಟ್ಟಾರೆಯಾಗಿ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವುದು ಸಾರ್ವಜನಿಕರ ಜೀವನ ನಿರ್ವಹಣೆಯನ್ನು ಅತ್ಯಂತ ದುಸ್ತರವಾಗಿಸಿದೆ. ತರಕಾರಿ, ಇಂಧನ, ಗ್ಯಾಸ್ ಸಿಲಿಂಡರ್ ದರ ಏರಿಕೆಯ ಬೆನ್ನಲ್ಲೇ ಈಗ ಅನ್ನದ ಬಟ್ಟಲಿಗೂ ಬೆಲೆ ಏರಿಕೆಯ ಬಿಸಿ ತಟ್ಟಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ವರದಿ: ನಟರಾಜ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್
‘ಮುಂಗಾರು ಮಳೆ’, ‘ಕೆಜಿಎಫ್’ ಸಿನಿಮಾಗಳ ಸ್ಮರಿಸಿದ ತೆಲುಗು ನಟ: ವಿಡಿಯೋ
‘ಮುಂಗಾರು ಮಳೆ’, ‘ಕೆಜಿಎಫ್’ ಸಿನಿಮಾಗಳ ಸ್ಮರಿಸಿದ ತೆಲುಗು ನಟ: ವಿಡಿಯೋ
ಪತ್ನಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ: ಪತಿ ಏಕಾಂಗಿಯಾಗಿ ಪ್ರತಿಭಟನೆ
ಪತ್ನಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ: ಪತಿ ಏಕಾಂಗಿಯಾಗಿ ಪ್ರತಿಭಟನೆ
‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದ ಆರ್​​ ಅಶೋಕ್
‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದ ಆರ್​​ ಅಶೋಕ್
ಸಿಬ್ಬಂದಿಗೆ ಬ್ಯಾಂಕ್ ಮ್ಯಾನೇಜರ್ ಕಿರುಕುಳ ಆರೋಪ
ಸಿಬ್ಬಂದಿಗೆ ಬ್ಯಾಂಕ್ ಮ್ಯಾನೇಜರ್ ಕಿರುಕುಳ ಆರೋಪ
ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಮೊಟ್ಟೆ ಎಸೆದು ಆಕ್ರೋಶ
ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಮೊಟ್ಟೆ ಎಸೆದು ಆಕ್ರೋಶ
ಬರ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಡಿಸಿಎಂ ಪರಮೇಶ್ವರ್ ತರಾಟೆ
ಬರ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಡಿಸಿಎಂ ಪರಮೇಶ್ವರ್ ತರಾಟೆ