AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸೋಮನಾಥ ದೇವಸ್ಥಾನಕ್ಕಿಂತ ನೆಹರುಗೆ ಅಣೆಕಟ್ಟು ನಿರ್ಮಾಣ ಮುಖ್ಯವಾಗಿತ್ತು’

ಬೆಂಗಳೂರು: ಮಹಾತ್ಮ ಗಾಂಧೀಜಿ ನಂಬಿಕೆ ಇಟ್ಟಿದ್ದ ವ್ಯಕ್ತಿ ನೆಹರು. ಅಂತಹವರ ಜನ್ಮದಿನವನ್ನು ನಾವು ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯ ಬಂದಿದೆ. ಆದರೆ, ಪೂರ್ಣ ಪ್ರಮಾಣದ ಸ್ವಾತಂತ್ರ್ಯ ಸಿಕ್ಕಿಲ್ಲ. ಹಾಗಾಗಿ, ಎಲ್ಲರಿಗೂ ಸಮಾನತೆ ತಂದುಕೊಡಲು ನೆಹರು ಪ್ರಯತ್ನಿಸಿದ್ದರು ಎಂದು ಕೆಪಿಸಿಸಿ ಕಚೇರಿಯಲ್ಲಿ ನೆಹರು ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಹೇಳಿದರು. ಸ್ವಾತಂತ್ರ್ಯ ಬಂದ ಹೊಸದರಲ್ಲಿ ಬಡತನವಿತ್ತು. ಹೊಸ ಅಭಿವೃದ್ಧಿಯ ದೃಷ್ಟಿಕೋನ ತಂದವರು ನೆಹರು. ಯುವಕರಿಗೆ ಉದ್ಯೋಗ ನೀಡುವುದು ಅಗತ್ಯವಾಗಿತ್ತು. ಅದಕ್ಕೇ ಕೈಗಾರಿಕೆಗಳಿಗೆ ಹೆಚ್ಚಿನ ಒತ್ತನ್ನು ನೀಡಿದ್ದರು. ಬಾಕ್ರಾನಂಗಲ್ […]

‘ಸೋಮನಾಥ ದೇವಸ್ಥಾನಕ್ಕಿಂತ ನೆಹರುಗೆ ಅಣೆಕಟ್ಟು ನಿರ್ಮಾಣ ಮುಖ್ಯವಾಗಿತ್ತು’
KUSHAL V
|

Updated on: Nov 14, 2020 | 1:15 PM

Share

ಬೆಂಗಳೂರು: ಮಹಾತ್ಮ ಗಾಂಧೀಜಿ ನಂಬಿಕೆ ಇಟ್ಟಿದ್ದ ವ್ಯಕ್ತಿ ನೆಹರು. ಅಂತಹವರ ಜನ್ಮದಿನವನ್ನು ನಾವು ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯ ಬಂದಿದೆ. ಆದರೆ, ಪೂರ್ಣ ಪ್ರಮಾಣದ ಸ್ವಾತಂತ್ರ್ಯ ಸಿಕ್ಕಿಲ್ಲ. ಹಾಗಾಗಿ, ಎಲ್ಲರಿಗೂ ಸಮಾನತೆ ತಂದುಕೊಡಲು ನೆಹರು ಪ್ರಯತ್ನಿಸಿದ್ದರು ಎಂದು ಕೆಪಿಸಿಸಿ ಕಚೇರಿಯಲ್ಲಿ ನೆಹರು ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಹೇಳಿದರು. ಸ್ವಾತಂತ್ರ್ಯ ಬಂದ ಹೊಸದರಲ್ಲಿ ಬಡತನವಿತ್ತು. ಹೊಸ ಅಭಿವೃದ್ಧಿಯ ದೃಷ್ಟಿಕೋನ ತಂದವರು ನೆಹರು. ಯುವಕರಿಗೆ ಉದ್ಯೋಗ ನೀಡುವುದು ಅಗತ್ಯವಾಗಿತ್ತು. ಅದಕ್ಕೇ ಕೈಗಾರಿಕೆಗಳಿಗೆ ಹೆಚ್ಚಿನ ಒತ್ತನ್ನು ನೀಡಿದ್ದರು. ಬಾಕ್ರಾನಂಗಲ್ ಅಣೆಕಟ್ಟು ಕಟ್ಟಿದರು. ಅಂದೇ ನೀರಾವರಿ ಯೋಜನೆಗೆ ಒತ್ತು ನೀಡಿದ್ದರು ಎಂದು ಹನುಮಂತಯ್ಯ ಹೇಳಿದರು.

‘ಕೆಲವರು ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಾರೆ’ ಕೆಲವರು ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಾರೆ. ಸೋಮನಾಥ ದೇವಸ್ಥಾನವನ್ನು ಏಕೆ ಕಟ್ಟಲಿಲ್ಲ ಎಂದು ಕೇಳ್ತಾರೆ. ಆದರೆ ಇಲ್ಲಿ ದೇವಸ್ಥಾನಕ್ಕಿಂತ ಅಣೆಕಟ್ಟು ನಿರ್ಮಾಣ ಮುಖ್ಯವಾಗಿತ್ತು. ಲಕ್ಷಾಂತರ ರೈತರಿಗೆ ಜೀವ ನೀಡುವುದು ಮುಖ್ಯವಾಗಿತ್ತು. ಅದಕ್ಕೆ ಮೊದಲು ನೀರಾವರಿಗೆ ಒತ್ತು ಕೊಟ್ಟಿದ್ದು ಎಂದು ಹೇಳಿದರು.

ಇದನ್ನ ಆರೋಪ ಮಾಡುವವರು ತಿಳಿದುಕೊಳ್ಳಬೇಕು. ಕಾಶ್ಮೀರದ ಮುಖ್ಯ ಸಮಸ್ಯೆಗೆ ನೆಹರು ಕಾರಣ ಅಂತಾರೆ. ಅದು ಬೇರೆಯಾಗಿದ್ದರೆ ದೇಶದ ಭದ್ರತೆಗೆ ಹೊಡೆತಬೀಳ್ತಿತ್ತು. ಅದಕ್ಕೆ ನೆಹರು ಕಾಶ್ಮೀರ ಭಾರತಕ್ಕೆ ಸೇರಿಸಿದ್ದು ಎಂದು ಪರೋಕ್ಷವಾಗಿ ಬಿಜೆಪಿ ನಾಯಕರಿಗೆ ಹನುಮಂತಯ್ಯ ಟಾಂಗ್ ಕೊಟ್ಟರು. ಜೊತೆಗೆ, ನವಭಾರತ ಕಟ್ಟಿದ ಅಗ್ರಗಣ್ಯ ನೆಹರು ಎಂದು ಸಹ ಹೇಳಿದರು.