ಕರುನಾಡಲ್ಲೂ ಹೊತ್ತಿದ ಪೌರತ್ವದ ಕಾಡ್ಗಿಚ್ಚು-ರಾಜ್ಯಾದ್ಯಂತ ಪ್ರತಿಭಟನೆಗಳಿಗೆ ನಿರ್ಬಂಧ
ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಹೋರಾಟದ ಬೆಂಕಿ ಸುನಾಮಿಯಂತೆ ಹಬ್ಬುತ್ತಿದೆ.. ಕಾಡ್ಗಿಚ್ಚಿನಂತೆ ವ್ಯಾಪಿಸುತ್ತಿದೆ.. ಎಷ್ಟೇ ತಡೆದ್ರೂ ಆ ಕಿಚ್ಚು ತಣ್ಣಗಾಗ್ತಿಲ್ಲ.. ಎಷ್ಟೇ ಹತ್ತಿಕ್ಕೋಕೆ ಪ್ರಯತ್ನಿಸಿದ್ರೂ ಜ್ವಾಲೆ ಆರುತ್ತಿಲ್ಲ.. ದಿನದಿಂದ ದಿನಕ್ಕೆ ಸಿಎಎ ಕಾಯ್ದೆ ಜ್ವಾಲಾಗ್ನಿ ಈಗ ರಾಜ್ಯದಲ್ಲೂ ಧಗಧಗಿಸುತ್ತಿದೆ.. ರಾಜ್ಯದಲ್ಲೂ ಧಗಧಗಿಸುತ್ತಿದೆ ‘ಪೌರತ್ವ’ ಜ್ವಾಲಾಗ್ನಿ! ರಾಜ್ಯದಲ್ಲಿ ಹೋರಾಟ ಭುಗಿಲೇಳುವಂತೆ ಮಾಡಿದೆ.. ಯಾವುದೇ ಕಾರಣಕ್ಕೂ ಪೌರತ್ವ ಕಾಯ್ದೆ ಜಾರಿ ಮಾಡೋಕೆ ಬಿಡಲ್ಲ ಅಂತಾ ಇಂದು ದೊಡ್ಡ ಪ್ರಮಾಣದ ಹೋರಾಟ ನಡೆಯೋ ಸಾಧ್ಯತೆ ಇದೆ.. ಮುಂಜಾಗ್ರತಾ ಕ್ರಮವಾಗಿ ಪರಿಸ್ಥಿತಿ ಎದುರಿಸಲು […]
ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಹೋರಾಟದ ಬೆಂಕಿ ಸುನಾಮಿಯಂತೆ ಹಬ್ಬುತ್ತಿದೆ.. ಕಾಡ್ಗಿಚ್ಚಿನಂತೆ ವ್ಯಾಪಿಸುತ್ತಿದೆ.. ಎಷ್ಟೇ ತಡೆದ್ರೂ ಆ ಕಿಚ್ಚು ತಣ್ಣಗಾಗ್ತಿಲ್ಲ.. ಎಷ್ಟೇ ಹತ್ತಿಕ್ಕೋಕೆ ಪ್ರಯತ್ನಿಸಿದ್ರೂ ಜ್ವಾಲೆ ಆರುತ್ತಿಲ್ಲ.. ದಿನದಿಂದ ದಿನಕ್ಕೆ ಸಿಎಎ ಕಾಯ್ದೆ ಜ್ವಾಲಾಗ್ನಿ ಈಗ ರಾಜ್ಯದಲ್ಲೂ ಧಗಧಗಿಸುತ್ತಿದೆ..
ರಾಜ್ಯದಲ್ಲೂ ಧಗಧಗಿಸುತ್ತಿದೆ ‘ಪೌರತ್ವ’ ಜ್ವಾಲಾಗ್ನಿ! ರಾಜ್ಯದಲ್ಲಿ ಹೋರಾಟ ಭುಗಿಲೇಳುವಂತೆ ಮಾಡಿದೆ.. ಯಾವುದೇ ಕಾರಣಕ್ಕೂ ಪೌರತ್ವ ಕಾಯ್ದೆ ಜಾರಿ ಮಾಡೋಕೆ ಬಿಡಲ್ಲ ಅಂತಾ ಇಂದು ದೊಡ್ಡ ಪ್ರಮಾಣದ ಹೋರಾಟ ನಡೆಯೋ ಸಾಧ್ಯತೆ ಇದೆ.. ಮುಂಜಾಗ್ರತಾ ಕ್ರಮವಾಗಿ ಪರಿಸ್ಥಿತಿ ಎದುರಿಸಲು ರಾಜ್ಯ ಸರ್ಕಾರವೂ ಸನ್ನದ್ಧವಾಗಿದೆ.
ಅನುಮತಿ ನಿರಾಕರಿಸಿದ್ರೂ ಮಂಗಳೂರಿನಲ್ಲಿ ಪ್ರತಿಭಟನೆ! ನಿನ್ನೆ ಮಂಗಳೂರಲ್ಲಿ ಕೇರಳ ಮೂಲದ ವಿದ್ಯಾರ್ಥಿಗಳು ರೊಚ್ಚಿಗೆದ್ದಿದ್ರು. ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದರೂ ಮುಸ್ಲಿಂ ಸಂಘಟನೆಯ ಸಾವಿರಾರು ಕಾರ್ಯಕರ್ತರು ಹೋರಾಟ ನಡೆಸಿದ್ರು. ಡಿಸಿ ಕಚೇರಿ, ಬಂಟ್ವಾಳದ ಅಡ್ಡೂರಿನಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ರು. ಈ ವೇಳೆ, ಸ್ಥಳಕ್ಕಾಗಮಿಸಿದ ಪೊಲೀಸ್ರು ಪರಿಸ್ಥಿತಿ ನಿಯಂತ್ರಿಸಿದ್ರು. ಅಲ್ದೆ, ಇಂದೂ ಕೂಡ ಹೋರಾಟ ನಡೆಯೋ ಸಾಧ್ಯತೆಯಿದ್ದು, ಡಿ.20ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಇತ್ತ ದಾವಣಗೆರೆ, ಮೈಸೂರಿನಲ್ಲೂ ನಿನ್ನೆ ಪ್ರತಿಭಟನೆಗಳು ನಡೆದ್ವು. ಸಾಕಷ್ಟು ಜನ ಮುಸ್ಲಿಂರು ಸೇರಿ ಹೋರಾಟ ಮಾಡಿ, ಅಲ್ಪಸಂಖ್ಯಾತರ ವಿರೋಧಿ ಎನ್ಆರ್ಸಿ ಮತ್ತು ಸಿಎಎ ಕಾಯ್ದೆ ವಾಪಸ್ ಪಡೆಯಬೇಕು ಅಂತಾ ಒತ್ತಾಯಿಸಿದ್ರು. ಅಲ್ದೆ, ಇಂದೂ ಕೂಡ ಹೋರಾಟ ನಡೆಯೋ ಸಾಧ್ಯತೆಯಿದೆ.
ಇಂದು ಬೆಂಗಳೂರಿನಲ್ಲಿ ನಡೆಯುತ್ತಾ ಬೃಹತ್ ಹೋರಾಟ? ರಾಜಧಾನಿ ಬೆಂಗಳೂರಲ್ಲೂ ಭಾರಿ ಹೋರಾಟ ನಡೆಯೋ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಎದುರಿಸಲು ಪೊಲೀಸ್ರು ಸನ್ನದ್ಧವಾಗಿದ್ದಾರೆ.. ನಗರದಲ್ಲಿ ಭದ್ರತೆಗಾಗಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ. 53 ಕೆಎಸ್ಆರ್ಪಿ, 30 ಸಿಎಆರ್ ತುಕಡಿ ನಿಯೋಜನೆ ಮಾಡ್ಲಾಗಿದೆ. ಅಲ್ದೆ, ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ನಿಷೇಧಾಜ್ಞೆ ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸಲು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶಿಸಿದ್ದಾರೆ.
ಕಲಬುರಗಿಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ: ಇತ್ತ ಕಲಬುರಗಿಯಲ್ಲಿ ಸಿಎಎ ವಿರುದ್ಧ ಹೋರಾಟ ನಡೆಯಲಿದೆ. ವಿವಿಧ ಸಂಘಟನೆಗಳಿಂದ ಕಲಬುರಗಿ ಜಿಲ್ಲಾ ಬಂದ್ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಿಗೆ ಇಂದು ರಜೆ ನೀಡಿ ಜಿಲ್ಲಾಧಿಕಾರಿ ಬಿ.ಶರತ್ ಆದೇಶ ಹೊರಡಿಸಿದ್ದಾರೆ.
ಇದಿಷ್ಟೇ ಅಲ್ದೆ, ಯಾದಗಿರಿ, ಹಾವೇರಿ, ಬೆಳಗಾವಿ ಸೇರಿದಂತೆ ರಾಜ್ಯದ ಹಲವು ಕಡೆ ಸಿಎಎ ಕಿಚ್ಚು ಸ್ಫೋಟಗೊಳ್ಳೋ ಸಾಧ್ಯತೆ ಇದೆ. ದೊಡ್ಡ ಮಟ್ಟದ ಹೋರಾಟ ಮಾಡಿ ಕಾಯ್ದೆ ವಾಪಸ್ ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲು ವಿವಿಧ ಸಂಘಟನೆಗಳು ಸಜ್ಜಾಗಿವೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಎದುರಿಸಲು ಪೊಲೀಸ್ ಇಲಾಖೆಯೂ ಸನ್ನದ್ಧವಾಗಿದೆ. ಈಗಾಗ್ಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದೆ.